ಪ್ರಕೃತಿ ಎಂಬ ಬೆಸ್ಟ್‌ ಬ್ಯೂಟಿ ಪಾರ್ಲರ್‌


Team Udayavani, Jun 22, 2019, 5:00 PM IST

19

ನಮಗೆ ಬೇಕಾದ ಎಲ್ಲ ಸೌಂದರ್ಯವರ್ಧಕಗಳನ್ನು ಈ ಪ್ರಕೃತಿಯೇ ಧಾರಾಳವಾಗಿ ನೀಡಿದೆ. ಅಷ್ಟಕ್ಕೂ, ಫೇಸ್‌ವಾಶ್‌, ಕ್ರೀಮು, ಟೂತ್‌ಪೇಸ್ಟ್‌ಗಳ ಜಾಹೀರಾತಿನಲ್ಲಿ ತೋರಿಸುವ ಲಿಂಬೆ, ಬೇವು, ಅರಿಶಿನ, ಲವಂಗ ಎಲ್ಲವೂ ಪ್ರಕೃತಿದತ್ತವೇ ಆಗಿದೆ

“”ಅಜ್ಜಿ, ನಿಮ್ಮ ಕಾಲದ ಹೆಂಗಸರ ಸೌಂದರ್ಯದ ರಹಸ್ಯವೇನು?” ಅಂತೊಮ್ಮೆ ಅವರ ನ್ನು ಕೇಳಿದ್ದೆ. ಆಗ ಅವರು, “”ಅದರಲ್ಲಿ ರಹಸ್ಯವೇನು ಬಂತು? ಸುತ್ತಮುತ್ತ ಏನು ಸಿಗುತ್ತಿತ್ತೋ, ಅದನ್ನೇ ಎಲ್ಲಾ ಬಳಸುತ್ತಿದ್ವಿ. ಈಗಿನಂತೆ ಬ್ಯೂಟಿ ಪಾರ್ಲರೂ, ಕ್ರೀಮು, ಸೋಪು, ಶ್ಯಾಂಪೂ ಏನೂ ಇರಲಿಲ್ಲ. ಮೈಗೆ ಕಡಲೆಹಿಟ್ಟು, ತಲೆಗೆ ಸೀಗೇಕಾಯಿ, ಮುಖಕ್ಕೆ ಅರಿಶಿನ” ಅಂತ ಹೇಳಿದ್ದರು. ನಮಗೆ ಬೇಕಾದ ಎಲ್ಲ ಸೌಂದರ್ಯವರ್ಧಕಗಳನ್ನು ಈ ಪ್ರಕೃತಿಯೇ ಧಾರಾಳವಾಗಿ ನೀಡಿದೆ ಅನ್ನೋದು ಅಜ್ಜಿ ಯಾವಾಗಲೂ ಹೇಳುತ್ತಿದ್ದ ಮಾತು.

ಆ ಮಾತನ್ನು ಇಂದಿನವರು ಮರೆತಿದ್ದರಿಂದಲೇ ಇರಬೇಕು ಗಲ್ಲಿಗಲ್ಲಿಗಳಲ್ಲೂ ಬ್ಯೂಟಿಪಾರ್ಲರ್ಗಳು ತಲೆ ಎತ್ತಿರುವುದು ಮತ್ತು ಸೌಂದರ್ಯ ಉತ್ಪನ್ನಗಳ ಮಾರುಕಟ್ಟೆ ಹುಲುಸಾಗಿ ಬೆಳೆಯುತ್ತಿರುವುದು. ಅಷ್ಟಕ್ಕೂ ಪಾರ್ಲರ್ನವರು ಏನು ಮಾಡುತ್ತಾರೆ? ನಿಮ್ಮ ವಯಸ್ಸನ್ನು, ಚರ್ಮದ ಮೇಲಿನ ಸುಕ್ಕು-ಕಲೆಗಳನ್ನು ಮರೆಮಾಚಲು ಒಂದಿಷ್ಟು ಫೇಸ್ಕ್ರೀಂ, ಬ್ಲೀಚ್‌, ಲಿಪ್ಸಿಸ್ಟೀಕ್‌ ಅಂತೇನೇನೋ ಬಳಿದು ನಿಮ್ಮನ್ನು ಅಂದವಾಗಿ ಕಾಣುವಂತೆ ಮಾಡುತ್ತಾರೆ. ಆದರೆ, ಈ ಬಣ್ಣಗಳೆಲ್ಲ ಸ್ವಲ್ಪ ದಿನಗಳು ಮಾತ್ರ. ಪುನಃ ನಿಮ್ಮ ಸೌಂದರ್ಯ ಮಾಮೂಲಿಗಿಂತ ಹದಗೆಡುತ್ತದೆ. ಆಗ ನೀವು ಇನ್ನೂ ದುಬಾರಿ ಬೆಲೆಯ ಕೃತಕ ವಸ್ತುಗಳ ಮೊರೆ ಹೋಗುತ್ತೀರಿ. ಇದರಿಂದ ನಿಮ್ಮ ಚರ್ಮದ ಆರೋಗ್ಯಕ್ಕೇ ನಷ್ಟ. ಹಣವೂ ಪೋಲು.

ಅದರ ಬದಲು ನೀವೊಮ್ಮೆ ಪ್ರಕೃತಿಯತ್ತ ಮುಖ ಮಾಡಿ, ಅಲ್ಲಿ ನಿಮ್ಮ ಸೌಂದರ್ಯ ಹೆಚ್ಚಿಸುವ ಎಲ್ಲ ವಸ್ತುಗಳೂ ಲಭ್ಯ. ಅಷ್ಟಕ್ಕೂ, ನಿಮ್ಮ ಫೇಸ್‌ವಾಶ್‌, ಕ್ರೀಮು, ಟೂತ್‌ಪೇಸ್ಟ್‌ಗಳ ಜಾಹೀರಾತಿನಲ್ಲಿ ತೋರಿಸುವ ಲಿಂಬೆ, ಬೇವು, ಅರಿಶಿನ, ಲವಂಗ ಎಲ್ಲವೂ ಪ್ರಕೃತಿದತ್ತವೇ ಅಲ್ಲವೆ? ಅದಕ್ಕೇ ಹೇಳ್ಳೋದು, ಪ್ರಕೃತಿಗಿಂತ ಬೆಸ್ಟ್‌ ಬ್ಯೂಟಿಪಾರ್ಲರ್‌ ಅಂತ.

ಮೈ ಕಾಂತಿಗೆ ಮ್ಯಾಜಿಕ್‌
ಮೈ ಬಣ್ಣ ಬಿಳಿಯಾಗಿಸಲು ಸಾವಿರಾರು ರೂ. ಖರ್ಚು ಮಾಡುವಿರೇಕೆ? ಲಿಂಬೆರಸಕ್ಕೆ, ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ, ಈ ಮಿಶ್ರಣಕ್ಕೆ ಒಂದು ಟೀ ಚಮಚ ಸೌತೆಕಾಯಿ ರಸವನ್ನು ಹಾಕಿ ಚೆನ್ನಾಗಿ ಬೆರೆಸಿ, ಮುಖ- ಕುತ್ತಿಗೆ ಭಾಗಗಳಿಗೆ ಮಸಾಜ್‌ ಮಾಡಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ಮುಖ ತೊಳೆಯುವುದು, ಪಾರ್ಲರ್‌ನಲ್ಲಿ ಒಂದು ಗಂಟೆ ಮುಖಕ್ಕೆ ಕೆಮಿಕಲ್‌ ಉಜ್ಜಿಸಿಕೊಳ್ಳುವುದಕ್ಕಿಂತ ಹೆಚ್ಚು ಪರಿಣಾಮಕಾರಿ.

ಒಡವೆಗೆ ತೊಡಕು ಮೊಡವೆ
ಒಂದು ತುಂಡು ಶ್ರೀಗಂಧವನ್ನು, ಸ್ವಲ್ಪ ಸೌತೆಕಾಯಿ ರಸ ಅಥವಾ ಗುಲಾಬಿ ನೀರಿನೊಂದಿಗೆ ಸ್ವತfವಾದ ಕಲ್ಲಿನಲ್ಲಿ ತೇಯ್ದು, ಆ ಮಿಶ್ರಣವನ್ನು ದಿನಕ್ಕೊಂದು ಬಾರಿ ಮುಖಕ್ಕೆ ಲೇಪಿಸಬೇಕು.

ಪಾದಗಳಿಗೆ ಲಿಂಬೆಸ್ನಾನ
ಅಂಗೈ, ಅಂಗಾಲು ಒಡೆದಿದ್ದರೆ ಪೆಡಿರ್ಕ್ನೂ ಮಾಡಿಕೊಳ್ಳಬೇಕಿಲ್ಲ. ಅಂಗಾಲಿಗೆ ಲಿಂಬೆರಸವನ್ನು ತಿಕ್ಕಿ ಸ್ವಲ್ಪ ಸಮಯ ಬಿಟ್ಟು ತೊಳೆದು, ಬೆಣ್ಣೆ ಅಥವಾ ಹಾಲಿನ ಕೆನೆಯನ್ನು ಹಾಕಿ ತಿಕ್ಕಿದರೆ, ಚರ್ಮ ನುಣುಪಾಗುತ್ತದೆ.

ಹುಬ್ಬಿಗೆ ಕೊಬ್ಬರಿ ಎಣ್ಣೆ ಕುಡಿಸಿ
ಕಣ್ಣಿನ ಹುಬ್ಬುಗಳನ್ನು ಕಪ್ಪಾಗುವಂತೆ ಮಾಡಲು ದಿನವೂ ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಮೃದುವಾಗಿ ಹಚ್ಚಿ. ಅಂದವಾದ ತುಟಿಯ ರಹಸ್ಯ ಎಲ್ಲಿ ಅಡಗಿದೆ ಗೊತ್ತಾ?

ಅಧರಂ ಮಧುರಂ
ತಾವರೆಯ ಮೊಗ್ಗಿನೊಳಗೆ ಕೇಸರದ ಬಳಿಯಿರುವ ಸಣ್ಣ ದಳಗಳನ್ನು ಲಿಂಬೆರಸದಲ್ಲಿ ಅದ್ದಿ ತುಟಿಗೆ ತಿಕ್ಕುವುದರಿಂದ ಕಪ್ಪಾದ ತುಟಿಗಳು ಗುಲಾಬಿ ಬಣ್ಣ ಪಡೆಯುತ್ತವೆ.

ನ್ಯಾಚುರಲ್‌ ಫೇಸ್‌ಪ್ಯಾಕ್‌
ಮುಖದ ಸೌಂದರ್ಯಕ್ಕೆ ಸೌತೆಕಾಯಿ ರಸವನ್ನು ಹತ್ತಿಯಲ್ಲಿ ಅದ್ದಿ ಮುಖದ ಮೇಲೆ ಮೃದುವಾಗಿ ಉಜ್ಜಿ. ಬಳಲಿದ ಚರ್ಮಕ್ಕೆ ಆರೈಕೆ ಸಿಗುತ್ತದೆ. ಕ್ಯಾರೆಟ್‌ ಅನ್ನು ತುರಿದು, ಆದರ ರಸವನ್ನು ಮುಖಕ್ಕೆ ಲೇಪಿಸಿ, ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ.

ವೇದಾವತಿ ಎಚ್‌. ಎಸ್‌.

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.