ಓಡುವುದರಿಂದ ಬೇಗನೆ ಸಾವು ಬರುವುದಿಲ್ಲ! ; ಸಮೀಕ್ಷೆ ಹೇಳುವುದೇನು?
Team Udayavani, Nov 12, 2019, 5:37 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಾಷಿಂಗ್ಟನ್: ದಿನವೂ ಸ್ವಲ್ಪವಾದರೂ ಓಡಬೇಕು. ಹೀಗೆ ಓಡುವುದರಿಂದ ಹಲವಾರು ಆರೋಗ್ಯ ಲಾಭಗಳಿದ್ದು ಇವುಗಳಲ್ಲಿ ಸಾವನ್ನು ದೂರವಿರಿಸುವುದೂ ಒಂದು ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಒಂದು ವೇಳೆ ಜನರು ದೂರಕ್ಕೆ, ವೇಗವಾಗಿ ಓಡದಿದ್ದರೂ, ಅವರ ಆರೋಗ್ಯವಂತೂ ಸುಧಾರಣೆಯಾಗುತ್ತದೆ ಇದರಿಂದ ಸಮಾಜದ ಆರೋಗ್ಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಜನರು ಎಷ್ಟು ಓಡಬೇಕು ಮತ್ತು ಎಷ್ಟು ಓಡಿದರೆ ಹೆಚ್ಚು ಪ್ರಯೋಜನವಾಗುತ್ತದೆ ಎಂಬುದನ್ನು ಈ ಸಂಶೋಧನೆಯಲ್ಲಿ ಹೇಳಿಲ್ಲ. ಆದರೆ ವಿಶೇಷವಾಗಿ ನಿತ್ಯವೂ ಓಡುವವರು, ಜಾಗಿಂಗ್ ಮಾಡುವವರನ್ನು ಗುರಿಯಾಗಿಸಿ ಈ ಸಂಶೋಧನೆ ಮಾಡಲಾಗಿದೆ.
ಸಂಶೋಧನೆಗೆ 2.32 ಲಕ್ಷ ಮಂದಿಯನ್ನು ಬಳಸಿಕೊಳ್ಳಲಾಗಿದ್ದು, 5.5 ವರ್ಷದಿಂದ 35 ವರ್ಷದವರೆಗೆ ಅವರ ಮೇಲೆ ನಿಗಾ ಇಡಲಾಗಿದೆ. ಈ ಸಂದರ್ಭದಲ್ಲಿ 25,951 ಮಂದಿ ಸಂಶೋಧನೆಗೊಳಪಟ್ಟವರು ಮೃತಪಟ್ಟಿದ್ದಾರೆ. ಸಮೀಕ್ಷೆಯ ಪ್ರಕಾರ, ಶೇ.27ರಷ್ಟು ಬೇಗನೆ ಸಾವು ಬರುವುದನ್ನು ಓಡುವ ಚಟುವಟಿಕೆ ನಿಯಂತ್ರಿಸುತ್ತದೆ.
ವಿಶೇಷವಾಗಿ ಹೃದಯದ ಸಮಸ್ಯೆಗೆ ಉತ್ತಮವಾದುದಾಗಿದೆ. ದಿನಕ್ಕೆ 50 ನಿಮಿಷ ಅಥವಾ ಗಂಟೆಗೆ 8 ಕಿ.ಮೀ. ಓಟದಿಂದ ಭಾರೀ ಪ್ರಮಾಣದಲ್ಲಿ ಆರೋಗ್ಯ ಲಾಭವಿದೆ ಎಂದು ಹೇಳಲಾಗಿದೆ. ನಿತ್ಯವೂ ಓಡುವುದು ಸಾಧ್ಯವಿಲ್ಲ ಎಂದರೂ ವಾರಕ್ಕೆ 25 ನಿಮಿಷ ಓಟದಿಂದ ಸಾವಿನಿಂದ ತುಸು ದೂರವಾಗಬಹುದು. ಇದರಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಸಮೀಕ್ಷೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.