ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ವಿಟಮಿನ್ ಸಿ
Team Udayavani, Apr 23, 2019, 7:37 AM IST
ನಾವು ಆಹಾರಗಳನ್ನು ಸೇವಿಸುತ್ತೇವೆ. ಆದರೆ ಅದರಲ್ಲಿ ಏನೆಲ್ಲ ಪೋಷಕಾಂಶಗಳಿರುತ್ತವೆ ಎಂಬುದನ್ನು ತಿಳಿದುಕೊಳ್ಳಲು ಹೋಗುವುದಿಲ್ಲ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ಸಿಗದೆ ಹಲವು ರೋಗಗಳಿಗೆ ಆಹ್ವಾನ ನೀಡಿದಂತಾಗುವುದು. ಹೀಗಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಬಲ್ಲ ಪೋಷಕಾಂಶ ಹೊಂದಿರುವ ಆಹಾರದ ಸೇವನೆ ಎಲ್ಲರಿಗೂ ಮುಖ್ಯ. ದೇಹಕ್ಕೆ ಬೇಕಾದ ಪೋಷಕಾಂಶಗಳಲ್ಲಿ ‘ವಿಟಮಿನ್ ಸಿ’ ಕೂಡ ಒಂದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಅತೀ ಅಗತ್ಯ.
ವಿಟಮಿನ್ ಸಿ ಯ ಪ್ರಯೋಜನಗಳು
• ವಿಟಮಿನ್ ಸಿ ಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ 500 ಮಿ. ಗ್ರಾಂ ನಷ್ಟು ವಿಟಮಿನ್ ಸಿ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆ ದೂರವಿಡಬಹುದು.
••ಕೊಲೆಸ್ಟ್ರಾಲ್ ನಿವಾರಣೆಗೂ ಇದು ಸಹಕಾರಿ.
••ಊರಿಯೂತ ಮತ್ತು ಸಂಧಿವಾತ ಕಡಿಮೆ ಮಾಡಲು ವಿಟಮಿನ್ ಸಿ ಸಹಾಯಕ.
• ದೇಹಕ್ಕೆ ಬೇಕಾದ ಕೆಂಪು ರಕ್ತ ಕಣಗಳು ವಿಟಮಿನ್ ಸಿ ಯಿಂದ ಹೇರಳವಾಗಿ ದೊರೆಯುತ್ತದೆ. ಕುತೂಹಾಲಕಾರಿ ಅಂಶವೆಂದರೆ ವಿಟಮಿನ್ ಸಿ ಯೂ ಆಹಾರದಲ್ಲಿರುವ ಕಬ್ಬಿಣಾಂಶ ಹೀರಿಕೊಂಡು ದೇಹಕ್ಕೆ ಬೇಕಾಗುವ ಪೋಷಕಾಂಶವನ್ನು ನೀಡುತ್ತದೆ.
•• ವಯಸ್ಸಾದಂತೆ ನೆನಪು ಶಕ್ತಿ ಕಡಿಮೆಯಾಗುವುದು ಸಹಜ ವಿಟಮಿನ್ ಸಿಯಿಂದ ಈ ಕೊರತೆಯನ್ನು ನಿವಾರಿಸಲು ಸಹಕಾರಿಯಾಗಿದೆ.
• ಸಾಮಾನ್ಯ ಶೀತ, ಕಣ್ಣಿನ ಪೊರೆಯಂತಹ ಸಮಸ್ಯೆಗೂ ವಿಟಮಿನ್ ಸಿ ಪರಿಹಾರ ನೀಡುತ್ತದೆ.
ವಿಟಮಿನ್ ಸಿ ಇರುವ ಪದಾರ್ಥಗಳು
ಹೂಕೋಸು, ಬ್ರೋಕೆಲಿ ಮೊದಲಾದ ಕೋಸುಗಡ್ಡೆಗಳಲ್ಲಿ 51ಮಿ.ಗ್ರಾಂ, ಸೀಬೆಹಣ್ಣಿನಲ್ಲಿ 126 ಮಿ.ಗ್ರಾಂ, ಪಪ್ಪಾಯ (145 ಗ್ರಾಂ) ದಲ್ಲಿ 87 ಮಿ.ಗ್ರಾಂ, ಲಿಂಬೆ ಹಣ್ಣಿನಲ್ಲಿ 83 ಮಿ. ಗ್ರಾಂ, ಕಿತ್ತಳೆ ಹಣ್ಣುನಲ್ಲಿ 96 ಮಿ.ಗ್ರಾಂ, ಟೋಮೆಟೋದಲ್ಲಿ 55 ಮಿ.ಗ್ರಾಂ, ಪಾಲಕ್ ಸೊಪ್ಪು 28 ಮಿ.ಗ್ರಾಂ ನಲ್ಲಿ ವಿಟಮಿನ್ ಸಿ ಇದೆ. ಎಲೆ ಕೋಸು, ಮೂಲಂಗಿ, ಗೆಣಸು, ಆಲೂಗಡ್ಡೆ , ಹಸಿರು ಮತ್ತು ಕೆಂಪು ಮೆಣಸುಗಳು ನಮ್ಮ ದೇಹಕ್ಕೆ ಬೇಕಾಗಿರುವ ವಿಟಮಿನ್ ಸಿ ಒದಗಿಸುತ್ತದೆ. ನಮ್ಮ ದೇಹದ ಎಲ್ಲ ಅಂಗಾಂಶಗಳ ಬೆಳವಣಿಗೆಗೂ ವಿಟಮಿನ್ ಸಿ ಅಗತ್ಯವಾಗಿದೆ. ಹೀಗಾಗಿ ಪ್ರತಿದಿನ ನಮ್ಮ ಆಹಾರದಲ್ಲಿ ವಿಟಮಿನ್ ಸಿ ಸೇರಿಸಿಕೊಳ್ಳಲೇಬೇಕು.
••ಧನ್ಯಶ್ರೀ ಬೋಳಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.