ಥಂಡಾ ಥಂಡಾ ಕೂಲ್ ಕೂಲ್!
Team Udayavani, Mar 6, 2019, 12:30 AM IST
ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಎಷ್ಟು ನೀರು ಕುಡಿದರೂ ದಾಹ ತಣಿಯುತ್ತಿಲ್ಲ. ಸಿಹಿ, ಸಿಹಿಯ ಪಾನೀಯಗಳನ್ನು ಮನಸ್ಸು ಬಯಸುತ್ತಿದೆ. ತಾಜಾ ಹಣ್ಣಿನ ಜ್ಯೂಸ್‌ಗಳು ಬಾಯಾರಿಕೆ ತಣಿಸುವುದಷ್ಟೇ ಅಲ್ಲ, ಬೇಸಿಗೆಯಲ್ಲಿ ನಮ್ಮ ಆರೋಗ್ಯವನ್ನೂ ಚೆನ್ನಾಗಿಡುತ್ತವೆ. ಜ್ಯೂಸ್ ಕುಡಿಯಲು ಜ್ಯೂಸ್ ಸೆಂಟರ್‌ಗೆ ಹೋಗಬೇಕಲ್ಲ ಎನ್ನಬೇಡಿ; ತುಂಬ ಸುಲಭವಾಗಿ ಮನೆಯಲ್ಲೇ ಸ್ವಾದಿಷ್ಟ ಪಾನೀಯಗಳನ್ನು ತಯಾರಿಸಬಹುದು. ಅಂಥ ಕೆಲವು ಜ್ಯೂಸ್‌ಗಳ ರೆಸಿಪಿ ಇಲ್ಲಿದೆ.
1. ಅನಾನಸ್ ಮಿಲ್ಕ್ ಶೇಕ್
ಬೇಕಾಗುವ ಸಾಮಗ್ರಿ: ಅನಾನಸ್ ತುಣುಕು- 2 ಕಪ್, ಕ್ಯಾರೆಟ್ ತುಣುಕು- 1 ಕಪ್, ಬಾಳೆಹಣ್ಣು- 1, ಹಾಲು- 1/2 ಕಪ್
ಮಾಡುವ ವಿಧಾನ: ಅನಾನಸ್ ಮತ್ತು ಕ್ಯಾರೆಟ್ ತುಣುಕುಗಳನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಬಾಳೆಹಣ್ಣನ್ನು ಕಿವುಚಿ, ಹಾಲಿನೊಂದಿಗೆ ಸೇರಿಸಿ, ಪೇಸ್ಟ್ ಮಾಡಿ. ಎರಡೂ ಬಗೆಯ ಪೇಸ್ಟ್‌ಅನ್ನು ಸರಿಯಾಗಿ ಬೆರೆಸಿದರೆ ಅನಾನಸ್ ಮಿಲ್ಕ್ ಶೇಕ್ ರೆಡಿ.
2. ಮಾವು-ಕ್ಯಾರೆಟ್ ಜ್ಯೂಸ್
ಬೇಕಾಗುವ ಸಾಮಗ್ರಿ: ಮಾವಿನ ಹಣ್ಣು- 2, ಜೇನುತುಪ್ಪ- 1 ಚಮಚ (ಸಕ್ಕರೆಯ ಬದಲು) ಕ್ಯಾರೆಟ್- 2
ಮಾಡುವ ವಿಧಾನ : ಮಾವಿನ ಹಣ್ಣು ಮತ್ತು ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆಯಿರಿ. ಕ್ಯಾರೆಟ್‌ನ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಅದನ್ನು ಮಾವಿನ ಹಣ್ಣಿನ ಜೊತೆ ಸೇರಿಸಿ, ಮಿಕ್ಸಿಯಲ್ಲಿ ರುಬ್ಬಿ. ಆ ಮಿಶ್ರಣಕ್ಕೆ ಜೇನುತುಪ್ಪ ಬೆರೆಸಿ, ಸಮನಾಗಿ ಕಲಕಿದರೆ ಸ್ವಾದಿಷ್ಟಕರವಾದ ಜ್ಯೂಸ್ ಸಿದ್ಧ.
3. ದಾಳಿಂಬೆ ಜ್ಯೂಸ್
ಬೇಕಾಗುವ ಸಾಮಗ್ರಿ: ದಾಳಿಂಬೆ ಕಾಳು- ಒಂದು ಕಪ್, ಲಿಂಬೆರಸ- ಎರಡು ಚಮಚ, ಪುದೀನಾ ಸೊಪ್ಪು, ಸಕ್ಕರೆ, ಕಾಳುಮೆಣಸಿನ ಪುಡಿ- 1/2 ಚಮಚ.
ಮಾಡುವ ವಿಧಾನ: ದಾಳಿಂಬೆ ಕಾಳನ್ನು, ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ಸ್ವಲ್ಪ ನೀರು ಬೆರೆಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಲಿಂಬೆರಸ, ಕಾಳುಮೆಣಸಿನ ಪುಡಿ ಬೆರೆಸಿ, ಪುದೀನಾ ಎಲೆಯನ್ನು ಉದುರಿಸಿ. (ರುಬ್ಬುವಾಗಲೇ ಪುದೀನಾ ಸೊಪ್ಪನ್ನು ಸೇರಿಸಬಹುದು)
4. ಕ್ಯಾರೆಟ್-ಬೀಟ್‌ರೂಟ್ ಜ್ಯೂಸ್
ಬೇಕಾಗುವ ಸಾಮಗ್ರಿ: ಕ್ಯಾರೆಟ್- 1, ಬೀಟ್‌ರೂಟ್- 2, ಕಪ್ಪುದ್ರಾಕ್ಷಿ- 15, ಸಕ್ಕರೆ/ ಜೇನುತುಪ್ಪ, ನೀರು
ಮಾಡುವ ವಿಧಾನ: ಕ್ಯಾರೆಟ್ ಹಾಗೂ ಬೀಟ್‌ರೂಟ್ ತುರಿದು, ದ್ರಾಕ್ಷಿಯ ಜೊತೆ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಿಮಗೆ ಬೇಕಾದಷ್ಟು ನೀರು ಸೇರಿಸಿ. ಅದನ್ನು ಸೋಸಿ, ಜೇನುತುಪ್ಪ ಅಥವಾ ಸಕ್ಕರೆ ಹಾಕಿ, ಕರಗಿಸಿ. ಈ ಜ್ಯೂಸ್‌ನಲ್ಲಿ ಝಿಂಕ್ ಹಾಗೂ ವಿಟಮಿನ್ ಎ ಅಧಿಕವಾಗಿದ್ದು, ಬೇಸಿಗೆಯಲ್ಲಿ ಕೂದಲು ಉದುರುವ ಸಮಸ್ಯೆಯನ್ನು ತಡೆಯಬಲ್ಲದು.
ಭಾಗ್ಯಶ್ರೀ, ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.