Stroke/Paralysis: ಯುವಜನರಲ್ಲಿ ಲಕ್ವಾ: ಕಾರಣಗಳು, ಚಿಕಿತ್ಸೆ ಮತ್ತು ಪ್ರತಿಬಂಧಕ ಕ್ರಮಗಳು


Team Udayavani, Feb 11, 2024, 12:32 PM IST

6–Stroke

24 ತಾಸುಗಳಿಗಿಂತ ಹೆಚ್ಚು ಕಾಲ ಪಕ್ಷವಾತದ ಲಕ್ಷಣಗಳನ್ನು ಹೊಂದಿರುವುದು ಮತ್ತು ಮರಣ ದರಕ್ಕೆ ಕೊಡುಗೆ ನೀಡುವ ಅನಾರೋಗ್ಯವನ್ನು ಲಕ್ವಾ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು ವ್ಯಾಖ್ಯಾನಿಸಿದೆ. ಒಟ್ಟು ಲಕ್ವಾ ಪ್ರಕರಣಗಳಲ್ಲಿ ಶೇ. 10ರಿಂದ 15ರಷ್ಟು ಪ್ರಕರಣಗಳು 18ರಿಂದ 50 ವರ್ಷ ವಯೋಮಾನದ ಪ್ರೌಢರಲ್ಲಿ ಕಂಡುಬರುತ್ತವೆ, ಹೀಗಾಗಿ ಇದು ಸಣ್ಣ ವಯಸ್ಸಿನವರಿಗಿಂದ ಹಿರಿಯರಲ್ಲಿಯೇ ಕಾಣಿಸಿಕೊಳ್ಳುವುದು ಅಧಿಕ ಎನ್ನಬಹುದು.

ಇತ್ತೀಚೆಗಿನ ದಿನಗಳಲ್ಲಿ ಲಕ್ವಾ ಹಿರಿಯರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ; ಯುವ ಜನರಲ್ಲಿಯೂ ಉಂಟಾಗುತ್ತಿದ್ದು, ಈ ವಯೋಮಾನದವರಿಗೆ ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಉದ್ಭವಗೊಂಡಿದೆ. 50 ವರ್ಷ ವಯಸ್ಸಿಗಿಂತ ಕೆಳಗಿನವರು ಅಥವಾ 15ರಿಂದ 45 ವರ್ಷ ವಯೋಮಾನದ ಒಳಗಿನವರು ಯುವಜನರಲ್ಲಿ ಲಕ್ವಾಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಅನೇಕ ಕಾರ್ಡಿಯೊವಾಸ್ಕಾಲರ್‌ ಅಪಾಯ ಅಂಶಗಳು ಜನಸಾಮಾನ್ಯರಲ್ಲಿ ಕಡಿಮೆಯಾಗುತ್ತಿದ್ದರೂ ಯುವಜನರಲ್ಲಿ ಅವುಗಳ ಪರಿಣಾಮ ಹೆಚ್ಚುತ್ತಿರುವುದು ಕಂಡುಬಂದಿದೆ. 35 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಈ ಅಪಾಯ ಅಂಶಗಳು ಗಮನಾರ್ಹವಾಗಿ ಹೆಚ್ಚಿದ್ದು, ಈ ವಯೋಮಾನದವರು ಭವಿಷ್ಯದಲ್ಲಿ ವಾಸ್ಕಾಲರ್‌ ತೊಂದರೆಗಳಿಗೆ ಈಡಾಗುವ ಸಾಧ್ಯತೆಯನ್ನು ಹೆಚ್ಚಿಸಿವೆ.

ವಾಸ್ಕಾಲರ್‌ ಹಾನಿಯ ಬಳಿಕ ಉಂಟಾಗುವ ಮಿದುಳಿನ ಹಾನಿಯನ್ನು ಲಕ್ವಾ ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. ಇದರಲ್ಲಿ ಎರಡು ವಿಧಗಳಿವೆ – ಇಶೆಮಿಕ್‌ ಮತ್ತು ಹೆಮರಾಜಿಕ್‌. ಆದರೆ 65 ವರ್ಷ ವಯೋಮಾನಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಆರ್ಟೀರಿಯಲ್‌ ಹೈಪರ್‌ಟೆನ್ಶನ್‌, ಡಿಸ್‌ಲಿಪಿಡೇಮಿಯ ಮತ್ತು ವಿಶೇಷವಾಗಿ ಆರ್ಟಿಯಲ್‌ ಫೈಬ್ರಿಲೇಶನ್‌ (ಅನಿಯಮಿತ ಹೃದಯ ಬಡಿತ)ನಂತಹ ಅಪಾಯ ಅಂಶಗಳನ್ನು ಆ್ಯಂಟಿಕೊಆಗ್ಯುಲೇಲಾಂಟ್‌ ಔಷಧಗಳ ಮೂಲಕ ನಿರ್ವಹಿಸುವ ಮೂಲಕವಾಗಿ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಸಾಧ್ಯವಾಗಿದೆ.

ಪ್ರತೀ ವಿಧವಾದ ಲಕ್ವಾಕ್ಕೆ ಇರುವ ಅಪಾಯ ಅಂಶಗಳನ್ನು ಹೋಲಿಕೆ ಮಾಡಿದಾಗ, ಇಶೆಮಿಕ್‌ ಲಕ್ವಾವು ಮಧುಮೇಹ, ಧೂಮಪಾನ ಮತ್ತು ಬೊಜ್ಜಿನಿಂದ ಹೆಚ್ಚು ಸಾಮಾನ್ಯವಾಗಿ ಉಂಟಾಗುವುದು ಕಂಡುಬಂದಿದೆ.

ಯುವಜನರಲ್ಲಿ ಲಕ್ವಾಕ್ಕೆ ಅಪಾಯ ಅಂಶಗಳು

  • ಅರ್ಟೀರಿಯಲ್‌  ಹೈಪರ್‌ಟೆನ್ಶನ್‌
  • ಡಿಸ್‌ಲಿಪಿಡೇಮಿಯಾ
  • ಮಧುಮೇಹ
  • ಧೂಮಪಾನ
  • ಅತಿಯಾದ ಮದ್ಯಪಾನ
  • ದೈಹಿಕ ಚಟುವಟಿಕೆ ಕಡಿಮೆ ಇರುವುದು
  • ಬೊಜ್ಜು (ಬಿಎಂಐ 230)

ಹಾಗೆಯೇ ಹೆಮರಾಜಿಕ್‌ ಲಕ್ವಾವು ಅಧಿಕ ರಕ್ತದೊತ್ತಡ, ಅತಿಯಾದ ಮದ್ಯಪಾನ ಮತ್ತು ಆಲಸಿ ಜೀವನ ಶೈಲಿಯಿಂದ ಉಂಟಾಗುವುದು ಕಂಡುಬಂದಿದೆ. ಈ ಅಂಶದ ಪ್ರಾಮುಖ್ಯವು ವ್ಯಕ್ತಿಗಳು, ಕುಟುಂಬಗಳು, ಸಮಾಜ, ಆರೋಗ್ಯ ಸೇವಾ ವೆಚ್ಚಗಳು ಮತ್ತು ಬಳಕೆ ಹಾಗೂ ಜಾಗತಿಕ ಬೃಹತಾರ್ಥಿಕತೆಯ ಮೇಲೆ ಪ್ರಮುಖ ಪರಿಣಾಮಗಳನ್ನು ಹೊಂದಿದೆ.

ವರದಿಗಳ ಪ್ರಕಾರ, ಲಕ್ವಾಕ್ಕೆ ಒಳಗಾಗಿರುವ ಬಹುತೇಕ ಯುವಜನರು ಅಧಿಕ ರಕ್ತದೊತ್ತಡವು ಹೊಂದಿರುವುದು ಆಗಾಗ ಪತ್ತೆಯಾಗುತ್ತದೆ. ಯುವ ಜನರು ಮಧುಮೇಹ ಹೊಂದಿರುವುದಕ್ಕೂ ಇಶೆಮಿಕ್‌ ಲಕ್ವಾದ ಅಪಾಯ ಹೆಚ್ಚಳಕ್ಕೂ ಸಂಬಂಧವಿದೆ. ಜತೆಗೆ ಯುವಜನರಲ್ಲಿ ಮಧುಮೇಹ ಹೆಚ್ಚುತ್ತಿದ್ದು, ಭಾರತ, ಚೀನ ಮತ್ತು ಅಮೆರಿಕದಲ್ಲಿ ಅನುಕ್ರಮವಾಗಿ ಅತೀ ಹೆಚ್ಚು ಇದೆ.

ಯುವ ಜನರಲ್ಲಿ ಲಕ್ವಾ ಉಂಟಾಗುವುದಕ್ಕೆ ಅತ್ಯಂತ ಸಾಮಾನ್ಯವಾದ ಅಪಾಯ ಕಾರಣ ಧೂಮಪಾನ. ಇತ್ತೀಚೆಗಿನ ವರ್ಷಗಳಲ್ಲಿ ಯುವಜನರಲ್ಲಿ ಧೂಮಪಾನ ಹವ್ಯಾಸ ಹೆಚ್ಚಿದ್ದು, ಶೇ. 50ಕ್ಕಿಂತಲೂ ಅಧಿಕ ಮಂದಿ ಧೂಮಪಾನಿಗಳಾಗಿದ್ದಾರೆ. ಧೂಮಪಾನ ಮಾಡುವ ಯುವ ಜನರು ಇಶೆಮಿಕ್‌ ಲಕ್ವಾಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಅಲ್ಲದೆ, ಸಿಗರೇಟು ಸೇವನೆಗೂ ಲಕ್ವಾ ಉಂಟಾಗುವ ಅಪಾಯಕ್ಕೂ ಸಂಖ್ಯೆ-ಸಾಧ್ಯತೆಯ ಸಂಬಂಧ ಇದೆ. ಹೆಚ್ಚು ಸಿಗರೇಟುಗಳನ್ನು ಸೇದಿದಷ್ಟು ಲಕ್ವಾಕ್ಕೆ ತುತ್ತಾಗುವ ಅಪಾಯ ಹೆಚ್ಚುತ್ತದೆ.

-ಮುಂದಿನ ವಾರಕ್ಕೆ

ಮಂಜೂಷಾ,

ಅಸಿಸ್ಟೆಂಟ್‌ ಪ್ರೊಫೆಸರ್‌,

ಕಾರ್ಡಿಯೊವಾಸ್ಕಾಲರ್‌,

ಟೆಕ್ನಾಲಜಿ ವಿಭಾಗ ಎಂಸಿಎಚ್‌ಪಿ,

ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ನ್ಯೂರಾಲಜಿ ವಿಭಾಗ, ಕೆಎಂಸಿ , ಮಂಗಳೂರು)

 

ಟಾಪ್ ನ್ಯೂಸ್

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.