ಸಮಯ ಮತ್ತೆ ಮರಳಿ ಸಿಗಲ್ಲ….ಸಮಯ ಪಾಲನೆಯಿಂದ ನಮಗೇನು ಲಾಭ?
ನಿರ್ಧಾರ ಕೈಗೊಳ್ಳಲು, ನಾಯಕತ್ವ ಬೆಳವಣಿಗೆಗೆ, ಸಮಯ ಹೊಂದಿಸಲು, ಸಮಯ ಪಾಲನೆ ತುಂಬಾ ಮುಖ್ಯ.
ಶ್ರೀರಾಜ್ ವಕ್ವಾಡಿ, Jan 22, 2021, 11:36 AM IST
ಪ್ರತಿಯೊಬ್ಬನು ಜೀವನದಲ್ಲಿ ಜಯ ಸಾಧಿಸಬೇಕೆಂದರೇ ಟೈಮ್ ಮ್ಯಾನೇಜ್ ಮೆಂಟ್ ಅನುಸರಿಸಬೇಕು. ಸಮಯವೆಂಬುವುದು ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಕಳೆದು ಹೋಗುತ್ತದೆ. ಮ್ಯಾನೇಜ್ ಮೆಂಟ್ ಅಂದರೆ ಏನು..?
ನಿರ್ಧಾರ ಕೈಗೊಳ್ಳಲು, ನಾಯಕತ್ವ ಬೆಳವಣಿಗೆಗೆ, ಸಮಯ ಹೊಂದಿಸಲು, ಸಮಯ ಪಾಲನೆ ತುಂಬಾ ಮುಖ್ಯ. ಇದು ಎಲ್ಲರೂ ಒಪ್ಪಲೇಬೇಕಾದ ಸತ್ಯ. ಪ್ರತಿ ವ್ಯಕ್ತಿಯನ್ನು ನಿಯಂತ್ರಿಸುವ ಶಕ್ತಿ ಸಮಯಕ್ಕೆ ಮಾತ್ರ ಇದೆ.
ಇದನ್ನೂ ಓದಿ : ದಿನ ಭವಿಷ್ಯ
ಸಮಯವು ಹಣಕ್ಕಿಂತ ಬೆಲೆಯುಳ್ಳದ್ದು. ಹಣ ಹೋದರೆ ಸಂಪಾದಿಸಬಹುದು. ಆದರೇ ಸಮಯದ ವಿಷಯ ಹಾಗಲ್ಲ. ಕಳೆದು ಹೋದ ಸಮಯ ಮತ್ತೆ ಮರಳಿ ಬರಲಾರದು.
ಸರಿಯಾಗಿ ಸಮಯ ಪಾಲನೆ ಮಾಡಿದರೆ ಸ್ಟ್ರೆಸ್(ಒತ್ತಡ) ಇರುವುದಿಲ್ಲ. ಸಮಯದ ಮೇಲೆ ನಮಗೆ ನಿಯಂತ್ರಣ ಇಲ್ಲದಿದ್ದರೇ ಒತ್ತಡ ಸಹಜವಾಗಿ ಉಂಟಾಗುತ್ತದೆ. ಅದು ಮನೆಯಲ್ಲಿ ಆಗಬಹುದು ಅಥವಾ ಹೊರಗಿನ ಕೆಲಸದಲ್ಲಿಯೂ ಆಗಬಹುದು.ನಿತ್ಯ ಜೀವನದಲ್ಲಿ ನಾವು ಒತ್ತಡಕ್ಕೆ ಕಾರಣಗಳನ್ನು ಹುಡುಕಿದರೆ ಅದು ‘ಸಮಯ’ದ ಕಾರಣದಿಂದಲೇ ಎನ್ನುವುದು ಸ್ಪಷ್ಟವಾಗುತ್ತದೆ. ನಮ್ಮ ಬದುಕಿಗೆ ಪ್ರತಿಕೂಲ ವಾತಾವರಣ ಒದಗಿಸಿಕೊಡುವುದೇ ಕಾಲ. ಒತ್ತಡದ ಜೀವನದಿಂದ ಹೊರಬರಲು ಸಮಯ ಪಾಲಿಸುವುದು ಬಹಳ ಮುಖ್ಯ. ಹಾಗಾದರೇ, ಒತ್ತಡದಿಂದ ಹೊರಬರುವುದು ಹೇಗೆ..?
ಇದನ್ನೂ ಓದಿ : ನಿತ್ಯ ಪಂಚಾಂಗ
ಒತ್ತಡದಿಂದ ಹೊರಬರುವುದಕ್ಕೆ ಸುಲಭ ಮಾರ್ಗ ಏನು..?
ಒತ್ತಡವನ್ನು ಎದುರಿಸಲು ನೀವು ಮಾಡಬಹುದಾದ ಪ್ರಮುಖ ಕೆಲಸವೆಂದರೆ ವ್ಯಾಯಾಮ ಮಾಡುವುದು, ದೀರ್ಘವಾದ ಉಸಿರಾಟ ಮಾಡುವುದು. ಉಚ್ವಾಸ, ನಿಚ್ವಾಸ ಮಾಡುವುದು. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದು, ಶಾಂತವಾಗಿ ವರ್ತಿಸುವುದು, ಹಿತಮಿತವಾಗಿ ಮಾತಾಡುವುದು, ನಗುವುದರಿಂದ ನಾವು ಆರಾಮವಾಗಿ ಒತ್ತಡದಿಂದ ಹೊರಬರಲು ಸಾಧ್ಯ.
ಒತ್ತಡದಿಂದ ಹೊರಬಂದ ಮೇಲೆ ನಿಮಗೆ ಸಮಯ ಪಾಲನೆ ಮಾಡಲು ದೊಡ್ಡ ಹೊರೆ ಏನಿಲ್ಲ. ನಿರರ್ಗಳವಾಗಿ ನೀವು ಸಮಯ ಪಾಲನೆಯಿಂದ ಮಾಡಬಹುದು. ಈ ಸಮಯ ಪಾಲನೆಯಿಂದ ನಿಮ್ಮ ವೈಯಕ್ತಿಕ ಬದುಕಿಗೆ ಏನು ಲಾಭ ಸಿಗಬಹುದು..?
ಸಮಯ ಪಾಲನೆಯಿಂದಾಗುವ ಉಪಯೋಗಗಳೇನು..?
- ಸಮಯ ಪಾಲನೆ ಮಾಡಿದರೆ ನಿಮ್ಮ ನಿತ್ಯ ಕೆಲಸದ ಜೊತೆಗೆ ಮತ್ತಷ್ಟು ಕೆಲಸಗಳನ್ನು ನಿರಾಯಾಸವಾಗಿ ಮಾಡಬಹುದು.
- ಸಮತೋಲನ ಜೀವನ ನಡಡೆಸಲು ಸಾಧ್ಯ.
- ನಿಮ್ಮ ಜೀವನದಲ್ಲಿ ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತದೆ.
- ನೀವು ಮತ್ತಷ್ಟು ಶಕ್ತಿವಂತರಾಗುತ್ತೀರಿ.
- ಶಿಸ್ತು ಕ್ರಮ ಪಾಲನೆ ನಿಮ್ಮ ಜೀವನದಲ್ಲಿ ಮತ್ತಷ್ಟು ಅಧಿಕವಾಗುತ್ತದೆ.
- ನೀವು ನಿಮ್ಮ ಕೆಲಸಗಳ ಮೇಲೆ ಮತ್ತಷ್ಟು ಕೇಂದ್ರೀಕರಿಸುತ್ತೀರಿ.
- ನಿಮ್ಮ ಜೀವನದಲ್ಲಿ ಅತ್ಯಂತ ಪ್ರಧಾನವಾದ ಆನಂದಭೂತಿಯನ್ನು ನೀವು ಅನುಭವಿಸುತ್ತೀರಿ.
- ಸಮಯ ಪಾಲನೆಯಿಂದ ನಿಮ್ಮಲ್ಲಿ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚುತ್ತದೆ.
ಇಷ್ಟೆಲ್ಲಾ ಲಾಭಗಳ ಜೊತೆಗೆ ಜೀವನದಲ್ಲಿ ನೆಮ್ಮದಿಯ ನಾಳೆಗಳನ್ನು ಕಾಣಲು ಅನುಕೂಲವಾಗುತ್ತದೆ ಎನ್ನುವುದರಲ್ಲಿ ಸಂಶಯ ಬೇಕಿಲ್ಲ.
–ಶ್ರೀರಾಜ್ ವಕ್ವಾಡಿ
ಇದನ್ನೂ ಓದಿ : ಇಂದು ತೆರೆಗೆ ಐದು ಚಿತ್ರಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.