ಚರ್ಮದಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಈರುಳ್ಳಿ ಸಿಪ್ಪೆ ಬೆಸ್ಟ್..!
Team Udayavani, Mar 23, 2021, 5:48 PM IST
ಭಾರತೀಯ ಆಹಾರ ಪದ್ಧತಿಗೆ ಈರುಳ್ಳಿಯಿಲ್ಲದೇ ಪೂರ್ಣವಾಗುವುದಿಲ್ಲ. ಭಾರತೀಯರಿಗೆ ಈರುಳ್ಳಿ ಇಲ್ಲದೆ ಆಹಾರದ ರುಚಿ ಹಿಡಿಸುವುದಿಲ್ಲ. ಸಾಮಾನ್ಯವಾಗಿ ಈರುಳ್ಳಿ ಬಳಸುವಾಗ ಅದರ ಸಿಪ್ಪೆಯನ್ನು ಎಸೆದು ಅದರ ಒಳಭಾಗವನ್ನು ಬಳಸುವುದನ್ನು ಹೆಚ್ಚಾಗಿ ನಾವೆಲ್ಲರೂ ಪಾಲಿಸುತ್ತೇವೆ. ಆದರೆ ಈರುಳ್ಳಿಯಂತೆ ಅದರ ಸಿಪ್ಪೆಗಳಲ್ಲಿಯೂ ಆರೋಗ್ಯ ಸಂಬಂಧಿ ಉಪಯುಕ್ತ ಅಂಶಗಳು ಇವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.
ಹೌದು, ಈರುಳ್ಳಿ ಸಿಪ್ಪೆಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದರೆ ನಿಮಗೆ ಆಶ್ಚರ್ಯವೆನಿಸುತ್ತದೆ. ಇಷ್ಟೇ ಅಲ್ಲ ಈರುಳ್ಳಿ ಸಿಪ್ಪೆಗಳಿಂದ ಇನ್ನೂ ಪ್ರಯೋಜಕಾರಿ ಮಾಹಿತಿಗಳಿವೆ.
ಓದಿ : ನಾಳೆ ಕೇಂದ್ರದಿಂದ ಹೆಚ್ಚುವರಿಯಾಗಿ 4 ಲಕ್ಷ ಲಸಿಕೆ ಸರಬರಾಜು : ಡಾ.ಕೆ.ಸುಧಾಕರ್
ಬ್ಯಾಡ್ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಈರುಳ್ಳಿ ಸಿಪ್ಪೆಗಳು
ರಾತ್ರಿಯಿಡೀ ನೀರಿನಲ್ಲಿ ಈರುಳ್ಳಿ ಸಿಪ್ಪೆಗಳನ್ನು ನೆನೆಸಿ ಮತ್ತು ಬೆಳಿಗ್ಗೆ ಸಿಪ್ಪೆಗಳನ್ನು ತೆಗೆದು ಅದರ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ಬ್ಯಾಡ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಹಂತ ಹಂತವಾಗಿ ಕಡಿಮೆಯಾಗುತ್ತದೆ.
ನಿಮ್ಮ ಕೂದಲುಗಳು ಸೊಂಪಾಗಿ ಬೆಳೆಸಲು ಈರುಳ್ಳಿ ಸಿಪ್ಪೆಗಳು ಬೆಸ್ಟ್
ನಿಮಗೆ ಕೂದಲು ಸೊಂಪಾಗಿ ಬೆಳೆಯಬೇಕು ಅಂತಿದ್ದರೆ ನೀವು ಈರುಳ್ಳಿ ಸಿಪ್ಪೆಯನ್ನು ಬಳಸುವುದು ಉತ್ತಮ. ಅಷ್ಟಲ್ಲದೇ, ಕೂದಲನ್ನು ಸುಂದರಗೊಳಿಸಲು ನೀವು ಈರುಳ್ಳಿ ಸಿಪ್ಪೆಗಳ ನೀರನ್ನು ಸಹ ಬಳಸಬಹುದು. ಇದು ನಿಮ್ಮ ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.
ಚರ್ಮದಲ್ಲಿನ ಕಲೆಗಳನ್ನು ತೆಗೆದುಹಾಕಲು ಬಳಸಿ ಈರುಳ್ಳಿ ಸಿಪ್ಪೆ
ನಿಮ್ಮ ಮುಖದ ಮೇಲೆ ಅಥವಾ ನಿಮ್ಮ ಚರ್ಮದ ಮೇಲೆ ಇರುವ ಕಲೆಗಳನ್ನು ತೆಗೆದುಹಾಕಲು, ನೀವು ಈರುಳ್ಳಿ ರಸಯುಕ್ತ ಸಿಪ್ಪೆಯನ್ನು ಬಳಸುವುದು ಉತ್ತಮ. ಈರುಳ್ಳಿ ಸಿಪ್ಪೆಯಲ್ಲಿ ಅರಿಶಿನವನ್ನು ಬೆರೆಸಿ ಕಲೆ ಇರುವ ಜಾಗದಲ್ಲಿ ಹಚ್ಚಿಕೊಳ್ಳುವುದರಿಂದ ನಿಮ್ಮ ಚರ್ಮದಲ್ಲಿನ ಮತ್ತು ಮುಖದಲ್ಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.
ಗಂಟಲಿನ ಸಮಸ್ಯೆಯೇ.. ಈರುಳ್ಳಿ ಸಿಪ್ಪೆಯನ್ನು ಬಳಸಿ
ನಿಮಗೆ ಗಂಟಲಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ನೀವು ನಿಮ್ಮ ಮನೆಯಲ್ಲೇ ಸಿಗುವ ಈರುಳ್ಳಿ ಸಿಪ್ಪೆಯಿಂದ ಗುಣಪಡಿಸಿಕೊಳ್ಳಬಹುದು. ಯಾವ ವೈದ್ಯಕೀಯ ಚಿಕಿತ್ಸೆಯ ಅಗತ್ಯವೇ ಇಲ್ಲ. ಗಂಟಲಿನ ನೋವಿನ ಸಮಸ್ಯೆ ನಿಮಗೆ ಕಾಣಿಸಿಕೊಳ್ಳುತ್ತಿದ್ದರೇ, ಈರುಳ್ಳಿ ಸಿಪ್ಪೆಯನ್ನು ಬಿಸಿ ನೀರಿನಲ್ಲಿ ಕುದಿಸಿ ನಂತರ ಈ ನೀರನ್ನು ಕುಡಿಯುವುದರಿಂದ ನಿಮ್ಮ ಗಂಟಲು ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಓದಿ : ಲವಣ ಮಿಶ್ರಿತ ಮರಳು ಪೂರೈಕೆ ಮಾಡಿದರೆ ಕಠಿಣ ಕ್ರಮ : ಮುರುಗೇಶ್ ನಿರಾಣಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.