Life ; ಮೂರು ಮಕ್ಕಳಿಗೆ ಹೊಸಬದುಕು ನೀಡಿ ಮರೆಯಾದ 5 ದಿನದ ಮಗು!
ಎರಡು ಮೂತ್ರಪಿಂಡಗಳು 13 ಮತ್ತು 15 ವರ್ಷ ವಯಸ್ಸಿನ ಮಕ್ಕಳಿಗೆ ಹೊಸ ಜೀವನ ನೀಡಿವೆ...
Team Udayavani, Oct 19, 2023, 5:14 PM IST
ಸೂರತ್ : ಗುಜರಾತ್‌ನ ಸೂರತ್‌ನಲ್ಲಿ 5 ದಿನದ ಮೆದುಳು ನಿಷ್ಕ್ರಿಯಗೊಂಡ ಶಿಶುವಿನಿಂದ ಹೊರತೆಗೆಯಲಾದ ಅಂಗಾಂಗಳು ಮೂವರು ಮಕ್ಕಳಿಗೆ ಹೊಸ ಬದುಕನ್ನು ನೀಡಿವೆ.
ಖಾಸಗಿ ಆಸ್ಪತ್ರೆಯಲ್ಲಿ ಅಕ್ಟೋಬರ್ 13 ರಂದು ಗಂಡು ಮಗು ಜನಿಸಿತ್ತು, ಆದರೆ ಅದು ಯಾವುದೇ ಚಲನೆಯನ್ನು ತೋರುತ್ತಿರಲಿಲ್ಲ ಎಂದು ವೈದ್ಯರು ಹೇಳಿದ ನಂತರ ಹೆತ್ತವರ ಸಂತೋಷವು ಅಲ್ಪಕಾಲಿಕವಾಗಿತ್ತು.
ಸೂರತ್ ನಗರದ ಇನ್ನೊಂನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲು ಆರಂಭಿಸಲಾಯಿತಾದರೂ ವೈದ್ಯರ ತೀವ್ರ ಪ್ರಯತ್ನದ ಹೊರತಾಗಿಯೂ ಮೆದುಳು ನಿಷ್ಕ್ರಿಯಗೊಂಡಿರುವ ಮಗುವನ್ನು ಉಳಿಸಿಕೊಳ್ಳುವುದು ಕಷ್ಟವೆಂದು ತಿಳಿಸಿದರು.
ಈ ವೇಳೆ ” ಜೀವನ್‌ದೀಪ್ ಅಂಗದಾನ ಪ್ರತಿಷ್ಠಾನದ (ಜೆಒಡಿಎಫ್) ವ್ಯವಸ್ಥಾಪಕ ಟ್ರಸ್ಟಿ ವಿಪುಲ್ ತಾಲವಿಯಾ ಶಿಶುವಿನ ಸ್ಥಿತಿಯ ಬಗ್ಗೆ ತಿಳಿದು ಸರ್ಕಾರಿ ನ್ಯೂ ಸಿವಿಲ್ ಆಸ್ಪತ್ರೆಯ ಡಾ ನಿಲೇಶ್ ಕಚಡಿಯಾ ಅವರ ಶಿಶುವೈದ್ಯಕೀಯ ಕೇಂದ್ರಕ್ಕೆ ತಲುಪಿದರು, ಅಲ್ಲಿ ಮಗುವನ್ನು ದಾಖಲಿಸಿ ಅಂಗಾಂಗ ದಾನದ ಮೂಲಕ ಬೇರೆ ಮಕ್ಕಳ ಜೀವ ಉಳಿಸಲು ಅವರ ಪೋಷಕರ ಮನವೊಲಿಸಲು ಮುಂದಾದರು. ಮಗುವಿನ ಹೆತ್ತವರಾದ ಹರ್ಷ ಸಂಘಾನಿ ಮತ್ತು ಪತ್ನಿ ಚೇತನಾ ಅವರ ಮನವೊಲಿಸಿದರು. ಹರ್ಷ ವಜ್ರದ ಕುಶಲಕರ್ಮಿಯಾಗಿದ್ದು ಅಮ್ರೇಲಿ ಜಿಲ್ಲೆಯವರು.
ಪೋಷಕರು ನೋವಿನಲ್ಲೂ ತಮ್ಮ ಮಗು ಇನ್ನೊಬ್ಬರ ಬದುಕಿಗೆ ನೆರವಾಗಲಿ ಎಂದು ಅಂಗಾಂಗ ದಾನ ಮಾಡಲು ದೃಢ ನಿರ್ಧಾರ ತಳೆದು ಮಾದರಿಯಾದರು.
ಕುಟುಂಬದ ಒಪ್ಪಿಗೆ ಪಡೆದ ನಂತರ, ಪಿಪಿ ಸವಾನಿ ಆಸ್ಪತ್ರೆಯ ವೈದ್ಯರು ಬುಧವಾರ ಮಗುವಿನ ದೇಹದಿಂದ ಎರಡು ಮೂತ್ರಪಿಂಡಗಳು, ಎರಡು ಕಾರ್ನಿಯಾಗಳು, ಯಕೃತ್ತು ಮತ್ತು ಗುಲ್ಮವನ್ನು ತೆಗೆದಿದ್ದಾರೆ. ಗುಜರಾತ್ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ (SOTTO) ನಿರ್ದೇಶನದಂತೆ, ಕಾರ್ನಿಯಾಗಳನ್ನು ಸೂರತ್‌ನ ಕಣ್ಣಿನ ಬ್ಯಾಂಕ್‌ಗೆ ದಾನ ಮಾಡಲಾಯಿತು, ಆದರೆ ಮೂತ್ರಪಿಂಡಗಳು ಮತ್ತು ಗುಲ್ಮವನ್ನು ತತ್ ಕ್ಷಣ ಇನ್‌ಸ್ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸ್ ಮತ್ತು ರಿಸರ್ಚ್ ಸೆಂಟರ್ (IKDRC) ಗೆ ಸಾಗಿಸಲಾಯಿತು. ಯಕೃತ್ತನ್ನು ನವದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ (ಐಎಲ್‌ಬಿಎಸ್) ಗೆ ಕಳುಹಿಸಲಾಗಿದೆ.
ನವ ದೆಹಲಿಯಲ್ಲಿ ಶಿಶುವಿನ ಯಕೃತ್ತನ್ನು ಒಂಬತ್ತು ತಿಂಗಳ ಮಗುವಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ನಾವು ಈಗಷ್ಟೇ ತಿಳಿದುಕೊಂಡಿದ್ದೇವೆ ಎಂದು ತಾಲವಿಯಾ ಹೇಳಿದರು. ಮಗುವಿನ ಎರಡು ಮೂತ್ರಪಿಂಡಗಳು 13 ವರ್ಷ ಮತ್ತು 15 ವರ್ಷ ವಯಸ್ಸಿನ ಇಬ್ಬರು ಮಕ್ಕಳಿಗೆ ಹೊಸ ಜೀವನವನ್ನು ನೀಡಿವೆ ಎಂದು IKDRC ನಿರ್ದೇಶಕ ಡಾ ವಿನೀತ್ ಮಿಶ್ರಾ ಗುರುವಾರ ದೃಢಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.