ಹಲ್ಲಿನ ಸಂವೇದನೆ ಸಂರಕ್ಷಣೆ ಅಗತ್ಯ
ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಬಾಯಿ ಮುಕ್ಕಳಿಸುವುದರಿಂದಲೂ ಸಂವೇದನೆಯನ್ನು ಕಡಿಮೆಗೊಳಿಸಬಹುದು.
Team Udayavani, Apr 13, 2021, 5:50 PM IST
ಸರಿಯಾಗಿ ಬ್ರೆಷ್ ಮಾಡದೇ ಇದ್ದರೆ ಅಥವಾ ಹಲ್ಲುಗಳನ್ನು ಸ್ವತ್ಛವಾಗಿಟ್ಟುಕೊಳ್ಳದೇ ಇದ್ದರೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳಾಗುವುದು ಸಹಜ. ಕೆಲವರಿಗೆ ಏನಾದರೂ ಕಚ್ಚಿದಾಗ, ತಂಪು, ಬಿಸಿ ಪಾನೀಯಗಳನ್ನು ಸೇವಿಸುವಾಗ ಸಂವೇದನೆಗಳು ಉಂಟಾಗುವುದು ಸಾಮಾನ್ಯ. ಇದು ಸೆನ್ಸಿಟಿವ್ ಹಲ್ಲುಗಳ ಲಕ್ಷಣವಾಗಿದ್ದರೂ ಇದಕ್ಕೆ ಮನೆ ಮದ್ದಿನಿಂದ ಅಥವಾ ದಂತ ವೈದ್ಯರಿಂದ ಪರಿಹಾರ ಕಂಡುಕೊಳ್ಳ ಬೇಕು. ಇಲ್ಲವಾದರೆ ಸಮಸ್ಯೆ ತೀವ್ರಗೊಳ್ಳುವುದು.
ಹಲ್ಲಿನ ಸಂವೇದನೆ ಉಳ್ಳವರು
ಹಲ್ಲುಗಳ ಬಹುತೇಕ ಸಮಸ್ಯೆಗಳಿಗೆ ಉಪ್ಪು ಪರಿಹಾರ ನೀಡುತ್ತದೆ. ಇದರಲ್ಲಿ ನಂಜು ನಿರೋ ಧಕ, ಊರಿಯೂತ ಕಡಿಮೆ ಮಾಡುವ ಗುಣವಿದ್ದು, ನೋವನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಯಾಗಿದೆ. ಹೀಗಾಗಿ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ಸಂವೇದನೆಗಳನ್ನು ಸ್ವಲ್ಪ ಮಟ್ಟಿಗೆ ಪರಿಹಾರ ಮಾಡಿಕೊಳ್ಳಬಹುದು.
ನಂಜು ನಿರೋಧಕ ಗುಣವಿರುವ ಜೇನುತುಪ್ಪವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸೇರಿಸಿ ಬಾಯಿ ಮುಕ್ಕಳಿಸುವುದರಿಂದಲೂ ಸಂವೇದನೆಯನ್ನು ಕಡಿಮೆಗೊಳಿಸಬಹುದು.
ಸಾಸಿವೆ ಎಣ್ಣೆ, ಉಪ್ಪು ಮತ್ತು ಅರಿಸಿನ ಸೇರಿಸಿ ತಯಾರಿಸಿದ ಪೇಸ್ಟ್ ಅನ್ನು ಹಲ್ಲು, ಒಸಡಿನ ನೋವು ನಿವಾರಣೆಗೆ ಬಳಸಬಹುದು.
ಹಲ್ಲಿನ ಸಂವೇದನೆ ಉಳ್ಳವರು ಹಸುರು ಚಹಾ ಸೇವಿಸುವುದು ಉತ್ತಮ. ಅಲ್ಲದೇ ಇದರಿಂದ ಬಾಯಿ ಮುಕ್ಕಳಿಸುವುದು ಕೂಡ ಒಳ್ಳೆಯ ಪರಿಣಾಮವನ್ನುಂಟು ಮಾಡುತ್ತದೆ.
ಹಲ್ಲಿನ ಸಂವೇದನೆ ಉಳ್ಳವರು ದಿನಕ್ಕೆರಡು ಬಾರಿ ಬ್ರೆಷ್ ಮಾಡಲೇಬೇಕು. ಅಗತ್ಯವಿದ್ದರೆ ವೈದ್ಯರ ಸಲಹೆ ಮೇರೆಗೆ ಮೌತ್ ಗಾರ್ಡ್ ಅನ್ನು ಬಳಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.