ಗರ್ಭಿಣಿಯರಿಗೆ ದಿ ಬೆಸ್ಟ್ ಸ್ಟ್ರಾಬೆರಿ..!
Team Udayavani, Mar 26, 2021, 1:04 PM IST
ಸ್ಟ್ರಾಬೆರಿ ಎಲ್ಲರಿಗೂ ಬಾಯಿ ರುಚಿಗೆ ಅಷ್ಟೇನೂ ಖುಷಿ ಅನ್ನಸಿಸದಿದ್ದರೂ ಸ್ಟ್ರಾಬೆರಿ ಅತ್ಯಂತ ಪೋಷಕಾಂಶವನ್ನು ಹೊಂದಿದೆ. ಇದು ಆರೋಗ್ಯಕರವಾದ ಫ್ಯಾಟ್ ಕಂಟೆಂಟ್ ಇರುವುದರಿಂದ ಹತ್ತು ಹಲವು ಆರೋಗ್ಯ ಪ್ರಯೋಜನಗಳಿವೆ.
ಓದಿ : ಕಾನೂನು ಹೋರಾಟದಲ್ಲಿ ಟಾಟಾಗೆ ಮೇಲುಗೈ-ಸುಪ್ರೀಂಕೋರ್ಟ್ ನಲ್ಲಿ ಮಿಸ್ತ್ರಿಗೆ ಮುಖಭಂಗ
ಸ್ಟ್ರಾಬೆರಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :
ಅರ್ಧ ಕಪ್ ಸ್ಟ್ರಾಬೆರಿ 51.5 ಎಮ್.ಜಿ ವಿಟಮಿನ್ ಸಿ ಯನ್ನು ಒಳಗೊಂಡಿದ್ದು ನಿಮ್ಮ ದೈನಂದಿನ ಅವಶ್ಯಕತೆಯನ್ನು ಪೂರೈಸುತ್ತದೆ. ಇನ್ನು ಇದರಲ್ಲಿ ಅಡಕವಾಗಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುವಲ್ಲಿ ಸಹಕಾರಿಯಾಗಿದೆ.
ಕ್ಯಾನ್ಸರ್ ನಿಮದ ರಕ್ಷಣೆ ಮಾಡಲು ಸ್ಟ್ರಾಬೆರಿ ಬೆಸ್ಟ್ :
ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಯಿಂದ ರಕ್ಷಿಸಲು ನಿಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ನಮ್ಮಲ್ಲಾದರೆ ಸಾಕಾಗುತ್ತದೆ. ಜೊತೆಗೆ ನಿತ್ಯ ಸ್ಟ್ರಾಬೆರಿಗಳನ್ನು ಸೇವಿಸಿದರೆ, ಅದರಲ್ಲಿರುವ ಅಂಶಗಳು ಕ್ಯಾನ್ಸರ್ ಸೆಲ್ಗಳನ್ನು ನಾಶ ಮಾಡಿ ಮಾರಕ ಕ್ಯಾನ್ಸರ್ ನಿಂದ ನಿಮ್ಮನ್ನು ರಕ್ಷಿಸುವಲ್ಲಿ ಕೆಲಸ ಮಾಡುತ್ತದೆ ಎನ್ನುತ್ತಾರೆ ವೈದ್ಯ ತಜ್ಞರು.
ಕೊಲೆಸ್ಟ್ರಾಲ್ ನ್ನು ಸಮಸ್ಥಿತಿಗೆ ತರುತ್ತದೆ ಸ್ಟ್ರಾಬೆರಿ :
ಸ್ಟ್ರಾಬೆರಿಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಸಮ ಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ. ಈ ವಿಚಾರ ವೈಜ್ಞಾನಿಕ ಅಧ್ಯಯನ ಹಾಗೂ ಪ್ರಯೋಗಳಿಂದಲೂ ಕೂಡ ಸಾಬೀತಾಗಿದೆ. ಲಿಪೊಪ್ರೋಟೀನ್ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ದೇಹದಲ್ಲಿ ಕಡಿಮೆ ಮಾಡಲು ಸ್ಟ್ರಾಬೆರಿ ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ :
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸದೇ ಇರುವುದರಿಂದ ಮಧುಮೇಹದ ಅಪಾಯ ಉಂಟಾಗಬಹುದು. ಸ್ಟ್ರಾಬೆರಿಗಳನ್ನು ಸೇವಿಸುವ ಜನರ ರಕ್ತದಲ್ಲಿನ ಸಕ್ಕರೆ ಮಟ್ಟ ಸಮಸ್ಥಿತಿಯಲ್ಲಿರುತ್ತದೆ ಎಂದು ವೈದ್ಯಕೀಯ ಅಧ್ಯಯನಗಳು ಹೇಳುತ್ತವೆ. ಹೀಗಾಗಿ ಪ್ರತಿನಿತ್ಯ ಸ್ಟ್ರಾಬೆರಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಗರ್ಭಿಣಿಯರಿಗೆ ದಿ ಬೆಸ್ಟ್ ಸ್ಟ್ರಾಬೆರಿ :
ಗರ್ಭಿಣಿಯರು ಸ್ಟ್ರಾಬೆರಿ ಹಣ್ಣನ್ನು ತಿಂದರೆ ದೇಹಕ್ಕೆ ಬೇಕಾದ ಬಿ ಜೀವಸತ್ವವನ್ನು ನೀಡುತ್ತದೆ. ಗರ್ಭಸ್ಥ ಶಿಶುವಿನ ಮೆದುಳು ಮತ್ತು ಬೆನ್ನುಹುರಿಯ ಬೆಳವಣಿಗೆಗೆ ಸಹಕರಿಸಿ ಜನನ ಕಾಲದ ದೋಷಗಳನ್ನು ತಡೆಯುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.