ಒಮಿಕ್ರಾನ್‌: ಅವಸರದ ಭೀತಿಯೇ? ಜನರಲ್ಲಿನ ಭಯಕ್ಕೆ ಕಾರಣಗಳೇನು?


Team Udayavani, Dec 8, 2021, 2:35 PM IST

ಒಮಿಕ್ರಾನ್‌: ಅವಸರದ ಭೀತಿಯೇ? ಜನರಲ್ಲಿನ ಭಯಕ್ಕೆ ಕಾರಣಗಳೇನು?

ಜಗತ್ತಿನಾದ್ಯಂತ ಈಗ ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್‌ನದ್ದೇ ಸದ್ದು. ಇದು ಒಂದು ರೀತಿಯಲ್ಲಿ ಎಲ್ಲೆಡೆ ಭೀತಿ ಹುಟ್ಟಿಸಿರುವುದಂತೂ ನಿಜ. ಇದಕ್ಕೆ ಪ್ರಮುಖ ಕಾರಣ, ಪ್ರಪಂಚದ ವಿವಿಧ ದೇಶಗಳ ತಜ್ಞರು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು. ಒಬ್ಬರು ಒಮಿಕ್ರಾನ್‌ ಬಗ್ಗೆ ಅಷ್ಟೇನೂ ಭಯ ಬೇಕಿಲ್ಲ ಎಂದರೆ, ಮಗದೊಬ್ಬರು ಡೆಲ್ಟಾಗಿಂತಲೂ ಹೆಚ್ಚಿನ ಅಪಾಯ ತಂದೊಡ್ಡಬಲ್ಲುದು ಎನ್ನುತ್ತಾರೆ. ಹಾಗಾದರೆ, ಒಮಿಕ್ರಾನ್‌ ಕುರಿತ ನಿಜ ಸಂಗತಿ ಏನು ಎಂಬ ಪ್ರಶ್ನೆಗೆ ಇನ್ನೂ ಒಂದಿಷ್ಟು ದಿನ ಕಾಯಬೇಕು ಎನ್ನುತ್ತಾರೆ ಕೆಲವು ತಜ್ಞರು.

ಜನರಲ್ಲಿನ ಭಯಕ್ಕೆ ಕಾರಣಗಳೇನು?
ದಕ್ಷಿಣ ಆಫ್ರಿಕಾದಲ್ಲಿ ಇದು ಪತ್ತೆಯಾಗಿ, ಸರಿಯಾದ ವರದಿಗಳು ಬರುವ ಮುನ್ನವೇ ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರಾನ್‌ ಕುರಿತಂತೆ ಹೇಳಿಕೆ ನೀಡಿತು. ಇದು ಅತ್ಯಂತ ಕಳವಳಕಾರಿಯಾದ ಮತ್ತು ಅಪಾಯಕಾರಿಯಾದ ರೂಪಾಂತರಿ. ಇದುವರೆಗಿನ ಎಲ್ಲ ವೇರಿಯಂಟ್‌ಗಳಿಗಿಂತಲೂ ಶಕ್ತಿಯುತವಾಗಿದೆ. ಹೀಗಾಗಿ ಎಲ್ಲ ದೇಶಗಳು ಎಚ್ಚರಿಕೆಯಿಂದ ಇರಬೇಕು ಎಂದು ಬಿಟ್ಟಿತು. ಇದು ಜಗತ್ತಿನೆಲ್ಲೆಡೆ ಭಯಕ್ಕೆ ಕಾರಣವಾದರೆ, ಬೇರೆ ಬೇರೆ ಸಂಶೋಧನ ಸಂಸ್ಥೆಗಳು ತಮಗೆ ತಿಳಿದ ಹಾಗೆ ಅಂದಾಜು ಮಾಡಲು ನಿಂತವು. ವಿಶೇಷವೆಂದರೆ ಇದುವರೆಗೆ ಒಮಿಕ್ರಾನ್‌ ಹೇಗೆ ವರ್ತಿಸುತ್ತದೆ ಎಂಬ ಬಗ್ಗೆ ಸರಿಯಾದ ದತ್ತಾಂಶಗಳೇ ಸಿಕ್ಕಿಲ್ಲ.

ಒಮಿಕ್ರಾನ್‌ ತ್ವರಿತವಾಗಿ ಹರಡುತ್ತಿದೆಯೇ?: ಒಮಿಕ್ರಾನ್‌ ರೂಪಾಂತರಿ ಮೊದಲಿಗೆ ಗೊತ್ತಾಗಿದ್ದು ದಕ್ಷಿಣ ಆಫ್ರಿಕಾ ದೇಶದಲ್ಲಿ. ಇಲ್ಲಿ ನ.26ರಂದು 3,402 ಕೇಸ್‌ ಪತ್ತೆಯಾಗಿದ್ದರೆ, ಡಿ.1ರ ವೇಳೆಗೆ 8561 ಕೇಸ್‌ಗಳು ದೃಢವಾಗಿದ್ದವು. ಅದರಲ್ಲೂ ಗುಟೆಂಗ್‌ ಪ್ರಾಂತ್ಯದಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿವೆ. ಡಿ.1ರಂದು ಪತ್ತೆಯಾಗಿರುವ ಎಲ್ಲ ಕೇಸ್‌ಗಳು ಒಮಿಕ್ರಾನ್‌ ಎಂದು ಹೇಳುವುದು ಕಷ್ಟ. ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ಒಮಿಕ್ರಾನ್‌ ಬಗ್ಗೆ ಮುನ್ಸೂಚನೆ ಸಿಗುತ್ತದೆ. ಆದರೆ ಇದೇ ಒಮಿಕ್ರಾನ್‌ ಎಂದು ಹೇಳುವುದಕ್ಕೆ ವಂಶವಾಹಿ ಪರೀಕ್ಷೆ ನಡೆಸಿಯೇ ತಿಳಿದುಕೊಳ್ಳಬೇಕು ಎಂದು ಢಾಕಾದ  ದಿ ಚೈಲ್ಡ್‌ ಹೆಲ್ತ್‌ ರಿಸರ್ಚ್‌ ಫೌಂಡೇಶನ್‌ನ ಮಾಲೇಕ್ಯುಲರ್‌ ಮೈಕ್ರೋಬಯಲಾಜಿಸ್ಟ್‌ ಆ್ಯಂಡ್‌ ಡೈರೆಕ್ಟರ್‌ ಆಗಿರುವ ಸೇಂಜುತಿ ಸಾಹಾ ಅವರು ಹೇಳಿದ್ದಾರೆ.

ಹಾಗೆಯೇ ಯಾವುದೇ ವೈರಸ್‌ ಹೆಚ್ಚು ಹರಡುತ್ತಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದು “ಆರ್‌’ ಬೆಳವಣಿಗೆ ಮೇಲೆ. ಸದ್ಯ ದಕ್ಷಿಣ ಆಫ್ರಿಕಾದ ಗುಟೆಂಗ್‌ನಲ್ಲಿ ಸೆಪ್ಟಂಬರ್‌ ತಿಂಗಳಲ್ಲಿ ಆರ್‌ ದರ 1 ಇತ್ತು. ಈಗ ಇದು 2ಕ್ಕೆ ಏರಿಕೆಯಾಗಿದೆ. ಹೀಗಾಗಿ ಇಲ್ಲಿ ಒಮಿಕ್ರಾನ್‌ ಹರಡುವಿಕೆ ಹೆಚ್ಚಿರಬಹುದು ಎಂಬ ಅಂದಾಜಿದೆ. ಆದರೂ, ಒಮಿಕ್ರಾನ್‌ ಕಂಡ ಎಲ್ಲ ದೇಶಗಳಲ್ಲೂ ಆರ್‌ ದರದಲ್ಲಿ ಏರಿಕೆಯಾಗಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಏರಿಕೆಯಾಗಿದೆ ಎಂದಾಕ್ಷಣ ಬೇರೆಡೆ ಆಗಬೇಕು ಅಂತೂ ಇಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಹಾಗೆಯೇ ಸದ್ಯ ಒಮಿಕ್ರಾನ್‌ ಕುರಿತಂತೆ ಅಗತ್ಯಕ್ಕಿಂತ ಹೆಚ್ಚೇ ಅಂದಾಜು ಮಾಡಲಾಗುತ್ತಿದೆ ಎಂದು ಸ್ವಿಟ್ಸ ರ್ಲ್ಯಾಂಡ್‌ನ‌ ಸಂಶೋಧಕರು ಹೇಳಿದ್ದಾರೆ.

ಲಸಿಕೆ ಕೆಲಸ ಮಾಡಲ್ಲವೇ?: ಒಮಿಕ್ರಾನ್‌ ವಿರುದ್ಧ ಲಸಿಕೆಗಳು ಕೆಲಸ ಮಾಡಲ್ಲ ಎಂದು ಈಗಲೇ ಹೇಳುವುದು ತಪ್ಪಾಗುತ್ತದೆ. ಆದರೂ ದ. ಆಫ್ರಿಕಾದಲ್ಲಿ ಈಗಾಗಲೇ ಕೊರೊನಾ ಬಂದು ಹೋದವರಲ್ಲೂ ಒಮಿಕ್ರಾನ್‌ ಕಾಣಿಸಿಕೊಂಡಿದೆ. ಹಿಂದೆ ಒಮ್ಮೆ ಕೊರೊನಾ ಬಂದಿದ್ದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿದ್ದು, ಇವರಿಗೆ ರಕ್ಷಣೆ ಸಿಗುತ್ತದೆ ಎಂದೇ ಸಂಶೋಧಕರು ಹೇಳಿದ್ದರು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಈ ಹಿಂದೆ ಸೋಂಕಿಗೆ ತುತ್ತಾದವರಿಗೇ ಮತ್ತೆ ಕೊರೊನಾ ಕಾಣಿಸಿಕೊಂಡಿರುವುದು ಸ್ವಲ್ಪ ಮಟ್ಟಿಗೆ ಆತಂಕಕ್ಕೂ ಕಾರಣವಾಗಿದೆ.

ಆದರೆ ಒಮಿಕ್ರಾನ್‌ ವಿರುದ್ಧ ಲಸಿಕೆ ಕೆಲಸ ಮಾಡಲ್ಲ ಎಂದು ಈಗಲೇ ಹೇಳಲಾಗುವುದಿಲ್ಲ. ಅಲ್ಲದೆ ಒಮಿಕ್ರಾನ್‌ ವೈರಸ್‌, ಲಸಿಕೆಯ ಪ್ರಭಾವವನ್ನು ಮಣಿಸಿ ಮುಂದೆ ಹೋಗಲೂ ಸಾಧ್ಯವಿಲ್ಲ. ಲಸಿಕೆ ಪಡೆದ ಮೇಲೆಯೂ ಒಮಿಕ್ರಾನ್‌ ತಗಲಿದ್ದರೆಅವರಲ್ಲಿ ಕಡಿಮೆ ಪ್ರಮಾಣದ ಸೋಂಕು ಕಾಣಿಸಿಕೊಂಡಿರುತ್ತದೆ. ಹೆಚ್ಚಿನ ಅಪಾಯ ಆಗುವುದಿಲ್ಲ ಎಂದು ತಜ್ಞರು ಅಂದಾಜಿಸಿದ್ದಾರೆ. ಆದರೂ ಈ ಬಗ್ಗೆ ಸಮರ್ಪಕವಾದ ಅಧ್ಯಯನ ನಡೆದು, ವರದಿ ಬಂದ ಬಳಿಕವಷ್ಟೇ ಸ್ಪಷ್ಟವಾಗಿ ಹೇಳಲು ಸಾಧ್ಯ ಎಂದು ತಜ್ಞರು ಹೇಳಿದ್ದಾರೆ.

ಬೂಸ್ಟರ್‌ ಡೋಸ್‌ ಬೇಕೇಬೇಕಾ?
ಒಮಿಕ್ರಾನ್‌ ಆತಂಕದಿಂದಾಗಿ ಎರಡೂ ಲಸಿಕೆ ಪಡೆದವರಿಗೆ ಹೆಚ್ಚುವರಿ ಅಥವಾ ಬೂಸ್ಟರ್‌ ಡೋಸ್‌ ಕೊಡಲೇ ಬೇಕಾದ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸದ್ಯದ ಮಟ್ಟಿಗೆ ಈ ಬಗ್ಗೆ ಸಂಶೋಧೆಯಾಗುತ್ತಿದ್ದು, ಇದರ ವರದಿ ಬಂದ ಮೇಲೆ ಬೂಸ್ಟರ್‌ ಡೋಸ್‌ ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ ಗೊತ್ತಾಗುತ್ತದೆ. ಈಗಲೇ ಒಂದು ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ಈ ಬೂಸ್ಟರ್‌ ಡೋಸ್‌ ಪರಿಕಲ್ಪನೆ ಹುಟ್ಟಿರುವುದೇ ಮುಂದುವರಿದ ದೇಶಗಳಲ್ಲಿ ಎಂದೂ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಒಮಿಕ್ರಾನ್‌ನಿಂದ ಯಾರೂ ಸಾವನ್ನಪ್ಪಿಲ್ಲ
ಒಮಿಕ್ರಾನ್‌ ವೇಗವಾಗಿ ಹರಡುವ ಗುಣ ಹೊಂದಿದೆ, ಆದರೆ ಗಂಭೀರವಾದ ಪರಿಣಾಮವುಂಟು ಮಾಡದು ಎಂದು ವಿಶ್ಲೇಷಿಸಿರುವ ತಜ್ಞರು, ಇದಕ್ಕೆ ಪೂರಕವಾಗಿ ಇದುವರೆಗೆ ದಕ್ಷಿಣ ಆಫ್ರಿಕಾ ಸೇರಿದಂತೆ ಎಲ್ಲಿಯೂ ಒಮಿಕ್ರಾನ್‌ನಿಂದ ಸಾವನ್ನಪ್ಪಿಲ್ಲ ಎಂದು ಹೇಳುತ್ತಾರೆ. ಒಮಿಕ್ರಾನ್‌ ಪತ್ತೆಯಾದ ಮೇಲೆ ದಕ್ಷಿಣ ಆಫ್ರಿಕಾದಲ್ಲಿ 40 ಸಾವಿರ ಮಂದಿಗೆ ಸೋಂಕು ತಗಲಿದೆ. ಆದರೆ ಇವರಲ್ಲಿ ಕಡಿಮೆ ಪ್ರಮಾಣದ ರೋಗ ಲಕ್ಷಣಗಳು ಕಂಡಿದ್ದು, ಸಾವನ್ನಪ್ಪಿರುವ ಬಗ್ಗೆ ವರದಿಯಾಗಿಲ್ಲ. ಹಾಗೆಯೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಒಮಿಕ್ರಾನ್‌ನಿಂದ ಇದುವರೆಗೆ ಯಾರೊಬ್ಬರೂ ಸಾವನ್ನಪ್ಪಿಲ್ಲ ಎಂದು ಸ್ಪಷ್ಟಪಡಿಸಿದೆ.

ಒಮಿಕ್ರಾನ್‌ ಹೆಚ್ಚು ಅಪಾಯ ಮಾಡಲ್ಲವೇ?
ಈ ಬಗ್ಗೆಯಂತೂ ಜಗತ್ತಿನ ಬೇರೆ ಬೇರೆ ಸಂಶೋಧಕರು, ಬೇರೆ ರೀತಿಯ ಉತ್ತರವನ್ನೇ ನೀಡಿದ್ದಾರೆ. ಅದರಲ್ಲೂ ದಿನಕ್ಕೊಂದು ವರದಿಗಳು ಬರುತ್ತಿವೆ. ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್‌ ಎರಡನೇ ವಾರವೇ ಒಮಿಕ್ರಾನ್‌ ಪತ್ತೆಯಾಗಿತ್ತು. ಆಗಿನಿಂದ ಈಗಿನ ವರೆಗೆ ಅಲ್ಲಿ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆ ಮತ್ತು ಗಂಭೀರ ಸ್ಥಿತಿಗೆ ಹೋಗುವವರ ಸಂಖ್ಯೆಯೂ ಕಡಿಮೆ ಇದೆ ಎಂದು ದಕ್ಷಿಣ ಆಫ್ರಿಕಾದ ವೈದ್ಯರು ಹೇಳಿದ್ದಾರೆ. ಆದರೆ ಈ ಬಗ್ಗೆಯೂ ಈಗಲೇ ಒಂದು ನಿರ್ಧಾರಕ್ಕೆ ಬರುವುದು ಕಷ್ಟ ಎಂದು ಇನ್ನೂ ಕೆಲವು ಸಂಶೋಧಕರು ಹೇಳಿದ್ದಾರೆ. ಇದುವರೆಗೆ ಸೋಂಕು ತಗಲಿ, ಗುಣಮುಖರಾದವರು ಮತ್ತು ಆಸ್ಪತ್ರೆಯಲ್ಲಿ ಇರುವವರ ದತ್ತಾಂಶಗಳು ಸಿಕ್ಕಿಲ್ಲ. ಇವೆಲ್ಲ ಸಿಕ್ಕ ಮೇಲೆ ಇದು ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ ಖಚಿತವಾಗಿ ಹೇಳಬಹುದು. ಅಲ್ಲಿ ವರೆಗೆ ಕೇವಲ ಒಮಿಕ್ರಾನ್‌ನ ಅಪಾಯದ ಅಂದಾಜು ವರದಿಗಳಷ್ಟೇ ಸಿಗುವುದು, ಇದಕ್ಕೆ ನಿಖರತೆ ಸಿಗದು ಎಂದು ಹೇಳಿದ್ದಾರೆ.

ಒಮಿಕ್ರಾನ್‌ ಕುರಿತ ಭಯವೇಕೆ?
-ಈಗ ಬಂದಿರುವ ಉಳಿದೆಲ್ಲ ತಳಿಗಳಿಗಿಂತ  ಹೆಚ್ಚು ಪ್ರಸರಣವಾಗುವ ಶಕ್ತಿ ಇದೆ.
-ನಿಜವಾಗಿಯೂ ಇದರ ಶಕ್ತಿ ಎಂಥದ್ದು ಎಂದು ತಿಳಿಯಲು ಇನ್ನಷ್ಟು ದಿನಗಳು ಬೇಕು.
-ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಇದು ಹೆಚ್ಚು ಆತಂಕಕಾರಿ ವೈರಸ್‌.
-ಆರ್‌ಟಿ-ಪಿಸಿಆರ್‌ ಟೆಸ್ಟ್‌ ಮೂಲಕವೇ ಒಮಿಕ್ರಾನ್‌ ಪತ್ತೆ ಹಚ್ಚಬಹುದು. ಆದರೂ ಒಂದು ಜೀನ್‌ ಈ ಟೆಸ್ಟ್‌ ಮೂಲಕ ಪತ್ತೆಯಾಗಲ್ಲ.
-ಒಮಿಕ್ರಾನ್‌ ವಿರುದ್ಧವೂ ಲಸಿಕೆ ಕೆಲಸ ಮಾಡಬಹುದು. ಹೀಗಾಗಿ ಎಲ್ಲರಿಗೂ ತ್ವರಿತವಾಗಿ ಲಸಿಕೆ ನೀಡುವ ಕೆಲಸ ಮಾಡಿ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ.

ಮುಂದೇನು?
ಸದ್ಯ ನಮಗೆಲ್ಲ ಗೊತ್ತಾಗಿರುವುದು ಒಮಿಕ್ರಾನ್‌ ತಳಿ ಬಗ್ಗೆಯಷ್ಟೇ. ಆದರೆ ಇದು ಹೇಗೆ ಕೆಲಸ ಮಾಡುತ್ತದೆ?  ಹೆಚ್ಚು ಪರಿಣಾಮಕಾರಿಯೋ ಅಥವಾ ಕಡಿಮೆ ಪರಿಣಾಮಕಾರಿಯೋ? ಒಮಿಕ್ರಾನ್‌ ಹಬ್ಬುವ ವೇಗ ಹೆಚ್ಚಾಗಿದೆಯೇ? ಹಾಗಾದರೆ ಯಾವ ಪ್ರಮಾಣದಲ್ಲಿ ಹೆಚ್ಚಾಗಿದೆ? ಈ ಎಲ್ಲ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.  ಆದರೂ, ಜಗತ್ತಿನ ಬೇರೆ ಬೇರೆ ದೇಶಗಳ ತಜ್ಞರು, ದಿನಕ್ಕೊಂದು ವರದಿ ಬಹಿರಂಗ ಮಾಡುತ್ತಿದ್ದಾರೆ. ಅದೂ ಕೆಲವರು ಇಡೀ ಜಗತ್ತೇ ಹೆಚ್ಚಿ ಬೀಳುವ ಹಾಗೆ ಹೇಳಿದರೆ ಇನ್ನೂ ಕೆಲವರು ಭೀತಿ ಬೇಡ ಎಂಬಂತೆ ಹೇಳುತ್ತಿದ್ದಾರೆ.  ಈ ಎಲ್ಲ ಸಂಗತಿಗಳನ್ನು ಸದ್ಯ ಹೆಚ್ಚು ನಂಬಬೇಡಿ. ಒಮಿಕ್ರಾನ್‌ ಯಾವ ರೀತಿ ವರ್ತಿಸುತ್ತದೆ ಎಂಬ ಕುರಿತಾಗಿ ಖಚಿತ ದತ್ತಾಂಶಗಳು ಇನ್ನೂ ಬಹಿರಂಗವಾಗಿಲ್ಲ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಹೇಳುತ್ತಿದೆ. ಅಲ್ಲದೆ ನಿಖರ ಮಾಹಿತಿಗಾಗಿ ನಮ್ಮದೇ ವೆಬ್‌ಸೈಟ್‌ ನೋಡಿ ಎನ್ನುತ್ತಿದೆ.

ಇದುವರೆಗೆ ಬಂದ ಕೊರೊನಾ ತಳಿಗಳು

ಆಲ್ಫಾ
ಮೊದಲಿಗೆ ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿದ್ದು, 2020ರ ಡಿಸೆಂಬರ್‌ನಲ್ಲಿ ಇದು ಅತ್ಯಂತ ಕಳವಳಕಾರಿ ಕೊರೊನಾ ರೂಪಾಂತರಿ ಎಂದು ಕರೆಯಲಾಗಿತ್ತು. ಸದ್ಯ ಜಗತ್ತಿನ 192 ದೇಶಗಳಲ್ಲಿ ಈ ರೂಪಾಂತರಿ ಪತ್ತೆಯಾಗಿದೆ. ಚೀನದ ವುಹಾನ್‌ನಲ್ಲಿ ಪತ್ತೆಯಾದ ತಳಿಗಿಂತಲೂ ಇದು ಪ್ರಬಲವಾಗಿತ್ತು.

ಬೀಟಾ
ಇದು ದಕ್ಷಿಣ ಆಫ್ರಿಕಾದಲ್ಲಿ 2020ರ ಡಿಸೆಂಬರ್‌ನಲ್ಲೇ ಪತ್ತೆಯಾಗಿತ್ತು. 139 ದೇಶಗಳಲ್ಲಿ ಕಂಡು ಬಂದಿರುವ ಇದನ್ನೂ ಕಳವಳಕಾರಿ ವೇರಿಯಂಟ್‌ ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆದಿತ್ತು.

ಗಾಮಾ
ಬ್ರೆಜಿಲ್‌ನಲ್ಲಿ 2021ರ ಜನವರಿಯಲ್ಲಿ ಪತ್ತೆಯಾದ ಇದು 98 ದೇಶಗಳಲ್ಲಿ ಹರಡಿದೆ. ಇತರ ವೇರಿಯಂಟ್‌ಗಳಿಗಿಂತ 2.4 ಪಟ್ಟು ಅಧಿಕ ಹರಡುವಿಕೆಯ ಶಕ್ತಿ ಹೊಂದಿತ್ತು.

 ಡೆಲ್ಟಾ
2021ರ ಮೇಯಲ್ಲಿ ಭಾರತದಲ್ಲಿ ಈ ರೂಪಾಂತರಿ ಪತ್ತೆಯಾಗಿತ್ತು. ಸದ್ಯ ಜಗತ್ತಿನ 171 ದೇಶಗಳಲ್ಲಿ ಇದು ಕಂಡು ಬಂದಿದೆ. ರೋಗ ನಿರೋಧಕ ಕಣಗಳಿಂದ ತಪ್ಪಿಸಿಕೊಂಡು ಹೆಚ್ಚು ಪರಿಣಾಮಕಾರಿಯಾಗಿ ಹರಡುವ ಶಕ್ತಿ ಹೊಂದಿತ್ತು. ಅಲ್ಲದೇ ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆಗೂ ಕಾರಣವಾಗಿತ್ತು. ಇದಾದ ಮೇಲೆ ನೇಪಾಲದಲ್ಲಿ ಡೆಲ್ಟಾ ಪ್ಲಸ್‌ ವೇರಿಯಂಟ್‌ ಕಂಡು ಬಂದಿತ್ತು.

ಒಮಿಕ್ರಾನ್‌
2021ರ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಇದು ಪತ್ತೆಯಾಗಿದೆ. ಸದ್ಯ ಜಗತ್ತಿನ 30ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಕರಣಗಳು ಕಂಡು ಬಂದಿವೆ. ಇದು ಗಂಭೀರವಾದ ಪರಿಣಾಮ ಉಂಟು ಮಾಡದೇ ಇದ್ದರೂ ಹರಡುವಿಕೆಯ ಶಕ್ತಿ ಹೆಚ್ಚಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಟಾಪ್ ನ್ಯೂಸ್

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್

1

World Osteoporosis Day: ಆಸ್ಟಿಯೊಪೊರೋಸಿಸ್‌ ಅಥವಾ ಮೂಳೆ ಸವಕಳಿ ಎಂದರೇನು?

6-anasthesia

Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್‌ 16

5-health

Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ

7-health

Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.