Vaccines: ವಯಸ್ಕರಿಗೆ ಲಸಿಕೆಗಳು
Team Udayavani, Nov 10, 2024, 3:45 PM IST
ಪ್ರತೀ ಮಕ್ಕಳಿಗೆ ರಾಷ್ಟ್ರೀಯ ಲಸಿಕಾಕರಣ ಕಾರ್ಯಕ್ರಮದಡಿಯಲ್ಲಿ ಸುಮಾರು 12 ಸಾಂಕ್ರಾಮಿಕ ರೋಗಗಳನ್ನು ತಡೆಯಲು ಲಸಿಕೆಗಳನ್ನು ದೇಶಾದ್ಯಂತ ನೀಡಲಾಗುತ್ತಿದೆ. ಈ ಲಸಿಕೆಗಳು ಲಸಿಕೆ ಪಡೆದವರಲ್ಲಿ ಸಂಬಂಧಿಸಿದ ಕಾಯಿಲೆ ಗಂಭೀರ ರೂಪದಲ್ಲಿ ಬಾರದಂತೆ ತಡೆಯುತ್ತದೆ. ಆದರೆ ಹಲವು ವರ್ಷಗಳ ಬಳಿಕ ಲಸಿಕೆ ಪಡೆದವರಲ್ಲಿ ಈ ಲಸಿಕೆಗಳ ರಕ್ಷಣೆ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಬಾಲ್ಯ ದಲ್ಲಿ ಲಸಿಕೆಗಳನ್ನು ಪಡೆಯುವುದು ಸಾಮಾನ್ಯ ವಾಗಿದ್ದರೂ ವಯಸ್ಕರಿಗೆ, ಮುಖ್ಯವಾಗಿ ಹೆಚ್ಚಿನ ರೋಗಗಳ ಅಪಾಯ ಹೊಂದಿದವರಿಗೆ, ರೋಗ ಪ್ರತಿಬಂಧಕ ಶಕ್ತ ಕಡಿಮೆ ಇರುವವರಿಗೆ ವಿವಿಧ ಕಾಯಿಲೆಗಳಿಂದ ರಕ್ಷಿಸಲು ಲಸಿಕೆಗಳು ಪುನಃ ನಿರ್ಣಾಯಕ ಪಾತ್ರ ವಹಿಸುತ್ತದೆ.
ಯಾವುದೇ ವ್ಯಕ್ತಿಗೆ 19 ವರ್ಷಗಳ ಅನಂತರ ರೋಗ ಬಾರದಂತೆ ನೀಡುವ ಲಸಿಕೆಗಳಿಗೆ ವಯಸ್ಕರ ಲಸಿಕಾಕರಣ ಎಂದು ಕರೆಯುತ್ತಾರೆ. ತಜ್ಞರು ಶಿಫಾರಸು ಮಾಡಿದ ಲಸಿಕೆಗಳನ್ನು ತೆಗೆದು ಕೊಳ್ಳುವುದರಿಂದ ವಯಸ್ಕರು ತಮ್ಮನ್ನು ತಾವು ಕೆಲವು ಕಾಯಿಲೆಗಳಿಂದ, ಅವುಗಳ ಗಂಭೀರ ಪರಿಣಾಮಗಳಿಂದ ರಕ್ಷಿಸಿಕೊಳ್ಳಬಹುದು. ಆರೋಗ್ಯ ರಕ್ಷಣೆ ಮತ್ತು ರೋಗ ತಡೆಗಟ್ಟುವಿಕೆ ಯಲ್ಲಿ ಲಸಿಕೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತೀ ವರ್ಷ ನವೆಂಬರ್ ವಯಸ್ಕ ರಿಗೆ ಲಸಿಕೆಗಳು 10ರಂದು ವಿಶ್ವ ಲಸಿಕಾ ದಿನವೆಂದು ಆಚರಿಸಲಾಗುತ್ತದೆ.
ವಯಸ್ಕರು ತೆಗೆದುಕೊಳ್ಳಬಹುದಾದ ಲಸಿಕೆಗಳು ಫ್ಲೂ/ಇನ್‌ಫ್ಲುಯೆಂಜಾ ಲಸಿಕೆ
ಇನ್‌ಫ್ಲುಯೆಂಜಾವನ್ನು ಸಾಮಾನ್ಯವಾಗಿ ಫ್ಲೂ ಎಂದು ಕರೆಯುತ್ತಾರೆ. ಇದು ವಯಸ್ಕರಲ್ಲಿ ಅದರಲ್ಲಿಯೂ ಮುಖ್ಯವಾಗಿ ಇತರ ಸಹ ಕಾಯಿಲೆ ಹೊಂದಿದವರಲ್ಲಿ ತೀವ್ರವಾದ ತೊಡಕುಗಳನ್ನು ಉಂಟುಮಾಡಬಹುದು. ಇನ್‌ಫ್ಲುಯೆಂಜಾ ಲಸಿಕೆಯನ್ನು ಸಾಮಾನ್ಯವಾಗಿ ವಯಸ್ಸಾದವರು, ಗರ್ಭಿಣಿಯರು, ಆರೋಗ್ಯ ಕಾರ್ಯಕರ್ತರು ಮತ್ತು ದೀರ್ಘಕಾಲದ ಆನಾರೋಗ್ಯದಿಂದ ಬಳಲುತ್ತಿರುವವರು ವರ್ಷಕ್ಕೊಮ್ಮೆ ತೆಗೆದುಕೊಳ್ಳಬಹುದಾಗಿದೆ. ಇದನ್ನು ಇಂಟ್ರಾಮಸ್ಕಾಲರ್ ಅಂದರೆ ಸ್ನಾಯುವಿನೊಳಗೆ ಇಂಜೆಕ್ಷನ್ ಅಥವಾ ಮೂಗಿನ ಸಿಂಪರಣೆ ರೂಪದಲ್ಲಿ ನೀಡಲಾಗುತ್ತದೆ. ಪ್ರತೀ ಡೋಸ್‌ಗೆ 1,500-2,500 ರೂ. ವೆಚ್ಚವಾಗುತ್ತದೆ.
ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್‌ಪಿವಿ) ಲಸಿಕೆ
ಇದು ಪ್ಯಾಪಿಲೋಮ ಎಂಬ ವೈರಸ್ ಸಂಬಂಧಿಸಿದ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ. ಇದರಲ್ಲಿ ಎರಡು ತರಹದ ಲಸಿಕೆಗಳು ಲಭ್ಯವಿವೆ – ಕ್ವಾಡ್ರಾವೇಲೆಂಟ್ (ಎಚ್‌ಪಿವಿ ವಿಧಗಳು 6, 11, 16 ಮತ್ತು 18) ಮತ್ತು ದ್ವಿ-ವ್ಯಾಲೆಂಟ್ (ಎಚ್‌ಪಿವಿ ಪ್ರಕಾರಗಳು 16 ಮತ್ತು 18). ಲೈಂಗಿಕ ಚಟುವ ಟಿಕೆ ಪ್ರಾರಂಭವಾಗುವ ಮೊದಲು, ಅಂದರೆ ಎಚ್‌ಪಿವಿ ಸೋಂಕಿಗೆ ಒಡ್ಡಿಕೊಳ್ಳುವ ಮೊದಲು ಎರಡೂ ಲಸಿಕೆಗಳನ್ನು ಮಹಿಳೆಯರಿಗೆ ನೀಡಬಹುದು. 26 ವರ್ಷದವರೆಗೆ ಎಲ್ಲ ಮಹಿಳೆಯರಿಗೆ ಈ ಲಸಿಕೆ ನೀಡಬಹುದು. 15 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ 0, 1 ಮತ್ತು 6 ತಿಂಗಳುಗಳಲ್ಲಿ 3 ಡೋಸ್‌ಗಳನ್ನು ತೆಗೆದುಕೊಳ್ಳಬೇಕು. ಆರಂಭಿಕ ಲಸಿಕೆ ಸಮಯದಲ್ಲಿ 9-14 ವರ್ಷ ವಯಸ್ಸಾಗಿದ್ದರೆ ಒಂದು ಹೆಚ್ಚುವರಿ ಡೋಸ್ ತೆಗೆದುಕೊಳ್ಳಬಹುದು. 27-45 ವರ್ಷ ವಯಸ್ಸಿನ ಜನರಲ್ಲಿ 2 ಅಥವಾ 3 ಡೋಸ್ ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರಲ್ಲಿ 3 ಡೋಸ್ ಲಸಿಕೆಯನ್ನು ತೆಗೆದುಕೊಳ್ಳಬಹುದು. ಇದನ್ನು ಇಂಟ್ರಾಮಸ್ಕಾಲರ್ ಇಂಜೆಕ್ಷನ್ ಆಗಿ ನೀಡಲಾಗುತ್ತದೆ ಮತ್ತು ಪ್ರತೀ ಡೋಸ್ ಗೆ ಸುಮಾರು 2,500 – 4,000 ರೂ. ವೆಚ್ಚವಾಗುತ್ತದೆ. ಲಸಿಕೆ ದೀರ್ಘಾವಧಿಯ ರಕ್ಷಣೆ ನೀಡುತ್ತದೆ ಮತ್ತು ಬೂಸ್ಟರ್ ಡೋಸ್ ಸಾಮಾನ್ಯವಾಗಿ ಅಗತ್ಯವಿಲ್ಲ.
ನ್ಯುಮೋಕೊಕಲ್ ಲಸಿಕೆ
ಈ ಲಸಿಕೆಯು ನ್ಯುಮೋನಿಯಾ ಮತ್ತು ಮೆದುಳಿನ ಜ್ವರ ಕಾಯಿಲೆಯಿಂದ ರಕ್ಷಿಸುತ್ತದೆ. ಇದರಲ್ಲಿ ಎರಡು ವಿಧಗಳಿವೆ- PCV13 (Prevnar 13), PPSV23 (Pneumovax 23). PCV13. ಅನ್ನು ಎಲ್ಲ ಮಕ್ಕಳು ಮತ್ತು ಅಪಾಯದಲ್ಲಿರುವ ವಯಸ್ಕರಿಗೆ, ಪಿಪಿಎಸ್‌ವಿ23 ಅನ್ನು 65+ ವರ್ಷ ವಯಸ್ಕರಿಗೆ ಅಥವಾ ಕಿರಿಯ ವಯಸ್ಸಿನ ನಿರ್ದಿಷ್ಟ ಆರೋಗ್ಯ ಪರಿಸ್ಥಿತಿಗಳನ್ನು (ಡಯಾಬಿಟಿಸ್, ಹೃದಯ ರೋಗಗಳನ್ನು) ಹೊಂದಿರುವ ಜನರಿಗೆ ನೀಡಬಹುದು. ಇದನ್ನು ಇಂಟ್ರಾಮಸ್ಕಾಲರ್ ಅಥವಾ ಸಬ್‌ಕುಟೇನಿಯಸ್ ಅಂದರೆ ಚರ್ಮ ದಡಿಯ ಇಂಜೆಕ್ಷನ್ ಆಗಿ ನೀಡಲಾಗುತ್ತದೆ. ಪಿಸಿವಿ 13 ಲಸಿಕೆಯನ್ನು ಮೊದಲು ನೀಡಲಾ ಗುತ್ತದೆ ಮತ್ತು ಅನಂತರ ಪಿಪಿಎಸ್‌ವಿ23 ಅನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ 2 ತಿಂಗಳ ಅನಂತರ ಮತ್ತು ಕೆಲವು ಸಂದರ್ಭಗಳಲ್ಲಿ 1 ವರ್ಷದ ಅನಂತರ. ಇದರ ಬೆಲೆ ಸುಮಾರು 2,000 – 4,500 ರೂ. ಪಿಸಿವಿ13 ಅನ್ನು ಒಮ್ಮೆ ಮಾತ್ರ ನೀಡಲಾಗುತ್ತದೆ. ಪಿಪಿಎಸ್‌ವಿ 23ಗೆ ಕೆಲವು ಸಂದರ್ಭಗಳಲ್ಲಿ 5 ವರ್ಷಗಳ ಅನಂತರ ಒಂದು ಬೂಸ್ಟರ್ ಡೋಸ್ ಬೇಕಾಗಬಹುದು.
ಹೆಪಟೈಟಿಸ್ ಬಿ ಲಸಿಕೆ
ಈ ಲಸಿಕೆ ಹೆಪಟೈಟಿಸ್ ಬಿ ವೈರಸ್ (ಎಚ್‌ಬಿವಿ) ಸೋಂಕಿನಿಂದ ರಕ್ಷಿಸುತ್ತದೆ. ಈ ಸೋಂಕು ಲಿವರ್ ಕ್ಯಾನ್ಸರ್‌ನಂತಹ ಕಾಯಿಲೆಗೆ ಕಾರಣವಾಗಬಹುದು. ಎಲ್ಲ ಶಿಶುಗಳು, ಲಸಿಕೆ ಹಾಕದ ಮಕ್ಕಳು ಮತ್ತು ಈ ರೋಗದ ಅಪಾ ಯದಲ್ಲಿರುವ ವಯಸ್ಕರು ಲಸಿಕೆಯನ್ನು 3 ಬಾರಿ ಹಾಕಿಸಿಕೊಳ್ಳಬೇಕು. ಇದನ್ನು ಇಂಟ್ರಾಮಸ್ಕಾಲರ್ ಇಂಜೆಕ್ಷನ್ ಆಗಿ ನೀಡಲಾಗುತ್ತದೆ ಮತ್ತು ಪ್ರತೀ ಡೋಸ್‌ಗೆ ಬೆಲೆ ಸುಮಾರು 100-900 ರೂ. ಎಲ್ಲ ಡೋಸ್ ಪೂರ್ಣಗೊಳಿಸಿದ ಅನಂತರ ಇದು ದೀರ್ಘಾವಧಿ ರಕ್ಷಣೆಯನ್ನು ಒದಗಿಸು ತ್ತದೆ. ಹೆಚ್ಚಿನ ಅಪಾಯದ ಜನರನ್ನು ಹೊರತು ಪಡಿಸಿ ಬೂಸ್ಟರ್ ಡೋಸ್‌ಗಳು ಸಾಮಾನ್ಯವಾಗಿ ಅಗತ್ಯವಿಲ್ಲ.
ಹೆಪಟೈಟಿಸ್ ಎ ಲಸಿಕೆ
ಈ ಲಸಿಕೆಯು ಯಕೃತ್ತಿನ ಕಾಯಿಲೆ, ಕಾಮಾಲೆ ಕಾರಣವಾಗುವ ಹೆಪಟೈಟಿಸ್ ಎ ವೈರಸ್ (ಎಚ್ ಎವಿ) ವಿರುದ್ಧ ರಕ್ಷಣೆ ನೀಡುತ್ತದೆ. ಎಲ್ಲ ಮಕ್ಕಳು (ಮೊದಲ ಡೋಸ್ ಅನ್ನು ಮಗುವಿಗೆ ಒಂದು ವರ್ಷ ವಯಸ್ಸಾದಾಗ ನೀಡಲಾಗುತ್ತದೆ) ಮತ್ತು ಅಪಾಯದಲ್ಲಿರುವ ವಯಸ್ಕರು ಈ ಲಸಿಕೆಯನ್ನು ಪಡೆಯಬಹುದು. ಇದನ್ನು ಇಂಟ್ರಾಮಸ್ಕಾಲರ್ ಇಂಜೆಕ್ಷನ್ ಆಗಿ ನೀಡಲಾಗುತ್ತದೆ ಮತ್ತು ಪ್ರತೀ ಡೋಸ್‌ಗೆ ಸುಮಾರು 900 – 2,000 ರೂ. ವೆಚ್ಚವಾಗುತ್ತದೆ. ಇದು 6 ತಿಂಗಳ ಅಂತರದಲ್ಲಿ ತೆಗೆದುಕೊಂಡ ಎರಡು ಡೋಸ್ಗಳೊಂದಿಗೆ ದೀರ್ಘಾವಧಿಯ ರಕ್ಷಣೆಯನ್ನು ಒದಗಿಸುತ್ತದೆ. ನಿಯಮಿತ ಬೂಸ್ಟರ್ ಅಗತ್ಯವಿಲ್ಲ.
ಶಿಂಗಲ್ಸ್ (ಸರ್ಪಸುತ್ತು) ಈ ಲಸಿಕೆಯು ಸರ್ಪಸುತ್ತು ಸಂಭವಿಸಿದ ಅನಂತರ ನರಗಳಲ್ಲಿ ಉಂಟಾಗುವ ತೀವ್ರವಾದ ನೋವಿನಿಂದ (ಟಟsಠಿ ಜಛಿrಟಛಿಠಿಜಿc nಛಿurಚlಜಜಿಚ) ರಕ್ಷಿಸುತ್ತದೆ. 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರು ಈ ಲಸಿಕೆಯನ್ನು ತೆಗೆದುಕೊಳ್ಳಬಹುದು. ಇದನ್ನು ಇಂಟ್ರಾಮಸ್ಕಾಲರ್ ಇಂಜೆಕ್ಷನ್ ಆಗಿ ನೀಡಲಾಗುತ್ತದೆ ಮತ್ತು ಇದರ ಬೆಲೆ ಸುಮಾರು 8,000 – 10,000 ರೂ. ಇದು ಎರಡು ಡೋಸ್ಗಳೊಂದಿಗೆ ದೀರ್ಘಾವಧಿಯ ರಕ್ಷಣೆಯನ್ನು ಒದಗಿಸುತ್ತದೆ. ಇದನ್ನು 2-6 ತಿಂಗಳ ಅಂತರದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ನಿಯಮಿತ ಬೂಸ್ಟರ್ ಡೋಸ್ ಅಗತ್ಯವಿಲ್ಲ.
ಟಿಡಿ (ಟೆಟನಸ್, ಡಿಫ್ತಿರಿಯಾ) ಈ ಲಸಿಕೆ ಧನುರ್ವಾಯು ಮತ್ತು ಗಂಟಲುಮಾರಿ ವಿರುದ್ಧ ರಕ್ಷಿಸುತ್ತದೆ. ಹದಿಹರೆ ಯದವರು ಮತ್ತು ವಯಸ್ಕರಿಗೆ ಪ್ರತೀ 10 ವರ್ಷಗಳಿಗೊಮ್ಮೆ ಬೂಸ್ಟರ್ ಅಗತ್ಯವಿದೆ. ಹಿಂದೆ ಲಸಿಕೆ ಹಾಕಿದ್ದರೂ ಒಬ್ಬರು ಗಾಯಗೊಂಡಾಗ ಅವರಲ್ಲಿ ಧನುರ್ವಾಯು ತಡೆಗಟ್ಟಲು ಕೂಡ ಬಳಸಲಾಗುತ್ತದೆ. ಇದನ್ನು ಇಂಟ್ರಾಮಸ್ಕಾಲರ್ ಇಂಜೆಕ್ಷನ್ ಆಗಿ ನೀಡಲಾಗುತ್ತದೆ ಮತ್ತು ಇದರ ಬೆಲೆ ಸುಮಾರು ರೂ. 500 – 2,000. ರಕ್ಷಣೆಯು ಸುಮಾರು 10 ವರ್ಷಗಳವರೆಗೆ ಇರುತ್ತದೆ; ಪ್ರತೀ 10 ವರ್ಷಗಳಿಗೊಮ್ಮೆ ಬೂಸ್ಟರ್ ಡೋಸ್ ಅಗತ್ಯವಿದೆ.
ಎಂಎಂಆರ್ (ಮೀಸಲ್ಸ್, ಮಂಪ್ಸ್, ರುಬೆಲ್ಲಾ) ಈ ಲಸಿಕೆ ದಡಾರ, ಕೆಪ್ಪಟ್ರಾಯ, ಜರ್ಮನ್ ದಡಾರಗಳ ವಿರುದ್ಧ ರಕ್ಷಿಸುತ್ತದೆ. ಮಕ್ಕಳು (12-15 ತಿಂಗಳುಗಳಲ್ಲಿ ಮೊದಲ ಡೋಸ್, 4-6 ವರ್ಷಗಳಲ್ಲಿ ಎರಡನೇ ಡೋಸ್) ಹಾಗೂ ರೋಗನಿರೋಧಕ ಶಕ್ತಿ ಯಿಲ್ಲದ ವಯಸ್ಕರು ಸಹ ಈ ಲಸಿಕೆಯನ್ನು ಪಡೆಯಬಹುದು. ಇದನ್ನು ಸಬ್‌ಕುಟೇನಿಯಸ್ ಇಂಜೆಕ್ಷನ್ ಆಗಿ ನೀಡಲಾಗುತ್ತದೆ (ಮೇಲಿನ ತೋಳು ಅಥವಾ ತೊಡೆ) ಮತ್ತು ಪ್ರತೀ ಡೋಸ್‌ಗೆ ಸುಮಾರು 900-1,500 ರೂ. ವೆಚ್ಚವಾಗುತ್ತದೆ. ಇದು ದೀರ್ಘಾವಧಿಯ ರಕ್ಷಣೆಯನ್ನು ಒದಗಿಸುತ್ತದೆ. 4 ವಾರಗಳ ಅಂತರದಲ್ಲಿ ತೆಗೆದುಕೊಂಡ ಎರಡು ಡೋಸ್ಗಳ ಅನಂತರ ನಿಯಮಿತ ಬೂಸ್ಟರ್ ಡೋಸ್ ಅಗತ್ಯವಿಲ್ಲ.
ಚಿಕನ್ ಪಾಕ್ಸ್ (ವರಿಸೆಲ್ಲಾ) ಲಸಿಕೆ ಈ ಲಸಿಕೆ ಚಿಕನ್ ಪಾಕ್ಸ್ (ವರಿಸೆಲ್ಲಾ) ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಮಕ್ಕಳು (12-15 ತಿಂಗಳುಗಳಲ್ಲಿ ಮೊದಲ ಡೋಸ್, 4-6 ವರ್ಷಗಳಲ್ಲಿ ಎರಡನೇ ಡೋಸ್), ಮತ್ತು ರೋಗನಿರೋಧಕ ಶಕ್ತಿಯಿಲ್ಲದ ವಯಸ್ಕರು ಈ ಲಸಿಕೆಯನ್ನು ಪಡೆಯಬಹುದು (ಎರಡು ಡೋಸ್ ಗಳು 4-6 ವಾರಗಳ ಅಂತರದಲ್ಲಿ). ಇದನ್ನು ಮೇಲಿನ ತೋಳು ಅಥವಾ ತೊಡೆಯಲ್ಲಿ ಸಬ್ ಕುಟೇನಿಯಸ್ ಇಂಜೆಕ್ಷನ್ ಆಗಿ ನೀಡಲಾಗುತ್ತದೆ ಮತ್ತು ಪ್ರತೀ ಡೋಸ್‌ಗೆ ಸುಮಾರು 700 – 2,000 ರೂ. ವೆಚ್ಚವಾಗುತ್ತದೆ. ಇದು ಎರಡು ಡೋಸ್ ಗಳ ಅನಂತರ ದೀರ್ಘಾವಧಿಯ ರಕ್ಷಣೆಯನ್ನು ಒದಗಿಸುತ್ತದೆ. ನಿಯಮಿತ ಬೂಸ್ಟರ್ ಡೋಸ್ ಅಗತ್ಯವಿಲ್ಲ.
ಟಿಡಿಎಪಿ (ಟೆಟನಸ್, ಡಿಫ್ತಿರಿಯಾ, ಪೆರ್ಟುಸಿಸ್) ಈ ಲಸಿಕೆಯು ಟೆಟನಸ್, ಡಿಫ್ತಿರಿಯಾ ಮತ್ತು ಪೆರ್ಟುಸಿಸ್ (ನಾಯಿಕೆಮ್ಮು) ವಿರುದ್ಧ ರಕ್ಷಿಸುತ್ತದೆ. ಹದಿಹರೆಯದವರು (11-12 ವರ್ಷ ವಯಸ್ಸಿನವರು), ಈ ಹಿಂದೆ ಲಸಿಕೆ ಸ್ವೀಕರಿಸದ ವಯಸ್ಕರು ಮತ್ತು ಗರ್ಭಿಣಿಯರು (ನವಜಾತ ಶಿಶುಗಳನ್ನು ರಕ್ಷಿಸಲು ಪ್ರತೀ ಗರ್ಭಾವಸ್ಥೆಯಲ್ಲಿ) ಈ ಲಸಿಕೆಯನ್ನು ತೆಗೆದುಕೊಳ್ಳಬಹುದು. ಪ್ರತೀ ಗರ್ಭಾವಸ್ಥೆಯ 27 ಮತ್ತು 36 ವಾರಗಳ ನಡುವೆ ಈ ಲಸಿಕೆಯನ್ನು ತೆಗೆದುಕೊಳ್ಳಬಹುದು. ಇದನ್ನು ಇಂಟ್ರಾಮಸ್ಕಾಲರ್ ಇಂಜೆಕ್ಷನ್ ಆಗಿ ನೀಡಲಾಗುತ್ತದೆ ಮತ್ತು ಇದರ ಬೆಲೆ ಸುಮಾರು ರೂ. 300 – 1,000. ಪ್ರೌಢಾವಸ್ಥೆಯಲ್ಲಿ ಇದನ್ನು ಒಂದೇ ಡೋಸ್ ಲಸಿಕೆಯಾಗಿ ನೀಡಲಾಗುತ್ತದೆ. ಅನಂತರದ ಬೂಸ್ಟರ್ಗಳನ್ನು ಪ್ರತೀ 10 ವರ್ಷಗಳಿಗೊಮ್ಮೆ ಟಿಡಿ (ಟೆಟನಸ್, ಡಿμ¤ರಿಯಾ) ಆಗಿ ತೆಗೆದುಕೊಳ್ಳಬೇಕು.
ಟೈಫಾಯಿಡ್: ಟೈಫಾಯಿಡ್ ಜ್ವರವು ಕಲುಷಿತ ಆಹಾರ ಮತ್ತು ನೀರಿನ ಮೂಲಕ ಹರಡುವ ಬ್ಯಾಕ್ಟೀರಿಯಾದ ಸೋಂಕು. ಕಳಪೆ ನೈರ್ಮಲ್ಯ ಪ್ರದೇಶಗಳಿಗೆ ಪ್ರಯಾಣಿಸುವ ವಯಸ್ಕರು ಸೋಂಕಿನ ಅಪಾಯ ಕಡಿಮೆ ಮಾಡಲು ಈ ಲಸಿಕೆ ತೆಗೆದುಕೊಳ್ಳುವುದನ್ನು ಪರಿಗಣಿಸಬಹುದು. ಟೈಫಾಯಿಡ್ ಲಸಿಕೆ 3 ವರ್ಷಗಳ ಕಾಲ ರಕ್ಷಣೆ ನೀಡಬಲ್ಲದು. ಆದ್ದರಿಂದ ಪ್ರತೀ ಮೂರು ವರ್ಷಗಳಿಗೊಮ್ಮೆ ಟೈಫಾಯಿಡ್ ಲಸಿಕೆಯನ್ನು ಶಿಫಾರಸು ಮಾಡಲಾಗಿದೆ.
ರೇಬೀಸ್: ಈ ಲಸಿಕೆ ಪ್ರಾಣಿಗಳ ಕಡಿತದಿಂದ ವಿಶೇಷವಾಗಿ ನಾಯಿ ಮತ್ತು ಇತರ ಸಸ್ತನಿಗಳಿಂದ ಹರಡುವ ಮಾರಣಾಂತಿಕ ವೈರಲ್ ಸೋಂಕಾದ ರೇಬೀಸ್ ವಿರುದ್ಧ ರಕ್ಷಿಸುತ್ತದೆ. ಹೆಚ್ಚಿನ ಅಪಾಯದಲ್ಲಿರುವ ವ್ಯಕ್ತಿಗಳು (ಉದಾಹರಣೆಗೆ, ಪಶುವೈದ್ಯರು, ಅಪಾಯದ ಪ್ರದೇಶಗಳಿಗೆ ಪ್ರಯಾಣಿಸುವವರು) ರೇಬೀಸ್ ಅನ್ನು ತಡೆಗಟ್ಟಲು ಈ ಲಸಿಕೆಯನ್ನು ಮುಂಚೆಯೇ ತೆಗೆದುಕೊಳ್ಳಬಹುದು. ರೇಬೀಸ್ ತಡೆಗಟ್ಟಲು ಪ್ರಾಣಿಗಳ ಕಡಿತದ ಅನಂತರವೂ ಲಸಿಕೆ ನೀಡಲಾಗುತ್ತದೆ. ಇದನ್ನು ಇಂಟ್ರಾಮಸ್ಕಾಲರ್ ಇಂಜೆಕ್ಷನ್ ಆಗಿ ನೀಡಲಾಗುತ್ತದೆ ಮತ್ತು ಇದರ ಬೆಲೆ ಪ್ರತೀ ಡೋಸ್‌ಗೆ ಸುಮಾರು ರೂ. 350 – 1,200 (ಸಾಮಾನ್ಯವಾಗಿ ವೈರಸ್ ಗೆ ಒಡ್ಡಿಕೊಳ್ಳುವ ಮೊದಲು ತೆಗೆದುಕೊಂಡರೆ 3 ಡೋಸ್‌ಗಳು ಮತ್ತು ಪ್ರಾಣಿಗಳ ಕಡಿತವಾಗಿ ವೈರಸ್ಗೆ ಒಡ್ಡಿಕೊಂಡ ಅನಂತರ 4 ಡೋಸ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ). ರೇಬೀಸ್ ವೈರಸ್ಗೆ ಒಡ್ಡಿಕೊಳ್ಳುವ ಮೊದಲು ಲಸಿಕೆ ತೆಗೆದುಕೊಳ್ಳುವುದು ದೀರ್ಘಾವಧಿಯ ರಕ್ಷಣೆಯನ್ನು ಒದಗಿಸುತ್ತದೆ. ನಿರಂತರವಾಗಿ ಒಡ್ಡಿಕೊಳ್ಳುವ ಅಪಾಯದಲ್ಲಿರುವವರು ಪ್ರತೀ 1-3 ವರ್ಷಗಳಿಗೊಮ್ಮೆ ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದು. ಶಂಕಿತ ಒಡ್ಡುವಿಕೆ/ಪ್ರಾಣಿಗಳ ಕಡಿತದ ಅನಂತರ ತತ್ಕ್ಷಣವೇ ರೇಬೀಸ್ ಲಸಿಕೆಯನ್ನು ಶಿಫಾರಸು ಮಾಡಲಾಗುತ್ತದೆ.
ವಯಸ್ಕರ ಬಿ.ಸಿ.ಜಿ.
ಕ್ಷಯ ರೋಗ ನಿಯಂತ್ರಣಕ್ಕೆ ಪ್ರಸ್ತುತ ಮಕ್ಕಳಿಗೆ ನೀಡಲಾಗುತ್ತಿರುವ ಬಿ.ಸಿ.ಜಿ. ಲಸಿಕೆಯನ್ನು ಸದ್ಯದಲ್ಲಿ ವಯಸ್ಕರಿಗೆ ಕೂಡ ಕ್ಷಯ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ನೀಡಲಾಗುವುದು. ನಮ್ಮ ದೇಶದಲ್ಲಿ ಸರಿ ಸುಮಾರು ಶೇ. 40ರಷ್ಟು ಜನ ಕ್ಷಯ ರೋಗ ಸೋಂಕು ಹೊಂದಿರುವುದರಿಂದ ಈ ಲಸಿಕೆಯು ಅಂತಹ ಸೋಂಕು ಹೊಂದಿರುವ ವ್ಯಕ್ತಿಗಳು ಕ್ಷಯ ರೋಗಿಗಳಾಗಿ ಮಾರ್ಪಾಡುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದೆಂದು ಅಂದಾಜಿಸಲಾಗಿದೆ. ವಯಸ್ಕರು ಯಾವ ಲಸಿಕೆಗಳಿಗೆ ಅರ್ಹರಾಗಿದ್ದಾರೆ ಎಂಬುದನ್ನು ತಜ್ಞ ವೈದ್ಯರು ಶಿಫಾರಸ್ಸು ಮಾಡುತ್ತಾರೆ.
ಈ ವಿಶ್ವ ಲಸಿಕೆ ದಿನದಂದು (ನವೆಂಬರ್ 10) ನಾವು ವಯಸ್ಕರ ಲಸಿಕೆಗಳ ಬಗ್ಗೆ ತಿಳಿಯುವುದರ ಜತೆಗೆ ವೈದ್ಯರು ಶಿಫಾರಸು ಮಾಡಿದ ಲಸಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಕಾಯಿಲೆಗಳು ಗಂಭೀರವಾಗಿ ಅದರಿಂದ ಉಂಟಾಗುವ ಗಂಭೀರ ತೊಡಕುಗಳನ್ನು ದೂರ ಮಾಡಿಕೊಳ್ಳಬಹುದು.
-ಡಾ| ಅಕ್ಷತಾ ಆರ್.,
ಅಸಿಸ್ಟೆಂಟ್ ಪ್ರೊಫೆಸರ್,
ಮಣಿಪಾಲ್ ಸೆಂಟರ್ ಫಾರ್ ಇನ್‌ಫೆಕ್ಷಿಯಸ್ ಡಿಸೀಸಸ್,
ಕೆಎಂಸಿ ಮಣಿಪಾಲ
-ಡಾ| ಸ್ನೇಹಾ ಡಿ. ಮಲ್ಯ
ಅಸೋಸಿಯೇಟ್ ಪ್ರೊಫೆಸರ್
–ಡಾ| ಅಶ್ವಿನಿ ಕುಮಾರ್ ಗೋಪಾಡಿ
ಪ್ರೊಫೆಸರ್ ಮತ್ತು ಮುಖ್ಯಸ್ಥರು
ಸಮುದಾಯ ವೈದ್ಯಕೀಯ ವಿಭಾಗ,
ಕೆಎಂಸಿ ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಇನ್‌ಫೆಕ್ಷಿಯಸ್ ಡಿಸೀಸಸ್ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.