ಭವಿಷ್ಯದಲ್ಲಿ ಉಕ್ರೇನಿಯನ್ನರನ್ನು ಕಾಡಲಿದೆ ಗಂಭೀರ ಆರೋಗ್ಯ ಸಮಸ್ಯೆಗಳು


Team Udayavani, May 30, 2022, 11:24 AM IST

ಭವಿಷ್ಯದಲ್ಲಿ ಉಕ್ರೇನಿಯನ್ನರನ್ನು ಕಾಡಲಿದೆ ಗಂಭೀರ ಆರೋಗ್ಯ ಸಮಸ್ಯೆಗಳು

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ದಿನಕ್ಕೊಂದು ಮಾಹಿತಿ ಲಭ್ಯವಾಗುತ್ತಿದೆ ಯಾದರೂ ಇಲ್ಲಿನ ಪರಿಸ್ಥಿತಿ ಮುಂದೆ ಯಾವ ಹಂತಕ್ಕೆ ತಲುಪಬಹುದು ಎಂಬುದನ್ನು ಊಹಿಸಲು ಯಾರಿಂದಲೂ ಅಸಾಧ್ಯ. ಸದ್ಯಕ್ಕಂತೂ ಯುದ್ಧ ಅಂತ್ಯಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ಮೂರು ತಿಂಗಳುಗಳಿಂದ ರಷ್ಯಾ ಪಡೆಗಳು ಉಕ್ರೇನ್‌ನ ಮೇಲೆ ಅವ್ಯಾಹತವಾಗಿ ದಾಳಿ ನಡೆಸುತ್ತಲೇ ಇವೆ. ಇದರ ಪರಿಣಾಮ ಉಕ್ರೇನ್‌ ಅಕ್ಷರಶಃ ಜರ್ಝರಿತವಾಗಿದೆ. ಯುದ್ಧದ ಕರಾಳ ಛಾಯೆ ಇದೀಗ ಉಕ್ರೇನಿಯನ್ನರನ್ನು ಸಂಪೂರ್ಣವಾಗಿ ಆವರಿಸಿದ್ದು ಈಗಾಗಲೇ ಅವರ ಪಾಲಿಗೆ ಬದುಕು ಅಸಹನೀಯ ಎನಿಸತೊಡಗಿದೆ. ಈ ಯುದ್ಧದ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳ ಕುರಿತಂತೆ ತಜ್ಞರು ಅಧ್ಯಯನ ನಡೆಸತೊಡಗಿದ್ದಾರೆ. ಸಮರೋತ್ತರ ಉಕ್ರೇನ್‌ನ ಪರಿಸ್ಥಿತಿ, ಮುಂದಿನ ದಿನಗಳಲ್ಲಿ ಇಲ್ಲಿನ ಜನಜೀವನ ಹೇಗಿರಬಹುದು, ದಾಳಿಗೊಳಗಾದ ಮತ್ತು ಸುತ್ತಮುತ್ತಲಿನ ಜನರ ಆರೋಗ್ಯದ ಮೇಲಣ ಪರಿಣಾಮಗಳು…ಈ ಎಲ್ಲ ವಿಷಯ ಗಳನ್ನು ಕೇಂದ್ರೀಕರಿಸಿ ಈ ಅಧ್ಯಯನಗಳು ನಡೆಯುತ್ತಿವೆ. ಈ ಅಧ್ಯಯನಗಳ ವೇಳೆ ಕೆಲವೊಂದು ಆಘಾತಕಾರಿ
ಅಂಶಗಳು ಬಹಿರಂಗವಾಗಿವೆ.

ಕ್ಯಾನ್ಸರ್‌ ರೋಗಿಗಳ ಆರೈಕೆಗೂ ಅಡಚಣೆ
ಕೋವಿಡ್‌ ಬಳಿಕ ಉಕ್ರೇನ್‌ನಲ್ಲಿ ಕ್ಯಾನ್ಸರ್‌ ರೋಗಿಗಳ ಆರೈಕೆ ಕೇಂದ್ರಗಳು ಹಿಂದಿನಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದೀಗ ಯುದ್ಧದ ಪರಿಣಾಮ ಈ ಕೇಂದ್ರಗಳು ಬಹುತೇಕ ಸ್ತಬ್ಧಗೊಂಡಿವೆ. ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗಳಲ್ಲಿ ಕ್ಯಾನ್ಸರ್‌ ಸರ್ಜರಿ ಸಹಿತ ಬಹುತೇಕ ಶಸ್ತ್ರಚಿಕಿತ್ಸೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಯಲ್ಲಿ ಮುಖ್ಯವಾಗಿರುವ ಕಾಯಿಲೆ ಪತ್ತೆ ಪರೀಕ್ಷೆ, ಕಿಮೋ ಥೆರಪಿ ಮತ್ತು ರೇಡಿಯೋಥೆರಪಿ ಸಹಿತ ಅಗತ್ಯ ಆರೋಗ್ಯ ಸೇವೆಗಳು ಸ್ಥಗಿತಗೊಂಡಿದೆ ಎಂದು ಲಾನ್ಸೆಟ್‌ ವರದಿ ಮಾಡಿದೆ.

ಉಕ್ರೇನ್‌ನಲ್ಲಿ 1,500 ಕ್ಕೂ ಹೆಚ್ಚು ಮಕ್ಕಳು ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿ¨ªಾರೆ. ವೈದ್ಯರ ಪ್ರಕಾರ ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗೆ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಶೇ. 80ರಷ್ಟು ಮಕ್ಕಳು ಸಂಪೂರ್ಣ ಗುಣಮುಖರಾಗಲು ಸಾಧ್ಯ. ಆದರೆ ಇದೀಗ ಚಿಕಿತ್ಸೆಯ ಖಾತರಿಯೇ ಇಲ್ಲವಾದ್ದರಿಂದ ಈ ಮಕ್ಕಳ ಭವಿಷ್ಯವೇ ತೂಗುಯ್ನಾಲೆಯಲ್ಲಿದೆ.

ಸಾಂಕ್ರಾಮಿಕ ರೋಗಗಳ ಬಾಧೆ
ರಷ್ಯಾ ಸೇನೆ ಉಕ್ರೇನ್‌ ಮೇಲೆ ನಡೆಸುತ್ತಿರುವ ಆಕ್ರಮಣದಿಂದಾಗಿ ಉಕ್ರೇನ್‌ನಲ್ಲಿ ಸಾಂಕ್ರಾಮಿಕ ರೋಗಗಳ ಉಲ್ಬಣಕ್ಕೆ ಕಾರಣವಾಗಬಹುದು ಮತ್ತು ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಆಹ್ವಾನ ನೀಡ ಬಹುದು ಎಂದು ಸಂಶೋಧನ ತಜ್ಞರು ಎಚ್ಚರಿಸಿದ್ದಾರೆ.

ಲ್ಯಾನ್ಸೆಟ್‌ ನಿಯತಕಾಲಿಕ ನಡೆಸಿದ ಅಧ್ಯ ಯನದ ಪ್ರಕಾರ, ಇಲ್ಲಿನ ಬಹುತೇಕ ಆಸ್ಪತ್ರೆ ಗಳಲ್ಲಿ ಯುದ್ಧದಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಕೋವಿಡ್‌ ಮತ್ತು ಇನ್ನಿತರ ರೋಗಗಳಿಂದ ಬಳಲುತ್ತಿರುವವರ ಮೇಲೆ ಹೆಚ್ಚಿನ ನಿಗಾ ಇರಿಸಲು ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗೆ ಸಾಧ್ಯವಾಗುತ್ತಿಲ್ಲ. ಅಷ್ಟು ಮಾತ್ರ ವಲ್ಲದೆ ವೈದ್ಯಕೀಯ ಸಂಪನ್ಮೂಲ ಮತ್ತು ಚಿಕಿತ್ಸಾ ಪರಿಕರಗಳು ಕೂಡ ಯುದ್ಧದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಬಳಕೆಯಾಗುತ್ತಿದೆ. ಇದರಿಂದಾಗಿ ಈಗಾಗಲೇ ವಿವಿಧ ಕಾಯಿ ಲೆಗಳಿಂದ ಬಳಲುತ್ತಿರುವವರ ಆರೋಗ್ಯ ಸ್ಥಿತಿ ಹದಗೆಡುವ ಮತ್ತು ಸಹಜ ವಾಗಿಯೇ ಸಾಂಕ್ರಾಮಿಕ ಕಾಯಿಲೆಗಳು ತೀವ್ರಗತಿಯಲ್ಲಿ ಹರಡುವ ಸಾಧ್ಯತೆಗಳು ಅಧಿಕವಾಗಿವೆ. ಈಗಾಗಲೇ ಉಕ್ರೇನ್‌ನ ಬಹುತೇಕ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಕಾಣಿಸಿಕೊಂಡಿದ್ದು ಔಷಧ ಮತ್ತು ಇನ್ನಿತರ ವೈದ್ಯಕೀಯ ಪರಿಕರಗಳ ಪೂರೈಕೆಯ ಮೇಲೂ ಭಾರೀ ಪರಿಣಾಮ ಬೀರಿದೆ.

ಯುದ್ಧದ ಪರಿಣಾಮ ಉಕ್ರೇನ್‌ನಲ್ಲಿ ಪೋಲಿಯೋ ಪರೀಕ್ಷೆ ಮತ್ತು ಲಸಿಕೆ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದ್ದು ಇತ್ತ ವಿಶ್ವ ಆರೋಗ್ಯ ಸಂಸ್ಥೆ ಬೆಟ್ಟು ಮಾಡಿದೆ. ಯುರೋಪ್‌ ಅನ್ನು ಪೋಲಿಯೋ ಮುಕ್ತ ಎಂದು ಘೋಷಿಸಿದ 19 ವರ್ಷಗಳ ಅನಂತರ 2021ರ ಅಕ್ಟೋಬರ್‌ನಲ್ಲಿ ಉಕ್ರೇನ್‌ನಲ್ಲಿ ಮೊದಲ ಪೋಲಿಯೋ ಪ್ರಕರಣ ದಾಖಲಾಗಿದೆ. ಇದೇ ವೇಳೆ ಯುದ್ಧ ಆರಂಭಗೊಂಡ ಬಳಿಕ ಉಕ್ರೇನ್‌ನ ಹಲ ವೆಡೆ ಆಹಾರದ ಅಭಾವ ಕಾಣಿಸಿ ಕೊಂಡಿದ್ದು ಇದರಿಂದಾಗಿ ಮಕ್ಕಳಿಗೆ ಅಗತ್ಯ ವಾದ ಪೋಷಕಾಂಶಗಳು ಲಭಿಸದಂತಾಗಿದೆ.

ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
ರಷ್ಯಾದ ಸೇನಾ ಆಕ್ರಮಣವು ಉಕ್ರೇನಿಯನ್ನರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮಗಳನ್ನು ಬೀರಲಿದೆ. ದೈಹಿಕ ಮತ್ತು ಮಾನಸಿಕವಾಗಿ ಇಲ್ಲಿನ ಜನರು ಈಗಾಗಲೇ ಕುಸಿದು ಹೋಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ದೀರ್ಘ‌ಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ವೈದ್ಯರ ಕೊರತೆ
ಕಳೆದ ಕೆಲವು ವರ್ಷಗಳಿಂದೀಚೆಗೆ ಉಕ್ರೇನ್‌ನ ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣ ಪ್ರಕ್ರಿಯೆಗಳು ನಡೆದಿದ್ದು ಈ ಯುದ್ಧದಿಂದಾಗಿ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಬಿಗಡಾಯಿಸುವ ಪರಿಸ್ಥಿತಿ ತಲೆದೋರಿದೆ. ರಷ್ಯಾ ಸೇನೆ ಉಕ್ರೇನ್‌ನಲ್ಲಿನ ಆಸ್ಪತ್ರೆಗಳು, ಚಿಕಿತ್ಸಾಲಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವ ಪರಿಣಾಮ ಆರೋಗ್ಯ ಸೇವೆಯಲ್ಲಿ ಭಾರೀ ವ್ಯತ್ಯಯ ಕಂಡುಬಂದಿದೆ. ಆರೋಗ್ಯ ಕಾರ್ಯಕರ್ತರು, ವೈದ್ಯರು, ಆರೋಗ್ಯ ಸಿಬಂದಿ ಕೊರತೆ ವ್ಯಾಪಕವಾಗಿದ್ದರೆ ಅಗತ್ಯ ಔಷಧಗಳಾಗಲಿ, ವೈದ್ಯಕೀಯ ಸಾಧನ, ಉಪಕರಣಗಳ ಅಲಭ್ಯತೆ ಕಾಡತೊಡಗಿದೆ. ಯುದ್ಧ ಇನ್ನೂ ತಿಂಗಳುಗಳ ಕಾಲ ಮುಂದುವರಿದಲ್ಲಿ ಜನರ ಆರೋಗ್ಯ ರಕ್ಷಣೆ ಬಲುದೊಡ್ಡ ಸವಾಲಾಗಲಿದೆ.

ಪೋಲಿಯೋ ಪಿಡುಗು
2021ರ ಉಕ್ರೇನ್‌ನಲ್ಲಿ ಒಂದು ಪೋಲಿಯೋ ಪ್ರಕರಣ ದೃಢಪಟ್ಟಿದ್ದರೆ 19 ಲಕ್ಷಣ ರಹಿತ ಪ್ರಕರಣಗಳು ದಾಖಲಾಗಿದ್ದವು. ದೇಶದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಕೇಂದ್ರದ ಪ್ರಕಾರ, ಕೇವಲ ಶೇ. 53ರಷ್ಟು ಮಕ್ಕಳಿಗೆ ಮಾತ್ರ ಪೋಲಿಯೋ ಲಸಿಕೆ ನೀಡಲಾಗಿದೆ. ಈ ವರ್ಷದ ಆರಂಭದಲ್ಲಿ ಸುಮಾರು ಲಸಿಕೆ ಪಡೆಯದ 1,40,000ಮಕ್ಕಳಿಗೆ ಲಸಿಕೆ ನೀಡಲು ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿತ್ತಾದರೂ ಯುದ್ಧದ ಪರಿಣಾಮ ಈ ಅಭಿಯಾನ ಸ್ಥಗಿತಗೊಂಡಿದೆ. ಭವಿಷ್ಯದಲ್ಲಿ ಪೋಲಿಯೋ ಸಮಸ್ಯೆ ದೇಶದಲ್ಲಿ ಇನ್ನಷ್ಟು ತೀವ್ರಗೊಳ್ಳುವ ಆತಂಕ ಸೃಷ್ಟಿಯಾಗಿದೆ.

ಇತರ ಸವಾಲುಗಳು
ಮಾನವ ಕಳ್ಳಸಾಗಣೆ, ಲಿಂಗ ಆಧಾರಿತ ಹಿಂಸೆ, ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯ ಸಮಸ್ಯೆ ಸಹಿತ ಇನ್ನಿತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಲಿದೆ ಎಂದು ಅಧ್ಯಯನ ವರದಿಗಳು ತಿಳಿಸಿವೆ. ಕೋವಿಡ್‌ ಸಾಂಕ್ರಾಮಿಕ ಮತ್ತು ರಷ್ಯಾ ಆಕ್ರಮಣದ ಮೊದಲು ಉಕ್ರೇನ್‌ನಲ್ಲಿ ಜನರ ಜೀವಿತಾವಧಿ ತುಲನಾತ್ಮಕವಾಗಿ ಕಡಿಮೆಯಾಗಿತ್ತು. ಮುಂದಿನ ವರ್ಷಗಳಲ್ಲಿ ಇದು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.

ಕೋವಿಡ್ 19 ನಿಂದಾದ ಪರಿಣಾಮ
ರಷ್ಯಾ-ಉಕ್ರೇನ್‌ ಸಂಘರ್ಷವು ಕೋವಿಡ್‌-19 ಸೋಂಕಿನ ಹರಡುವಿಕೆಯನ್ನು ಹೆಚ್ಚಿಸುತ್ತದೆ ಎಂದು ಡಬ್ಲ್ಯುಎಚ್‌ಒ ಎಚ್ಚರಿಸಿದೆ. ಇದರ ಪ್ರಕಾರ, 2022ರ ಮಾರ್ಚ್‌ 14ರ ವರೆಗೆ ಉಕ್ರೇನ್‌ನಲ್ಲಿ 4.8 ದಶಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದೃಢಪಟ್ಟಿದ್ದರೆ 1,06,985 ಸಾವು ಸಂಭವಿಸಿದೆ. ಮತ್ತೆ ಕೆಲವೊಂದು ವರದಿಗಳ ಪ್ರಕಾರ ಈ ವರ್ಷದ ಫೆಬ್ರವರಿ ಅಂತ್ಯಕ್ಕೆ ಹೋಲಿಸಿದರೆ ಮಾರ್ಚ್‌ನಲ್ಲಿ ದಾಖಲಾದ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಯುದ್ಧ ಆರಂಭಗೊಂಡ ಬಳಿಕ ಕೋವಿಡ್‌ ಪರೀಕ್ಷೆ ಬಹುತೇಕ ಸ್ಥಗಿತಗೊಂಡಿರುವುದೇ ಇದಕ್ಕೆ ಕಾರಣ. ಯುದ್ಧ ಆರಂಭವಾಗುತ್ತಿದ್ದಂತೆ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ನೆಲಮಾಳಿಗೆ, ಭೂಗತ ಮೆಟ್ರೋ ನಿಲ್ದಾಣ ಹೀಗೆ ನಾನಾ ಕಡೆಗಳಲ್ಲಿ ಆಶ್ರಯ ಪಡೆದರು. ಇನ್ನು ಲಕ್ಷಾಂತರ ಸಂಖ್ಯೆಯಲ್ಲಿ ಜನರು ನೆರೆ ರಾಷ್ಟ್ರಗಳಿಗೆ ವಲಸೆ ಹೋದರು. ಪ್ರಾಣಭೀತಿಯ ಸಂದರ್ಭದಲ್ಲಿ ಶುಚಿತ್ವ, ನೈರ್ಮಲ್ಯ, ಶುದ್ಧ ಆಹಾರ, ದಟ್ಟಣೆ ಇವೆಲ್ಲದರತ್ತ ಲಕ್ಷ್ಯ ಹರಿಸುವ ಪ್ರಶ್ನೆಯಾದರೂ ಎಲ್ಲಿಂದ?. ಸಹಜವಾಗಿಯೇ ಇವೆಲ್ಲವೂ ಕೋವಿಡ್‌ನ‌ ಜತೆಯಲ್ಲಿ ಇತರ ಸಾಂಕ್ರಾಮಿಕ ರೋಗಗಳು ಹರಡಲೂ ಕಾರಣವಾಯಿತು. ದಡಾರ, ಪೋಲಿಯೋ, ಶ್ವಾಸಕೋಶದ ಸೋಂಕುಗಳು, ಕ್ಷಯ, ಎಚ್‌ಐವಿ, ಅತಿಸಾರದಂತಹ ಕಾಯಿಲೆಗಳು ಹರಡಲು ಈ ಬೆಳವಣಿಗೆಗಳು ಪೂರಕ ಎನ್ನುತ್ತಾರೆ ಆರೋಗ್ಯ ತಜ್ಞರು.

- ಪ್ರೀತಿ ಭಟ್‌, ಗುಣವಂತೆ

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.