Dental Treatment:ದಂತ ವೈದ್ಯಕೀಯದಲ್ಲಿ ತಾಂತ್ರಿಕ ಮುನ್ನಡೆಗಳು; ಕೃತಕ ಬುದ್ಧಿಮತ್ತೆಯ ಬಳಕೆ


Team Udayavani, Aug 27, 2023, 10:13 AM IST

3-health

ಜಾಗತಿಕ ಆರೋಗ್ಯ ಸೇವಾ ಕ್ಷೇತ್ರವು ಡಿಜಿಟಲ್‌ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ಡಿಜಿಟಲೀಕೃತ ಆರೋಗ್ಯ ದಾಖಲೆಗಳು, ಡಿಜಿಟಲ್‌ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್‌ ಚಿತ್ರಗಳಿಗೆ ರೋಗಿಗಳು ಸರಾಗವಾಗಿ ಒಗ್ಗಿಕೊಂಡಿದ್ದಾರೆ. ಇನ್ನು ಕೆಲವರು ಕಂಪ್ಯೂಟರೀಕೃತ ದೃಷ್ಟಿ ಪರೀಕ್ಷೆ, ರೋಗಪತ್ತೆ ಮತ್ತು ಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಕೂಡ ಅನುಭವಿಸಿದ್ದಾರೆ.

ಕಾಲ ಮುಂದುವರಿಯುತ್ತಿದ್ದಂತೆ ಕೃತಕ ಬುದ್ಧಿಮತ್ತೆಯು ನಮ್ಮ ಜೀವನದಲ್ಲಿ ಇನ್ನಷ್ಟು ಆಳವಾದ ಪ್ರಭಾವ-ಪರಿಣಾಮಗಳನ್ನು ಉಂಟು ಮಾಡಲಿದೆ. ಚಿಕಿತ್ಸೆಯ ನಿಖರತೆ ಮತ್ತು ಗ್ರಾಹಕರ ಹಿತಾನುಭವವನ್ನು ಇನ್ನಷ್ಟು ಉತ್ತಮಪಡಿಸಲು ದಂತ ವೈದ್ಯಕೀಯ ಕ್ಷೇತ್ರದಲ್ಲಿಯೂ ಕೃತಕ ಬುದ್ಧಿಮತ್ತೆಯು ನಿರ್ಣಾಯಕ ಪಾತ್ರವನ್ನು ವಹಿಸಲಿದೆ.

ದಂತವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಾಮುಖ್ಯ

ಕೃತಕ ಬುದ್ಧಿಮತ್ತೆಯ ಸಾಮರ್ಥ್ಯಗಳನ್ನು ಉಪಯೋಗಿಸಿಕೊಳ್ಳುವಲ್ಲಿ ದಂತ ವೈದ್ಯಕೀಯ ಕ್ಷೇತ್ರವು ಸದಾ ಮುಂಚೂಣಿಯಲ್ಲಿದೆ. ಇತರ ತಜ್ಞರಿಗೆ ಹೋಲಿಸಿದರೆ ದಂತ ವೈದ್ಯಕೀಯ ಕ್ಷೇತ್ರದಲ್ಲಿ ನಡೆಸಲಾಗುವ ಬಹುತೇಕ ಎಕ್ಸ್‌-ರೇಗಳನ್ನು ಕೃತಕ ಬುದ್ಧಿಮತ್ತೆ ವ್ಯವಸ್ಥೆಗೆ ಆರೋಗ್ಯಯುತ ಮತ್ತು ಅನಾರೋಗ್ಯಯುತ ಹಲ್ಲುಗಳ ನಡುವಣ ವ್ಯತ್ಯಾಸವನ್ನು ಗುರುತಿಸುವುದಕ್ಕೆ ಉಪಯೋಗಿಸಲಾಗುತ್ತಿದೆ.

ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಮಾಹಿತಿಗಳನ್ನು ಮನುಷ್ಯನ ಮಿದುಳಿನಂತೆಯೇ ಉಪಯೋಗಿಸುತ್ತವೆ – ವಸ್ತುಗಳ ಗುಣಲಕ್ಷಣಗಳನ್ನು ಗುರುತಿಸಲು ಕನೊÌಲೂಶನಲ್‌ ನ್ಯೂರಲ್‌ ಜಾಲವನ್ನು ಕಂಪ್ಯುಟೇಶನಲ್‌ ಮಾದರಿಯಾಗಿ ಉಪಯೋಗಿಸುತ್ತದೆ. ಕೃತಕ ಬುದ್ಧಿಮತ್ತೆಯು ತನ್ನ ಯಶಸ್ಸನ್ನು ಮನುಷ್ಯ ಮುಖ ಚಹರೆಗಳನ್ನು ಗುರುತಿಸುವಲ್ಲಿ ಬಳಸಿಕೊಳ್ಳುವ ಅವಕಾಶ ಹೊಂದಿದೆ (ಮಾಸಿದ ಅಥವಾ ಭಾಗಶಃ ಕಾಣಿಸುತ್ತಿರುವವುಗಳನ್ನು ಕೂಡ)- ಇದನ್ನು ಭಾಗಶಃ ಕಾಣಿಸುವ ಅಥವಾ ನಿರ್ದಿಷ್ಟ ಕೋನದಿಂದ ಮಾತ್ರ ಕಾಣಿಸುವ ಸಮಸ್ಯೆಗಳನ್ನು ಗುರುತಿಸಲು ಉಪಯೋಗಿಸಿಕೊಳ್ಳಬಹುದಾಗಿದೆ.

ವಿವಿಧ ದಂತ ಅನಾರೋಗ್ಯಗಳನ್ನು ಗುರುತಿಸಲು ಮತ್ತು ಚಿಕಿತ್ಸೆಯ ಪ್ರಕ್ರಿಯೆಯಲ್ಲಿ ನೆರವಾಗಲು ಕೃತಕ ಬುದ್ದಿಮತ್ತೆಯನ್ನು ದಂತವೈದ್ಯರಿಗಿಂತಲೂ ಪರಿಣಾಮಕಾರಿಯಾಗಿ ಉಪಯೋಗವಾಗುವಂತೆ ರೂಪಿಸುವುದು ಸಾಧ್ಯವಿದೆ. ರೋಗಪತ್ತೆ ಮತ್ತು ಶಿಫಾರಸಾದ ಚಿಕಿತ್ಸೆಯ ವಿಚಾರದಲ್ಲಿ ಅಂತಿಮ ನಿರ್ಧಾರವು ದಂತವೈದ್ಯರದಾದರೂ ಕೃತಕ ಬುದ್ಧಿಮತ್ತೆಯು ಅರ್ಥ ಮಾಡಿಕೊಳ್ಳಲು ಸುಲಭಸಾಧ್ಯವಾದ ಮತ್ತು ದೃಶ್ಯ ಮಾಹಿತಿಗಳನ್ನು ವಾಸ್ತವ ಕಾಲದಲ್ಲಿ ಒದಗಿಸಬಲ್ಲುದಾಗಿದೆ.

ದಂತ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು

ಕೃತಕ ಬುದ್ಧಿಮತ್ತೆಯು ವರ್ಚುವಲ್‌ ಸೆಟ್‌ಅಪ್‌ನಲ್ಲಿ ವಸ್ತು-ವಿಷಯಗಳ ದೃಶ್ಯ ವಿಚಾರ ಮತ್ತು ಸೌಂದರ್ಯಕ್ಕೆ ಸದ್ಯ ಸೀಮಿತವಾಗಿದೆ. ಆದರೆ ರೋಗಿ ಜನಸಂಖ್ಯೆ, ಚಿಕಿತ್ಸೆ ಮತ್ತು ಔದ್ಯಮಿಕ ಅಗತ್ಯಗಳಲ್ಲಿ ಇದನ್ನು ವಿವಿಧ ಆಯಾಮಗಳಲ್ಲಿ ಉಪಯೋಗಿಸಿಕೊಳ್ಳುವುದಕ್ಕೆ ಅಪಾರವಾದ ಅವಕಾಶ ಇದೆ. ದಂತವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಪ್ರಮುಖ ಪ್ರಯೋಜನಗಳು ಹೀಗಿವೆ:

ಉತ್ತಮ ಫ‌ಲಿತಾಂಶಗಳು

ಕೃತಕ ಬುದ್ಧಿಮತ್ತೆಯನ್ನು ದಂತವೈದ್ಯಕೀಯ ಚಿಕಿತ್ಸೆಯಲ್ಲಿ ಉಪಯೋಗಿಸುವುದರಿಂದ ಉತ್ತಮ ಫ‌ಲಿತಾಂಶಗಳು ಮತ್ತು ವೈಫ‌ಲ್ಯ ಕಡಿಮೆಯಾಗುವುದಕ್ಕೆ ಸಾಧ್ಯವಿದೆ. ಪರಿಣಾಮವಾಗಿ ದಂತವೈದ್ಯರು ಕೃತಕ ಬುದ್ಧಿಮತ್ತೆಯನ್ನು ನೆರವು ವ್ಯವಸ್ಥೆಯಾಗಿ ಇರಿಸಿಕೊಂಡು ತಾವು ರೋಗಿ ಆರೈಕೆ ಮತ್ತು ಚಿಕಿತ್ಸೆಯತ್ತ ಸಂಪೂರ್ಣವಾಗಿ ಗಮನ ಹರಿಸುವುದು ಸಾಧ್ಯವಾಗಲಿದೆ. ಪ್ರೊಸ್ಥೆಟಿಕ್ಸ್‌ನಲ್ಲಾಗಲೀ ಆರ್ಥೊಡಾಂಟಿಕ್‌ ಚಿಕಿತ್ಸೆಯಲ್ಲಾಗಲೀ; ಮನುಷ್ಯ ಮಧ್ಯಪ್ರವೇಶ ಕಡಿಮೆಯಾಗುವುದರಿಂದ ನಿಖರ ಫ‌ಲಿತಾಂಶಗಳು ಒದಗುತ್ತವೆ.

ಸ್ವೀಕಾರಾರ್ಹತೆ ವೃದ್ಧಿ

ರೋಗಿಗಳಲ್ಲಿ ತಿಳಿವಳಿಕೆ ಮತ್ತು ಸ್ವೀಕಾರಾರ್ಹತೆಯನ್ನು ಕೃತಕ ಬುದ್ಧಿಮತ್ತೆಯ ಬಳಕೆಯು ಹೆಚ್ಚಿಸುತ್ತದೆ. ರೋಗಿಗಳಲ್ಲಿ ಇರಬಹುದಾದ ಆರಂಭಿಕ ಆತಂಕ ಮತ್ತು ಚಿಂತೆಯನ್ನು ಅದು ಕಡಿಮೆ ಮಾಡುತ್ತದೆ. ವರ್ಚುವಲ್‌ ಸೆಟ್‌ಅಪ್‌ ಗಳು ಚಿಕಿತ್ಸೆಯ ಪ್ರಾರಂಭಕ್ಕೂ ಮುನ್ನವೇ ಫ‌ಲಿತಾಂಶಗಳನ್ನು ಚಿತ್ರಣವಾಗಿ ತೋರಿಸುವುದಕ್ಕೆ ನೆರವಾಗುತ್ತವೆ.

ಚಿಕಿತ್ಸೆ ಒದಗಿಸುವ ಸಮಯ ಇಳಿಕೆ

3 ಆಯಾಮದ ಡಿಜಿಟಲ್‌ ನೆರವು ಮತ್ತು ಪೋರ್ಟಲ್‌ ಗಳಿಂದಾಗಿ ದಂತವೈದ್ಯರಿಗೆ ಚಿಕಿತ್ಸೆಯ ಸಮಯವನ್ನು ಶೇ. 50ರಷ್ಟು ತಗ್ಗಿಸುವುದಕ್ಕೆ ಸಾಧ್ಯವಾಗಿದೆ. ದಂತವೈದ್ಯರು ಕ್ಷಿಪ್ರ ಮತ್ತು ಉತ್ತಮ ಫ‌ಲಿತಾಂಶವನ್ನು ಒದಗಿಸುವುದರಿಂದಾಗಿ ರೋಗಿಗಳ ಫಾಲೊಅಪ್‌ ಕೂಡ ಕಡಿಮೆಯಾಗಲು ಸಾಧ್ಯ.

ದಂತವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಗೆ ಸವಾಲುಗಳು

ದಂತ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯು ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ದಂತವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಎದುರಿಸುತ್ತಿರುವ ಸವಾಲುಗಳು ಈ ಕೆಳಗಿನಂತಿವೆ.

ತಪ್ಪು ಗ್ರಹಿಕೆಗಳು

ಇತರ ವೈದ್ಯಕೀಯ ಕ್ಷೇತ್ರಗಳಂತೆ ಕೃತಕ ಬುದ್ಧಿಮತ್ತೆಯು ದಂತವೈದ್ಯರ ಉದ್ಯೋಗವನ್ನು ಕಸಿದುಕೊಳ್ಳುವುದಿಲ್ಲ. ಬದಲಾಗಿ, ಅದು ಸಕ್ರಿಯ ಸಹಾಯಕನಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ, ಎಕ್ಸ್‌-ರೇ ಓದುವುದು ಅಂದರೆ ಅನ್ವಯಿಸಿ ಅರ್ಥ ಮಾಡಿಕೊಳ್ಳುವುದು ದಂತ ವೈದ್ಯಕೀಯ ಕ್ಷೇತ್ರದ ಒಂದು ಪುಟ್ಟ ಭಾಗ. ಉತ್ತಮ ಫ‌ಲಿತಾಂಶಕ್ಕಾಗಿ ಕೃತಕ ಬುದ್ಧಿಮತ್ತೆಯ ಸಹಾಯವನ್ನು ಇದಕ್ಕಾಗಿ ಪಡೆಯುವುದು ಎಂದರೆ ಭೂತಗನ್ನಡಿಯನ್ನು ಉಪಯೋಗಿಸಿದಂತೆ.

ಸೀಮಿತ ಜ್ಞಾನ

ದಂತ ವೈದ್ಯರು ರೋಗಿ ಆರೈಕೆ ಮತ್ತು ಚಿಕಿತ್ಸೆಯ ಬಗ್ಗೆ ಮಾತ್ರ ಗಮನ ಹರಿಸುವುದರಿಂದ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯು ಉತ್ತಮ ಫ‌ಲಿತಾಂಶ ಒದಗಿಸುವುದಕ್ಕೆ ಕಾರಣವಾಗಬಲ್ಲುದು. ಆದರೆ ಇದಕ್ಕಾಗಿ ದಂತ ವೈದ್ಯರು ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯ ಬಳಕೆ, ಸಾಮರ್ಥ್ಯ ಮತ್ತು ಮಿತಿಗಳ ಬಗ್ಗೆ ಹೆಚ್ಚು ತಿಳಿವಳಿಕೆ ಉಳ್ಳವರಾಗಬೇಕು. ಪ್ರಸ್ತುತ ಸ್ಥಿತಿಗತಿಯಲ್ಲಿ ಕೃತಕ ಬುದ್ಧಿಮತ್ತೆ ಸಲಕರಣೆಗಳ ಬಗ್ಗೆ ಮತ್ತು ಅವುಗಳ ಉಪಯೋಗದ ಬಗ್ಗೆ ಜ್ಞಾನದ ಕೊರತೆಯಿದೆ.

ಸದ್ಯೋಭವಿಷ್ಯದಲ್ಲಿಯೇ ದಂತವೈದ್ಯಕೀಯ ಕುರ್ಚಿಯಲ್ಲಿ ಕುಳಿತ ರೋಗಿಗಳು ಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆಯ ಇರವಿನ ಹಿತಾನುಭವವನ್ನು ಪಡೆಯಲಿದ್ದಾರೆ. ದಂತವೈದ್ಯಕೀಯ ಕೃತಕ ಬುದ್ಧಿಮತ್ತೆ ಸಾಧನ-ವ್ಯವಸ್ಥೆಗಳು ಪ್ರಸ್ತುತ ಇರುವ ಕುಂದುಕೊರತೆಗಳನ್ನು ಪರಿಹರಿಸಿಕೊಂಡು ರೋಗಿಗಳ ಒಟ್ಟಾರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮಗಳನ್ನು ಉಂಟು ಮಾಡಲಿವೆ. ದಂತವೈದ್ಯಕೀಯ ಕ್ಷೇತ್ರ ಮತ್ತು ಒಟ್ಟಾರೆಯಾಗಿ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯ ಸ್ಥಾನವನ್ನು ಆಕ್ರಮಿಸಿ ಡಿಜಿಟಲ್‌ ಕ್ರಾಂತಿಗೆ ಕಾರಣವಾಗುವ ಎಲ್ಲ ಅವಕಾಶಗಳು ಕೃತಕ ಬುದ್ಧಿಮತ್ತೆಗೆ ಇವೆ.

ಡಾ| ಆನಂದದೀಪ್‌ ಶುಕ್ಲಾ, ಅಸೋಸಿಯೇಟ್‌ ಪ್ರೊಫೆಸರ್‌,

ಓರಲ್‌ ಸರ್ಜರಿ ವಿಭಾಗ, ಎಂಸಿಒಡಿಎಸ್‌, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓರಲ್‌ ಸರ್ಜರಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.