World Hand Hygiene Day: ಸ್ವಚ್ಛ ಕೈಗಳ ಶಕ್ತಿ: ಕೈಗಳ ನೈರ್ಮಲ್ಯಕ್ಕೆ ಮಾರ್ಗದರ್ಶಿ
Team Udayavani, May 12, 2024, 2:58 PM IST
ಮೇ 5: ವಿಶ್ವ ಹಸ್ತ ನೈರ್ಮಲ್ಯ ದಿನ
ಅಪಾಯಕಾರಿ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳ ಪ್ರಸಾರವನ್ನು ತಡೆಯುವಲ್ಲಿ ಕೈಗಳನ್ನು ಸಮರ್ಪಕವಾಗಿ ಮತ್ತು ನಿಯಮಿತವಾಗಿ ತೊಳೆದುಕೊಳ್ಳುವ ಕ್ರಿಯೆಯು ಬಹಳ ಪ್ರಾಮುಖ್ಯವಾದುದಾಗಿದೆ.
ಕೈಗಳ ನೈರ್ಮಲ್ಯ ಯಾಕೆ ಮುಖ್ಯ?
ಪ್ರತಿದಿನ, ದಿನದುದ್ದಕ್ಕೂ ನಾವು ಅಸಂಖ್ಯಾತ ವಸ್ತುಗಳನ್ನು ಮತ್ತು ಮೇಲ್ಮೈಗಳನ್ನು ಸ್ಪರ್ಶಿಸುತ್ತೇವೆ. ಈ ಮೂಲಕ ಬ್ಯಾಕ್ಟೀರಿಯಾಗಳು, ವೈರಸ್‌ಗಳು ಮತ್ತು ಇತರ ರೋಗಕಾರಕ ಸೂಕ್ಷ್ಮಜೀವಿಗಳು ನಮಗೆ ಅರಿವಿಲ್ಲದಂತೆಯೇ ನಮ್ಮ ಕೈಗಳನ್ನು ಸೇರುತ್ತವೆ. ಬಾಗಿಲುಗಳ ಹಿಡಿಕೆಗಳಿಂದ ತೊಡಗಿ ಸ್ಮಾರ್ಟ್‌ಫೋನ್ ಗಳ ವರೆಗೆ, ಮೆಟ್ಟಿಲುಗಳ ಹಿಡಿಕೆಗಳಿಂದ ಹಿಡಿದು ಕಂಪ್ಯೂಟರ್ ಕೀಬೋರ್ಡ್‌ವರೆಗೆ ನಮ್ಮ ಕೈಗಳು ಪದೇಪದೆ ಸಂಭಾವ್ಯ ಅಪಾಯಕಾರಿ ಸೂಕ್ಷ್ಮಜೀವಿಗಳ ಸಂಪರ್ಕಕ್ಕೆ ಬರುತ್ತಿರುತ್ತವೆ.
ನಾವು ಕೈಗಳನ್ನು ತೊಳೆಯದೆಯೇ ನಮ್ಮ ಮುಖವನ್ನು ಸ್ಪರ್ಶಿಸಿದಾಗ, ಆಹಾರ ಸೇವಿಸಿದಾಗ ಅಥವಾ ಆಹಾರವನ್ನು ತಯಾರಿಸಿದಾಗ ಈ ಸೂಕ್ಷ್ಮಜೀವಿಗಳು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಇದರಿಂದ ಶೀತ, ಶೀತಜ್ವರ ಮತ್ತು ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಸೋಂಕು (ಬೇಧಿ ಮತ್ತು ವಾಂತಿ) ಗಳಂತಹ ಅನಾರೋಗ್ಯಗಳು ಮತ್ತು ಸೋಂಕುಗಳು ನಮಗೆ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಇದಲ್ಲದೆ ಈ ಸೋಂಕುಕಾರಕ ಸೂಕ್ಷ್ಮಜೀವಿಗಳನ್ನು ನಾವು ಇತರರಿಗೂ ಪ್ರಸಾರ ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ವೃದ್ಧರು, ಮಕ್ಕಳು ಮತ್ತು ರೋಗ ನಿರೋಧಕ ಶಕ್ತಿ ದುರ್ಬಲಗೊಂಡಿರುವ ವ್ಯಕ್ತಿಗಳಂತಹ ಜನರನ್ನು ಅಪಾಯಕ್ಕೆ ಸಿಲುಕಿಸು ಸಾಧ್ಯತೆಗಳು ಇರುತ್ತವೆ.
ಸರಿಯಾದ ಕೈತೊಳೆಯುವ ವಿಧಾನ
ನಿಮ್ಮ ಕೈಗಳನ್ನು ಸರಿಯಾಗಿ ಮತ್ತು ಸ್ವಚ್ಛವಾಗಿ ತೊಳೆದುಕೊಳ್ಳುವುದಕ್ಕಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
- ಶುದ್ಧವಾದ ಹರಿಯುವ ನೀರಿನಿಂದ ಕೈಗಳನ್ನು ತೋಯಿಸಿಕೊಳ್ಳಿ.
- ಸಾಬೂನು ಹಚ್ಚಿ. ನಿಮ್ಮ ಕೈಗಳ ಮೇಲ್ಭಾಗ ಮತ್ತು ಕೆಳಭಾಗ, ಬೆರಳ ಸಂಧಿ- ಹೀಗೆ ಎಲ್ಲ ಕಡೆಯೂ ಸಾಬೂನು ಹರಡುವಂತೆ ಹಚ್ಚಿಕೊಳ್ಳಿ.
- ಎರಡೂ ಕೈಗಳನ್ನು ಸರಿಯಾಗಿ ಉಜ್ಜಿರಿ. ಕೈಗಳ ಹಿಂಭಾಗ, ಮುಂಭಾಗ, ಬೆರಳುಗಳ ಸಂಧಿ, ಉಗುರುಗಳ ಎಡೆ – ಎಲ್ಲ ಕಡೆಯೂ ಸಾಬೂನು ನೊರೆ ನೊರೆಯಾಗುವಂತೆ ರಭಸವಾಗಿ, ಸರಿಯಾಗಿ ಉಜ್ಜಿಕೊಳ್ಳಿ. ಈ ಬಿರುಸಾದ ಉಜ್ಜುವಿಕೆಯಿಂದ ಕೊಳೆ, ಜಿಡ್ಡು ಮತ್ತು ಸೂಕ್ಷ್ಮಜೀವಿಗಳು ನಿಮ್ಮ ಕೈಗಳ ಚರ್ಮದಿಂದ ಕಿತ್ತುಹೋಗುತ್ತವೆ.
- ಕನಿಷ್ಠ 20 ಸೆಕೆಂಡುಗಳ ಕಾಲ ಹೀಗೆ ಉಜ್ಜಿಕೊಳ್ಳಿ.
- ಶುದ್ದ, ಹರಿಯುವ ನೀರಿನಲ್ಲಿ ಕೈಗಳನ್ನು ಶುಚಿಯಾಗಿ ತೊಳೆದುಕೊಳ್ಳಿ.
- ಶುಭ್ರವಾದ ಬಟ್ಟೆ ಅಥವಾ ಏರ್ ಡ್ರಯರ್‌ನಿಂದ ಕೈಗಳನ್ನು ಒಣಗಿಸಿಕೊಳ್ಳಿ. ಒಣಕೈಗಳಿಗಿಂದ ಸುಲಭವಾಗಿ ಒದ್ದೆಯಾದ ಕೈಗಳ ಮೂಲಕ ಸೂಕ್ಷ್ಮಜೀವಿಗಳು ಪ್ರಸಾರವಾಗುತ್ತವೆ.
ಕೈಗಳನ್ನು ಯಾವಾಗ ತೊಳೆದುಕೊಳ್ಳಬೇಕು?
- ಆಹಾರ ತಯಾರಿಸುವುದಕ್ಕೆ ಮುನ್ನ, ತಯಾರಿಸುವಾಗ ಮತ್ತು ತಯಾರಿಸಿದ ಬಳಿಕ
- ಆಹಾರ ಸೇವಿಸುವುದಕ್ಕೆ ಮುನ್ನ
- ಶೌಚಾಲಯವನ್ನು ಉಪಯೋಗಿಸಿದ ಬಳಿಕ
- ಕೆಮ್ಮಿದ, ಸೀನಿದ ಅಥವಾ ಮೂಗಿನಿಂದ ಸಿಂಬಳ ತೆಗೆದ ಬಳಿಕ
- ಪ್ರಾಣಿಪಕ್ಷಿಗಳನ್ನು ಸ್ಪರ್ಶಿಸಿದ ಬಳಿಕ ಮತ್ತು ಪ್ರಾಣಿಗಳ ತ್ಯಾಜ್ಯವನ್ನು ನಿರ್ವಹಿಸಿದ ಬಳಿಕ
- ತ್ಯಾಜ್ಯವನ್ನು ಮುಟ್ಟಿದ ಬಳಿಕ
- ಅನಾರೋಗ್ಯ ಹೊಂದಿರುವವರನ್ನು ಸ್ಪರ್ಶಿಸಿದ ಬಳಿಕ
ಸಮುದಾಯದಲ್ಲಿ ಕೈಗಳ ನೈರ್ಮಲ್ಯಕ್ಕೆ ಪ್ರೋತ್ಸಾಹ
ಕೈಗಳ ನೈರ್ಮಲ್ಯ ವರ್ಧನೆ ವ್ಯಕ್ತಿಗತ ಹೊಣೆಗಾರಿಕೆ ಮಾತ್ರವಷ್ಟೇ ಅಲ್ಲ; ಇದು ಪ್ರತಿಯೊಬ್ಬರಿಗೂ ಆರೋಗ್ಯ ಲಾಭ ತಂದುಕೊಡುವ ಸಾಮೂಹಿಕ, ಸಾಮುದಾಯಿಕ ಹೊಣೆಗಾರಿಕೆಯಾಗಿದೆ. ಶಾಲೆಗಳು, ಉದ್ಯೋಗ ಸ್ಥಳಗಳು, ಆರೋಗ್ಯ ಸೇವಾ ಕೇಂದ್ರಗಳು ಮತ್ತು ಸಾರ್ವಜನಿಕ ಸ್ಥಳಗಳು ಕೈಗಳ ನೈರ್ಮಲ್ಯ ಕಾಪಾಡಿಕೊಳ್ಳುವುದಕ್ಕೆ ಈ ಕೆಳಗಿನಂತೆ ಪ್ರಮುಖ ಪಾತ್ರ ವಹಿಸಬಹುದಾಗಿದೆ:
- ಸಾಬೂನು ಮತ್ತು ಶುದ್ಧನೀರಿನ ಸಹಿತ ಕೈ ತೊಳೆಯುವ ಸೌಲಭ್ಯವನ್ನು ಸುಲಭವಾಗಿ ಲಭ್ಯವಾಗುವಂತೆ ಒದಗಿಸುವುದು.
- ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವ ವಿಧಾನಗಳನ್ನು ಸೂಚಿಸುವ ಭಿತ್ತಿಪತ್ರಗಳು ಮತ್ತು ಸಂಕೇತಗಳನ್ನು ಪ್ರದರ್ಶಿಸುವುದು.
- ಸಿಬಂದಿ, ವಿದ್ಯಾರ್ಥಿಗಳು ಮತ್ತು ಸಂದರ್ಶಕರಿಗೆ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವ ವಿಧಾನ ಮತ್ತು ಅದರ ಪ್ರಾಮುಖ್ಯಗಳ ಕುರಿತು ತಿಳಿವಳಿಕೆ ಒದಗಿಸುವುದು.
ನಾವೆಲ್ಲರೂ ಜತೆಗೂಡಿ ಸಾಧಿಸಬಹುದು: ಅಪಾಯಕಾರಿ ಸೋಂಕುರೋಗಗಳ ಪ್ರಸಾರವನ್ನು ಗಮನಾರ್ಹವಾಗಿ ತಡೆಗಟ್ಟುವಲ್ಲಿ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವುದು ಒಂದು ಸರಳ ಮತ್ತು ಸುಲಭವಾದ ಆದರೆ ಅಷ್ಟೇ ಪರಿಣಾಮಕಾರಿ ಮತ್ತು ಮುಖ್ಯವಾದ ಕ್ರಮವಾಗಿದೆ. ಶುದ್ಧ ನೀರು ಮತ್ತು ಸಾಬೂನು ಉಪಯೋಗಿಸಿ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವ ಮೂಲಕ ನಾವು ನಮ್ಮನ್ನು, ನಮ್ಮ ಪ್ರೀತಿಪಾತ್ರರನ್ನು ಮತ್ತು ನಾವಿರುವ ಸಮುದಾಯಗಳನ್ನು ಅನೇಕ ಅಪಾಯಕಾರಿ ಕಾಯಿಲೆಗಳಿಂದ ಸಂರಕ್ಷಿಸಿಕೊಳ್ಳಬಹುದಾಗಿದೆ ಹಾಗೂ ಆರೋಗ್ಯಯುತ, ಸುರಕ್ಷಿತ ಜಗತ್ತಿನ ನಿರ್ಮಾಣಕ್ಕೆ ಕೊಡುಗೆ ನೀಡಬಹುದಾಗಿದೆ.
ಡಾ| ವಿಜೇತಾ ಶೆಣೈ ಬೆಳ್ಳೆ,
ಅಸೋಸಿಯೇಟ್ ಪ್ರೊಫೆಸರ್,
ಬಯೊಕೆಮೆಸ್ಟ್ರಿ ವಿಭಾಗ,
ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಇನ್‌ಫೆಕ್ಷಿಯಸ್ ಡಿಸೀಸಸ್ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ
Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.