Liver Cancer: ಯಕೃತ್‌ ಕ್ಯಾನ್ಸರ್‌ನೊಂದಿಗೆ ಬದುಕಲು ಕಾರ್ಯತಂತ್ರಗಳು


Team Udayavani, Jan 12, 2025, 12:30 PM IST

10-liver-cancer

ಯಕೃತ್‌ ಕ್ಯಾನ್ಸರ್‌ಗೆ ತುತ್ತಾಗಿ ಬದುಕುವುದು ರೋಗಿಗೆ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಅಪಾರ ಸವಾಲುಗಳನ್ನು ಒಡ್ಡಬಹುದು. ಆದರೆ ಹೊಂದಾಣಿಕೆಯ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವುದು ಮತ್ತು ನೆರವು ವ್ಯವಸ್ಥೆಗಳನ್ನು ಕಂಡುಕೊಂಡು ಪ್ರಯೋಜನ ಪಡೆದುಕೊಳ್ಳುವ ಮೂಲಕ ಈ ಜೀವನವನ್ನು ಹೆಚ್ಚು ಸಹ್ಯವಾಗಿಸಿಕೊಳ್ಳಬಹುದು.

ಹೊಂದಾಣಿಕೆಯ ಕಾರ್ಯತಂತ್ರಗಳು

  1. ಅರಿವು ಮತ್ತು ಅರ್ಥ ಮಾಡಿಕೊಳ್ಳುವುದು ಯಕೃತ್‌ ಕ್ಯಾನ್ಸರ್‌, ಅದರ ಹಂತಗಳು, ಚಿಕಿತ್ಸೆ ಮತ್ತು ಸಂಭಾವ್ಯ ಫ‌ಲಿತಾಂಶಗಳ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಳ್ಳುವುದರಿಂದ ಈ ಬಗೆಗಿನ ಆತಂಕ, ಅಂಜಿಕೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಕುರಿತಾದ ಸಂಪೂರ್ಣ ಮಾಹಿತಿ ಇದ್ದಲ್ಲಿ ಚಿಕಿತ್ಸೆಯ ಆಯ್ಕೆಗಳ ಬಗ್ಗೆ ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು, ವಾಸ್ತವಿಕ ನಿರೀಕ್ಷೆಗಳನ್ನು ಇರಿಸಿಕೊಳ್ಳಲು ಮತ್ತು ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
  2. ಸಕ್ರಿಯವಾಗಿರುವುದು ದೈಹಿಕ ಚಟುವಟಿಕೆಗಳು, ನಡಿಗೆ ಅಥವಾ ಯೋಗದಂತಹ ಲಘು ಚಟುವಟಿಕೆಗಳು ಕೂಡ ಮನೋಭಾವನೆಯನ್ನು ಚೆನ್ನಾಗಿರಿಸಿಕೊಳ್ಳಲು, ದಣಿವನ್ನು ಕಡಿಮೆ ಮಾಡಲು ಮತ್ತು ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಚಿಕಿತ್ಸೆಯ ಸಂದರ್ಭದಲ್ಲಿ ನಡೆಸಲು ಸೂಕ್ತವಾದ ದೈಹಿಕ ಚಟುವಟಿಕೆಗಳು, ವ್ಯಾಯಾಮಗಳ ಬಗ್ಗೆ ವೈದ್ಯರ ಜತೆಗೆ ಸಮಾಲೋಚಿಸಿಕೊಳ್ಳಬೇಕು.
  3. ಸಂತೃಪ್ತಿ ಮತ್ತು ಮನಶ್ಶಾಂತಿಯ ತಂತ್ರಗಳು ಧ್ಯಾನ, ಆಳವಾದ ಉಸಿರಾಟ ಅಥವಾ ಸ್ನಾಯು ವಿಶ್ರಾಂತಿದಾಯಕ ತಂತ್ರಗಳಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಸಂಕಷ್ಟದ ಸಮಯದಲ್ಲಿ ಈ ತಂತ್ರಗಳು ಬಹಳ ಅಮೂಲ್ಯ ಪ್ರಯೋಜನವನ್ನು ಒದಗಿಸುತ್ತವೆ ಹಾಗೂ ಅನಿರ್ದಿಷ್ಟ ಭವಿಷ್ಯಕ್ಕಿಂತ ಹೆಚ್ಚಾಗಿ ವರ್ತಮಾನದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತವೆ.
  4. ಆರೋಗ್ಯಪೂರ್ಣ ಆಹಾರಕ್ರಮ ಚಿಕಿತ್ಸೆಯನ್ನು ಹೆಚ್ಚು ಚೆನ್ನಾಗಿ ಸಹಿಸಿಕೊಳ್ಳಲು ಆರೋಗ್ಯಪೂರ್ಣವಾದ, ಸಮತೋಲಿತ ಆಹಾರ ಕ್ರಮವನ್ನು ಅನುಸರಿಸುವುದರಿಂದ ಸಾಧ್ಯವಾಗುತ್ತದೆ. ಇದರಿಂದ ಚೇತರಿಸಿಕೊಳ್ಳಲು ಕೂಡ ಸಹಾಯವಾಗುತ್ತದೆ. ಯಕೃತ್ತಿನ ಮೇಲೆ ಹೆಚ್ಚು ಹೊರೆ ಹೊರಿಸದೆಯೇ ಅಗತ್ಯ ಪೌಷ್ಟಿಕಾಂಶಗಳನ್ನು ಪಡೆಯುವುದಕ್ಕಾಗಿ ಎಂತಹ ಆಹಾರ ಕ್ರಮವನ್ನು ಪಾಲಿಸಬೇಕು ಎನ್ನುವ ಬಗ್ಗೆ ಪೌಷ್ಟಿಕಾಂಶತಜ್ಞರ ಬಳಿ ಸಮಾಲೋಚಿಸಿಕೊಳ್ಳಬೇಕು.
  5. ಮುಕ್ತ ಸಮಾಲೋಚನೆ ರೋಗಿ ತನಗಿರುವ ರೋಗ ಲಕ್ಷಣಗಳು, ಅಂಜಿಕೆ-ಆತಂಕಗಳು ಮತ್ತು ಪ್ರಶ್ನೆಗಳ ಬಗ್ಗೆ ಆರೋಗ್ಯ ಸೇವೆ ಒದಗಿಸುವ ತಂಡದವರ ಜತೆಗೆ ಮುಕ್ತವಾಗಿ ಸಂವಾದ ನಡೆಸಬೇಕು. ಇದರಿಂದ ಅತ್ಯುತ್ತಮ ಆರೈಕೆಯನ್ನು ಪಡೆಯಲು ಸಾಧ್ಯವಾ ಗುತ್ತದೆ. ಈ ಮೂಲಕ ರೋಗಿಗೆ ತನ್ನ ಭಾವನಾತ್ಮಕ ಹೋರಾಟವನ್ನು ಕೂಡ ವ್ಯಕ್ತಪಡಿಸಲು ಸಾಧ್ಯವಾಗಿ ಅದಕ್ಕೆ ವೈದ್ಯಕೀಯ ತಂಡವು ತಕ್ಕ ಪರಿಹಾರಗಳನ್ನು ಒದಗಿಸಲು ಸಹಾಯವಾಗುತ್ತದೆ.
  6. ಭಾವನಾತ್ಮಕ ಅಭಿವ್ಯಕ್ತಿ ರೋಗಿ ತನ್ನ ಭಾವನೆಗಳನ್ನು ಅದುಮಿಟ್ಟುಕೊಳ್ಳಬಾರದು. ತನ್ನ ಭಾವನೆಗಳನ್ನು ದಿನಚರಿ ಬರೆಯುವುದು, ಕಲಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅಥವಾ ಗೆಳೆಯ-ಗೆಳತಿಯರ ಜತೆಗೆ ಮಾತನಾಡುವ ಮೂಲಕ ವ್ಯಕ್ತಪಡಿಸಬೇಕು. ಸೈಕೊಥೆರಪಿ ಅಥವಾ ಆಪ್ತ ಸಮಾಲೋಚನೆಯಿಂದ ಕ್ಯಾನ್ಸರ್‌ ನ ಭಾವನಾತ್ಮಕ ಸಂಕೀರ್ಣತೆಗಳನ್ನು ಗೆಲ್ಲಲು ವೃತ್ತಿಪರ ಸಹಾಯವನ್ನು ಒದಗಿಸುತ್ತದೆ.

ನೆರವು ವ್ಯವಸ್ಥೆಗಳು

  1. ಕುಟುಂಬ ಮತ್ತು ಗೆಳೆಯ-ಗೆಳತಿಯರು ರೋಗಿಯ ಆಪ್ತ ಗೆಳೆಯ -ಗೆಳತಿಯರು ಸೂಕ್ತವಾದ ಮಾನಸಿಕ, ಭಾವನಾತ್ಮಕ, ದೈಹಿಕ ಮತ್ತು ಪ್ರಾಯೋಗಿಕವಾದ ಬೆಂಬಲವನ್ನು ನೀಡಬಲ್ಲರು. ರೋಗಿಯ ಕಾರ್ಯಚಟುವಟಿಕೆಗಳಲ್ಲಿ ಅವರು ಸಹಾಯ ಮಾಡಬಲ್ಲರು, ಮಾತನಾಡಬೇಕೆನಿಸಿದಾಗ ಕಿವಿಯಾಗಬಲ್ಲರು, ಆಸ್ಪತ್ರೆ ಭೇಟಿಯ ಸಂದರ್ಭದಲ್ಲಿ ಜತೆಗೂಡಬಲ್ಲರು.
  2. ನೆರವು ಗುಂಪುಗಳು ಅನೇಕ ರೋಗಿಗಳು ತಮ್ಮಂಥದೇ ಸನ್ನಿವೇಶವನ್ನು ಎದುರಿಸುತ್ತಿರುವ ಇತರರ ಸಂಪರ್ಕದಿಂದ ಮನಸ್ಸು ಹಗುರ ಮಾಡಿಕೊಳ್ಳಬಲ್ಲರು. ಪ್ರತ್ಯಕ್ಷವಾದ ಅಥವಾ ಆನ್‌ಲೈನ್‌ ಆಗಿರುವ ಕ್ಯಾನ್ಸರ್‌ ನೆರವು ಗುಂಪುಗಳು ಅರ್ಥ ಮಾಡಿಕೊಳ್ಳುವಿಕೆ, ಅನುಭವ ಹಂಚಿಕೊಳ್ಳುವಿಕೆ ಹಾಗೂ ಬದುಕುಳಿದವರು ಮತ್ತು ಇತರ ರೋಗಿಗಳಿಂದ ಪ್ರಾಯೋಗಿಕ ಸಲಹೆ ಸೂಚನೆಗಳನ್ನು ಒದಗಿಸಬಹುದಾಗಿದೆ. 3. ವೃತ್ತಿಪರ ನೆರವು ಆಂಕಾಲಜಿಸ್ಟ್‌ಗಳು, ದಾದಿಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಉಪಶಾಮಕ ಆರೈಕೆ ತಜ್ಞರು ರೋಗಿಯ ಚಿಕಿತ್ಸೆಯ ಅವಧಿಯುದ್ದಕ್ಕೂ ಮಾರ್ಗದರ್ಶನ ಒದಗಿಸುತ್ತಾರೆ. ದೀರ್ಘ‌ಕಾಲೀನ ಅನಾರೋಗ್ಯ ಹೊಂದಿರುವವರ ನಿರ್ವಹಣೆಯಲ್ಲಿ ತರಬೇತಾಗಿರುವ ಮನೋವೈದ್ಯರು ಅಥವಾ ಆಪ್ತ ಸಮಾಲೋಚಕರು ಹೊಂದಾಣಿಕೆಯ ತಂತ್ರಗಳ ಮೂಲಕ ನೆರವಾಗಬಹುದಾಗಿದೆ.
  3. ಆರ್ಥಿಕ ಮತ್ತು ಕಾನೂನು ನೆರವು ಕ್ಯಾನ್ಸರ್‌ ಚಿಕಿತ್ಸೆಯು ದುಬಾರಿಯಾಗಿರುತ್ತದೆ ಹಾಗೂ ಈ ಸಂಬಂಧಿಯಾದ ಆರೋಗ್ಯ-ಆರೈಕೆ ವ್ಯವಸ್ಥೆಯಿಂದ ಸೇವೆ ಪಡೆಯುವುದು ಸಂಕೀರ್ಣವಾಗಿರುತ್ತದೆ. ಅಮೆರಿಕನ್‌ ಕ್ಯಾನ್ಸರ್‌ ಸೊಸೈಟಿಯಂತಹ ಸಂಸ್ಥೆಗಳು ಆರ್ಥಿಕ ನೆರವು, ಕಾನೂನು ಸಹಾಯ ಮತ್ತು ಸಂಚಾರ ಸಂಬಂಧಿ ವ್ಯವಸ್ಥೆಗಳಿಗೆ ಸಹಾಯ ಮಾಡುತ್ತವೆ. ಸಮುದಾಯದಲ್ಲಿ ಬೆಂಬಲ-ಸಹಾಯವನ್ನು ಪಡೆಯುವುದು ಹಾಗೂ ಸ್ವಯಂ ಆರೈಕೆಯ ಮೇಲೆ ಗಮನ ಕೇಂದ್ರಿಕರಿಸುವ ಮೂಲಕ ರೋಗಿಯು ಹೊಂದಾಣಿಕೆ ಮತ್ತು ವಿಶ್ವಾಸದಿಂದ ಯಕೃತ್‌ ಕ್ಯಾನ್ಸರ್‌ ಇದ್ದೂ ಉತ್ತಮ ಬದುಕನ್ನು ಮುನ್ನಡೆಸಬಹುದಾಗಿದೆ.

-ಮುಂದಿನ ವಾರಕ್ಕೆ

-ಡಾ| ಹರೀಶ್‌ ಇ.,

ಸರ್ಜಿಕಲ್‌ ಆಂಕಾಲಜಿ

ಕೆಎಂಸಿ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಂಕಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

15-relationships

Relationships: ಆನ್‌ಲೈನ್‌ ಪ್ರಪಂಚದಲ್ಲಿ ಸಂಬಂಧಗಳ ಸ್ತಂಭನ

Prabhas: ‘Rajasab’ audio to be released in Japan

Prabhas: ಜಪಾನ್‌ ರಿಲೀಸ್‌ ಆಗಲಿದೆ ʼರಾಜಾಸಾಬ್‌ʼ ಆಡಿಯೋ

Congress: DK Shivakumar will become Chief Minister during this period: MLA Shivaganga

Congress: ಇದೇ ಅವಧಿಯಲ್ಲಿ ಡಿ.ಕೆ.‌ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

Chhattisgarh: ಮೂವರು ನಕ್ಸಲರ ಎನ್‌ಕೌಂಟರ್‌… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್

Champions Trophy: Bangladesh squad announced; two senior players not included

Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ

12-cancer

Breast Cancer: ಸ್ತನಗಳ ಕ್ಯಾನ್ಸರ್‌ ನಿಗಾ ಇರಿಸಬೇಕಾದ ಆರಂಭಿಕ ಲಕ್ಷಣಗಳು

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ‌ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-cancer

Breast Cancer: ಸ್ತನಗಳ ಕ್ಯಾನ್ಸರ್‌ ನಿಗಾ ಇರಿಸಬೇಕಾದ ಆರಂಭಿಕ ಲಕ್ಷಣಗಳು

11-knee-1

Osteoarthritis, Knee Osteoarthritis: ಮೂಳೆ ಸವೆತ ಹಾಗೂ ಮಂಡಿ ಸವೆತ

9-hmpv

HMPV: ಹ್ಯೂಮನ್‌ ಮೆಟಾನ್ಯುಮೊ ವೈರಸ್‌ (ಎಚ್‌ಎಂಪಿವಿ); ಹೊಸ ಆತಂಕವೇನೂ ಅಲ್ಲ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

8(1

Mangaluru ಲಿಟ್‌ ಫೆಸ್ಟ್‌: ಸಾಹಿತ್ಯದ ಹಬ್ಬದಲ್ಲಿ ಬದುಕಿನ ನಾನಾ ಮುಖಗಳ ಅನಾವರಣ

15-relationships

Relationships: ಆನ್‌ಲೈನ್‌ ಪ್ರಪಂಚದಲ್ಲಿ ಸಂಬಂಧಗಳ ಸ್ತಂಭನ

Prabhas: ‘Rajasab’ audio to be released in Japan

Prabhas: ಜಪಾನ್‌ ರಿಲೀಸ್‌ ಆಗಲಿದೆ ʼರಾಜಾಸಾಬ್‌ʼ ಆಡಿಯೋ

14-uv-fusion

UV Fusion: ಕೊಂಕು ಹುಡುಕುವ ಮುನ್ನ…

7

Belman: ಕರಿಯತ್ತಲಗುಂಡಿ ನೇಪಥ್ಯಕ್ಕೆ ಸರಿದ ಅಣೆಕಟ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.