ಶ್ರವಣಯಂತ್ರದ ಉಪಯೋಗ
Team Udayavani, Mar 21, 2021, 12:47 PM IST
ಎಲ್ಲಿಂದ ಮತ್ತು ಯಾರಿಂದ ಶ್ರವಣೋಪಕರಣವನ್ನು ಖರೀದಿಸಬೇಕು
ಶ್ರವಣಯಂತ್ರವನ್ನು ಆಸ್ಪತ್ರೆ ಅಥವಾ ವಾಕ್ ಶ್ರವಣ ಚಿಕಿತ್ಸಾಲಯಗಳಲ್ಲಿ ಪರಿಣಿತ ತಜ್ಞಂದ ಪರೀಕ್ಷಿಸಿ ಪಡೆದುಕೊಳ್ಳಬೇಕು. ಇತರ ಕಡೆಗಳಲ್ಲಿ ಉದಾಹರಣೆಗೆ: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಖರೀದಿಸುವುದು, ಎಲೆಕ್ಟ್ರಾನಿಕ್ ಉಪಕರಣಗಳ ಅಂಗಡಿಯಲ್ಲಿ ಅಥವಾ ಪರಿಣತಿ ಹೊಂದದೇ ಇರುವ, ಶ್ರವಣೋಪಕರಣದ ಮಾಹಿತಿ ಇಲ್ಲದವರಲ್ಲಿ ಖರೀದಿಸಬಾರದು. ಖರೀದಿಸುವಾಗ ಕೂಡ ಕೆಲವು ಅಂಶಗಳನ್ನು ನಾವು ಗಮನದಲ್ಲಿಡಬೇಕು. ನಮಗೆ ಅನುಕೂಲವಾಗುವ ಹತ್ತಿರದ ಆಸ್ಪತ್ರೆ ಅಥವಾ ವಾಕ್ ಶ್ರವಣ ತಜ್ಞರಲ್ಲಿ ಕೊಂಡುಕೊಳ್ಳುವುದು ಉತ್ತಮ. ಎಲ್ಲರಿಗೂ ಎಲ್ಲ ಸಂದರ್ಭಗಳಲ್ಲಿ ಉಪಕರಣದ ಉಪಯೋಗ ಆಗದೇ ಇರಬಹುದು. ನಿಮ್ಮ ಅuಛಜಿಟಜrಚಞ (ನಾದ ರೇಖಾ ನಕ್ಷೆ)ಗೆ ತಕ್ಕಂತೆ, ನೀವು ಧರಿಸಿದಾಗ ಎದುರಿಸಿದ ಸಮಸ್ಯೆಗಳನ್ನು ಹೇಳಿದರೆ ಅದಕ್ಕನುಗುಣವಾಗಿ ಪ್ರೋಗ್ರಾಂ ಮಾಡುತ್ತಾ ಅನುಕೂಲವಾಗುತ್ತದೆ. ಏನಾದರೂ ತೊಂದರೆ ಬಂದರೆ, ಸರಿಯಾಗಿ ಕೆಲಸ ಮಾಡದೇ ಇದ್ದರೆ ಅದನ್ನು ದುರಸ್ತಿ ಮಾಡಲು ನೀವು ನಿಮ್ಮ ಹತ್ತಿರ ತಜ್ಞರಲ್ಲಿ ಖರೀದಿಸಿದರೆ ಅನುಕೂಲವಾಗುತ್ತದೆ.
- ಶ್ರವಣೋಪಕರಣವನ್ನು ಆಯ್ಕೆ ಮಾಡುವಾಗ ಅದರ ಸಾಧಕ, ಬಾಧಕಗಳನ್ನು ಅರಿತುಕೊಳ್ಳಬೇಕು:
Cosmetic Purpose ಅಂದರೆ ಅಂದವಾಗಿ ಕಾಣಬೇಕೆಂದು ತನ್ನ ನ್ಯೂನತೆ ಯಾರಿಗೂ ತಿಳಿಯಬಾರದೆಂದು ಅತೀ ಚಿಕ್ಕ ಮೆಷಿನ್‌ನನ್ನು ಆಯ್ಕೆ ಮಾಡುವುದು. ಇದರಿಂದ ವಯೋವೃದ್ಧರಲ್ಲಿ ಅತೀ ಚಿಕ್ಕ ಮೆಷಿನನ್ನು ಸರಿಯಾಗಿ ಹಾಕಿಕೊಳ್ಳಲು, ಬ್ಯಾಟರಿಯನ್ನು ಹಾಕಲು ಮತ್ತು ತೆಗೆಯಲು ತುಂಬಾ ಕಷ್ಟವಾಗುತ್ತದೆ. ಉದಾಹರಣೆಗೆ, ಕೆಲವರು ಅಂತಹ ಯಂತ್ರವನ್ನು ಖರೀದಿಸಿ ಸರಿಯಾಗಿ ಹಾಕಲೂ ಬಾರದೇ ಉಪಯೋಗಿಸದೇ ಹಾಗೆಯೇ ಇಟ್ಟು ಅದು ಹಾಳಾಗಿರುವ ಅನೇಕ ಉದಾಹರಣೆಗಳಿವೆ. ನಾವು ಆಯ್ಕೆ ಮಾಡುವಾಗ ಕೂಡ ನಮ್ಮಿಂದ ಸರಿಯಾಗಿ ಉಪಯೋಗಿಸಲು ಸಾಧ್ಯವಿದೆಯೋ ಎಂದು ಅರಿತುಕೊಳ್ಳಬೇಕು. ಕೆಲವು ಜಾಹಿರಾತುಗಳು ನಮ್ಮ ದಾರಿ ತಪ್ಪಿಸಬಹುದು. ಅಂತಹ ಕಂಪೆನಿ ಜಾಹಿರಾತುಗಳಿಗೆ ಮಾರು ಹೋಗದೇ ತಜ್ಞ (Audiologist) ರಲ್ಲಿ ವಾಕ್ ಶ್ರವಣ ತಜ್ಞರಲ್ಲಿ ಸಮಾಲೋಚಿಸಿ
ಖರೀದಿಸುವುದು ಉತ್ತಮ. ಆ ತರಹ ಖರೀದಿಸಿದರೆ ಉಪಯೋಗಕ್ಕೆ ಬಾರದೇ, ಅನಾವಶ್ಯಕ ಹಣ ಪೋಲು ಮಾಡಿದಂತಾಗುತ್ತದೆ. ಅದಕ್ಕಾಗಿ ಸರಿಯಾಗಿ ಆಯ್ಕೆ ಮಾಡಿ
Audiologist ಎದುರು ಹಾಕಿ ಉಪಯೋಗವನ್ನು ಅರಿತು ಖರೀದಿಸುವುದು ಉತ್ತಮ.
- ಕುಟುಂಬದ ಸದಸ್ಯರ ಪಾತ್ರ ಕೂಡ ಅತೀ ಮುಖ್ಯ.
ಉಪಕರಣವನ್ನು ಸರಿಯಾಗಿ ಧರಿಸುವುದರಲ್ಲಿ ಮತ್ತು ಜೋಪಾನ ಮಾಡುವುದರಲ್ಲಿ ಮತ್ತು ಅವರ ಜತೆ ಮಾತನಾಡುವಾಗ, ಸಮಾಲೋಚಿಸುವಾಗ ಕೆಲವು ವಿಚಾರಗಳನ್ನು ನಾವು ಅರಿತಿರಬೇಕು.
ಸಾಮಾನ್ಯವಾಗಿ ಮಾತನಾಡುವುದಕ್ಕಿಂತ ಅತೀ ನಿಧಾನವಾಗಿ (ಮೆಲ್ಲನೆ) ಮಾತನಾಡುವುದು
ಅಥವಾ ತುಂಬಾ ಜೋರಾಗಿ ಮಾತನಾಡುವುದು
ಹಿಂದುಗಡೆಯಿಂದ ಮಾತನಾಡುವುದು
ತೀರಾ ದೂರ ನಿಂತು ಮಾತನಾಡುವುದು (ಒಂದು ಕೋಣೆಯಿಂದ ಇನ್ನೊಂದು)
ಎಲ್ಲರೂ ಒಂದೇ ಸಲ ಒಟ್ಟಿಗೆ ಮಾತನಾಡುವುದು.
ಸಭೆ ಸಮಾರಂಭಗಳಲ್ಲಿ ಧ್ವನಿವರ್ಧಕಗಳ ಹತ್ತಿರ ಮಾತನಾಡುವುದು.
ಒಂದೇ ಸಲ ಹಲವಾರು ವಿಚಾರಗಳನ್ನು ಪಟಪಟನೆ ವಿರಾಮವಿಲ್ಲದೇ ಮಾತನಾಡುವುದು.
ಈ ತರಹ ಮಾತನಾಡಿದರೆ ಉತ್ತಮ ಫಲಿತಾಂಶ ಅಂದರೆ ಶ್ರವಣೋಪಕರಣದಿಂದ ಸಿಗುವ ಉಪಯೋಗ ಅನುಭವಕ್ಕೆ ಬರುವುದಿಲ್ಲ.
ಒಂದು ಕಿವಿಗೆ ಮೆಷಿನ್ ಮತ್ತು 2 ಕಿವಿಗಳಿಗೆ ಮೆಷಿನ್ ಧರಿಸಿದವರಲ್ಲಿ ವ್ಯತ್ಯಾಸವಿರುತ್ತದೆ. ಅವರ ಜತೆ ಸಂಭಾಷಣೆ ಮಾಡುವಾಗ ಅದನ್ನು ನಾವು ಗಮನದಲ್ಲಿಟ್ಟುಕೊಂಡು, ಎದುರು ಬದುರು ಕುಳಿತುಕೊಂಡು ಸಾಮಾನ್ಯ ಧ್ವನಿಯಲ್ಲಿ ಮಾತನಾಡುವುದು. ಮನೆಯಲ್ಲಿ ತುಂಬಾ ಜನರಿದ್ದರೆ ಒಬ್ಬರ ಅನಂತರ ಇನ್ನೊಬ್ಬರು ಮಾತನಾಡುವಂತೆ ತಿಳಿ ಹೇಳುವುದು. ಒಂದೇ ಸಲ ಎಲ್ಲ ವಿಚಾರಗಳನ್ನು ಹೇಳದೇ ಅವರಿಗೆ ಅರ್ಥ ಮಾಡಿಕೊಳ್ಳಲು ಸಾಕಷ್ಟು ಕಾಲಾವಕಾಶ ಕೊಡುವುದು.
ತುಂಬಾ ಗದ್ದಲ ಇರುವ ಸಂದರ್ಭ ಮಾತನಾಡದೇ ಸ್ವಲ್ಪ ನಿಶ್ಶಬ್ದ ಇರುವ ಕಡೆಗೆ ಹೋಗಿ ಮಾತನಾಡುವುದು.
ಅಥವಾ ತಮ್ಮ ಸಮಸ್ಯೆಯನ್ನು ಮೊದಲೇ ಅವರಿಗೆ ತಿಳಿ ಹೇಳುವುದು ಉತ್ತಮ.
ಕಿವಿ ಕೇಳುವುದಿಲ್ಲ ಎಂದು ಅತೀ ಜೋರಾಗಿ ಮಾತನಾಡುವುದು ಅಥವಾ ದೂರ ನಿಂತು ಹಿಂದುಗಡೆಯಿಂದ ಮಾತನಾಡುವುದು, ಉಪಕರಣ ಧರಿಸದೇ ಇರುವ ಕಿವಿಯ ಹತ್ತಿರ ಮಾಡುವುದು- ಈ ತರಹ ಮಾತನಾಡುವುದರಿಂದ ಅವರಿಗೆ ಕೇಳಿಸದೇ ಇದ್ದಾಗ ಸಿಟ್ಟು ಬರುತ್ತದೆ. ಕುಟುಂಬದ ಸದಸ್ಯರಿಗೂ ಸಿಟ್ಟು ಬರುವ ಸಾಧ್ಯತೆಗಳು ಹೆಚ್ಚು. ಮನೆಯ ಸದಸ್ಯರೆಲ್ಲರೂ ತಾಳ್ಮೆ ಮತ್ತು ಸಹನೆ ಅತೀ ಮುಖ್ಯವಾಗಿದೆ.
- ನಮ್ಮ ನಿರೀಕ್ಷೆ ಮತ್ತು ಹೋಲಿಕೆ
ನಾವು ಇನ್ನೊಬ್ಬರ ಶ್ರವಣಯಂತ್ರವನ್ನು ತುಲನೆ ಮಾಡುವುದು. ಅಂದರೆ ನನ್ನ ಸ್ನೇಹಿತ ಸದಾ ಇಂತಹದೇ ಮೆಷಿನ್ ಉಪಯೋಗಿಸುತ್ತಾರೆ. ಅವರಿಗೆ ಉಪಯೋಗವಿದೆ. ನನಗೆ ಉಪಯೋಗ ಆಗುತ್ತ ಇಲ್ಲ, ಎಲ್ಲ ಶಬ್ದಗಳು ಕೇಳುವುದಿಲ್ಲ. ಅಥವಾ ಇನ್ನು ಕೆಲವರು ಅವರಿಗೆ ಏನೂ ಉಪಯೋಗವಿಲ್ಲ ಅವರು ಮೆಷಿನನ್ನು ಪೆಟ್ಟಿಗೆಯಲ್ಲಿ ಇಟ್ಟಿದ್ದಾರೆ. ಹೀಗೆ ಕೆಲವರು ಉಪಯೋಗದ ವಿಷಯದಲ್ಲಿ ಹೋಲಿಸುವುದು.
ಉಪಕರಣದ ಗಾತ್ರದ ಬಗ್ಗೆ ಹೋಲಿಸುವುದು.
ಉಪಕರಣದ ದರದ ಬಗ್ಗೆ ಹೋಲಿಸುವುದು.
ಉಪಕರಣವನ್ನು ಖರೀದಿಸುವಾಗ ಮನದಲ್ಲಿ ಆಗುವ ಗೊಂದಲಗಳೂ ಸಾಮಾನ್ಯ. ಒಬ್ಬರಿಗೆ ಇರುವ ಕೇಳುವ ತೊಂದರೆ ಇನ್ನೊಬ್ಬರಿಗೆ ಇರಬೇಕೆಂದಿಲ್ಲ. ಅದೇ ತರಹ ಇದ್ದರೂ ಮೆಷಿನಿನಿಂದ ಸಿಗುವ ಉಪಯೋಗ ಒಂದೇ ತರ ಇರಬೇಕೆಂದಿಲ್ಲ. ಪ್ರತಿಯೊಬ್ಬರ ತೊಂದರೆಯೂ ಬೇರೆ ಬೇರೆಯಾಗಿರುತ್ತದೆ.
ಶ್ರವಣೋಪಕರಣ ಉಪಯೋಗಿಸುವ ವ್ಯಕ್ತಿಯ ಪ್ರಾಯ, ಕೇಳುವ ಸಾಮರ್ಥ್ಯ, ಕೇಳಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ, ಅರಿವಿನ ಕೌಶಲಗಳು, ವಾಸಿಸುವ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ.
- ಹೆಚ್ಚು ಸಮಯ ಬಳಸುವುದರಿಂದ
ಉಪಯೋಗ ಅಧಿಕ
ಪ್ರತಿದಿನ ಉಪಕರಣವನ್ನು ಹಾಕಲು ಅಭ್ಯಾಸ ಮಾಡಬೇಕು. ದಿನಕ್ಕೆ 8ರಿಂದ 9 ತಾಸು ಉಪಕರಣವನ್ನು ಧರಿಸುವುದು ಉತ್ತಮ. ಬ್ಯಾಟರಿ ಖಾಲಿಯಾಗುತ್ತದೆ ಎಂದು ಹೆಚ್ಚಿನವರು ಉಳಿತಾಯ ಮಾಡಲು ಉಪಯೋಗಿಸುವುದಿಲ್ಲ. ಆ ತರಹ ಮಾಡುವುದರಿಂದ ಉಪಕರಣ ಬೇಗನೆ ಕೆಟ್ಟು ಹೋಗುತ್ತದೆ. ಉಪಕರಣವನ್ನು ಉಪಯೋಗಿಸುವವರು ಒಂದು ಡೈರಿಯಲ್ಲಿ ಯಾವ ಶಬ್ದಗಳು ಮತ್ತು ಯಾವ ಸಂದರ್ಭದಲ್ಲಿ ಕೇಳಲು ಕಷ್ಟವಾಗುತ್ತದೆ ಎಂದು ಬರೆದಿಟ್ಟರೆ ಶ್ರವಣ ತಜ್ಞರಲ್ಲಿ fಜಿnಛಿಠಿunಛಿ ಮಾಡಲು ಸಹಕಾರಿಯಾಗುತ್ತದೆ. ಕೇಳಿಸಲು ಕಷ್ಟವಾಗುತ್ತದೆ ಎಂದು ಕಂಡುಬಂದಲ್ಲಿ ಕೆಲವು ಜಾಹಿರಾತುಗಳಿಗೆ ಮಾರು ಹೋಗದೇ ವಾಕ್ ಶ್ರವಣ ತಜ್ಞರನ್ನು ಭೇಟಿಯಾಗಿ ಪರೀಕ್ಷಿಸಿರಿ. ಶ್ರವಣ ಯಂತ್ರದ ಖರೀದಿಕೆಯಲ್ಲಿ ಮತ್ತು ಉಪಯೋಗಿಸುವಲ್ಲಿ ಈ ಮೇಲಿನ ವಿಚಾರಗಳನ್ನು ತಿಳಿದರೆ ಉತ್ತಮವಾದ ಉಪಯೋಗವನ್ನು ಪಡೆಯಬಹುದು.
ಡಾ| ಕಿಶನ್ ಎಂ.ಎಂ.
ಅಸೋಸಿಯೇಟ್ ಪ್ರೊಫೆಸರ್
ರೇಖಾ ಪಾಟೀಲ್
ಅಸಿಸ್ಟೆಂಟ್ ಲೆಕ್ಚರರ್
ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.