Orthodontics: ವಿಶೇಷ ಆರೈಕೆಯ ಅಗತ್ಯವುಳ್ಳ ಮಕ್ಕಳಿಗೆ ಆರ್ಥೊಡಾಂಟಿಕ್ಸ್‌


Team Udayavani, Jan 14, 2024, 10:28 AM IST

4-health

ಮಾಲ್‌ಆಕ್ಲೂಶನ್ಸ್‌ ಅಥವಾ ಹಲ್ಲುಗಳು ಮತ್ತು ದವಡೆಗಳ ಅಡ್ಡಾದಿಡ್ಡಿ ಜೋಡಣೆಯು ಮಕ್ಕಳಿಗೆ ವಿಶೇಷ ಆರೈಕೆ ಒದಗಿಸಬೇಕಾದ ವಿಷಯಗಳಲ್ಲಿ ಒಂದಾಗಿದೆ. ದೈಹಿಕ, ಬುದ್ಧಿಮತ್ತೆಗೆ ಸಂಬಂಧಿಸಿದ ಅಥವಾ ಬೆಳವಣಿಗೆಗೆ ಸಂಬಂಧಿಸಿದ ಸವಾಲುಗಳನ್ನು ಹೊಂದಿರುವ ಮಕ್ಕಳಲ್ಲಿ ಹಲ್ಲುಗಳು ಮತ್ತು ದವಡೆಯ ಅಡ್ಡಾದಿಡ್ಡಿ ಜೋಡಣೆ ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ಇಂತಹ ಮಕ್ಕಳು ಅಸಹಜ ಮೌಖೀಕ ಅಭ್ಯಾಸಗಳು, ಅಸಹಜ ಇಂದ್ರಿಯ ಗ್ರಹಣ ಶಕ್ತಿ ಹೊಂದಿರುವುದು ಅಥವಾ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಹೊಂದದಿರುವುದು ಇದಕ್ಕೆ ಕಾರಣ.

ಮಾಲ್‌ಅಕ್ಲೂಶನ್‌ಗಳು ಮಗುವಿನ ನಗುವಿನ ಸೌಂದರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಷ್ಟೇ ಅಲ್ಲದೆ ಅವರ ಒಟ್ಟಾರೆ ಬಾಯಿಯ ಆರೋಗ್ಯ ಮತ್ತು ಸೌಖ್ಯದ ಮೇಲೆ ಗಮನಾರ್ಹ ಪ್ರಭಾವ ಬೀರುತ್ತವೆ. ವಿಶೇಷ ಅಗತ್ಯವುಳ್ಳ ಮಕ್ಕಳು ಹೊಂದಿರುವ ಮಾಲ್‌ಅಕ್ಲೂಶನ್‌ಗಳನ್ನು ನಿಭಾಯಿಸಲು ವಿಶೇಷ ಆರ್ಥೊಡಾಂಟಿಕ್‌ ಆರೈಕೆಯ ಅಗತ್ಯವಿದೆ. ಪ್ರತೀ ಮಗುವಿನ ವೈಯಕ್ತಿಕ ಅಗತ್ಯಗಳು ಮತ್ತು ಸವಾಲುಗಳನ್ನು ಆಧರಿಸಿ ಆರ್ಥೊಡಾಂಟಿಕ್ಸ್‌ ಗಳು ವ್ಯಕ್ತಿನಿರ್ದಿಷ್ಟ ಆರೈಕೆ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾರೆ.

ಎದುರಿಸುವ ಸವಾಲುಗಳು

ವಿಶೇಷ ಆರೈಕೆಯ ಅಗತ್ಯವುಳ್ಳ ವ್ಯಕ್ತಿಗಳು ಇಂದ್ರಿಯ ಗ್ರಹಣ ಶಕ್ತಿಯ ಅಡೆತಡೆಗಳು ಅಥವಾ ದೈಹಿಕ ಮಿತಿಗಳಿಂದಾಗಿ ತಮಗಿರುವ ದಂತ ವೈದ್ಯಕೀಯ ಆರೈಕೆಯ ಅಗತ್ಯಗಳನ್ನು ಹೇಳಿಕೊಳ್ಳಲು ಅಥವಾ ಪಡೆಯಲು ಕಷ್ಟಪಡುತ್ತಾರೆ. ದಂತ ವೈದ್ಯಕೀಯ ಚಿಕಿತ್ಸಾಲಯದ ಅಪರಿಚಿತ ಪರಿಸರ, ಅಪರಿಚಿತ ಉಪಕರಣಗಳು ಮತ್ತು ತಪಾಸಣೆ, ಪರೀಕ್ಷೆಗಳ ಸಂದರ್ಭದಲ್ಲಿ ಸಹಕಾರ ಒದಗಿಸಬೇಕಾಗಿರುವ ಅಗತ್ಯವು ಅನೇಕ ಮಂದಿಗೆ ತ್ರಾಸದಾಯಕವಾಗಿ ಪರಿಣಮಿಸಬಹುದು. ಇದರಿಂದಾಗಿ ಬಾಯಿಯ ಆರೋಗ್ಯ -ಆರೈಕೆಯ ಅಗತ್ಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿ ಕ್ರಮೇಣ ಗಂಭೀರ ಪರಿಣಾಮಗಳಿಗೆ ದಾರಿ ಮಾಡಿಕೊಡಬಹುದಾಗಿದೆ.

ವಿಶೇಷ ಅಗತ್ಯವುಳ್ಳವರಿಗಾಗಿ ಆರ್ಥೊಡಾಂಟಿಕ್ಸ್‌

ಇಂತಹ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ವಿಶೇಷ ಆರ್ಥೊಡಾಂಟಿಕ್‌ ಆರೈಕೆಯನ್ನು ಒದಗಿಸುವ ಆರ್ಥೊಡಾಂಟಿಸ್ಟ್‌ಗಳು ಸ್ನೇಹಮಯ ಮತ್ತು ಗ್ರಹಣೇಂದ್ರಿಯ ಸ್ನೇಹಿ ವಾತಾವರಣವನ್ನು ಸೃಷ್ಟಿಸಲು ಸೂಕ್ಷ್ಮತೆಯಿಂದ ಕೆಲಸ ಮಾಡುತ್ತಾರೆ. ಮನಸ್ಸನ್ನು ಮುದಗೊಳಿಸುವ ಬಣ್ಣಗಳ ಬಳಕೆ, ಪ್ರಕಾಶಮಾನವಲ್ಲದ, ಮೃದುವಾದ ಬೆಳಕು, ಉಪಕರಣಗಳು ಮತ್ತು ಪರಿಕರಗಳ ಸ್ನೇಹಮಯ ಉಪಯೋಗ- ಹೀಗೆ ಸುಖಾನುಭವವನ್ನು ಒದಗಿಸುವಂತೆ ಪ್ರತಿಯೊಂದು ಅಂಶವನ್ನು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿರುತ್ತದೆ. ಪ್ರತೀ ರೋಗಿಯ ನವೀನ ಸವಾಲುಗಳು ಮತ್ತು ಆದ್ಯತೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ವ್ಯಕ್ತಿನಿರ್ದಿಷ್ಟ ಚಿಕಿತ್ಸಾ ಕ್ರಮವಿನ್ಯಾಸವನ್ನು ಆಥೊìಡಾಂಟಿಸ್ಟ್‌ ಸಂಯೋಜಿಸುತ್ತಾರೆ. ಪರ್ಯಾಯ ಆಥೊìಡಾಂಟಿಕ್‌ ಉಪಕರಣಗಳ ಬಳಕೆ, ಚಿಕಿತ್ಸೆಯ ಸಮಯದ ವಿಸ್ತರಣೆ ಅಥವಾ ಇತರ ಆರೋಗ್ಯ ಸೇವಾ ವೃತ್ತಿಪರರ ಜತೆಗೆ ಸಹಭಾಗಿ ಆರೈಕೆಯ ಯೋಜನೆಗಳು ಇದರಲ್ಲಿ ಒಳಗೊಳ್ಳಬಹುದಾಗಿದೆ.

ಪೋಷಕರು/ ಆರೈಕೆದಾರರಿಗೆ ಪ್ರಾಯೋಗಿಕ ಸಲಹೆಗಳು

  1. ಶೀಘ್ರ ಆರ್ಥೊಡಾಂಟಿಕ್‌ ವಿಶ್ಲೇಷಣೆ: ಮಾಲ್‌ಅಕ್ಲೂಶನ್‌ ಇರುವುದನ್ನು ಪತ್ತೆಹಚ್ಚಲು ಆರ್ಥೊಡಾಂಟಿಸ್ಟ್‌ರ ಜತೆಗೆ ಬೇಗನೆ ಸಮಾಲೋಚನೆ ನಡೆಸುವುದು ಮತ್ತು ಸಮರ್ಪಕವಾದ ನಿರ್ವಹಣೆಯನ್ನು ಆದಷ್ಟು ಬೇಗನೆ ಆರಂಭಿಸುವುದು. ಬೇಗನೆ ಚಿಕಿತ್ಸೆಯನ್ನು ಆರಂಭಿಸಿದರೆ ಹೆಚ್ಚು ಪರಿಣಾಮಕಾರಿಯಾದ ಮತ್ತು ಕಡಿಮೆ ಗಾಯ-ಹಾನಿಯುಳ್ಳ ಚಿಕಿತ್ಸೆಯನ್ನು ಒದಗಿಸಬಹುದು.
  2. ಸತತವಾದ ಬಾಯಿಯ ನೈರ್ಮಲ್ಯ ಅಭ್ಯಾಸಗಳು: ನಿಮ್ಮ ಮಗುವಿನ ಸಾಮರ್ಥ್ಯಗಳಿಗೆ ಹೊಂದಿಕೊಳ್ಳುವ ಸತತವಾದ ಬಾಯಿಯ ನೈರ್ಮಲ್ಯ ಅಭ್ಯಾಸ ಕ್ರಮಗಳನ್ನು ರೂಢಿಸಿಕೊಳ್ಳುವುದಕ್ಕಾಗಿ ನಿಮ್ಮ ಆರ್ಥೊಡಾಂಟಿಸ್ಟ್‌ ಜತೆಗೆ ಸಮಾಲೋಚಿಸಿ. ಹೆಚ್ಚುವರಿ ಸಂಕೀರ್ಣ ಸಮಸ್ಯೆಗಳು ಉಂಟಾಗುವುದನ್ನು ತಡೆಯಲು ಉತ್ತಮ ಬಾಯಿಯ ಆರೈಕೆ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾದ ಮಹತ್ವಕ್ಕೆ ಒತ್ತು ನೀಡಿ.
  3. ಮೌಖೀಕ ಅಭ್ಯಾಸಗಳ ಬಗ್ಗೆ ನಿಗಾ ಇರಿಸಿ: ಬೆರಳು ಚೀಪುವುದು, ನಾಲಗೆಯನ್ನು ತಿರುಗಿಸುತ್ತಿರುವುದು ಇತ್ಯಾದಿ ಮಾಲ್‌ಅಕ್ಲೂಶನ್‌ ಉಂಟಾಗಲು ಕೊಡುಗೆ ನೀಡಬಹುದಾದ ನಿಮ್ಮ ಮಗುವಿನ ಯಾವುದೇ ಅಸಹಜ ಮೌಖೀಕ ಅಭ್ಯಾಸಗಳತ್ತ ಗಮನ ನೀಡಿ.
  4. ಗ್ರಹಣೇಂದ್ರಿಯ ಸ್ನೇಹಿ ದಂತ ವೈದ್ಯಕೀಯ ಆರೈಕೆ: ನಿಮ್ಮ ಮಗು ಹೊಂದಿರಬಹುದಾದ ಗ್ರಹಣೇಂದ್ರಿಯ ಸಂಬಂಧಿ ಸೂಕ್ಷ್ಮತೆಗಳನ್ನು ಆರ್ಥೊಡಾಂಟಿಸ್ಟ್‌ರಿಗೆ ವಿವರಿಸಿ. ಇದರಿಂದ ಹೆಚ್ಚು ಆರಾಮದಾಯಕವಾದ ಮತ್ತು ಧನಾತ್ಮಕವಾದ ಚಿಕಿತ್ಸಾ ಪರಿಸರವನ್ನು ಸೃಷ್ಟಿಸಲು ಅವರಿಗೆ ಸಹಾಯವಾಗುತ್ತದೆ.
  5. ಆರ್ಥೊಡಾಂಟಿಸ್ಟ್‌ ಜತೆಗೆ ಸಮಾಲೋಚಿಸಿ: ನಿಮ್ಮ ಮಗುವಿನ ಪ್ರಗತಿ, ಸವಾಲುಗಳು ಮತ್ತು ನಿಮಗಿರುವ ಸಂಶಯ, ಪ್ರಶ್ನೆಗಳ ಬಗ್ಗೆ ನಿಮ್ಮ ಮಗುವಿನ ಆರ್ಥೊಡಾಂಟಿಸ್ಟ್‌ ಬಳಿ ಮುಕ್ತವಾಗಿ ಸಮಾಲೋಚಿಸಿ. ಈ ಸಹಭಾಗಿ ಕಾರ್ಯವಿಧಾನದಿಂದ ನಿಮ್ಮ ಮಗುವಿನ ಹೊಸ ಹೊಸ ಅಗತ್ಯಗಳಿಗೆ ಅನುಸಾರವಾಗಿ ಚಿಕಿತ್ಸಾ ಯೋಜನೆಯನ್ನು ಸತತವಾಗಿ ಹೊಂದಿಸಿಕೊಳ್ಳುವುದು ಸಾಧ್ಯವಾಗುತ್ತದೆ.
  6. ಇತರ ಆರೋಗ್ಯ ಸೇವಾ ವೃತ್ತಿಪರರ ಜತೆಗೆ ಸಹಭಾಗಿತ್ವ ಸಾಧಿಸಿ: ನಿಮ್ಮ ಮಗುವಿನ ಆರ್ಥೊಡಾಂಟಿಸ್ಟ್‌ ಮತ್ತು ನಿಮ್ಮ ಮಗುವಿನ ಆರೈಕೆಯಲ್ಲಿ ಭಾಗಿಯಾಗುತ್ತಿರುವ ಇತರ ಆರೋಗ್ಯ ಸೇವಾ ವೃತ್ತಿಪರರ ನಡುವೆ ಸಹಭಾಗಿತ್ವಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡಿ. ಈ ಬಹುವಿಭಾಗೀಯ ಕಾರ್ಯಪ್ರವೃತ್ತಿಯಿಂದ ನಿಮ್ಮ ಮಗುವಿನ ಆರೋಗ್ಯದ ಎಲ್ಲ ಆಯಾಮಗಳು ನಿರ್ವಹಣೆಗೆ ಪರಿಗಣನೆಗೆ ಬರುವುದು ಸಾಧ್ಯವಾಗುತ್ತದೆ.
  7. ಧನಾತ್ಮಕ ವಾತಾವರಣ ಸೃಷ್ಟಿ: ಬಾಯಿಯ ನೈರ್ಮಲ್ಯ ಮತ್ತು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ನಿಮ್ಮ ಮ ಗುವಿನ ಪ್ರಯತ್ನ ಹಾಗೂ ಆರ್ಥೊಡಾಂಟಿಕ್‌ ವೈದ್ಯರ ಭೇಟಿಯ ಸಂದರ್ಭಗಳಲ್ಲಿ ಸಹಕಾರಕ್ಕೆ ಪೂರಕವಾದ ಧನಾತ್ಮಕ ವಾತಾವರಣ ಸೃಷ್ಟಿಗೆ ಪ್ರೋತ್ಸಾಹ ನೀಡಿ. ನಿಮ್ಮ ಮಗುವಿನ ಸಣ್ಣ ಸಣ್ಣ ಸಾಧನೆಗಳನ್ನು ಕೂಡ ಹೊಗಳುವ, ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಆತ್ಮವಿಶ್ವಾಸ ವೃದ್ದಿಗೆ ಹಾಗೂ ಮಗು ಚಿಕಿತ್ಸೆಯತ್ತ ಧನಾತ್ಮಕ ಭಾವನೆ ತಾಳಲು ಸಹಾಯ ಮಾಡಿ.
  8. ದೃಶ್ಯ ಸಾಧನಗಳ ಬಳಕೆ: ನಿಮ್ಮ ಮಗುವಿನ ಬುದ್ಧಿಶಕ್ತಿ ಸಾಮರ್ಥ್ಯಗಳನ್ನು ಆಧರಿಸಿ ಆಥೊìಡಾಂಟಿಕ್‌ ಚಿಕಿತ್ಸಾ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಲು ದೃಶ್ಯ ಸಾಧನಗಳನ್ನು ಉಪಯೋಗಿಸಿ. ಇದರಿಂದ ಮಗುವಿನ ಅಂಜಿಕೆ, ಉದ್ವೇಗ ಕಡಿಮೆಯಾಗಿ ಚಿಕಿತ್ಸೆಯ ಸಂದರ್ಭದಲ್ಲಿ ಏನಾಗಬಹುದು ಎಂಬ ಬಗ್ಗೆ ಅರ್ಥ ಮಾಡಿಕೊಳ್ಳಲು ಮಗುವಿಗೆ ಸಾಧ್ಯವಾಗುತ್ತದೆ.
  9. ತಾಳ್ಮೆಯಿಂದಿರಿ ಮತ್ತು ಪ್ರೋತ್ಸಾಹಿಸಿ: ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಆರ್ಥೊಡಾಂಟಿಕ್‌ ಚಿಕಿತ್ಸೆಯು ದೀರ್ಘ‌ಕಾಲ ತೆಗೆದುಕೊಳ್ಳಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಹೀಗಾಗಿ ತಾಳ್ಮೆಯಿಂದಿರಿ ಮತ್ತು ಪ್ರೋತ್ಸಾಹಕರ ನಿಲುವನ್ನು ತಾಳಿ. ಮಾತ್ರವಲ್ಲದೆ ಸಂಪೂರ್ಣ ಚಿಕಿತ್ಸಾ ಪ್ರಕ್ರಿಯೆಯುದ್ದಕ್ಕೂ ನಿಮ್ಮ ಮಗುವಿಗೆ ಬೆಂಬಲವಾಗಿ ನಿಲ್ಲಿ.
  10. ಸಮಾನ ಮನಸ್ಕರ ನೆರವನ್ನು ಪಡೆಯಿರಿ: ಮಾಲ್‌ ಅಕ್ಲೂಶನ್‌ ಹೊಂದಿರುವ ಇತರ ವಿಶೇಷ ಅಗತ್ಯವುಳ್ಳ ಮಕ್ಕಳ ಹೆತ್ತವರು/ ಪೋಷಕರ ಜತೆಗೆ ಸಂಪರ್ಕ ಸಾಧಿಸಿ. ಅನುಭವ, ಸಲಹೆಗಳು ಮತ್ತು ಸೂಚನೆಗಳನ್ನು ಹಂಚಿಕೊಳ್ಳುವುದರಿಂದ ನಿಮ್ಮ ಮಗುವಿನ ಆರ್ಥೊಡಾಂಟಿಕ್‌ ಚಿಕಿತ್ಸಾ ಅವಧಿಯುದ್ದಕ್ಕೂ ಅಮೂಲ್ಯ ಒಳನೋಟಗಳು ಮತ್ತು ಭಾವನಾತ್ಮಕ ಬೆಂಬಲ ಸಿಗುತ್ತದೆ.

ಪ್ರತೀ ಮಗು ಕೂಡ ಅಮೂಲ್ಯ, ಅಪೂರ್ವವಾಗಿದ್ದು, ನಿಮ್ಮ ಮಗುವಿನ ನಿರ್ದಿಷ್ಟ ಅಗತ್ಯಗಳಿಗೆ ಅನುಸಾರವಾಗಿ ನಿರ್ವಹಣ ಕ್ರಮವನ್ನು ವ್ಯಕ್ತಿನಿರ್ದಿಷ್ಟಗೊಳಿಸಿಕೊಳ್ಳುವುದು ಬಹಳ ಮುಖ್ಯವಾದುದಾಗಿದೆ. ಮಾಲ್‌ಅಕ್ಲೂಶನ್‌ ಇದ್ದರೆ ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ ಸರಿಪಡಿಸುವುದು ಮುಖದ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ, ಬಾಯಿಯ ಉತ್ತಮ ಆರೋಗ್ಯವನ್ನು ಗರಿಷ್ಠ ಮಟ್ಟದಲ್ಲಿ ಕಾಪಾಡಿಕೊಳ್ಳುವುದು ಹಾಗೂ ಒಟ್ಟಾರೆ ಸೌಖ್ಯದ ದೃಷ್ಟಿಯಿಂದಲೂ ಮಹತ್ವದ್ದು.

ಆರ್ಥೊಡಾಂಟಿಸ್ಟ್‌ ಜತೆಗೆ ರೋಗಿಯ ಬೆಂಬಲ ಮತ್ತು ಸಹಭಾಗಿತ್ವದ ಮೂಲಕ ಮಾಲ್‌ಅಕ್ಲೂಶನ್‌ ಹೊಂದಿರುವ ನಿಮ್ಮ ವಿಶೇಷ ಅಗತ್ಯವುಳ್ಳ ಮಗುವಿನ ಆರ್ಥೊಡಾಂಟಿಕ್‌ ಚಿಕಿತ್ಸೆಯ ಅನುಭವವು ಧನಾತ್ಮಕ ಮತ್ತು ಯಶಸ್ವಿಯಾಗುವಂತೆ ಮಾಡುವುದು ಸಾಧ್ಯ.

-ಡಾ| ರಮ್ಯಾ ವಿಜೇತಾ ಜತ್ತನ್ನ,

ರೀಡರ್‌, ಆರ್ಥೊಡಾಂಟಿಕ್ಸ್‌ ಮತ್ತು ಡೆಂಟೊಫೇಶಿಯಲ್‌ ಆರ್ಥೊಪೆಡಿಕ್ಸ್‌ ವಿಭಾಗ,

ಮಣಿಪಾಲ ದಂತವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆರ್ಥೊಡಾಂಟಿಕ್ಸ್‌ ಮತ್ತು ಡೆಂಟೊಫೇಶಿಯಲ್‌ ಆರ್ಥೊಪೆಡಿಕ್ಸ್‌ ವಿಭಾಗ, ಕೆಎಂಸಿ ಮಂಗಳೂರು)

ಟಾಪ್ ನ್ಯೂಸ್

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

13

ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Australian Open:  ಹಿಂದೆ ಸರಿದ ಸಿಮೋನಾ ಹಾಲೆಪ್‌

Australian Open: ಹಿಂದೆ ಸರಿದ ಸಿಮೋನಾ ಹಾಲೆಪ್‌

5

Kasaragod: ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿದ ಯುವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.