ಸಾಮಾನ್ಯ ಜ್ವರಕ್ಕೆ ಸರಳ ಮನೆಮದ್ದು
Team Udayavani, Feb 21, 2021, 4:19 PM IST
ವಾತಾವರಣದ ಬದಲಾವಣೆಯಿಂದ ನಮ್ಮ ಆರೋಗ್ಯದಲ್ಲಿ ಏರು ಪೇರಾಗುವುದು ಸಹಜ ಪ್ರಕ್ರಿಯೆಯಾಗಿದೆ. ಚಳಿಗಾಲ, ಮಳೆಗಾಲ, ಬೇಸಿಗೆ ಕಾಲಕ್ಕೆ ತಕ್ಕಂತೆ ಹಲವು ಆರೋಗ್ಯದ ಸಮಸ್ಯೆಗಳು ಎಲ್ಲರನ್ನೂ ಬಾಧಿಸುತ್ತದೆ. ಅವುಗಳಲ್ಲಿ ಸಾಮಾನ್ಯ ಶೀತ- ಜ್ವರವೂ ಒಂದು.
ಸಾಮಾನ್ಯ ಶೀತ ಜ್ವರದ ಸಮಸ್ಯೆಗೆ ಮನೆಯಲ್ಲಿ ಅತ್ಯಂತ ಸರಳವಾದ ಕ್ರಮಗಳಿಂದ ಪರಹಾರವನ್ನು ಕಂಡುಕೊಳ್ಳಬಹುದಾಗಿದೆ. ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಹಜ ಜ್ವರದಿಂದ ಮುಕ್ತವಾಗಬಹುದಾಗಿದೆ.
ಸಹಜ ಜ್ವರದ ಪರಿಹಾರಕ್ಕೆ ಸರಳ ಪರಿಹಾರ
ಸಾಮಾನ್ಯ ಜ್ವರದ ಸಮಯದಲ್ಲಿ ಉಪವಾಸವನ್ನು ಕೈಗೊಳ್ಳುವುದು ಉತ್ತಮ. ಆದರೆ ಸಂಪೂರ್ಣ ಉಪವಾಸವನ್ನು ಮಾಡುವುದರಿಂದ ದೇಹ ಶಕ್ತಿ ಹೀನವಾಗುವ ಸಾಧ್ಯತೆಗಳಿರುವುದರಿಂದ ಮೃದು ಆಹಾರವನ್ನು ಸ್ಪಲ್ಪ ಪ್ರಮಾಣದಲ್ಲಿ ಸೇವಿಸಬಹುದಾಗಿದೆ.
ಅಧಿಕವಾಗಿ ನೀರನ್ನು ಕುಡಿಯುವುದು , ಆದಷ್ಟು ದ್ರವರೂಪದ ಆಹಾರವನ್ನು ಸೇವಿಸುವುದು ಉತ್ತಮ. ಹುರಿದ ಅಕ್ಕಿಯನ್ನು ಗಂಜಿಮಾಡಿ ಸೇವಿಸುವುದು ಸರಳ ಜ್ವರಕ್ಕೆ ಉತ್ತಮ ಆಹಾರವಾಗಿದೆ.
ಇದನ್ನೂ ಓದಿ:ಬಿಸಿನೀರು ಹಾಗೂ ತಣ್ಣೀರನ್ನು ದೈನಂದಿನ ಬದುಕಿನಲ್ಲಿ ಹೇಗೆ ಬಳಸಬೇಕು?
ಸಾಮಾನ್ಯ ಜ್ವರದ ಪರಿಹಾರಕ್ಕೆ ಬೇವಿನ ಚೂರ್ಣವನ್ನು ಕಾದಾರಿಸಿ, ಹಾಲಿನ ಜೊತೆ ಸೇವಿಸುವುದು ಉತ್ತಮವಾದ ಪರಿಹಾರವಾಗಿದೆ. ಅಲ್ಲದೆ ಅಮೃತ ಬಳ್ಳಿಯ ಚೂರ್ಣವನ್ನು ಜೇನಿನೊಂದಿಗೆ ಸೇವನೆ ಮಾಡುವುದರಿಂದಲೂ ಜ್ವರ ಶಮನವಾಗುತ್ತದೆ.
ವಾತ ಹಾಗೂ ಕಫ ಜ್ವರಕ್ಕೆ ಹಿಪ್ಪಲಿ ಕಷಾಯವನ್ನು ಸೇವನೆ ಮಾಡುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ. 9 ಗ್ರಾಂ. ಹಿಪ್ಪಲಿಯನ್ನು ಕುಟ್ಟಿ ಪುಡಿ ಮಾಡಿ 800 ಎಂ. ಎಲ್ ನೀರಿನಲ್ಲಿ ಕುದಿಸಿ, ಅದನ್ನು 200 ಎಂ. ಎಲ್ ಆಗುವಷ್ಡು ಮಾಡಿ ಬೆಳಿಗ್ಗೆ ಮತ್ತು ರಾತ್ರಿ ವೇಳೆ ಬರಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಉತ್ತಮ.
ಕೋವಿಡ್ ಆರಂಭವಾಗುವ ಮುನ್ನ ಶೀತ ಮತ್ತು ಜ್ವರದ ಸಮಸ್ಯೆಗಳು ಸಹಜವಾಗಿದ್ದು, ಪ್ರಸ್ತುತ ಶೀತ ಅಥವಾ ಜ್ವರದಂತಹ ಸಮಸ್ಯೆಗಳು ಕಂಡು ಬಂದರೆ ಬಹಳ ಸಮಯ ಆಸ್ಪತ್ರೆಗೆ ತೆರಳದೆ ಇರುವುದು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೀಗಾಗಿ ಜ್ವರದಂತಹ ಸಮಸ್ಯೆಗಳು ಕಂಡು ಬಂದರೆ ಒಂದೆರಡು ದಿನ ಮನೆಗಳಲ್ಲಿ ಮಾಡಬಹುದಾದ ಸರಳ ಮನೆಮದ್ದುಗಳನ್ನು ಮಾಡಿ ನೋಡಿ, ಆ ಬಳಕವೂ ಜ್ವರ ಕಡಿಮೆಯಾಗದಿದ್ದರೆ ನೇರವಾಗಿ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.