ಜೇನು ಹುಳು ಕಡಿದಾಗ ಏನು ಮಾಡಬೇಕು? ಇಲ್ಲಿದೆ ಮಾಹಿತಿ..
ತುಳಸಿ ರಸವನ್ನು ದೇಹಕ್ಕೆ ಹಚ್ಚುವುದರಿಂದ ಜೇನು ಹುಳುಗಳ ಹೆಚ್ಚಿನ ದಾಳಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
Team Udayavani, Mar 17, 2021, 6:10 PM IST
ಜೇನು ತುಪ್ಪವನ್ನು ಸವಿಯಲು ಎಷ್ಟು ರುಚಿಕರವೋ ಅದೇ ರೀತಿ ಆ ಜೇನು ತುಪ್ಪವನ್ನು ತಯಾರಿಸಿದ ಜೇನು ಹುಳು ಕಡಿದರೆ ಅಷ್ಟೇ ನೋವಾಗುವುದೂ ಸಹಜ. ಜೇನು ಹುಳುಗಳು ಒಮ್ಮೆಲೆ ಆವರಿಸಿಕೊಂಡು ಕಚ್ಚಿದರೆ ವ್ಯಕ್ತಿ ದೇಹ ಸಂಪೂರ್ಣ ಊದಿಕೊಂಡು ಗುರುತು ಸಿಗದವನಂತೆ ಆಗುತ್ತಾನೆ. ಇನ್ನೂ ಕೆಲವೊಮ್ಮೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳೂ ಇರುತ್ತದೆ.
ಜೇನು ಕಡಿದಾಗ ಏನು ಮಾಡಬೇಕು?
ಜೇನು ಹುಳದಿಂದ ಕಚ್ಚಿಸಿಕೊಂಡವರು ಮೊದಲು ಅದರ ಇಂಬನ್ನು ತೆಗೆದು ತಣ್ಣನೆಯ ನೀರಿನಲ್ಲಿ ಕೈ ತೊಳೆಯಬೇಕು. ನಂತರ ಈ ಕೆಳಗಿನ ಮದ್ದನ್ನು ಬಳಸಬಹುದಾಗಿದೆ.
ಜೇನು ತುಪ್ಪ ಹಚ್ಚಿ: ಜೇನು ತುಪ್ಪದಲ್ಲಿ ರೋಗ ನಿರೋಧಕ ಅಂಶಗಳಿದ್ದು, ಜೇನು ಹುಳುಗಳು ಕಡಿದಾಗ ಸ್ಪಲ್ಪ ಜೇನು ತುಪ್ಪವನ್ನು ಲೇಪನ ಮಾಡಿ, ಒಂದು ಘಂಟೆಯ ಬಳಿಕ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ಇದರಿಂದ ತುರಿಕೆ ಕಡಿಮೆಯಾಗುತ್ತದೆ.
ಇದನ್ನೂ ಓದಿ:ಯಡಿಯೂರಪ್ಪ ಬಂಜಾರಾ ಸಮುದಾಯಕ್ಕೆ ಎರಡನೇ ಸೇವಾಲಾಲ್ ಇದ್ದಂತೆ : ಸಚಿವ ಪ್ರಭು ಚವ್ಹಾಣ್
ತುಳಸಿ ರಸ ಬಳಸಿ
ಜೇನು ಹುಳುಗಳು ಕಚ್ಚಿದ ಸಮಯದಲ್ಲಿ ತುಳಸಿ ಎಲೆಯ ರಸವನ್ನು ತೆಗೆದು ಗಾಯವಾದ ಜಾಗಕ್ಕೆ ಲೇಪನ ಮಾಡುವುದರಿಂದ ಗಾಯ ಬಹುಬೇಗ ಗುಣಮುಖವಾಗುತ್ತದೆ. ಅಲ್ಲದೆ ತುಳಸಿ ರಸವನ್ನು ದೇಹಕ್ಕೆ ಹಚ್ಚುವುದರಿಂದ ಜೇನು ಹುಳುಗಳ ಹೆಚ್ಚಿನ ದಾಳಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಟೂಥ್ ಪೇಸ್ಟ್ ಲೇಪಿಸಿ
ಜೇನು ಹುಳಗಳು ದಾಳಿ ಮಾಡಿ ಗಾಯಗಳಾದ ಜಾಗಕ್ಕೆ ಟೂಥ್ ಪೇಸ್ಟ್ ಅನ್ನು ಲೇಪನ ಮಾಡಿ. ಒಂದು ಘಂಟೆಯ ಬಳಿಕ ತಂಪಾದ ನೀರಿನಿಂದ ಚೆನ್ನಾಗಿ ತೊಳೆಯಿರಿ. ಹೀಗೆ ಮಾಡುವುದರಿಂದ ನೋವು ಉಪಶಮನವಾಗುತ್ತದೆ.
ಪಪ್ಪಾಯ ಬಳಕೆ
ಪಪ್ಪಾಯ ಹಣ್ಣಿನಲ್ಲಿ ಹಲವಾರು ಆರೋಗ್ಯಕರವಾದ ಅಂಶಗಳಿದ್ದು, ಇದರ ಜೊತೆ ಜೊತೆಗೆ ಇದರಲ್ಲಿ ಪಪೈನ್ ಎನ್ನುವ ಕಿಣ್ಚವಿದೆ. ಈ ಅಂಶ ಜೇನು ಹುಳುಗಳು ಕಚ್ಚಿದಾಗ ಉಂಟಾಗುವ ನೋವು ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ. ಪಪ್ಪಾಯ ಹಣ್ಣಿನ ತಿರುಳನ್ನು ಗಾಯವಾದ ಜಾಗಕ್ಕೆ ಹಚ್ಚುವುದರಿಂದ ಸಮಸ್ಯೆ ಬಹುಬೇಗ ಪರಿಹಾರವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.