ಆರೋಗ್ಯಶಾಲಿ ವೃದ್ಧಾಪ್ಯ
Team Udayavani, Mar 12, 2017, 3:45 AM IST
ಹಿಂದಿನ ವಾರದಿಂದ – ಬೀಳುವುದನ್ನು ತಪ್ಪಿಸಿಕೊಳ್ಳಲು, ನಿತ್ಯವೂ ವ್ಯಾಯಾಮ ಮಾಡಿ ಮತ್ತು ದೇಹದ ಸಮತೋಲನವನ್ನು ಉತ್ತಮಪಡಿಸಿಕೊಳ್ಳಿ.
ನಿಮ್ಮ ಮನೆಯಲ್ಲಿ ಇರುವ ಅಪಾಯಪೂರಕ ಅಂಶಗಳನ್ನು ನಿವಾರಿಸಿಕೊಳ್ಳಿ – ಅಂದರೆ ನೆಲದಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಇತ್ಯಾದಿ. ಬೆಳಕಿನ ವ್ಯವಸ್ಥೆ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಕಾರಿನಲ್ಲಿ ಸೀಟ್ ಬೆಲ್ಟ್ ಅನ್ನು ಧರಿಸಿ. ನೀವು ಅಷ್ಟೊಂದು ಸ್ವಸ್ಥರಿಲ್ಲದಾಗ, ಕತ್ತಲೆಯ ಸಮಯದಲ್ಲಿ ಅಥವಾ ವಾತಾವರಣ ಉತ್ತಮವಿಲ್ಲದಿರುವಾಗ ನೀವೇ ಕಾರು ಚಲಾಯಿಸದೆ ಕಾರು ಚಲಾಯಿಸುವಂತೆ ಇನ್ನೊಬ್ಬರಲ್ಲಿ ಕೇಳಿ.
ಬೈಕ್ ಚಲಾಯಿಸುತ್ತಿರುವಿರಾದರೆ, ಹೆಲ್ಮೆಟ್ ಧರಿಸಿ.
ಬೆಳಕಿರುವ, ಸಮತಟ್ಟಾದ ಜಾಗದಲ್ಲಿ, ಸರಿಯಾಗಿ ಹೊಂದಾಣಿಕೆ ಯಾಗುವ ಶೂಗಳನ್ನು ಧರಿಸಿ – ನಡಿಗೆ ಅಥವಾ ಓಟದಲ್ಲಿ ತೊಡಗಿ.
ನಿಮ್ಮ ದೇಹವು ಅಷ್ಟೊಂದು ಸಮತೋಲನದಲ್ಲಿಲ್ಲ ಎಂದು ಅನ್ನಿಸುತ್ತಿದ್ದರೆ, ನೀವು ತೆಗೆದುಕೊಳ್ಳುತ್ತಿರುವ ಔಷಧಿಯ ಬಗ್ಗೆ ನಿಮ್ಮ ವೈದ್ಯರಲ್ಲಿ ಮಾತನಾಡಿ.
ಸಾಮಾಜಿಕ ಸಂಪರ್ಕದಲ್ಲಿರಿ: ನಾವು ನಮ್ಮ ಸ್ನೇಹಿತರು, ಕುಟುಂಬ ಮತ್ತು ಸಹೊದ್ಯೋಗಿಗಳಿಂದ ಪಡೆಯುವ ಬೆಂಬಲವು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ. ಸಾಮಾಜಿಕವಾಗಿ ಏಕಾಂಗಿಯಾಗಿರುವವರಿಗಿಂತಲೂ, ಕುಟುಂಬ ಹಾಗೂ ಸಮಾಜದ ಸಂಪರ್ಕದಲ್ಲಿರುವವರಿಗೆ ಅಲಿlಮರ್ಸ್ ಕಾಯಿಲೆಯ ಅಪಾಯ ಕಡಿಮೆ ಎಂಬುದನ್ನು ಸಂಶೋಧನೆಗಳು ತೋರಿಸಿ ಕೊಟ್ಟಿವೆ. ಹಾಗಾಗಿ ನಿಮ್ಮ ವಯಸ್ಸು ಹೆಚ್ಚುತ್ತಾ ಹೋದಂತೆ ಸಾಮಾಜಿಕ ಸಂಪರ್ಕವನ್ನೂ ಸಹ ಹೆಚ್ಚಿಸಿ ಕೊಳ್ಳಿ. ಬುಕ್ ಕ್ಲಬ್ ಅಥವಾ ಸ್ವಯಂ ಸೇವಕರ ಗುಂಪಿಗೆ ಸೇರಿಕೊಳ್ಳಿ, ನಿಮ್ಮ ಸುತ್ತಣ ಜಗತ್ತಿನ ಜೊತೆಗೆ ಸಂವಹನವನ್ನು ಬೆಳೆಸಿಕೊಳ್ಳಿ.
ಯೋಚನೆ ಸಕಾರಾತ್ಮಕವಾಗಿರಲಿ: ಸಕಾರಾತ್ಮಕ ಯೋಚನೆ ಮತ್ತು ಭಾವನೆಗಳು ಆರೋಗ್ಯಕರ ಮನಸ್ಸು ಮತ್ತು ದೇಹಕ್ಕೆ ಪೂರಕ ಅಂಶಗಳು. ಜಗತ್ತಿನಲ್ಲಿರುವ ಒಳ್ಳೆಯತನ ಮತ್ತು ಒಳ್ಳೆಯ ವಿಚಾರಗಳು, ನಿಮಗೆ ಒಳ್ಳೆಯದನ್ನು ಮಾಡುವ ಮತ್ತು ಒಳ್ಳೆಯ ಆನಂದವನ್ನು ನೀಡುವ ವ್ಯಕ್ತಿಗಳ ಬಗ್ಗೆ ನಿಮ್ಮ ಗಮನವಿರಲಿ.
ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳಿ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ನಿಮಗೆ ಆಸಕ್ತಿ ಇದ್ದಲ್ಲಿ, ಅದನ್ನು ಬೆಳೆಸಿಕೊಳ್ಳುವ ಮೂಲಕ ಬದುಕಿನ ಬಗೆಗಿನ ನಿಮ್ಮ ದೃಷ್ಟಿಕೋನವನ್ನು ಉನ್ನತಿಗೊಳಿಸಬಹುದು. ಕೆಲವು ಹಿರಿಯ ವಯಸ್ಕರಿಗೆ ತಮ್ಮ ಸಮುದಾಯ ಮತ್ತು ಆಚರಣೆಗಳ ಬೆಂಬಲವು ನೆಮ್ಮದಿಯನ್ನು ನೀಡುತ್ತದೆ. ನಿಮ್ಮ ಧರ್ಮ , ಆಧ್ಯಾತ್ಮಿಕ ನಂಬುಗೆಗಳು ಯಾವುದೇ ಆಗಿರಲಿ ಆಧ್ಯಾತ್ಮಿಕತೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಿ. ಈ ಆಸಕ್ತಿಯು ನಿಮ್ಮಲ್ಲಿ ಖನ್ನತೆ ಉಂಟಾಗುವುದನ್ನು ತಡೆಯಲು ಮತ್ತು ಖನ್ನತೆಯಿಂದ ಹೊರಬರಲು ಸಹಾಯಮಾಡಬಹುದು. ಮಾತ್ರವಲ್ಲ ನೆನಪಿನ ಶಕ್ತಿ ಕಡಿಮೆಯಾಗುವುದರ ವಿರುದ್ಧ ನಿಮಗೆ ರಕ್ಷಣೆಯನ್ನೂ ಸಹ ಒದಗಿಸಬಹುದು.
ನನ್ನ ನೆನಪಿನ ಶಕ್ತಿಯು ಸಹಜವಾಗಿರಲು ನಾನು ಏನು ಮಾಡಬಹುದು?
ಎಲ್ಲಾ ವಿಚಾರಗಳನ್ನು ನೆನಪಿಟ್ಟುಕೊಳ್ಳುವ ನಿರೀಕ್ಷೆ ಬೇಡ. ಇಂದಿನ ಜಗತ್ತಿನಲ್ಲಿ ನಾವೆಲ್ಲರೂ ಅನಗತ್ಯ ವಿಚಾರಗಳ ಅತಿ ಭಾರದಿಂದ ಕುಸಿದು ಹೋಗುತ್ತಿದ್ದೇವೆ. ಹಾಗಾಗಿ ಅಗತ್ಯವಿದ್ದಾಗಲೆಲ್ಲಾ, ಪಟ್ಟಿಗಳು, ಕ್ಯಾಲೆಂಡರ್‌ಗಳು, ನೆನಪೋಲೆಗಳು ಅಥವಾ ರಿಮೈಂಡರ್ ಅಥವಾ ನೆನಪಿಸುವ ಇನ್ನಿತರ ಸಾಧನಗಳನ್ನು ಬಳಸಿಕೊಳ್ಳಿ. ಉದಾಹರಣೆಗೆ: ಭೇಟಿಯ ವಿಚಾರಗಳನ್ನು ನಿಮ್ಮ ಕ್ಯಾಲೆಂಡರ್‌ನಲ್ಲಿ ಬರೆದಿಟ್ಟುಕೊಳ್ಳಿ ಮತ್ತು ಸಣ್ಣ ಪುಟ್ಟ ಕೆಲಸಗಳ ಪಟ್ಟಿ ಒಂದು ನಿಮ್ಮ ಜೇಬಿನಲ್ಲಿರಲಿ.
ನಿಮಗೆ ನೆನಪಿಸಲು ಸಾಧ್ಯವಾಗುವಂತೆ ನಿತ್ಯ ಚಟುವಟಿಕೆಗಳನ್ನು ರೂಪಿಸಿಕೊಳ್ಳಿ. ಪ್ರತಿನಿತ್ಯವೂ ಒಂದೇ ಸಮಯದಲ್ಲಿ ಔಷಧಿಯನ್ನು ತೆಗೆದುಕೊಳ್ಳುವ ರೂಢಿ ಮಾಡಿಕೊಳ್ಳಿ. ನಿಮ್ಮಲ್ಲಿರುವ ಬೀಗದಕೈ ಇತ್ಯಾದಿಗಳನ್ನು ಒಂದೇ ಜಾಗದಲ್ಲಿಡಿ.
ಹೊಸ ವಿಚಾರಗಳು ಮತ್ತು ವಿಷಯಗಳ ಸಂಪರ್ಕದಲ್ಲಿರುವ ಮೂಲಕವೂ ಸಹ ನೆನಪಿನ ಶಕ್ತಿಯನ್ನು ಕಾಪಾಡಿಕೊಳ್ಳಬಹುದು.
ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವುದರಿಂದ ಕಲಿಕೆ ಮತ್ತು ನೆನಪನ್ನು ಉತ್ತಮಪಡಿಸಿಕೊಳ್ಳಬಹುದು. ಉದಾಹರಣೆಗೆ ನೀವು ಯಾವುದಾದರೂ ಹೊಸ ವಿಷಯವನ್ನು ಕಲಿಯುವಾಗ ಸದ್ದುಗದ್ದಲಗಳು ಆದಷ್ಟು ಮಿತಿಯಲ್ಲಿರಲಿ (ಟಿ.ವಿ. ಆಫ್ ಮಾಡಿ ಮತ್ತು ನಿಶ್ಶಬ್ದ ಸ್ಥಳವನ್ನು ಆರಿಸಿಕೊಳ್ಳಿ) , ನಿಮ್ಮ ಗಮನವನ್ನು ಕೇಂದ್ರೀಕರಿಸಿ.
ಕಲಿತ ವಿಚಾರಗಳನ್ನು ನೆನಪಿಸಿಕೊಳ್ಳುವುದರಿಂದಲೂ ಸಹಾಯವಾಗುತ್ತದೆ. ಅದಕ್ಕಾಗಿ ನೀವೆ ಸ್ವತಃ ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಿ ಮತ್ತು ತಾಳ್ಮೆ ಇರಲಿ.
ನಮಗೆ ವಯಸ್ಸು ಹೆಚ್ಚಾಗುತ್ತಾ ಹೋಗುವಾಗ ಯಾವುದು ಸಹಜ? ಯಾವುದು ಅಸ್ವಸ್ಥತೆಯ ಲಕ್ಷಣವಾಗಿರಬಹುದು?
ವಯಸ್ಸು ಹೆಚ್ಚಾಗುತ್ತಾ ಹೋದಂತೆ ಒಂದು ಮಟ್ಟದಲ್ಲಿ ನೆನಪು ಕಡಿಮೆಯಾಗುವುದು ಸ್ವಾಭಾವಿಕ ಆದರೆ ಆಗಾಗ ಮರೆತು ಹೋಗುವುದು ಸ್ವಾಭಾವಿಕ ಅಲ್ಲ. ವಯಸ್ಸು ಹೆಚ್ಚಾಗುತ್ತಾ ಸಾಗಿದಂತೆ ನಾವು ಹೆಚ್ಚು ನಷ್ಟವನ್ನು (ಕುಟುಂಬದ ಸದಸ್ಯರು ದೂರವಾಗುವುದು, ಪ್ರೀತಿಪಾತ್ರರ ಅಗಲಿಕೆ) ಮತ್ತು ಹೆಚ್ಚು ದುಃಖವನ್ನು ಅನುಭವಿಸುತ್ತೇವೆ. ಹಾಗಿದ್ದರೂ ಸಹ ಬಹಳ ಸಮಯ ದುಃಖದಲ್ಲಿ ಅಥವಾ ಖನ್ನತೆಯಲ್ಲಿರುವುದು ವೃದ್ಧಾಪ್ಯದ ಸಹಜ ಲಕ್ಷಣ ಅಲ್ಲ.
ಮುಂದೆ ಪಟ್ಟಿ ಮಾಡಲಾದ ಯಾವುದಾದರೂ ಎಚ್ಚರಿಕೆಯ ಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದರೆ, ಅಥವಾ ನಿಮ್ಮ ಬಂಧುಗಳಲ್ಲಿ, ಸ್ನೇಹಿತರಲ್ಲಿ ಯಾರಿಗಾದರೂ ಈ ಲಕ್ಷಣಗಳಿದ್ದಲ್ಲಿ ಅದಕ್ಕಾಗಿ ಸೂಕ್ತ ಸಹಾಯವನ್ನು ಪಡೆಯಿರಿ. ಹಿರಿಯ ವಯಸ್ಕರು, ತಮ್ಮ ಸ್ನೇಹಿತರು ಅಥವಾ ಪ್ರೀತಿ ಪಾತ್ರರ ಜೊತೆಗೆ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಆಮೇಲೆ ತಮ್ಮ ಕುಟುಂಬದ ವೈದ್ಯರು ಅಥವಾ ಮನಃಶಾಸ್ತ್ರಜ್ಞರ ಸಹಾಯವನ್ನು ಪಡೆಯಬಹುದು.
ಎಚ್ಚರಿಕೆಯ ಲಕ್ಷಣಗಳು:
ಮುಂದೆ ಹೇಳುವ ಅಂಶಗಳು ವಯಸ್ಸಾಗುವಿಕೆಯ ಸಹಜ ಲಕ್ಷಣಗಳು ಆಗಿರದೆ ಇವು ಯಾವುದೋ ಅಸ್ವಸ್ಥತೆಯನ್ನು ಸೂಚಿಸುತ್ತಿರಬಹುದು. ಈ ಲಕ್ಷಣಗಳ ಬಗ್ಗೆ ನಿಮ್ಮ ವೈದ್ಯರ ಬಗ್ಗೆ ಚರ್ಚಿಸಿ.
ಎರಡು ವಾರಗಳಿಂದಲೂ ಬೇಸರದಿಂದ ಇರುವುದು ಅಥವಾ ಖನ್ನತೆಯ ಮನಃಸ್ಥಿತಿಯಲ್ಲಿ ಇರುವುದು ಅಕಾರಣವಾಗಿ ಅಳುವುದು.
ಈ ಹಿಂದೆ ಸಂತೋಷ ಪಡುತ್ತಿದ್ದ ವಸ್ತುಗಳಿಂದ, ಜನರಿಂದ ಆಸಕ್ತಿ ಅಥವಾ ಆನಂದವನ್ನು ಕಳೆದುಕೊಳ್ಳುವುದು.
ಎದೆ ಡವಗುಟ್ಟುವುದು ಅಥವಾ ಆಯಾಸವಾಗುವುದು, ಆಲಸ್ಯ, ಸುಸ್ತು ಅಥವಾ ಸಾಮರ್ಥ್ಯ ಕಡಿಮೆಯಾಗುವುದು
ಕಿರಿಕಿರಿ, ಜಗಳಗಂಟತನ
ಹಸಿವಿಲ್ಲದಿರುವಿಕೆ ಅಥವಾ ಅತಿಹಸಿವು ಅಥವಾ ದೇಹದ ತೂಕದಲ್ಲಿ ವ್ಯತ್ಯಾಸವಾಗುವಿಕೆ
ನಿದ್ದೆಯಲ್ಲಾಗುವ ವ್ಯತ್ಯಾಸಗಳು ಅಂದರೆ, ನಿದ್ರಾಹೀನತೆ ಅಥವಾ ಹೆಚ್ಚು ನಿದ್ದೆ ಹೋಗುವುದು
ತಾನು ನಿಷ್ಪ್ರಯೋಜಕ ಎಂಬ ಭಾವನೆ, ಅಕಾರಣ ತಪ್ಪಿತಸ್ಥ ಭಾವನೆ, ಅಸಹಾಯಕತೆ ಅಥವಾ ನಿರಾಶಾಭಾವನೆ
ಆಲೋಚಿಸುವ, ಏಕಾಗ್ರಗೊಳಿಸುವ ಅಥವಾ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಕುಗ್ಗುವುದು
ಮತ್ತೆ ಮತ್ತೆ ಆತ್ಮಹತ್ಯೆ ಅಥವಾ ಸಾಯುವ ಆಲೋಚನೆ ಮರುಕಳಿಸುವುದು, ಆತ್ಮಹತ್ಯಾ ಪ್ರಯತ್ನಗಳು – ತುರ್ತಾಗಿ ತಜ್ಞ ವೈದ್ಯರ ನೆರವನ್ನು ಪಡೆಯಿರಿ.
ನೋವುಗಳು ಮತ್ತು ಯಾತನೆಗಳು ಅಥವಾ ವಿವರಿಸಲಾಗದಂತಹ ಇತರ ದೈಹಿಕ ಸಮಸ್ಯೆಗಳು
ಗೊಂದಲ ಮತ್ತು ಕಕ್ಕಾಬಿಕ್ಕಿಯಾಗುವುದು
ಮರೆತು ಹೋಗುವುದು, ಇತ್ತೀಚಿನ ಸಂಗತಿಗಳನ್ನು ಮರೆಯು ವುದು, ಅಲ್ಪ$-ಕಾಲದ ಮರೆವು
ಸಾಮಾಜಿಕ ಪರಿತ್ಯಕ್ತತೆ
ಹಣಕಾಸು, ಸಂಖ್ಯೆಗಳು ಮತ್ತು ಬಿಲ್‌ಗಳ ಪಾವತಿ, ನಿರ್ವಹಣೆ ಕಷ್ಟವಾಗುವುದು,
ವ್ಯಕ್ತಿತ್ವ ಮತ್ತು ಉಡುಪುಗಳ ಗುಣಮಟ್ಟದಲ್ಲಿ ವ್ಯತ್ಯಾಸವಾಗುವುದು
ಮನೆ, ವಠಾರದ ನಿರ್ವಹಣೆ ಕಷ್ಟವಾಗುವುದು.
ಯಾವೆಲ್ಲಾ ಕಾರಣಗಳಿಂದ ಮಾನಸಿಕ ಅಸ್ವಸ್ಥತೆ ಬಾಧಿಸಬಹುದು?
– ದೈಹಿಕ ವೈಕಲ್ಯ
– ದೈಹಿಕ ಅನಾರೋಗ್ಯ
– ಪರಿಸರದಲ್ಲಿ ಆಗುವ ಬದಲಾವಣೆ ಅಂದರೆ ಮನೆ ಬದಲಾವಣೆ ಮಾಡುವುದು ಇತ್ಯಾದಿ
– ಪ್ರೀತಿಪಾತ್ರರ ಮರಣ ಅಥವಾ ಕಾಯಿಲೆ
– ಔಷಧೋಪಚಾರಗಳ ಸಂಯೋಜನೆ
– ಹಿರಿಯ ವಯಸ್ಕರು ಇತರರಿಗಿಂತ ಹೆಚ್ಚು ಔಷಧಿಗಳನ್ನು ಸೇವಿಸುತ್ತಿರುತ್ತಾರೆ. ವಯಸ್ಸು ಹೆಚ್ಚಾದಂತೆ ನಮ್ಮ ದೇಹದ ಚಯಾಪಚಯ ಕ್ರಿಯೆಯು ನಿಧಾನಗೊಳ್ಳುವುದರಿಂದಾಗಿ, ವೃದ್ಧರ ಶರೀರದಲ್ಲಿ ಬಹಳ ಹೊತ್ತು ಔಷಧಿಯು ಉಳಿದು, ಕ್ಷಿಪ್ರವಾಗಿ ನಂಜಾಗುವ ಹಂತವನ್ನು ತಲುಪಬಹುದು.
– ಔಷಧಿಗಳು-ಅಲ್ಕೋಹಾಲ್‌ಗಳಿಂದ ವ್ಯಕ್ತಿಯಲ್ಲಿ ಗೊಂದಲ, ಮನಃಸ್ಥಿತಿಯಲ್ಲಿ ವ್ಯತ್ಯಾಸ, ಬುದ್ಧಿಮಾಂದ್ಯತೆಯ ಲಕ್ಷಣಗಳು ಗೋಚರಿಸಬಹುದು.
– ಆಲ್ಕೋಹಾಲ್ ಅಥವಾ ಮಾದಕ ವಸ್ತು ಸೇವನೆ ಅಥವಾ ದುರ್ಬಳಕೆ
– ಕಳಪೆ ಆಹಾರ
– ಹಲ್ಲುಗಳ ಸಮಸ್ಯೆಯಿಂದಾಗಿ ಆಹಾರದ ಕೊರತೆ ಉಂಟಾಗಬಹುದು. ಕೆಲವು ವೃದ್ಧರಿಗೆ ಆಹಾರ ನುಂಗಲು ಕಷ್ಟವಾಗುವುದರಿಂದಾಗಿ ಆಹಾರವನ್ನು ನಿರಾಕರಿಸುತ್ತಾರೆ.
ಒಂದುವೇಳೆ ನನಗೆ ಸಮಸ್ಯೆ ಇದೆ ಎಂಬ ಸಂದೇಹವಿದ್ದಾಗ ನಾನು ಏನು ಮಾಡಬೇಕು?
– ನಿಮ್ಮ ವೈದ್ಯರು ಅಥವಾ ಮನೋವೈದ್ಯರ ಜೊತೆ ಮಾತನಾಡಿ. ನಿಮಗೆ ಏನು ಅನ್ನಿಸುತ್ತಿದೆ ಮತ್ತು ನಿಮಗೆ ಯಾವುದು ಸಹಜವಾಗಿಲ್ಲ ಎಂಬುದನ್ನು ವಿವರಿಸಿ. ನಿಮ್ಮ ನಂಬುಗೆಯ ಸ್ನೇಹಿತರು, ಕುಟುಂಬ ವರ್ಗದವರು ಅಥವಾ ಆಧ್ಯಾತ್ಮಿಕ ಸಮಾಲೋಚಕರ ಜೊತೆಗೆ ಮಾತನಾಡಿ. ನಾಚಿಕೆ ಅಥವಾ ಮುಜುಗರ ಪಡಬೇಡಿ. ನಿಮಗೆ ಏನು ಅನ್ನಿಸುತ್ತಿದೆ ಎಂಬುದನ್ನು ವಿವರಿಸಿ. ಖನ್ನತೆ ಎಂಬುದು ವಯಸ್ಸಾಗುವಿಕೆಯ ಸಹಜ ಲಕ್ಷಣ ಅಲ್ಲ. ಹಾಗಿದ್ದರೂ ಸಹ ಪ್ರಸ್ತುತ ಖನ್ನತೆ ಎಂಬುದು ಅಷ್ಟಾಗಿ ಗಮನವನ್ನೀಯದ ಮತ್ತು ಚಿಕಿತ್ಸೆಗೆ ಒಳಪಡದ ಅಸ್ವಸ್ಥತೆ ಎನಿಸಿದೆ. ಇತರ ಕಾಯಿಲೆಗಳ ಜೊತೆಗೆ ಕಾಣಿಸಿಕೊಳ್ಳುವ ಖನ್ನತೆಗೆ ಚಿಕಿತ್ಸೆ ನೀಡಬಹುದು ಮತ್ತು ಚಿಕಿತ್ಸೆ ನೀಡಬೇಕು, ಒಂದು ವೇಳೆ ಖನ್ನತೆಗೆ ಚಿಕಿತ್ಸೆ ನೀಡದೆ ಹೋದರೆ, ಇರುವ ಕಾಯಿಲೆ ಇನ್ನಷ್ಟು ಬಿಗಡಾಯಿಸಬಹುದು ಅಥವಾ ಕಾಯಿಲೆಗೆ ನೀಡುವ ಚಿಕಿತ್ಸೆ ನಿಷ್ಪ್ರಯೋಜಕವಾಗಬಹುದು.
– ನಿಮಗೇನಾದರೂ ಪ್ರಶ್ನೆಗಳು ಇದ್ದರೆ, ಒಂದು ಸಲ ನಿಮ್ಮ ವೈದ್ಯರಿಗೆ ಕರೆಮಾಡಿ – ಪರಿಹಾರವನ್ನು ಪಡೆಯಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.