ರಕ್ತಹೀನತೆಗೆ ಕಾರಣವಾಗುವ ತಲಸ್ಸೇಮಿಯಾ
Team Udayavani, May 7, 2019, 7:30 AM IST
ತಲ್ಸೇಮಿಯಾ ಆನುವಂಶಿಕವಾಗಿ ಬರುವ ಕಾಯಿಲೆಗಳಲ್ಲಿ ಒಂದು. ತಲಸ್ಸೇಮಿಯಾದಿಂದ ಬಳಲುತ್ತಿರುವವರಿಗೆ ರೋಗದ ವಿರುದ್ಧ ಹೋರಾಡಲು ಪ್ರೋತ್ಸಾಹ ನೀಡಲು ಹಾಗೂ ಇದರ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮೇ 8ರಂದು ವಿಶ್ವಾದ್ಯಂತ ತಲಸ್ಸೇಮಿಯಾ ದಿನವನ್ನು ಆಚರಿಸಲಾಗುತ್ತದೆ.
ಏನಿದು ತಲಸ್ಸೇಮಿಯಾ?
ಆನುವಂಶಿಕವಾಗಿ ಹರಡುವ ರಕ್ತದ ಕಾಯಿಲೆ ತಲಸ್ಸೇಮಿಯಾ. ಇದು ದೇಹದ ಅಸಹಜ ರೂಪಕ್ಕೆ ಕಾರಣವಾಗುತ್ತದೆ ಅಥವಾ ಅಸಮರ್ಪಕ ಪ್ರಮಾಣದ ಹಿಮೋಗ್ಲೋಬಿನ್ ಅನ್ನು ಉಂಟು ಮಾಡುತ್ತದೆ. ಹಿಮೋಗ್ಲೋಬಿನ್ ಕೆಂಪು ರಕ್ತ ಕಣದಲ್ಲಿ ಆಮ್ಲಜನಕವನ್ನು ಹೊಂದಿರುವ ಪ್ರೊಟೀನ್ ಆಗಿದೆ. ಇದು ಕೆಂಪು ರಕ್ತ ಕಣಗಳನ್ನು ನಾಶಗೊಳಿಸಿ ರಕ್ತಹೀನತೆಗೆ ಕಾರಣವಾಗುತ್ತದೆ. ತಲಸ್ಸೇಮಿಯಾದಿಂದ ಬಳಲುತ್ತಿರುವವರು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು ಮತ್ತು ಶಿಫಾರಸು ಮಾಡಿರುವ ವ್ಯಾಕ್ಸಿನೇಷನ್‌ಗಳನ್ನು ಪಡೆಯುವುದು ಅಗತ್ಯ.
ಕಾರಣ
ಹಿಮೋಗ್ಲೋಬಿನ್ ಅಲ್ಫಾ ಮತ್ತು ಬೀಟಾ ಗ್ಲೋಬಿನ್ ಎಂಬ ಎರಡು ಪ್ರೊಟೀನ್‌ಗಳಿಂದ ರಚಿಸಲ್ಪಟ್ಟಿದೆ. ಇದರಲ್ಲಿ ಯಾವುದಾದರೊಂದು ಪ್ರೊಟೀನ್ ಉತ್ಪಾದನೆ ನಿಯಂತ್ರಿಸುವ ಜೀನ್‌ನಲ್ಲಿ ದೋಷ ಕಂಡುಬಂದಾಗ ತಲಸ್ಸೇಮಿಯಾ ಕಂಡುಬರುತ್ತದೆ. ಇದು ಹಿಮೋಗ್ಲೋಬಿನ್ ಮತ್ತು ಆರೋಗ್ಯಕರ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅಡ್ಡಿಯಾಗುತ್ತದೆ.
ಎರಡು ವಿಧಗಳು
ಅಲ್ಫಾ ಮತ್ತು ಬೀಟಾ ತಲಸ್ಸೇಮಿಯಾದಲ್ಲಿ ಎರಡು ವಿಧಗಳಿದ್ದು ತಲಸ್ಸೇಮಿಯಾ ಮೇಜರ್ ಮತ್ತು ತಲ್ಸೇಮಿಯಾ ಮೈನರ್. ತಲಸ್ಸೇಮಿಯಾ ಮೇಜರ್ ತಂದೆ, ತಾಯಿಯಿಂದ ದೋಷಯುಕ್ತ ಜಿನ್ ಸ್ವೀಕರಿಸಿದರೆ ಬರುವಂಥದ್ದು.
ರೋಗಲಕ್ಷಣಗಳು
ಆಯಾಸ, ದುರ್ಬಲತೆ, ತೆಳು ಅಥವಾ ಹಳದಿ ಚರ್ಮ, ಮುಖದ ಮೂಳೆ ವಿರೂಪಗಳು, ನಿಧಾನ ಬೆಳವಣಿಗೆ, ಕಿಬ್ಬೊಟ್ಟೆಯ ಊತ, ಕಡು ಮೂತ್ರ.
ತಡೆಗಟ್ಟುವಿಕೆ
ಹೆತ್ತವರು ತಲಸ್ಸೇಮಿಯಾ ಹೊಂದಿದ್ದರೆ ಮಗು ಪಡೆಯುವ ಮೊದಲು ಅನುವಂಶಿಕ ಸಲಹೆಗಾರರನ್ನು ಭೇಟಿ ಅವರ ಸಲಹೆ ಪಡೆಯುವುದು ಮುಖ್ಯ.
–ರಮ್ಯಾ ಕೆದಿಲಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.