![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 5, 2019, 11:40 AM IST
ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎನ್ನುವಂತೆ ಚಿಂತೆಯಿಲ್ಲದವನಿಗೆ ನಿದ್ದೆಯ ಸಮಸ್ಯೆ ಕಡಿಮೆ. ಆದರೆ ಈಗ ನಿದ್ದೆಯ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ನಿದ್ದೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಕೊರಗುವವ ಸಂಖ್ಯೆ ಇಂದು ಅಧಿಕವಾಗುತ್ತಿದೆ. ನಿದ್ದೆ ಎನ್ನುವುದು ಮನುಷ್ಯನ ಆರೋಗ್ಯಕ್ಕೆ ಉತ್ತಮ ಮದ್ದು. ದೇಹ ಎಷ್ಟೇ ದಣಿದಿದ್ದರೂ ನಿದ್ದೆ ಮಾಡಿ ಎದ್ದಾಗ ದೇಹದಲ್ಲಿನ ಆಯಾಸ ಮಾಯವಾಗಿರುತ್ತದೆ ಹಾಗೂ ಮನಸ್ಸು ಚೈತನ್ಯದಿಂದ ಕೂಡಿರುತ್ತದೆ. ನಿದ್ದೆ ಸರಿಯಾಗಿ ಆಗಿಲ್ಲ ಎಂದಾದರೇ ಹಲವು ರೋಗಗಳನ್ನು ಮೈಗೆಳೆದುಕೊಂಡಂತೆ.
ಎಷ್ಟು ನಿದ್ದೆ ಅವಶ್ಯ
ಮನುಷ್ಯ ಹಗಲು ಹೊತ್ತಲ್ಲಿ ಕೆಲಸ ಮಾಡುವುದರಿಂದ ರಾತ್ರಿ ಹೊತ್ತು ನಿದ್ದೆ ಅತ್ಯವಶ್ಯಕ. ವಯಸ್ಸಿಗೆ ತಕ್ಕಂತೆ, ಮನುಷ್ಯನಿಂದ ಮನುಷ್ಯನಿಗೆ ಅವರ ಆರೋಗ್ಯಕ್ಕೆ ತಕ್ಕಂತೆ ನಿದ್ದೆಯ ಅವಧಿಯಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಕನಿಷ್ಠ ನಿದ್ದೆ ಎಲ್ಲರಿಗೂ ಅಗತ್ಯ. ಉತ್ತಮ ಆರೋಗ್ಯಕ್ಕಾಗಿ ಮನುಷ್ಯನಿಗೆ 8 ಗಂಟೆ ನಿದ್ದೆಯ ಅಗತ್ಯವಿದೆ.
ಪರಿಹಾರಗಳು
ನಿದ್ದೆಯ ಸಮಸ್ಯೆ ಉಂಟಾಗುವುದು ನಮ್ಮ ದಿನನಿತ್ಯದ ಚಟುವಟಿಕೆಗಳ ಆಧಾರದ ಮೇಲೆ. ಆದ್ದರಿಂದ ನಮ್ಮ ದಿನನಿತ್ಯದ ಚಟುವಟಿಕೆಗಳ ಮೇಲೆ ನಿಯಂತ್ರಣ ಸಾಧಿಸಿದರೆ ನಿದ್ದೆಯ ಸಮಸ್ಯೆ ನಿಯಂತ್ರಿಸಬಹುದು. ನಿದ್ದೆಯ ಸಮಸ್ಯೆ ಆರೋಗ್ಯದ ಏರುಪೇರಿನಿಂದಾಗಿ ಸಮಸ್ಯೆಯುಂಟಾದಲ್ಲಿ ವೈದ್ಯರನ್ನು ಕಾಣಬೇಕು.
1 ಒತ್ತಡದ ಬದುಕು ನಿದ್ದೆಗೆ ಪ್ರಮುಖ ಕಾರಣ. ಧ್ಯಾನ ಮಾಡುವುದ ರಿಂದ ಒತ್ತಡವನ್ನು ನಿಯಂತ್ರಿಸಲು ಸಾಧ್ಯ. ಒತ್ತಡ ಕಡಿಮೆಯಾದರೆ ನಿದ್ದೆಯ ಸಮಸ್ಯೆ ದೂರವಾಗುವುದರಲ್ಲಿ ಅನುಮಾನವಿಲ್ಲ.
2 ಮಲಗುವ ಮೊದಲು ಬಿಸಿ ಹಾಲು ಕುಡಿಯುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.
3 ತಲೆಗೆ ಚೆನ್ನಾಗಿ ಎಣ್ಣೆ ಹಾಕಿ ಮಸಾಚ್ ಮಾಡಿದಾಗ ತಲೆ ತಂಪಾಗುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.
4 ಮಲಗುವ ಮೊದಲು ಸಂಗೀತ ಕೇಳಿ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗಿ ಚೆನ್ನಾಗಿ ನಿದ್ದೆ ಬರುತ್ತದೆ.
5 ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡಿದರೆ ನಿದ್ದೆಯ ಸಮಸ್ಯೆಯುಂಟಾಗುವುದಿಲ್ಲ.
- ರಂಜಿನಿ ಮಿತ್ತಡ್ಕ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.