ಒತ್ತಡ ನಿವಾರಿಸುವ ಟ್ರ್ಯಾಂಪೊಲೈನ್
Team Udayavani, Jul 1, 2019, 6:00 AM IST
ಸದ್ಯ ಟ್ರ್ಯಾಂಪೊಲೈನ್ ಮಾದರಿ ವ್ಯಾಯಾಮ ಜನಪ್ರಿಯವಾಗುತ್ತಿದೆ. ಟ್ರ್ಯಾಂಪೊಲೈನ್‌ನಲ್ಲಿ ಜಿಗಿಯುತ್ತಾ ಕೊಬ್ಬು ಕರಗಿಸುವ ವಿಧಾನಕ್ಕೆ ಸೆಲೆಬ್ರಿಟಿಗಳೊಂದಿಗೆ ಸಾಮಾನ್ಯರೂ ಮರುಳಾಗಿದ್ದಾರೆ. ಟ್ರ್ಯಾಂಪೊ ಲೈನ್‌ನಲ್ಲಿ ಅರ್ಧ ಗಂಟೆ ಜಿಗಿಯುವುದರಿಂದ ಸುಮಾರು 160ರಷ್ಟು ಕ್ಯಾಲರಿಯನ್ನು ಕರಗಿಸಬಹುದು ಎನ್ನುತ್ತದೆ ಸಂಶೋಧನೆ. ‘ಒತ್ತಡ ನಿವಾರಣೆಗೆ ಟ್ರ್ಯಾಂಪೊಲೈನ್ ಅತ್ಯತ್ತಮ ಮಾರ್ಗ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರು ಇದನ್ನ್ನು ಅನುಸರಿಸುವುದರಿಂದ ಚಿಂತೆ ದೂರವಾಗಿ ಮನಸ್ಸು ಪ್ರಫುಲ್ಲವಾಗುತ್ತದೆ’ ಎನ್ನುತ್ತಾರೆ ತಜ್ಞೆ ಶಾಲಿನಿ ಭಾರ್ಗವ.
ಅಮೆರಿಕದಲ್ಲಿ ಟ್ರ್ಯಾಂಪೊಲೈನ್ ಪಾರ್ಕ್ ನಿರ್ಮಿಸಲಾಗಿದೆ. ಗಂಟೆಗೆ ಇಂತಿಷ್ಟು ಪಾವತಿಸಿ ಇದರಲ್ಲಿ ಜಿಗಿದು ಬರಬಹುದು. ಇದರಲ್ಲಿ 10 ನಿಮಿಷದ ಜಿಗಿತ ಅರ್ಧ ಗಂಟೆಯ ಓಟಕ್ಕೆ ಸಮ ಎನ್ನುತ್ತದೆ ಸಂಶೋಧನೆ. ಹೊಟ್ಟೆಯ ಬೊಜ್ಜು ಕರಗಿಸಲು ಕುಳಿತು ಮಾಡುವ ಟ್ರ್ಯಾಂಪೊಲೈನ್ ವ್ಯಾಯಾಮದ ವಿಧಾನ ಬಳಸಬಹುದು.
ವ್ಯಾಯಾಮ ಹೇಗೆ?
ಆರಂಭದಲ್ಲಿ ಟ್ರ್ಯಾಂಪೊಲೈನ್ ಸಾಧನದ ಮೇಲೆ ನಿಂತು ನಿಧಾನವಾಗಿ ಜಿಗಿಯಬೇಕು. ಕ್ರಮೇಣ ಜಿಗಿತದ ವೇಗ ಹೆಚ್ಚಿಸಬಹುದು. ಜಿಗಿತ ಮಾತ್ರವಲ್ಲ ಬೇರೆ ಬೇರೆ ವಿಧಾನಗಳಿದ್ದು, ತಜ್ಞರ ಸಲಹೆ ಮೇರೆಗೆ ಇವುಗಳನ್ನು ಪ್ರಯತ್ನಿಸಿ. ಮೊಣಕಾಲು, ಮಂಡಿಗಳಲ್ಲಿ ನೋವು, ಉಸಿರಾಟದ ತೊಂದರೆ ಅನುಭವಕ್ಕೆ ಬಂದರೆ ತತ್‌ಕ್ಷಣ ಜಿಗಿತ ನಿಲ್ಲಿಸಿ.
1 ಟ್ರ್ಯಾಂಪೊಲೈನ್ ಜಿಗಿತದಿಂದ ಆಮ್ಲಜನಕ ಶರೀರದ ತುಂಬೆಲ್ಲಾ ಸರಬರಾಜಾಗುತ್ತದೆ.2 ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ.
3 ರಕ್ತ ಪರಿಚಲನೆಯನ್ನು ವೃದ್ಧಿಸುತ್ತದೆ.
4 ಕುತ್ತಿಗೆ, ಬೆನ್ನು ನೋವನ್ನು ಕಡಿಮೆ ಮಾಡುತ್ತದೆ.
5 ಎಲುಬನ್ನು ದೃಢಗೊಳಿಸುತ್ತದೆ.
6 ಮಾನಸಿಕ ಒತ್ತಡ ನಿವಾರಿಸುತ್ತದೆ.
7 ಕಿಡ್ನಿಯಲ್ಲಿರುವ ಕಲ್ಮಶವನ್ನು ಹೊರ ಹಾಕಲು ನೆರವಾಗುತ್ತದೆ.
8 ಶ್ವಾಸಕೋಶದ ಆರೋಗ್ಯಕ್ಕೆ ಪೂರಕ
••••ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.