ಕೋವಿಡ್‌ನಿಂದ ಗುಣಮುಖರಾದವರಲ್ಲಿ ಹೈಪೊಗ್ಲಿಂಸಿಯಾ ಭೀತಿ!
Team Udayavani, Feb 21, 2022, 1:06 PM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಕೋವಿಡ್‌ನಿಂದ ಗುಣಮುಖ ಹೊಂದಿರುವವರಲ್ಲಿ ಸುಸ್ತು ಹಾಗೂ ಹಸಿವಿನ ಕೊರತೆ ಎದ್ದು ಕಾಣುತ್ತಿದ್ದು, ಅವರಲ್ಲಿ ರಕ್ತ ದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತಿರುವುದು ವರದಿಯಾಗಿದೆ.
ರಾಜ್ಯಾದ್ಯಂತ ಕೊರೊನಾ ಮೂರನೇ ಅಲೆ 2021ರ ಡಿ.27ರಿಂದ ಪ್ರಾರಂಭಗೊಂಡು 2022ರಜನವರಿ ಅಂತ್ಯದ ವರೆಗೆ ಸರಾಸರಿ ನಿತ್ಯ 40,000ಕ್ಕೂ ಮಿಕ್ಕಿದ ಪ್ರಕರಣಗಳು ದಾಖಲಾಗಿತ್ತು. ಅನಂತರ ಎಷ್ಟು ಶೀಘ್ರವಾಗಿ ಸೋಂಕು ಹರಡಿತ್ತೋಅಷ್ಟೇ ವೇಗವಾಗಿ ತಗ್ಗಿದೆ. ಇದೀಗ 3ನೇ ಅಲೆಯಲ್ಲಿಸೋಂಕಿಗೆ ಒಳಗಾದವ ರಲ್ಲಿ ಅನೇಕರು ರಕ್ತದಲ್ಲಿಸಕ್ಕರೆ ಅಂಶ ಕಡಿಮೆ ಇರುವುದುಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ.
ಸೋಂಕಿನಿಂದ ಗುಣಮುಖ ಹೊಂದಿರುವ ರೋಗಿ ಗಳಲ್ಲಿ ಸುಸ್ತು ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಂತಹವರ ರಕ್ತವನ್ನು ಪರಿಶೀಲಿಸಿ ದಾಗ ಅವರ ರಕ್ತದಲ್ಲಿ ಸಕ್ಕರೆ ಪ್ರಮಾಣ ತೀವ್ರ ಕಡಿಮೆಯಾಗಿದೆ.
ಗುಣಮುಖ ಹೊಂದಿರುವ ಸೋಂಕಿತರ ರಕ್ತದಲ್ಲಿ ಸಕ್ಕರೆ ಅಂಶ 70ಎಂಜಿ/ಡಿಎಲ್ ಇಳಿಕೆ ಯಾಗುತ್ತಿದೆ. ಇಂತಹ ಸಮಸ್ಯೆಗಳುಸೋಂಕಿನಿಂದ ಗುಣಮುಖರಾದವರಲ್ಲಿ ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ.
ಕೊರೊನಾ ಒಂದನೇ ಹಾಗೂ ಎರಡನೇ ಅಲೆಯಲ್ಲಿ ತೀವ್ರವಾಗಿ ಕೋವಿಡ್ ಸೋಂಕಿಗೆಒಳಗಾದವರಲ್ಲಿ ಏಕಾಏಕಿ ಮಧುಮೇಹಕಾಣಿಸಿಕೊಂಡಿರುವುದು ಹಾಗೂ ಮೊದಲಿನಿಂದಲೇಮಧುಮೇಹದಿಂದ ಬಳಲುತ್ತಿರುವ ರೋಗಿಗಳಲ್ಲಿಏಕಾಏಕಿ ರಕ್ತದಲ್ಲಿನ ಸಕ್ಕರೆ ಪ್ರಮಾಣಹೆಚ್ಚಾಗಿರುವುದು ವರದಿಯಾಗಿತ್ತು. ಆದರೆ, ಮೂರನೇ ಅಲೆಯಲ್ಲಿ ಸೋಂಕಿತರಿಗೆ ಹಿಂದೆರಕ್ತದಲ್ಲಿ ಕಡಿಮೆ ಸಕ್ಕರೆ ಪ್ರಮಾಣ ಕಡಿಮೆ ಇಲ್ಲದವರಲ್ಲಿ ಹೈಪೊಗ್ಲಿಂಸಿಯಾ ಕಂಡು ಬರುತ್ತಿದೆ.
ಕಾರಣವೇನು?: ಕೋವಿಡ್ 3ನೇ ಅಲೆಯಲ್ಲಿ ಸೋಂಕಿಗೆ ಒಳಗಾದವರಲ್ಲಿ ಹೆಚ್ಚಿನವರಿಗೆ ಗಂಟಲುನೋವು ಲಕ್ಷಣ ಕಾಣಿಸಿಕೊಂಡಿದೆ. ಈ ವೇಳೆ ರೋಗಿಗಳು ಆಹಾರ ಸೇವನೆಯ ಪ್ರಮಾಣ ತೀವ್ರ ಕಡಿಮೆಮಾಡಿದ್ದಾರೆ. ಇನ್ನು ಕೆಲವರಿಗೆ ಹಸಿವಿನ ಕೊರತೆಯಿಂದ ಬಳುತ್ತಿರುವವರು ಸರಿಯಾಗಿ ಆಹಾರ ಸೇವಿಸದೆ ಇರುವುದು ರಕ್ತದಲ್ಲಿನ ಸಕ್ಕರೆ ಅಂಶಕುಸಿತಕ್ಕೆ ಕಾರಣ. ಜತೆಗೆ ರೋಗಿಯು ಒಂದೇ ಔಷಧವನ್ನು ನಿರಂತರವಾಗಿ ತೆಗೆದುಕೊಳ್ಳುವ ಸಮಯದಲ್ಲಿ ಪೌಷ್ಠಿಕಾಂಶ ಭರಿತ ಆಹಾರ ಸೇವನೆ ಮಾಡದೆ ಇರುವವರಲ್ಲಿ ಹೈಪೊಗ್ಲಿಂಸಿಯಾವರದಿಯಾಗುತ್ತಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಮುನ್ನೆಚ್ಚರಿಕೆಕ್ರಮಗಳೇನು? :
ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಇರುವವರುಕಡ್ಡಾಯವಾಗಿ ಉತ್ತಮ ಹಾಗೂ ಆರೋಗ್ಯಕರ ಆಹಾರ ಸೇವಿಸ ಬೇಕು. ಇದರಲ್ಲಿ ಪ್ರೋಟಿನ್‌ಅಂಶ ಹೊಂದಿರುವ ವಿವಿಧ ಹಣ್ಣು ಹಾಗೂ ತರಕಾರಿಗಳನ್ನು ಸೇವನೆ ಮಾಡಬೇಕು. ಸೇಬು,ಒಣ ದ್ರಾಕ್ಷಿ ಸೇರಿ ಪೌಷ್ಠಿಕಾಂಶ ಭರಿತ ಆಹಾರ ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆಅಂಶವನ್ನು ಸಮತೋಲನ ಕಾಪಾಡಿಕೊಳ್ಳಬಹುದಾಗಿದೆ.
3ನೇ ಅಲೆಯಲ್ಲಿ ಸೋಂಕಿನಿಂದ ಗುಣಮುಖರಾದ ಕೆಲ ಸೋಂಕಿತರಲ್ಲಿ ಹಸಿವಿನ ಕೊರತೆ ಹಾಗೂ ಅಪೌಷ್ಟಿಕ ಆಹಾರ ಸೇವನೆಯಿಂದ ಹಾಗೂರೋಗಿಯು ಒಂದೇ ಔಷಧವನ್ನು ನಿರಂತರವಾಗಿ ತೆಗೆದುಕೊಳ್ಳುವ ಸಮಯದಲ್ಲಿ ಪೌಷ್ಟಿಕಾಂಶ ಆಹಾರಸೇವನೆ ಮಾಡದೆ ಇರುವುದರಿಂದ ಹೈಪೊಗ್ಲಿಂಸಿಯಾ ವರದಿಯಾಗುತ್ತಿದೆ. ಕೆಲವರಲ್ಲಿವಂಶವಾಹಿನಿಯಿಂದ ಬರುವ ಸಾಧ್ಯತೆಗಳನ್ನು ತೆಗೆದು ಹಾಕುವಂತಿಲ್ಲ.–ಡಾ. ಅಭಿಜಿತ್ ಭೋಗರಾಜ್, ಅಂತಃಸ್ರಾವ ಶಾಸ್ತ್ರಜ್ಞ ಮಣಿಪಾಲ ಆಸ್ಪತ್ರೆ, ಹೆಬ್ಬಾಳ
–ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.