ಸಕಾರಾತ್ಮಕ ಗುಣವೃದ್ಧಿಸುವ ಯೋಗ
ಅಶಾಂತಿ ಇದ್ದರೂ ನಿತ್ಯ ಯೋಗ ದಿಂದ ನೆಮ್ಮದಿ, ಸಂತೋಷ ತುಂಬಿಕೊಳ್ಳಲು ಸಾಧ್ಯವಿದೆ.
Team Udayavani, Mar 18, 2021, 12:41 PM IST
ಕೆಲಸದ ಒತ್ತಡದಲ್ಲೋ ಅಥವಾ ಯಾವುದೋ ಚಿಂತೆಯನ್ನು ಮನದೊಳಗೆ ತುಂಬಿಕೊಂಡು ಮಾಡುವ ಯಾವುದೇ ವ್ಯಾಯಾಮ, ಯೋಗ ಭಂಗಿಯಿಂದಾಗಲಿ ದೇಹ ಮತ್ತು ಮನಸ್ಸಿಗೆ ಸಂಪೂರ್ಣ ಲಾಭ ಕೊಡಲು ಸಾಧ್ಯವಿಲ್ಲ. ಇದ ಕ್ಕಾಗಿಯೇ ಎದ್ದ ತತ್ ಕ್ಷಣ ದೇಹ ಮತ್ತು ಮನಸ್ಸನ್ನು ಮೊದಲು ರಿಲ್ಯಾಕ್ಸ್ ಮೂಡ್‌ಗೆ ತಂದು ಬಳಿಕ ಒಂದೊಂದೇ ವ್ಯಾಯಾ ಮಗಳನ್ನು ಅಥವಾ ಯೋಗ ಭಂಗಿಗಳನ್ನು ಮಾಡಬೇಕು. ಇದರಿಂದ ದೇಹ ಮತ್ತು ಮನಸ್ಸನ್ನು ಒಟ್ಟಿಗೆ ಕೇಂದ್ರೀಕರಿಸಲು ಸಾಧ್ಯವಿದೆ.
ಇದನ್ನೂ ಓದಿ:ಇಂಗ್ಲೆಂಡ್ ಮಾಡಿದ ತಪ್ಪನ್ನೇ ವಿರಾಟ್ ಮಾಡುತ್ತಿದ್ದಾರೆ: ಆಯ್ಕೆ ಪ್ರಕ್ರಿಯೆ ಬಗ್ಗೆ ವಾನ್ ಟೀಕೆ
ವ್ಯಾಯಾಮ ಮತ್ತು ಯೋಗ ಬೇರೆ ಬೇರೆಯಾದರೂ ಇವ ರೆಡೂ ತನ್ನದೇ ಆದ ಲಾಭವನ್ನು ದೇಹ ಮತ್ತು ಮನಸ್ಸಿಗೆ ಕೊಡುತ್ತದೆ. ವ್ಯಾಯಾಮ ಎಲ್ಲರೂ ಮಾಡಲು ಸಾಧ್ಯವಿಲ್ಲ. ಆದರೆ ಯೋಗಾಭ್ಯಾಸವನ್ನು ಯಾರು ಬೇಕಾದರೂ ಮಾಡ ಬಹುದು.
ಯೋಗದ ಪ್ರಮುಖ ಲಾಭವೆಂದರೆ ಅದು ನಮ್ಮ ವರ್ತನೆ ಯನ್ನು ಬದಲಾಯಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ವರ್ತ ನೆಯೂ ಅವನ ದೇಹ ಮತ್ತು ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ನಿತ್ಯ ಯೋಗ ಮಾಡುವುದರಿಂದ ನಮ್ಮಲ್ಲಿ ಸಕಾರಾತ್ಮಕ ಗುಣಗಳು ವೃದ್ಧಿಸಿ ಸ್ನೇಹ ಶೀಲ ಪ್ರವೃತ್ತಿ ನಮ್ಮದಾಗುವುದು.
ಹುಟ್ಟುವಾಗ ನಾವೆಲ್ಲರೂ ಯೋಗಿಗಳಾಗಿರುತ್ತೇವೆ. ಹೀಗಾಗಿ ಯೋಗ ಶಿಕ್ಷಕರ ಅವಶ್ಯಕತೆಯೇ ನಮಗಿರುವುದಿಲ್ಲ. ಕೆಲವು ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ. ಮೂರು ತಿಂಗಳಿನಿಂದ ಸುಮಾರು ಮೂರು ವರ್ಷಗಳವರೆಗೆ ಮಗು ಎಲ್ಲ ಯೋಗಾಸನಗಳನ್ನೂ ಮಾಡುತ್ತದೆ. ಅದರ ಉಸಿರಾಟ, ಮಲಗುವ ಭಂಗಿಯಲ್ಲೂ ಯೋಗವಿರುತ್ತದೆ.
ಇದರಿಂದ ಅದು ಒತ್ತಡ ರಹಿತವಾಗಿ, ಹೆಚ್ಚು ಸಂತೋಷ ದಿಂದ ಇರಲು ಸಾಧ್ಯವಾಗುತ್ತದೆ.ಯೋಗವು ನಮ್ಮೊಳಗೆ ಸಕಾರಾತ್ಮಕತೆಯನ್ನು ವೃದ್ಧಿಸುತ್ತದೆ. ಯೋಗ ಎನ್ನುವುದು ಕೇವಲ ವ್ಯಾಯಾಮವಲ್ಲ. ಅದೊಂದು ಕೌಶಲ. ಯೋಗವು ನಮ್ಮೊಳಗಿನ ಎಲ್ಲ ಅಂಶಗಳನ್ನು ಒಂದುಗೂಡಿಸಲು ಪ್ರಯ ತ್ನಿಸುತ್ತದೆ. ಇದರಿಂದ ಸಂತೋಷ ವೃದ್ಧಿಯಾಗುತ್ತದೆ. ನಮ್ಮೊಳಗೆ ಎಷ್ಟೇ ಉದ್ವೇಗ, ಅಶಾಂತಿ ಇದ್ದರೂ ನಿತ್ಯ ಯೋಗ ದಿಂದ ನೆಮ್ಮದಿ, ಸಂತೋಷ ತುಂಬಿಕೊಳ್ಳಲು ಸಾಧ್ಯವಿದೆ. ಇದರಿಂದ ಖಿನ್ನತೆಯನ್ನು ದೂರ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.