ಚರ್ಮ ರೋಗದ ಸಮಸ್ಯೆಯೇ…? ಇಲ್ಲಿದೆ ಸರಳ ಪರಿಹಾರ
ಬೇವಿನ ಬೀಜವನ್ನು ಗೋಮೂತ್ರದ ಜೊತೆ ಸೇರಿಸಿ ಅರೆದು ದೇಹಕ್ಕೆ ಲೇಪಿಸಿ ಸ್ನಾನ ಮಾಡುವುದರಿಂದ ಚರ್ಮದ ಸಮಸ್ಯೆ ಶಮನ
Team Udayavani, Feb 20, 2021, 12:00 PM IST
ಚರ್ಮ ರೋಗಗಳು ಎಲ್ಲರನ್ನೂ ಗಾಢವಾಗಿ ಕಾಡುವ ಸಮಸ್ಯೆಗಳಲ್ಲಿ ಒಂದು. ಕೆಲವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸ್ಪಲ್ಪ ಪ್ರಮಾಣದಲ್ಲಿ ದೇಹವನ್ನು ಬಾಧಿಸಿದರೆ ಇನ್ನೂ ಕೆಲವು ಚರ್ಮರೋಗಗಳು ದೇಹದ ಮೇಲೆ ಭಾರಿ ಪರಿಣಾಮವನ್ನು ಬೀರುತ್ತದೆ.
ಚರ್ಮ ರೋಗಳನ್ನು ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ದೊರಕುವ ಹಲವು ಗಿಡಮೂಲಿಕೆಗಳು ಮತ್ತು ನೈಸರ್ಗಿಕ ವಸ್ತುಗಳಿಂದ ಪರಿಣಾಮಕಾರಿಯಾಗಿ ಗುಣಪಡಿಸಿಕೊಳ್ಳಬಹುದಾಗಿದೆ.
ಚರ್ಮರೋಗದ ನಿವಾರಣೆಗೆ ಹೀಗೆ ಮಾಡಬಹುದು
1.ನಮ್ಮ ಸುತ್ತಮತ್ತಲು ಒದಗುವ ಬೇವಿನ ಎಲೆಯನ್ನು ಹುರಿದು ಅದನ್ನು ಸ್ಪಲ್ಪ ಹೊಂಗೆ ಎಣ್ಣೆಯೊಂದಿಗೆ ಬೆರಸಿ ದೇಹಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ ಕಜ್ಜಿಯಂತಹ ಸಮಸ್ಯೆಗಳು ದೂರವಾಗುತ್ತದೆ.
2.ಬೇವಿನಲ್ಲಿ ರೋಗನಿರೋಧಕ ಶಕ್ತಿ ಹೇರಳವಾಗಿ ಇರುವುದರಿಂದ ಬೇವಿನ ತೊಗಟೆಯನ್ನು ನೀರಿನಲ್ಲಿ ಬೆರೆಸಿ ಚೆನ್ನಾಗಿ ಅರೆದು ಇದನ್ನು ಹಚ್ಚಿ ಸ್ನಾನ ಮಾಡುವುದರಿಂದ ಚರ್ಮ ರೋಗಗಳು ದೂರವಾಗುತ್ತದೆ. ಇನ್ನು ಬೇವಿನ ಬೀಜವನ್ನು ಗೋಮೂತ್ರದ ಜೊತೆ ಸೇರಿಸಿ ಅರೆದು ದೇಹಕ್ಕೆ ಲೇಪಿಸಿ ಸ್ನಾನ ಮಾಡುವುದರಿಂದ ಚರ್ಮದ ಸಮಸ್ಯೆಗಳು ಶಮನವಾಗುತ್ತದೆ.
3. ಸೌತೆಕಾಯಿಯನ್ನು ಚೆನ್ನಾಗಿ ಅರೆದು ರಸ ತೆಗೆದು ನಂತರ ಅದನ್ನು ಹಚ್ಚಿ ಸ್ನಾನ ಮಾಡುವುದರಿಂದ, ಸೌತೆಕಾಯಿ ರಸವನ್ನು ಸೇವಿಸುವುದರಿಂದ ಚರ್ಮ ರೋಗದಿಂದ ಪರಿಹಾರ ಪಡೆಯಬಹುದಾಗಿದೆ.
ಇದನ್ನೂ ಓದಿ:ಪಶ್ಚಿಮಬಂಗಾಳ: 100 ಗ್ರಾಂ ಕೊಕೇನ್ ಸಹಿತ ಬಿಜೆಪಿ ಯುವಮೋರ್ಚಾ ನಾಯಕಿ ಬಂಧನ
4.ಅರಶಿನದ ಬೇರನ್ನು ಗೋಮೂತ್ರ ಅಥವಾ ಲಿಂಬೆ ರಸದೊಂದಿಗೆ ಅರೆದು ಅದನ್ನು ಹಚ್ಚಿ ಸ್ನಾನ ಮಾಡುವುದರಿಂದ ತುರಿಕೆ ಸೇರಿದಂತೆ ಹಲವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ.
ಇದಿಷ್ಟೇ ಅಲ್ಲದೆ ಶ್ರೀಗಂಧವನ್ನು ಅರೆದು ಚೂರ್ಣ ಮಾಡಿಕೊಂಡು ಸ್ನಾನ ಮಾಡುವಾಗ ಈ ಚೂರ್ಣವನ್ನು ಹಚ್ಚಿ ಸ್ನಾನ ಮಾಡುವುದರಿಂದ ಮತ್ತು ಗರಿಕೆ ಹಾಗೂ ಅರಶಿನವನ್ನು ಬೆರೆಸಿ ಚೂರ್ಣ ಮಾಡಿಕೊಂಡು ಸ್ನಾನದ ಸಮಯದಲ್ಲಿ ಲೇಪಿಸುವುದರಿಂದ ಚರ್ಮ ರೋಗಗಳಿಂದ ಪರಿಣಾಮಕಾರಿ ಪರಿಹಾರವನ್ನು ಕಾಣಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.