ಜೋರಾದ ಸದ್ದು  ಅಪಾಯಕಾರಿ 


Team Udayavani, Apr 29, 2022, 5:45 PM IST

ಜೋರಾದ ಸದ್ದು  ಅಪಾಯಕಾರಿ 

ಪ್ರತೀ ದಿನ ಕೋಟ್ಯಂತರ ಜನರು ಮತ್ತು ಉದ್ಯೋಗಿಗಳು ಸಾರ್ವಜನಿಕ ಸ್ಥಳಗಳು ಮತ್ತು ಕೆಲಸ ನಿರ್ವಹಿಸುವ ಪರಿಸರಗಳಲ್ಲಿ ಸದ್ದುಗದ್ದಲಕ್ಕೆ ಒಡ್ಡಿಕೊಳ್ಳುತ್ತಾರೆ. ಇದು ಹಲವಾರು ಅಪಾಯಗಳನ್ನು ಸೃಷ್ಟಿಸುತ್ತದೆ. ಉತ್ಪಾದನೆ ಮತ್ತು ನಿರ್ಮಾಣದಂತಹ ಉದ್ದಿಮೆಗಳಲ್ಲಿ ಸದ್ದುಗದ್ದಲ ಅವಿಭಾಜ್ಯ ಎನ್ನುವಂತಹ ಸಮಸ್ಯೆಯಾಗಿದೆ. ಇದರ ಜತೆಗೆ ಕಾಲ್‌ ಸೆಂಟರ್‌ಗಳಿಂದ ಹಿಡಿದು ಶಾಲೆಗಳ ವರೆಗೆ, ಧಾರ್ಮಿಕ ಕೇಂದ್ರಗಳಿಂದ ತೊಡಗಿ ಮನೋರಂಜನ ಕೇಂದ್ರಗಳ ವರೆಗೆ ಇತರ ಕೆಲಸದ ಸ್ಥಳಗಳಲ್ಲಿಯೂ ಸದ್ದುಗದ್ದಲ ಎಂಬುದು ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ಈಗ ಸದ್ದುಗದ್ದಲ ಎಂಬುದನ್ನು ಸ್ವಲ್ಪ ಹೆಚ್ಚು ವಿವರವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. “ಅಹಿತಕರವಾದ, ಭಾರೀ ಪ್ರಮಾಣದ ಅಥವಾ ಕೇಳುವುದಕ್ಕೆ ತೊಂದರೆದಾಯಕವಾದದ್ದನ್ನು ಸದ್ದುಗದ್ದಲ ಎಂದು ವ್ಯಾಖ್ಯಾನಿಸಲಾಗುತ್ತದೆ.

ಅಪಾಯಕಾರಿ ಮಟ್ಟದ ಸದ್ದನ್ನು ಕೇಳಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಯುವುದು ಹೇಗೆ? :

  • ಇತರರು ನಿಮ್ಮ ಮಾತನ್ನು ಕೇಳಿಸಿಕೊಳ್ಳುವುದಕ್ಕೆ ನೀವು ಧ್ವನಿಮಟ್ಟವನ್ನು ಏರಿಸಬೇಕಾಗಿದ್ದಲ್ಲಿ.
  • ನಿಮಗಿಂತ ಮೂರು ಅಡಿ ದೂರ ನಿಂತವರು ಮಾತಾಡಿದ್ದು ನಿಮಗೆ ಕೇಳಿಸದೆ ಇದ್ದಲ್ಲಿ.
  • ಸದ್ದುಗದ್ದಲದ ಸ್ಥಳದಿಂದ ಆಚೆ ಹೋದ ಬಳಿಕವೂ ನಿಮಗೆ ಅಸ್ಪಷ್ಟವಾಗಿ ಕೇಳಿಸುತ್ತಿದ್ದಲ್ಲಿ ಅಥವಾ ಮಂದವಾಗಿದ್ದಲ್ಲಿ.
  • ಭಾರೀ ಸದ್ದನ್ನು ಕೇಳಿಸಿಕೊಂಡ ಬಳಿಕ ನಿಮ್ಮ ಕಿವಿಗಳಲ್ಲಿ ನೋವುಂಟಾದರೆ ಅಥವಾ ಗುಂಯ್‌ಗಾಟ್ಟುವ (ಟಿನ್ನಿಟಸ್‌) ಅನುಭವವಾಗುತ್ತಿದ್ದಲ್ಲಿ.

ಸದ್ದುಗದ್ದಲ ಒಂದು ದೈಹಿಕ ಮತ್ತು ಸಾಮಾಜಿಕ ಸಮಸ್ಯೆ ಅದರ ಅಹಿತಕರ ಪರಿಣಾಮಗಳು ಹಲವು :

  • ಸದ್ದು ಸಾಕಷ್ಟು ಪ್ರಮಾಣದಲ್ಲಿದ್ದರೆ ಶ್ರವಣಶಕ್ತಿ ನಷ್ಟಕ್ಕೆ ಕಾರಣವಾಗಬಲ್ಲುದು (ದೈಹಿಕ ಪರಿಣಾಮ).
  • ಕಿರಿಕಿರಿ, ಬೇಗುದಿಗೆ ಕಾರಣವಾಗುತ್ತದೆ (ಮಾನಸಿಕ ಪರಿಣಾಮ), ಇದರಿಂದ ನಿದ್ದೆಯಲ್ಲಿ ತೊಂದರೆ, ಒತ್ತಡ, ಚಿಂತೆ, ಆತಂಕ, ಕೆಲಸದಲ್ಲಿ ದಕ್ಷತೆಯ ಕೊರತೆ ಉಂಟಾಗುವುದು ಸಾಧ್ಯ.
  • ಮಾತಿನ ಸಂವಹನದಂತಹ ಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸುತ್ತದೆ, ಇದರಿಂದಾಗಿ ವ್ಯವಸ್ಥಾತ್ಮಕ ವೈಫ‌ಲ್ಯಗಳು, ಗಾಯ ಉಂಟಾಗುವುದು ಸಾಧ್ಯ, ಉತ್ಪಾದನಾ ವಿಶ್ವಾಸ ನಷ್ಟವಾಗುತ್ತದೆ (ಯಾಂತ್ರಿಕ ಪರಿಣಾಮ).
  • ಎದುರಾಳಿಯ ಕಡಿಮೆ ಸದ್ದಿನ ಉತ್ಪನ್ನವನ್ನು ಖರೀದಿಸುವಂತೆ ಪ್ರಭಾವ ಬೀರುತ್ತದೆ.

ಈಗ ಸದ್ದುಗದ್ದಲ ಎಂದರೇನು ಮತ್ತು ಅದು ಹೇಗೆ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದಂತಾಯಿತು. ಈಗ ಸದ್ದುಗದ್ದಲಗಳ ಮೂಲದ ಬಗ್ಗೆ ನೋಡೋಣ:

ಸದ್ದಿಗೆ ಪ್ರಧಾನವಾಗಿ 2 ಮೂಲಗಳಿರುತ್ತವೆ: ಔದ್ಯಮಿಕ ಮತ್ತು ಔದ್ಯಮಿಕೇತರ.

ಎ. ಔದ್ಯಮಿಕ ಮೂಲದ ಸದ್ದುಗಳಲ್ಲಿ ವಿವಿಧ ಉದ್ದಿಮೆಗಳಲ್ಲಿ ಉಂಟಾಗುವ ಸದ್ದುಗಳು ಮತ್ತು ಅತ್ಯಂತ ವೇಗವಾಗಿ ಕೆಲಸ ಮಾಡುತ್ತಿರುವ ಯಂತ್ರಗಳು ಮತ್ತು ಅತೀ ಹೆಚ್ಚು ತೀವ್ರತೆಯ ಸದ್ದುಗಳ ಜತೆಗೆ ಕಾರ್ಯಾಚರಿಸುತ್ತಿರುವ ಯಂತ್ರಗಳು ಸೇರುತ್ತವೆ.

ಬಿ. ಔದ್ಯಮಿಕೇತರ ಮೂಲದ ಸದ್ದುಗಳಲ್ಲಿ ಸಾರಿಗೆ/ವಾಹನಗಳ ಓಡಾಟ ಮತ್ತು ನೆರೆಹೊರೆಯಲ್ಲಿ ವಿವಿಧ ಮೂಲಗಳಿಂದ ಉಂಟಾಗುವ ಸದ್ದುಗಳು ಸೇರುತ್ತವೆ. ಇವುಗಳನ್ನು ಮನುಷ್ಯ ನಿರ್ಮಿತ ಮತ್ತು ನೈಸರ್ಗಿಕ ಎಂಬ ಎರಡು ವಿಧಗಳಾಗಿ ವಿಂಗಡಿಸಬಹುದು.

ಬಹುತೇಕ ಎಲ್ಲ ಸದ್ದಿನ ಮೂಲಗಳು ಇಲ್ಲಿ ಕೊಟ್ಟಿರುವ ವರ್ಗಗಳಲ್ಲಿ ಬರುತ್ತವೆ: ರಸ್ತೆ ಸಾರಿಗೆ, ವಾಯುಸಾರಿಗೆ, ರೈಲು ಸಾರಿಗೆ, ನಿರ್ಮಾಣ ಚಟುವಟಿಕೆ, ಉದ್ದಿಮೆಗಳು, ಕಟ್ಟಡಗಳಲ್ಲಿ ಸದ್ದುಗಳು ಮತ್ತು ಗ್ರಾಹಕ ಬಳಕೆಯ ಉತ್ಪನ್ನಗಳು.

ಈಗ ಉದ್ಭವಿಸುವ ಪ್ರಶ್ನೆ ಎಂದರೆ, ನಾವು ನಮ್ಮ ಆಲಿಸುವ ವ್ಯವಸ್ಥೆಯನ್ನು ಆರೋಗ್ಯಪೂರ್ಣವಾಗಿ ಇರಿಸಿಕೊಳ್ಳಲು ಮತ್ತು ಸದ್ದು ಅದರ ಮೇಲೆ ಕನಿಷ್ಠ ಮಟ್ಟದಲ್ಲಿ ಪರಿಣಾಮ ಬೀರುವಂತಾಗಲು ಏನು ಮಾಡಬಹುದು? ಇಲ್ಲಿ ನಿಮ್ಮ ಸಹಾಯಕ್ಕಾಗಿ ಕೆಲವು ಸಲಹೆಗಳಿವೆ:

  1. 1. ಕಿಟಕಿಗಳನ್ನು ಮುಚ್ಚಿ: ನಮ್ಮ ಮನೆ ಮತ್ತು ನಾವು ವಾಸಿಸುವ ಕಟ್ಟಡಗಳನ್ನು ಪ್ರವೇಶಿಸುವ ಸದ್ದಿನ ಪ್ರಮಾಣ, ತೀವ್ರತೆಯನ್ನು ಕಡಿಮೆ ಮಾಡುವುದಕ್ಕೆ ಸರಳ ಉಪಾಯ ಎಂದರೆ ಕಿಟಕಿಗಳನ್ನು ಮುಚ್ಚುವುದು. ಇದರಿಂದ ಕಿರಿಕಿರಿ ಉಂಟುಮಾಡುವ ಸದ್ದು ಕಡಿಮೆಯಾಗುತ್ತದೆ. ಉತ್ತಮ ಉಪಾಯ ಎಂದರೆ ದಿನದಲ್ಲಿ ಸದ್ದುಗದ್ದಲ ಕಡಿಮೆ ಇರುವ ಹೊತ್ತಿನಲ್ಲಿ ಮಾತ್ರ ಕಿಟಕಿಗಳನ್ನು ತೆರೆಯುವುದು, ಪ್ರಾಯಃ ಸಂಜೆಯಾದ ಬಳಿಕ.
  2. ಇಯರ್‌ ಪ್ಲಗ್‌ ಹಾಕಿಕೊಳ್ಳಿ: ಇಯರ್‌ ಪ್ಲಗ್‌ ಹಾಕಿಕೊಳ್ಳುವುದು ಸದ್ದುಗದ್ದಲವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಮಿತವ್ಯಯದ ವಿಧಾನವಾಗಿದೆ. ಮಲಗಿ ನಿದ್ದೆ ಮಾಡುವಾಗ ಅಥವಾ ದಿನದ ಯಾವುದೇ ಹೊತ್ತಿನಲ್ಲಿ ಕಿವಿಗೆ ಇಯರ್‌ಪ್ಲಗ್‌ ತೂರಿಸಿಕೊಂಡು ನಿಮ್ಮ ಕಿವಿತಮ್ಮಟೆಗೆ ಬಡಿಯುವ ಅಹಿತಕರ ಸದ್ದುಗದ್ದಲವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಇಯರ್‌ ಪ್ಲಗ್‌ ಹಾಕಿಕೊಳ್ಳುವುದರಿಂದ ಆರೋಗ್ಯ ಪ್ರಯೋಜನಗಳಿವೆ, ವಿಶೇಷವಾಗಿ ಸದ್ದುಗದ್ದಲದ ವಾತಾವರಣದಲ್ಲಿ ಇರುವವರು ಆರೋಗ್ಯಕರ ನಿದ್ದೆಯನ್ನು ಪಡೆಯಲು ಇದು ಸಹಕಾರಿಯಾಗುತ್ತದೆ.
  3. ನಿರೋಧಕಗಳನ್ನು ಉತ್ತಮಪಡಿಸಿಕೊಳ್ಳಿ: ಮನೆಗಳಲ್ಲಿ ಸದ್ದುಗದ್ದಲವನ್ನು ಕಡಿಮೆ ಮಾಡಿಕೊಳ್ಳಲು ಒಂದು ಅತ್ಯುತ್ತಮವಾದ ಮತ್ತು ಪ್ರಾಯೋಗಿಕವಾದ ಉಪಾಯ ಎಂದರೆ ನಿರೋಧಕ ಕ್ರಮಗಳನ್ನು ಬಳಸುವುದು ಅಥವಾ ಈಗಾಗಲೇ ಇದ್ದರೆ ಅವುಗಳನ್ನು ಉತ್ತಮಪಡಿಸಿಕೊಳ್ಳುವುದು. ಇದು ಶಬ್ದನಿರೋಧನದ ಕಲೆಯಾಗಿದ್ದು, ಸದ್ದಿನ ಕಂಪನಗಳು ಮತ್ತು ಸದ್ದುಗದ್ದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿರೋಧಕಗಳನ್ನು ಉತ್ತಮಪಡಿಸುವುದು ಎಂದರೆ ಗೋಡೆಗಳು, ಛಾವಣಿಗಳು ಮತ್ತು ನೆಲದಲ್ಲಿಯೂ ಕೂಡ ಸದ್ದನ್ನು ಹೀರುವ ಅಥವಾ ನಿರೋಧಿಸುವ ಪದರವನ್ನು ಅಳವಡಿಸಿಕೊಳ್ಳುವುದು. ಮನೆಗಳಲ್ಲಿ ಅವಳಿ ಪೇನ್‌ಗಳುಳ್ಳ ಕಿಟಕಿಗಳು ಮತ್ತು ವೆದರ್‌ ಸ್ಟ್ರಿಪಿಂಗ್‌ಗಳನ್ನು ಹಾಕಿಕೊಳ್ಳುವುದರಿಂದ ಸದ್ದುಗದ್ದಲವನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ, ವಿದ್ಯುತ್‌ ಬಿಲ್ಲಿನಲ್ಲಿ ಕೂಡ ಉಳಿತಾಯ ಮಾಡಲು ಇದು ನೆರವಾಗುತ್ತದೆ.
  4. ಸದ್ದನ್ನು ವಿರಹಿತಗೊಳಿಸುವ ಹೆಡ್‌ಫೋನ್‌ ಖರೀದಿಸಿ: ಬಹುತೇಕ ಜನರಿಗೆ ಇದರ ಅರಿವಿರುವುದಿಲ್ಲ. ಆದರೆ ಶಬ್ದಮಾಲಿನ್ಯವನ್ನು ಕಡಿಮೆ ಮಾಡಲು ಸದ್ದನ್ನು ವಿರಹಿತಗೊಳಿಸುವ ಹೆಡ್‌ಫೋನ್‌ಗಳನ್ನು ಉಪಯೋಗಿಸುವುದು ಒಂದು ಉತ್ತಮ ಆಯ್ಕೆಯಾಗಿದೆ. ಇದು ಔದ್ಯಮಿಕ ಮತ್ತು ನಿರ್ಮಾಣ ಕಾಮಗಾರಿಗಳಲ್ಲಿ ಭಾಗವಹಿಸುವ ನೌಕರರಿಗೆ ಅತ್ಯುಪಯುಕ್ತವಾಗಿದೆ. ಸದ್ದನ್ನು ವಿರಹಿತಗೊಳಿಸುವ ಹೆಡ್‌ಫೋನ್‌ಗಳು ಅಹಿತಕರ ಸದ್ದುಗಳನ್ನು ಅವು ಕಿವಿಯನ್ನು ಮುಟ್ಟುವುದಕ್ಕೆ ಮುನ್ನ ಶೋಧಿಸಿಕೊಡುತ್ತವೆ.
  5. ಗೋಡೆಯಿಂದ ಗೋಡೆಗೆ ಹಾಸು ಹೊದೆಸಿ: ಗೋಡೆಯಿಂದ ಗೋಡೆಗೆ ಹಾಸು ಹೊದೆಸುವುದು ಸದ್ದುಗದ್ದಲವನ್ನು ಕಡಿಮೆ ಮಾಡಲು ಇನ್ನೊಂದು ಪ್ರಾಯೋಗಿಕ ಮತ್ತು ಸರಳ-ನೇರವಾದ ವಿಧಾನವಾಗಿದೆ. ನಮ್ಮ ಮನೆ ಮತ್ತು ಕಚೇರಿಗಳ ಒಳಕ್ಕೆ ನುಗ್ಗಿಬರುವ ಸದ್ದನ್ನು ಈ ರೀತಿಯ ವ್ಯವಸ್ಥೆ ಸಾಕಷ್ಟು ಪ್ರಮಾಣದಲ್ಲಿ ತಡೆಯುತ್ತದೆ.
  6. ಸದ್ದುಸ್ನೇಹಿ ಫ್ಲೋರಿಂಗ್‌ ಅಳವಡಿಸುವುದಕ್ಕೆ ಬಂಡವಾಳ ಹೂಡಿ: ಶಬ್ದಮಾಲಿನ್ಯವನ್ನು ಕಡಿಮೆ ಮಾಡುವುದಕ್ಕೆ ಸಮರ್ಪಕವಾದ ಫ್ಲೋರಿಂಗ್‌ ಅಳವಡಿಸುವುದು ತುಂಬಾ ಉತ್ತಮ ಉಪಾಯವಾಗಿದೆ. ಆದರೆ ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಯಾವ ಬಗೆಯ ಫ್ಲೋರಿಂಗ್‌ ಇದೆ ಎನ್ನುವುದನ್ನು ಇದು ಅವಲಂಬಿಸಿರುತ್ತದೆ. ಉದಾಹರಣೆಗೆ, ಕಾಪೆìಟ್‌ ಉಪಯೋಗ ಮಾಡುವುದರಿಂದ ಸದ್ದುಗದ್ದಲವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಆದರೆ ವಿನೈಲ್‌ನಂತಹ ಸದ್ದುಸ್ನೇಹಿ ವಸ್ತುಗಳನ್ನು ಉಪಯೋಗಿಸಿದರೆ ಗಮನಾರ್ಹ ಪ್ರಮಾಣದಲ್ಲಿ ಸದ್ದುಗದ್ದಲವನ್ನು ಕಡಿಮೆ ಮಾಡಬಹುದು. ಕಾಪೆìಟ್‌ ಹಾಸುವುದಕ್ಕಿಂತ ವಿನೈಲ್‌ ಉಪಯೋಗ ಉತ್ತಮ ಆಯ್ಕೆಯಾಗಿದೆ ಮತ್ತು ತನ್ನ ಸದ್ದನ್ನು ಹೀರಿಕೊಳ್ಳುವ ಗುಣದಿಂದಾಗಿ ಉತ್ತಮ ಫ‌ಲಿತಾಂಶವನ್ನು ಒದಗಿಸುತ್ತದೆ.
  7. ಸದ್ದುಸ್ನೇಹಿ ಪೀಠೊಪಕರಣಗಳ ಮೇಲೆ ಬಂಡವಾಳ ಹೂಡಿ: ಪೀಠೊಪಕರಣಗಳು ಪ್ರತಿಧ್ವನಿ ಮತ್ತು ಸದ್ದಿನ ಕಂಪನವನ್ನು ಕಡಿಮೆ ಮಾಡುವ ಮೂಲಕ ಸದ್ದುಗಳನ್ನು ಹೀರಿಕೊಳ್ಳುತ್ತವೆ. ಆದ್ದರಿಂದ ಸದ್ದುಸ್ನೇಹಿಯಾದ ಲಾಂಜ್‌ ಕುರ್ಚಿಗಳು, ಪುಸ್ತಕದ ಕಪಾಟುಗಳು, ಕೌಚ್‌ಗಳು ಮತ್ತು ಕ್ಯಾಬಿನೆಟ್‌ಗಳನ್ನು ಉಪಯೋಗಿಸಿದರೆ ಸದ್ದುಗದ್ದಲ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಉದಾಹರಣೆಗೆ, ಸದಾ ಸದ್ದುಗದ್ದಲ ಉಂಟುಮಾಡುವ ನೆರೆಮನೆಯವರು ಇರುವ ಸಂದರ್ಭದಲ್ಲಿ ಅವರ ಮನೆ ಅಥವಾ ಕಟ್ಟಡದ ಕಡೆಯಿಂದ ಬರುತ್ತಿರುವ ಸದ್ದನ್ನು ಕಡಿಮೆ ಮಾಡಲು ಗೋಡೆಗೆದುರಾಗಿ ದೊಡ್ಡ ಪುಸ್ತಕದ ಕಪಾಟನ್ನು ಇರಿಸಬಹುದು. ಜತೆಗೆ ಸದ್ದನ್ನು ಕಡಿಮೆ ಮಾಡಲು ರಗ್ಗುಗಳು, ಕಾಪೆìಟ್‌ಗಳು, ವಾಲ್‌ ಹ್ಯಾಂಗಿಂಗ್‌ಗಳನ್ನು ಉಪಯೋಗಿಸಬಹುದು.
  8. ಸದ್ದು ಉಂಟು ಮಾಡುವ ಯಂತ್ರಗಳಿಗೆ ಸದ್ದು ಹೀರುವ ವಸ್ತು ಅಳವಡಿಸಿ: ಕಂಪನಗಳಿಂದಾಗಿ ಯಂತ್ರದ ಕೆಲವು ಭಾಗಗಳು ಅತಿಯಾದ ಸದ್ದನ್ನು ಉಂಟು ಮಾಡುತ್ತಿದ್ದಲ್ಲಿ ಸದ್ದನ್ನು ಕಡಿಮೆ ಮಾಡಲು ಸದ್ದು ಹೀರುವ ವಸ್ತು ಅಳವಡಿಸುವ ಮೂಲಕ ಸದ್ದನ್ನು ಕಡಿಮೆ ಮಾಡಬಹುದು.
  9. ಶಬ್ದಮಾಲಿನ್ಯದ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಶಿಕ್ಷಣ ನೀಡಿ: ಮನುಷ್ಯರ ಮೇಲೆ ಮತ್ತು ಪ್ರಾಣಿ ಪಕ್ಷಿಗಳ ಮೇಲೆ ಶಬ್ದಮಾಲಿನ್ಯದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಶಿಕ್ಷಣ ನೀಡಿ ಅರಿವು ಮೂಡಿಸುವುದರಿಂದ ಶಬ್ದಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಉತ್ತಮ ಫ‌ಲಿತಾಂಶ ಉಂಟಾಗುವುದು ಸಾಧ್ಯ.
  10. ಸದ್ದಿನ ಮಟ್ಟದ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸಿ: ಸದ್ದಿನ ಪ್ರಮಾಣವನ್ನು ನಿರ್ದಿಷ್ಟ ಮಟ್ಟದ ಒಳಗೆ ಇರಿಸಿಕೊಳ್ಳುವುದಕ್ಕೆ ಔದ್ಯಮಿಕ ಸಂಕೀರ್ಣ ಮತ್ತು ಒಳಾಂಗಣದಲ್ಲಿ ಆಗಾಗ ಪರಿಶೀಲನೆ ಮತ್ತು ನಿಗಾ ಅಗತ್ಯವಾಗಿರುತ್ತದೆ. ಆದ್ದರಿಂದ ಸದ್ದಿನ ಪ್ರಮಾಣದ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಯುತ್ತಿರುವಂತೆ ನೋಡಿಕೊಳ್ಳಿ.

ಶಬ್ದಮಾಲಿನ್ಯದ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಅನೇಕ ರೀತಿಯಲ್ಲಿ ಪ್ರಯತ್ನಿಸಬಹುದು. ಇದನ್ನು ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮತ್ತು ನೀವು ಕೆಲಸ ಮಾಡುವ ಪ್ರದೇಶದಲ್ಲಿ ಉಂಟಾಗುವ ಶಬ್ದಮಾಲಿನ್ಯದಿಂದ ಉಂಟಾಗುವ ಆಲಿಸುವ ಸಮಸ್ಯೆಯನ್ನು ಹೆಚ್ಚು ಚೆನ್ನಾಗಿ ಪರಿಹರಿಸಿಕೊಳ್ಳಲು ನಿಮ್ಮ ಸನಿಹದ ಆಡಿಯಾಲಜಿಸ್ಟ್‌ರನ್ನು ಕೂಡಲೇ ಸಂಪರ್ಕಿಸಿ.

ಡಾ| ಅರ್ಚನಾ ಗುಂಡ್ಮಿ

ಅಸೋಸಿಯೇಟ್‌ ಪ್ರೊಫೆಸರ್‌,

ಸ್ಪೀಚ್‌ ಮತ್ತು ಹಿಯರಿಂಗ್‌ ವಿಭಾಗ

ಸುಪ್ರಜಾ ರಾಮಸ್ವಾಮಿ, ರಾಧಿಕಾ ರಮೇಶ್‌, ಸಂಜಮ್‌ ಮಕ್ಕರ್‌

ಇಂಟರ್ನ್ಗಳು,

ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ

ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

Lip Care Routine; How much do you know about keeping your lips healthy?

Lip Care Routine; ನಿಮ್ಮ ತುಟಿಗಳ ಆರೋಗ್ಯ ಕಾಪಾಡುವ ಬಗ್ಗೆ ನಿಮಗೆಷ್ಟು ಗೊತ್ತು?

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.