ಆರೋಗ್ಯ ವೃದ್ಧಿಗೆ ತುಳಸಿ
Team Udayavani, Oct 12, 2020, 9:17 AM IST
ಭಾರತೀಯ ಪರಂಪರೆಯಲ್ಲಿ ತುಳಸಿ ಶ್ರೇಷ್ಠ ಸ್ಥಾನವನ್ನು ಹೊಂದಿದೆ. ಹಾಗಾಗಿಯೇ ಮುಕ್ಕೋಟಿ ದೇವತೆ ನೆಲೆಸಿದೆ ಎಂದು ನಂಬಲಾಗಿರುವ ತುಳಸಿ ಕೇವಲ ನಂಬಿಕೆಯ ಭಾಗವಾಗಿ ಮಾತ್ರವಿರದೆ ಅದರೊಂದಿಗೆ ದೇಹದ ಆರೋಗ್ಯ ವೃದ್ಧಿಗೂ ಉಪಯುಕ್ತವಾಗುವ ಹಲವಾರು ಪೋಷಕಾಂಶಗಳು ಇದರಲ್ಲಿ ಕಾಣಬಹುದು. ಇದರಲ್ಲಿ ಹಲವಾರು ಅದ್ಭುತ ಔಷಧೀಯ ಗುಣಗಳಿರುವುದನ್ನು ಕಾಣಬಹುದು. ತುಳಸಿಯ ಬೇರು, ಬೀಜ, ಎಲೆ ಎಲ್ಲ ಅಂಶವು ನೈಸರ್ಗಿಕ ಪೋಷಣೆಯನ್ನು ಹೊಂದಿವೆ. ವಿಟಮಿನ್ ಎ, ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ ಅಪಾರ ಪ್ರಮಾಣದಲ್ಲಿದ್ದು,ಹಲವಾರು ರೋಗಗಳಿಗೆ ಇದೊಂದು ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ.
ದುರ್ವಾಸನೆ ನಿವಾರಣೆ
ಸಿಕ್ಕ ಸಿಕ್ಕ ಆಹಾರ ಬಾಯಿಯ ದುರ್ವಾಸನೆಗೂ ಕಾರಣವಾಗಿ ಸಾರ್ವಜನಿಕ ವ್ಯವಹಾರ, ಮುಕ್ತ ಚರ್ಚೆಯಲ್ಲಿ ನಮ್ಮನ್ನು ತೋಡಗುವಾಗ ಮುಜುಗರಕ್ಕೆ ಎಡೆಮಾಡಿಕೊಡುತ್ತದೆ. ಈ ಕಾರಣದಿಂದ ದಿನಾ ತುಳಸಿ ಎಲೆಯನ್ನು ಜಗಿಯುತ್ತಿದ್ದರೆ ಬಾಯಿಯ ದುರ್ವಾಸನೆ ಇರಲಾರದು.
ಡಯಾಬಿಟಿಸ್ ನಿಯಂತ್ರಣ
ತುಳಸಿ ಗಿಡದ ರಸವನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಸಾಧ್ಯವಿದೆ. ಇದು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ತುಳಸಿ ಎಲೆಯನ್ನು ಒಣಗಿಸಿ ಪುಡಿಯ ರೂಪದಲ್ಲಿ ಅಥವಾ ಹಾಗೆಯೇ ರಸವನ್ನು ಕೂಡಾ ಸೇವನೆ ಮಾಡಿ ಸಕ್ಕರೆ ಕಾಯಿಲೆಗೆ ಪರಿಹಾರ ಕಂಡುಕೊಳ್ಳಬಹುದು. ಹೀಗೆ ಮಾಡುವುದರಿಂದ ದೇಹದಲ್ಲಿರುವ ಇನ್ಸುಲಿನ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
ಹಲ್ಲಿನ ಸಮಸ್ಯೆ ನಿವಾರಣೆಗೆ
ಹಲ್ಲು ನೋವು, ಬಾತುವುದು, ಹಲ್ಲುಕುಳಿ ನೋವು ಮುಂತಾದ ಸಮಸ್ಯೆ ನಿವಾರಣಗೆ ತುಳಸಿ ರಸವನ್ನು ಉಪಯೋಗಿಸಬೇಕು. ತುಳಸಿ ಎಲೆಯನ್ನು ಒಣಗಿಸಿ ಪುಡಿ ಮಾಡಿ ಬಳಸಬಹುದು ಇಲ್ಲವೆ ರಸವನ್ನು ಹಾಗೆಯೇ ಕೂಡ ಬಳಸಬಹುದು. ಎಲೆಗೆ ಉಪ್ಪು, ಸಾಸಿವೆ ಎಣ್ಣೆಯನ್ನು ಬಳಸಿ ಪೇಸ್ಟ್ ರೂಪದಲ್ಲಿ ಕೂಡ ಉಪಯೋಗಿಸುವುದು ಹಲ್ಲಿನ ಸಮಸ್ಯೆ ನಿವಾರಿಸಲು ಸಾಧ್ಯವಾಗಿದೆ.
ಅಜೀರ್ಣ ಸಮಸ್ಯೆ ನಿಯಂತ್ರಣಕ್ಕೆ
ಜೀರ್ಣ ಶಕ್ತಿ ಮಾನವ ದೇಹದಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದು ಉತ್ತಮ ಜೀರ್ಣಕ್ರಿಯೆಯಿಂದ ದೇಹವು ಆರೋಗ್ಯಪೂರ್ಣವಾಗಿರಲು ಸಾಧ್ಯ. ತುಳಸಿ ಎಲೆಗೆ ಜೇನುತುಪ್ಪ ಬೇರೆಸಿ ಸೇವಿಸುವುದು, ಎಲೆಯನ್ನು ನೀರಿನಲ್ಲಿ ಕುದಿಸಿ ಕೂಡಾ ನೀವು ತುಳಸಿಯ ಪೋಷಕಾಂಶಗಳನ್ನು ಸೇವಿಸಬಹುದಾಗಿದೆ. ಕಣ್ಣು, ಗಾಯಗಳಿಗೂ ತುಳಸಿ ಉತ್ತಮ.
-ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.