ಪ್ರಾಯೋಜಿತ: ಮಗುವಿನ ಓಪನ್ ಹಾರ್ಟ್ ಸರ್ಜರಿಗೆ ಧನಸಹಾಯ ಮಾಡಿ-ದಂಪತಿ ಮನವಿ

ಬೆಲೆಬಾಳುವಂತಹ ಎಲ್ಲ ವಸ್ತುಗಳನ್ನೂ ಮಾರಿ, ಬಂಧುಗಳಿಂದ ಸಾಲ ಪಡೆದು, ತಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾರೆ

Team Udayavani, Feb 12, 2021, 10:23 AM IST

Donate

ಭರವಸೆಗಳನ್ನೇ ಕಳೆದುಕೊಂಡಿರುವ ತಂದೆ ತಾಯಿ ತಮ್ಮ ಮಗನನ್ನು ಉಳಿಸಲು ನಿಮ್ಮ ಮೊರೆ ಬಂದಿದ್ದಾರೆ. ದಯವಿಟ್ಟು ದಾನ ಮಾಡಿ ನನ್ನ ಮಗನ ಹೃದಯ ದುರ್ಬಲವಾಗಿದೆ. ಅವನಿಗೆ ತಕ್ಷಣವೇ ಓಪನ್ ಹಾರ್ಟ್ ಸರ್ಜರಿ ಆಗಬೇಕಿದೆ. ಸಹಾಯ ಮಾಡಿ.

“ಹುಟ್ಟಿದ ತಕ್ಷಣ ಆಸ್ಪತ್ರೆಯ ತೊಟ್ಟಿಲಲ್ಲಿ ನನ್ನ ಮಗ ಶಾಂತವಾಗಿ ನಿದ್ದೆ ಮಾಡುತ್ತಿರುವುದನ್ನು ನಾನು ಮೊದಲ ಬಾರಿಗೆ ನೋಡಿದಾಗ, ನನಗೆ ಒಂದು ರೀತಿಯ ಜವಾಬ್ದಾರಿಯ ಅನುಭವವಾಯಿತು. ನಾನು ಬಹಳ ಖುಷಿಯಾಗಿದ್ದೆ ಮತ್ತು ಜಗತ್ತಿನಲ್ಲಿರುವ ಒಳ್ಳೆಯದೆಲ್ಲವನ್ನೂ ಅವನಿಗೆ ದೊರಕಿಸಬೇಕು ಎನ್ನುವ ಆಶಯದಲ್ಲಿದ್ದೆ. ಆದರೆ ಬರುವ ದಿನಗಳಲ್ಲಿ ಎಲ್ಲ ಬದಲಾಗುತ್ತದೆ ಮತ್ತು ನನಗೆ ಬೇರೇನೂ ಬೇಡ, ಅವನು ಬದುಕಿದರೆ ಸಾಕು ಎನ್ನುವಂತಹ ಪರಿಸ್ಥಿತಿ ಬರಲಿದೆ ಎಂಬುದು ಗೊತ್ತೇ ಇರಲಿಲ್ಲ” ಎನ್ನುತ್ತಾರೆ ಸಂದೀಪ್.

(ಧನಸಹಾಯ ಮಾಡಿ)

ಸಂದೀಪ್ ಮತ್ತು ಮಧುಮಿತಾ ಬಹಳ ದೊಡ್ಡ ಸಂಕಷ್ಟದಲ್ಲಿದ್ದಾರೆ, ಅವರ 3 ವರ್ಷದ ಮಗ ರಿಯನ್ಸ್, Congenital severe aortic stenosis ಎನ್ನುವ ಮಾರಣಾಂತಿಕ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾನೆ. ಓಪನ್ ಹಾರ್ಟ್ ಸರ್ಜರಿ ಮಾಡದೇ, ಅವನು ಹೆಚ್ಚು ಕಾಲ ಬದುಕುವುದು ಸಾಧ್ಯವಿಲ್ಲ. ಈ ಚಿಕಿತ್ಸೆಗೆ ಬರೋಬ್ಬರಿ 10 ಲಕ್ಷ ರೂಪಾಯಿಗಳ ಅವಶ್ಯಕತೆ ಇದೆ, ಆದರೆ ಕುಟುಂಬದವರ ಬಳಿ ಅಷ್ಟೊಂದು ಹಣವಿಲ್ಲ.

ಸಂದೀಪ್ ಒಂದು ಒಡವೆ ಅಂಗಡಿಯಲ್ಲಿ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ, ಆದರೆ ಕರೋನ ಬಂದ ಮೇಲೆ ಕೆಲಸವನ್ನೇ ಕಳೆದುಕೊಂಡ. ಈಗ ಆತ ಹೊಲಗದ್ದೆಗಳಲ್ಲಿ ದಿನಗೂಲಿಯ ಕೆಲಸ ಮಾಡಲೇಬೇಕಾಗಿದೆ, ಮನೆ ನಡೆಸಲೇಬೇಕಲ್ಲವೇ? ಆತ ಉಳಿತಾಯ ಮಾಡಿಟ್ಟಿದ್ದ ಎಲ್ಲ ಹಣವೂ ಈಗಾಗಲೇ ವೈದ್ಯರ ತಪಾಸಣೆ ಮತ್ತು ಔಷಧಿಗಾಗಿ ಖರ್ಚಾಗಿಬಿಟ್ಟಿವೆ. ತಮ್ಮ ಮಗನ ಜೀವ ಉಳಿಸಿಕೊಳ್ಳಲು ಆಗಬೇಕಿರುವ ಚಿಕಿತ್ಸೆಗೆ ಖರ್ಚು ಮಾಡಲು ಅವರ ಬಳಿ ಈಗ ಯಾವ ಹಣವೂ ಇಲ್ಲ. (ಧನಸಹಾಯ ಮಾಡಿ)

“ನಮಗೆ ಒಂದು ಮಗು ಬೇಕೆಂದು ನಾವು ಹಾತೊರೆಯುತ್ತಿದ್ದೆವು ಮತ್ತು ನಮ್ಮ ಮಕ್ಕಳನ್ನು ಚೆನ್ನಾಗಿಡುವಂತೆ ದೇವರಲ್ಲಿ ಸದಾ ಪ್ರಾರ್ಥಿಸುತ್ತಿದ್ದೆವು. ನನ್ನ ಮಗನನ್ನು ನಾನು ಎತ್ತಿಕೊಂಡ ಕ್ಷಣ ನನಗನಿಸಿತು, ಜಗತ್ತಿನಲ್ಲಿ ಈಗ ನನಗೆ ಇವನಿಗಿಂತ ಮುಖ್ಯವಾದದ್ದು ಬೇರೇನೂ ಇಲ್ಲ, ಇವನಿಗಾಗಿ ನಾನು ಏನು ಮಾಡಲೂ ಸಿದ್ಧ ಎಂದು. ಅವನಿಗಾಗಿ ಹಾಡುತ್ತಾ ಅವನೊಂದಿಗೆ ಹಗಲಿರುಳು ಕಳೆದಿದ್ದೇನೆ, ಆದರೆ ಎಲ್ಲಿಯವರೆಗೆ? ಅದೊಂದು ದಿನ ಇದ್ದಕ್ಕಿದ್ದಂತೆ ನನಗೆ ಆ ಕೆಟ್ಟ ಸುದ್ದಿ ಗೊತ್ತಾಯಿತು. ಈಗ ನಾವು ಕಳೆಯುತ್ತಿರುವ ಪ್ರತಿ ಕ್ಷಣವೂ ನರಕ”. ಎನ್ನುತ್ತಾ ಕಣ್ಣು ತುಂಬಿಕೊಳ್ಳುತ್ತಾರೆ ಮಧುಮಿತಾ.

ಮಗನ ಪಕ್ಕದಲ್ಲೇ ನಿಂತು ಅವನು ಒದ್ದಾಡುತ್ತಿರುವುದನ್ನು ನೋಡಿದರೆ ಅವರ ಕರಳು ಕಿತ್ತು ಬರುತ್ತದೆ. ಚಿಕಿತ್ಸೆಯ ಹಣವನ್ನು ಹೊಂದಿಸಲು ತಮ್ಮ ಬಳಿಯಿದ್ದ ಬೆಲೆಬಾಳುವಂತಹ ಎಲ್ಲ ವಸ್ತುಗಳನ್ನೂ ಮಾರಿ, ಬಂಧುಗಳಿಂದ ಸಾಲ ಪಡೆದು, ತಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನೂ ಅವರು ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ಈಗ, ಅವರು ನಿಮ್ಮ ಬಳಿ ಸಹಾಯ ಯಾಚಿಸುತ್ತಿದ್ದಾರೆ. ನಿಮ್ಮ ಉದಾರ ದಾನದಿಂದ, ಅವನ ಮಗನ ಶಸ್ತ್ರಚಿಕಿತ್ಸೆಯಾಗಬಲ್ಲದು, ಅವನು ಮತ್ತೆ ತನ್ನ ತಂದೆ ತಾಯಿಯರ ಜೊತೆ ಸಂತೋಷವಾಗಿ ಜೀವಿಸಬಲ್ಲ. ದಯವಿಟ್ಟು ನಿಮ್ಮ ಕೈಲಾದಷ್ಟು ಸಹಾಯ ಮಾಡಿ, ಏಕೆಂದರೆ ಪ್ರತಿಯೊಬ್ಬರ ಕೊಡುಗೆಯೂ ಅವನಿಗೆ ಜೀವನದಲ್ಲಿ ಇನ್ನೊಂದು ಅವಕಾಶವನ್ನು ನೀಡಲು ದೊಡ್ಡ ಸಹಾಯವಾಗುವುದು.

ಟಾಪ್ ನ್ಯೂಸ್

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Gove-CM-Meet

Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Snuff: ನಶ್ಯ ತಂದಿಟ್ಟ ಸಮಸ್ಯೆ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.