ಜನೌಷಧ ಕೇಂದ್ರಗಳಿಂದ ಬಡ, ಮಧ್ಯಮವರ್ಗಕ್ಕೆ ಭಾರೀ ನೆರವು
Team Udayavani, Mar 9, 2022, 11:55 AM IST
ಹೊಸದಿಲ್ಲಿ: ಜನೌಷಧ ಕೇಂದ್ರಗಳಿಂದ ಭಾರತದ ಬಡ, ಮಧ್ಯಮವರ್ಗದ ಜನತೆ ಬಹಳ ಲಾಭ ಪಡೆದಿದ್ದಾರೆ. ಈ ಜನ ಒಟ್ಟಾಗಿ 13,000 ಕೋಟಿ ರೂ. ಉಳಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜನ ಔಷಧ ದಿವಸ್ ಅಂಗವಾಗಿ ಫಲಾನುಭವಿ ಗಳೊಂದಿಗೆ ಸಂವಾದ ನಡೆಸಿದ ಮೋದಿ, ಅದರ ಲಾಭಗಳ ಕುರಿತು ಮಾಹಿತಿ ಪಡೆದರು. ಕೇಂದ್ರ ಔಷಧ ಇಲಾಖೆಯಿಂದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ (ಪಿಎಂಬಿಜೆಪಿ) ಶುರುವಾಗಿದೆ.
ಇದರ ಕೇಂದ್ರ ಗಳ ಮೂಲಕ ದೇಶಾದ್ಯಂತ ಔಷಧಗಳನ್ನು ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ. “ಇಂದು ದೇಶದಲ್ಲಿ 8,500 ಜನೌಷಧ ಕೇಂದ್ರಗಳಿವೆ. ಈ ಕೇಂದ್ರಗಳು ಕೇವಲ ಸರಕಾರಿಮಳಿಗೆಗಳಲ್ಲ, ಬದಲಿಗೆ ಸಾಮಾನ್ಯ ಜನರ ಪರಿಹಾರ ಕೇಂದ್ರಗಳಾಗಿವೆ’ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ಕೇಂದ್ರ ಸರಕಾರ ಕ್ಯಾನ್ಸರ್, ಕ್ಷಯ, ಮಧುಮೇಹ, ಹೃದಯ ಸಂಬಂಧಿ ಸೇರಿದಂತೆ ಹಲವು ಕಾಯಿಲೆಗಳ 800ಕ್ಕೂ ಅಧಿಕ ಔಷಧಗಳ ಬೆಲೆಗಳನ್ನು ನಿಗದಿಗೊಳಿಸಿದೆ ಎಂದೂ ಮೋದಿ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.