ಆಹಾರ ಸೇವನೆಯಲ್ಲಿ ಶಿಸ್ತೇಕೆ ಕಡಿಮೆಯಾಗುತ್ತಿದೆ ?

ಗುಣಮಟ್ಟಗಳಲ್ಲಿ ನ್ಯೂನ್ಯತೆ ಅಥವಾ ವ್ಯತ್ಯಯಗಳು ಸಂಭವಿಸಿದಲ್ಲಿ, ಅನಾರೋಗ್ಯ ಮತ್ತು ಇತರ ಸಮಸ್ಯೆ

Team Udayavani, Dec 12, 2020, 1:20 PM IST

Food-New

ಎಳೆಯ ವಯಸ್ಸಿನ ಮಕ್ಕಳ ಈ ಕೆಟ್ಟ ಹವ್ಯಾಸಕ್ಕೆ ಮತ್ತು ಅವರ ಬುದ್ಧಿಶಕ್ತಿಯ ಮಟ್ಟದಲ್ಲಿ ಕಂಡುಬರಬಹುದಾದ ನ್ಯೂನತೆಗಳಿಗೆ ಅವಿನಾಭಾವ ಸಂಬಂಧವಿದೆ. ಗುಣಮಟ್ಟದ ಸಮತೋಲಿತ ಆಹಾರ ಸೇವಿಸುವ ಮಕ್ಕಳ ಬುದ್ಧಿಮತ್ತೆ ಉನ್ನತಸ್ತರದಲ್ಲಿ ಇರುತ್ತದೆ. ಇಂತಹ ಆಹಾರಗಳಲ್ಲಿ ಸಮೃದ್ಧವಾಗಿರುವ ಪೋಷಕಾಂಶಗಳು ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.

ಮನುಷ್ಯನು ಆರೋಗ್ಯವಂತನಾಗಿ ಬದುಕಲು ಶುದ್ಧವಾದ ಗಾಳಿ ಹಾಗೂ ನೀರು, ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರ ಮತ್ತು ನಿರ್ಮಲವಾದ ಪರಿಸರ ಅಗತ್ಯ. ಅದೇ ರೀತಿಯಲ್ಲಿ ಇವೆಲ್ಲವುಗಳ ಗುಣಮಟ್ಟಗಳಲ್ಲಿ ನ್ಯೂನ್ಯತೆ ಅಥವಾ ವ್ಯತ್ಯಯಗಳು ಸಂಭವಿಸಿದಲ್ಲಿ, ಅನಾರೋಗ್ಯ ಮತ್ತು ಇತರ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ.

ಪ್ರಸ್ತುತ ಬಹುತೇಕ ಭಾರತೀಯರು ಮಾರುಹೋಗಿರುವ ಪಾಶ್ಚಾತ್ಯ ಜೀವನ ಶೈಲಿಯಿಂದಾಗಿ ಅತಿಯಾದ ಪ್ರಮಾಣದಲ್ಲಿ ಜಂಕ್‌ ಫ‌ುಡ್‌ (junk food) ಗಳನ್ನು ಸೇವಿಸುವ ಹವ್ಯಾಸವನ್ನು ಬೆಳೆಸಿಕೊಂಡಿ¨ªಾರೆ. ಶ್ರೀಮಂತರು, ಮೇಲ್ಮಧ್ಯಮ ವರ್ಗದವರು, ಉದ್ಯೋಗಸ್ಥ ದಂಪತಿಗಳ ಕುಟುಂಬಗಳು ಮತ್ತು ಯುವಪೀಳಿಗೆಯವರು ಇಂತಹ ಸಂಸ್ಕರಿತ, ಸಿದ್ಧ ಹಾಗೂ ಉಪ್ಪು, ಕೊಬ್ಬು ಮತ್ತು ಸಕ್ಕರೆಗಳಿಂದ ಸಮೃದ್ಧವಾಗಿರುವ ವೈವಿಧ್ಯಮಯ ನಿಷ್ಪ್ರಯೋಜಕ ಜಂಕ್‌ ಫ‌ುಡ್‌ಗಳ ದಾಸರಾಗಿ ¨ªಾರೆ. ಈ ಕುಟುಂಬಗಳ ಪುಟ್ಟ ಮಕ್ಕಳೂ ಇದಕ್ಕೆ ಅಪವಾದ ವೆನಿಸಿಲ್ಲ. ಆದರೆ ಎಳೆಯ ಮಕ್ಕಳು ಇಂಥ ಆಹಾರಗಳನ್ನು ಸೇವಿಸುವುದರಿಂದ ಉದ್ಭವಿಸಬಲ್ಲ ಗಂಭೀರ ಆರೋಗ್ಯದ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರಿಗೆ ಒಂದಿಷ್ಟು ಮಾಹಿತಿ ತಿಳಿದಿದ್ದರೂ ಇವುಗಳ ಸೇವನೆಯನ್ನು ಮಾತ್ರ ನಿಲ್ಲಿಸುವುದೇ ಇಲ್ಲ. ತಮ್ಮ ಮಕ್ಕಳು ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಊಟ ಉಪಾಹಾರಗಳನ್ನು ಸೇವಿಸದಿರುವ ಸಮಸ್ಯೆಯನ್ನು ಪರಿಹರಿಸಲು, ಉತ್ತಮವಾದ ಟಾನಿಕ್‌ ಒಂದನ್ನು ನೀಡುವಂತೆ ವೈದ್ಯರನ್ನು ಒತ್ತಾಯಿಸುವ ದಂಪತಿಗಳ ಸಂಖ್ಯೆ ಸಾಕಷ್ಟಿದೆ! ಮಕ್ಕಳ ಹಸಿವನ್ನು ಹೆಚ್ಚಿಸಬಲ್ಲ ಮತ್ತು ತನ್ಮೂಲಕ ಮಕ್ಕಳು ಸೇವಿಸುವ ಆಹಾರದ ಪ್ರಮಾಣವನ್ನು ವೃದ್ಧಿಸಬಲ್ಲ ಟಾನಿಕ್‌ ನೀಡುವಂತೆ ಅಂಗಲಾಚುವ ತಂದೆತಾಯಂದಿರಿಗೆ, ಈ ಸಮಸ್ಯೆಯ ಮೂಲ ಕಾರಣ ಏನೆಂದು ತಿಳಿದಿದೆ.

ಏಕೆಂದರೆ ಇಡ್ಲಿ, ದೋಸೆ, ಚಪಾತಿ ಮತ್ತು ಅನ್ನಗಳನ್ನು ತಿನ್ನಲೊಪ್ಪದ ಮಕ್ಕಳು, ಪಿಜ್ಜಾ, ಬರ್ಗರ್‌, ನೂಡಲ್ಸ… ಮತ್ತು ಕುರುಕಲು ತಿಂಡಿಗಳನ್ನು ತಿನ್ನಲು ನಿರಾಕರಿಸುವುದೇ ಇಲ್ಲ. ಇಂತಹ ಆಹಾರಗಳ ಸೇವನೆಯಿಂದಾಗಿ ಈ ಮಕ್ಕಳು ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೆ ಸುಲಭದÇÉೇ ಈಡಾಗುತ್ತಾರೆ.

ಬುದ್ಧಿಶಕ್ತಿ ಸೊರಗುವುದೇ?
ಕೆಲ ವರ್ಷಗಳ ಹಿಂದೆ ಬ್ರಿಟನ್‌ನಲ್ಲಿ ಪ್ರಕಟವಾಗಿದ್ದ ವೈದ್ಯಕೀಯ ಅಧ್ಯಯನದ ವರದಿಯಂತೆ, ಜಂಕ್‌ ಫ‌ುಡ್‌ ಹಾಗೂ ಸಂಸ್ಕರಿತ ಆಹಾರಗಳನ್ನೇ ಹೆಚ್ಚಾಗಿ ಸೇವಿಸುವ ನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳ ಬುದ್ಧಿಶಕ್ತಿಯ ಮಟ್ಟವು ಕಡಿಮೆಯಾಗುತ್ತದೆ. ಸುಮಾರು 4000 ಮಕ್ಕಳ ಆಹಾರ ಸೇವನಾ ಕ್ರಮಗಳ ಬಗ್ಗೆ ನಡೆಸಿದ್ದ ಈ ಅಧ್ಯಯನದಿಂದಾಗಿ, ಪ್ರತಿನಿತ್ಯ ಜಂಕ್‌ ಫ‌ುಡ್‌ ಸೇವಿಸುತ್ತಿರುವ ಮಕ್ಕಳಿಗೆ ಎಂಟೂವರೆ ವರ್ಷ ವಯಸ್ಸಾಗುವಾಗ ಇವರ ಬೌದ್ಧಿಕ ಮಟ್ಟವು ಇಂತಹ ಆಹಾರಗಳನ್ನು ಸೇವಿಸದ ಮಕ್ಕಳಿಗಿಂತಲೂ ತುಸು ಕಡಿಮೆ ಇರುವುದು ಪತ್ತೆಯಾಗಿತ್ತು. ಈ ಮಕ್ಕಳು ನಿಯಮಿತವಾಗಿ ಸೇವಿಸುವ ಜಂಕ್‌ ಫ‌ುಡ್‌ ಪ್ರಮಾಣವು ಹೆಚ್ಚಾದಂತೆಯೇ ಇವರ ಬುದ್ಧಿಮತ್ತೆಯ ಮಟ್ಟವು ಇದಕ್ಕೆ ಅನುಗುಣವಾಗಿ ಇನ್ನಷ್ಟು ಕಡಿಮೆಯಾಗುತ್ತಿರುವುದು ತಿಳಿದುಬಂದಿತ್ತು.

ಬ್ರಿಟನ್‌ನಲ್ಲಿರುವ ಬ್ರಿಸ್ಟಲ್‌ ವಿಶ್ವವಿದ್ಯಾಲಯದ ಸಂಶೋಧಕರು ಹಲವಾರು ವರ್ಷಗಳ ಕಾಲ ನಡೆಸಿದ್ದ ಈ ಅಧ್ಯಯನದ ಅಂಗವಾಗಿ 3, 6. 7 ಮತ್ತು 8 ವರ್ಷ ವಯಸ್ಸಿನ ಆಯ್ದ ಮಕ್ಕಳ ಆಹಾರ ಸೇವನೆಯನ್ನು ಕ್ರಮಬದ್ಧವಾಗಿ ನಿರೀಕ್ಷಿಸಲಾಗಿತ್ತು. ಈ ಸಂಶೋಧನಾ ತಂಡದ ನಾಯಕರೂ ಆಗಿದ್ದ ಖ್ಯಾತ ವೈದ್ಯರೊಬ್ಬರ ಅಭಿಪ್ರಾಯದಂತೆ, ಅಲ್ಪ ಪ್ರಮಾಣದ ಉತ್ತಮ ಆಹಾರದೊಂದಿಗೆ ಅತಿಯಾದ ಸಂಸ್ಕರಿತ ಹಾಗೂ ಜಂಕ್‌ ಫ‌ುಡ್‌ ಪದಾರ್ಥಗಳನ್ನು ಸೇವಿಸುವ ಎಳೆಯ ವಯಸ್ಸಿನ ಮಕ್ಕಳ ಈ ಕೆಟ್ಟ ಹವ್ಯಾಸಕ್ಕೆ ಮತ್ತು ಅವರ ಬುದ್ಧಿಶಕ್ತಿಯ ಮಟ್ಟದಲ್ಲಿ ಕಂಡುಬರಬಹುದಾದ ನ್ಯೂನತೆಗಳಿಗೆ ಅವಿನಾಭಾವ ಸಂಬಂಧವಿದೆ.

ಇಷ್ಟು ಮಾತ್ರವಲ್ಲ, ಉತ್ತಮ ಗುಣಮಟ್ಟದ ಸಮತೋಲಿತ ಹಾಗೂ ಆರೋಗ್ಯದಾಯಕ ಆಹಾರವನ್ನೇ ಸೇವಿಸುವ ಮಕ್ಕಳ ಬುದ್ಧಿಮತ್ತೆಯು ಉನ್ನತಸ್ತರದಲ್ಲಿ ಇರುತ್ತದೆ. ಏಕೆಂದರೆ ಇಂತಹ ಆಹಾರಗಳಲ್ಲಿ ಸಮೃದ್ಧವಾಗಿರುವ ಪೋಷಕಾಂಶಗಳು ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.

ಬ್ರಿಟನ್‌ನ ಆಹಾರ ಮತ್ತು ಪಾನೀಯ ಒಕ್ಕೂಟದ ಅಧ್ಯಕ್ಷರು ಹೇಳುವಂತೆ, ಆರೋಗ್ಯದಾಯಕ ಹಾಗೂ ಸಮತೋಲಿತ ಆಹಾರ ಸೇವನೆಯಿಂದ ಮಕ್ಕಳ ಬುದ್ಧಿಶಕ್ತಿ ಹೆಚ್ಚುವುದು ಅಚ್ಚರಿ ಮೂಡಿಸುವಂತಹ ವಿಷಯವೇನಲ್ಲ. ಏಕೆಂದರೆ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಮತ್ತು ಆರೋಗ್ಯ ರಕ್ಷಣೆಗಳ ವಿಚಾರದಲ್ಲಿ ಸಮತೋಲಿತ ಆಹಾರ ಸೇವನೆ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಿರುವುದು ಅನೇಕ ವರ್ಷಗಳ ಹಿಂದೆಯೇ ವೈದ್ಯಕೀಯ ಕ್ಷೇತ್ರಕ್ಕೆ ತಿಳಿದಿತ್ತು. ಇದೇ ಕಾರಣದಿಂದಾಗಿ ಇಂತಹ ಆಹಾರಗಳನ್ನೇ ಮಕ್ಕಳಿಗೆ ನೀಡುವುದು ನಿಶ್ಚಿತವಾಗಿಯೂ ಹಿತಕರವೆನಿಸುವುದು. ಬ್ರಿಟನ್‌ನ ಸಂಶೋಧಕರು ಪ್ರಕಟಿಸಿರುವ ವರದಿಯಲ್ಲಿನ ಮಾಹಿತಿಗಳು ನಿಜವೆಂದು ನಿಮಗೂ ಅನಿಸಿರಲೇಬೇಕು. ಏಕೆಂದರೆ ಸುಮಾರು ಎರಡು- ಮೂರು ದಶಕಗಳ ಹಿಂದೆ ಭಾರತದ ಮಾರುಕಟ್ಟೆಗಳಲ್ಲಿ ಜಂಕ್‌ ಫ‌ುಡ್‌ಗಳ ಹಾವಳಿ ಇಲ್ಲದಿದ್ದ ಸಂದರ್ಭದಲ್ಲಿ, ಬಹುತೇಕ ಎಳೆಯ ಮಕ್ಕಳು ಅಪ್ಪಟ ಭಾರತೀಯ ಶೈಲಿಯ ಹಾಗೂ ಸಾಂಪ್ರದಾಯಿಕ ಖಾದ್ಯಪೇಯಗಳನ್ನು ಸವಿಯುತ್ತಿದ್ದರು. ಆದರೆ ಜಾಗತೀಕರಣ ಮತ್ತು ಉದಾರೀ ಕರಣಗಳ ಫ‌ಲವಾಗಿ ಭಾರತದ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿದ್ದ ಪಿಜ್ಜಾ- ಬರ್ಗರ್‌ ಮತ್ತು ವೈವಿಧ್ಯಮಯ ಸಂಸ್ಕರಿತ ಆಹಾರಗಳ ಜಾಹೀರಾತುಗಳಿಗೆ ಮನಸೋತ ಎಳೆಯ ಮಕ್ಕಳು, ಸ್ವಾಭಾವಿಕವಾಗಿಯೇ ಇವುಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಶ್ರೀಮಂತ ಕುಟುಂಬಗಳ ಮತ್ತು ಉದ್ಯೋಗಸ್ತ ದಂಪತಿಗಳ ಮಕ್ಕಳ ಪಾಲಿಗಂತೂ ಇಂತಹ ಜಂಕ್‌ ಫ‌ುಡ್‌ ಗಳು ದೈನಂದಿನ ಆಹಾರದ ಅವಿಭಾಜ್ಯ ಅಂಗವೆನಿಸಿವೆ. ಪ್ರಾಯಶಃ ಇದೇ ಕಾರಣದಿಂದಾಗಿ ಇವರ ಮಕ್ಕಳ ಬುದ್ಧಿಶಕ್ತಿಯ ಮತ್ತು ಆರೋಗ್ಯದ ಮಟ್ಟಗಳು ಸ್ವಾಭಾವಿಕವಾಗಿಯೇ ಕುಸಿಯಲಾರಂಭಿಸಿವೆ. ಜಂಕ್‌ಫ‌ುಡ್‌ಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿರುವ ಕೃತಕ ರಾಸಾಯನಿಕಗಳಿಂದ ತಯಾರಿಸಿದ ರುಚಿವರ್ಧಕ ಮತ್ತು ಸಂರಕ್ಷಕ ದ್ರವ್ಯಗಳ ಸೇವನೆಯಿಂದ ಉದ್ಭವಿಸಬಲ್ಲ ಅನೇಕ ವಿಧದ ಸಮಸ್ಯೆಗಳಲ್ಲಿ ಇದು ಪ್ರಮುಖವಾಗಿದೆ.

ಆದರೆ ವೈದ್ಯಕೀಯ ಸಂಶೋಧನೆ- ಅಧ್ಯಯನಗಳ ವರದಿ ಗಳು ಇಂತಹ ಮಾಹಿತಿಗಳನ್ನು ಬಹಿರಂಗಪಡಿಸಿದ ಬಳಿಕವೂ ನಿಮ್ಮ ಮಕ್ಕಳು ಜಂಕ್‌ ಫ‌ುಡ್‌ ಸೇವಿಸುವ ಕೆಟ್ಟ ಹವ್ಯಾಸವನ್ನು ನಿಲ್ಲಿಸದೆ ಇದ್ದಲ್ಲಿ, ಸಂಭಾವ್ಯ ಸಮಸ್ಯೆಗಳನ್ನು ತಡೆಗಟ್ಟುವುದು ನಿಶ್ಚಿತ ವಾಗಿಯೂ ಅಸಾಧ್ಯವಾಗು ತ್ತ ದೆ ಎನ್ನುವುದನ್ನು ಮರೆಯದಿರಿ.

– ಡಾ| ಸಿ.ನಿತ್ಯಾನಂದ ಪೈ, ಪುತ್ತೂರು

ಟಾಪ್ ನ್ಯೂಸ್

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್

1

World Osteoporosis Day: ಆಸ್ಟಿಯೊಪೊರೋಸಿಸ್‌ ಅಥವಾ ಮೂಳೆ ಸವಕಳಿ ಎಂದರೇನು?

6-anasthesia

Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್‌ 16

5-health

Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ

7-health

Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Apologize or give 5 crores: Another threat to actor Salman

Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.