ಪಲಾವ್ ಎಲೆ ಸೇವನೆಯಿಂದಾಗುವ ಪ್ರಯೋಜನಗಳೇನು ?
Team Udayavani, Apr 4, 2021, 12:24 PM IST
ಪಲಾವ್ ಎಲೆಗಳು ಪರಿಮಳ ಹೆಚ್ಚಿಸುತ್ತದೆ. ಈ ಉದ್ದೇಶದಿಂದಲೇ ಪಲಾವ್ ಮಾಡಲು ಈ ಎಲೆಗಳು ಬೇಕೇ ಬೇಕು. ಮತ್ತೊಂದು ಮಹತ್ವದ ವಿಷಯ ಏನಂದರೆ ಪರಿಮಳಕ್ಕಾಗಿ ಬಳಸುವ ಪಲಾವ್ ಎಲೆಗಳಲ್ಲಿ ಸಾಕಷ್ಟು ಔಷಧಿಯ ಗುಣಗಳು ಇವೆ.
ಹೌದು, ಪಲಾವ್ ಎಲೆಗಳ ಸೇವನೆಯಿಂದ ಬಹುಪ್ರಯೋಜನಗಳಿವೆ. ಮುಖ್ಯವಾಗಿ ಮೈಗ್ರೇನ್ ಸಮಸ್ಯೆ ನಿವಾರಣೆಯಾಗುತ್ತದೆ. ಮಧುಮೇಹ, ತಲೆನೋವು, ಮೂಗಿನಲ್ಲಾದ ಅಲರ್ಜಿ, ನೆಗಡಿ, ಕೆಮ್ಮು, ಬ್ಯಾಕ್ಟೀರಿಯಾ, ವೈರಸ್ ಸೋಂಕು ಬಹಳಷ್ಟು ಸಮಸ್ಯೆ ದೂರವಾಗುತ್ತದೆ.
ಪಲಾವ್ ಎಲೆ ಸೇವನೆಯಿಂದಾಗು ಆರೋಗ್ಯಗಾರಿ ಪ್ರಯೋಜನಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕ್ಯಾನ್ಸರ್ ಕೋಶಗಳನ್ನು ನಾಶ ಪಡಿಸುತ್ತದೆ :
ಪಲಾವ್ ಎಲೆಗಳಲ್ಲಿ ಇರುವಂತಹ ಔಷಧಿ ಗುಣ ಕ್ಯಾನ್ಸರ್ ಬರಲು ಕಾರಣವಾಗುವ ಕೋಶಗಳನ್ನು ನಾಶ ಮಾಡುತ್ತದೆ.
ಸಕ್ಕರೆ ಕಾಯಿಲೆ ಶಮನ :
ತಜ್ಞರ ಅಧ್ಯಯನದ ಪ್ರಕಾರ 1 ರಿಂದ 3 ಗ್ರಾಂ ಪಲಾವ್ ಎಲೆ ತಿನ್ನುವುದರಿಂದ ಸಕ್ಕರೆ ಕಾಯಿಲೆ ಕಂಟ್ರೋಲ್ ನಲ್ಲಿರುತ್ತದೆಯಂತೆ.
ಗಾಯ ಮಾಯ :
ಪಲಾವ್ ಗೆ ಬಳಸುವ ಎಲೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ನೋವು ನಿವಾರಕ ಗುಣಗಳು ನಿಮ್ಮ ದೇಹದ ಮೇಲಾಗಿರುವ ಗಾಯವನ್ನು ನಿವಾರಿಸುತ್ತದೆ.
ಕಿಡ್ನಿ ಸ್ಟೋನ್‍ಗೆ ಮದ್ದು :
ಪಲಾವ್ ಎಲೆಯಲ್ಲಿರುವ ಸತ್ವ ಮೂತ್ರಪಿಂಡದಲ್ಲಿ ಕಲ್ಲು ( ಕಿಡ್ನಿ ಸ್ಟೋನ್) ಉಂಟಾಗದಂತೆ ತಡೆಯುತ್ತದೆ.
ಮಿದುಳು ಸಂಬಂಧಿ ಸಮಸ್ಯೆ ನಿವಾರಣೆ :
ನಿಮ್ಮ ಮಿದುಳಿನ ಸಮಸ್ಯೆ ಅಥವಾ ನಿಮ್ಮ ಮೂಡ್ ಸರಿಯಾಗಿ ಇಲ್ಲದಿದ್ದರೆ ಪಲಾವ್ ಎಲೆಯನ್ನು ಸ್ವಲ್ಪ ಸುಟ್ಟು ಅದರ ಹೊಗೆಯನ್ನು ಮನೆಯಲ್ಲ ಹರಡಿಸುವುದರಿಂದ ನಿಮ್ಮ ಮೂಡ್ ಸರಿಯಾಗುವುದರ ಜತೆಗೆ ನಿಮ್ಮ ಮಿದುಳಿನ ಯಾವುದೇ ಸಮಸ್ಯೆ ನಿವಾರಣೆಯಾಗಲಿದೆ.
ಇನ್ನು ಪಲಾವ್ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೇವಿಸಿ. ಇದರಲ್ಲಿ ಖನಿಜಗಳು, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಹೇರಳವಾಗಿದೆ. ಆದರೆ ಇದನ್ನು ನಿಯಮಿತವಾಗಿ ಸೇವಿಸಿ ½ ಚಮಚ ಅಥವಾ ½ ಎಲೆಗಿಂತ ಅಧಿಕವಾಗಿ ಸೇವಿಸಿದರೆ ಅತಿಸಾರ ಅಥವಾ ವಾಂತಿಗೆ ಕಾರಣವಾಗಬಹುದು. ಹಾಗೇ ಗರ್ಭಿಣಿಯರು, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಇದನ್ನು ತಪ್ಪಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.