ವೆರಿಕೋಸ್ ವೇಯ್ನ್ ಎಂದರೇನು? ಈ ಕಾಯಿಲೆ ಲಕ್ಷಣಗಳೇನು, ಇದಕ್ಕೇನು ಪರಿಹಾರ…
ಈ ಕವಾಟದ ಅಸಮರ್ಪಕ ಕಾರ್ಯ ವೈಖರಿಯಿಂದಲೇ ವೆರಿಕೋಸ್ ವೇಯ್ನ್ ಪ್ರಾರಂಭ ವಾಗುವುದು
Team Udayavani, Dec 11, 2020, 1:24 PM IST
ವೆರಿಕೋಸ್ ವೇಯ್ನ್ ಈಗ ಒಂದು ರಕ್ತದೊತ್ತಡ , ಮಧುಮೇಹದಂತೆ ಸಾಮಾನ್ಯವಾದ ಖಾಯಿಲೆ ಯಂತಾಗುತ್ತಿದೆ. ನಮ್ಮ ದೇಶದಲ್ಲಿ 30ರಿಂದ 40% ಜನರು ಇದರಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ 5% ಜನರು ಈ ಖಾಯಿಲೆಗೆ ಸೇರ್ಪಡೆಯಾಗುತಿದ್ದಾರೆ. ಇದಕ್ಕೆಲ್ಲಾ ಕಾರಣ ಅತಿಯಾಗಿ ನಿಂತುಕೊಂಡೆ ಅಥವಾ ಕುಳಿತುಕೊಂಡೆ ಕೆಲಸ ಮಾಡುವುದು. ವ್ಯಾಯಾಮ ರಹಿತ, ಅಶಿಸ್ತಿನ ಜೀವನ ಶೈಲಿ, ಅತಿಯಾದ ತೂಕ, ಅತಿಯಾದ ಧೂಮಪಾನ, ಅತೀ ಮಾಂಸ ಸೇವನೆ, ಕಲಬರಿಕೆ ಆಹಾರ, ಗರ್ಭಿಣಿ ಯರಿಗೆ, ಕಾಲಿನ ರಕ್ತ ನಾಳಕ್ಕೆ ಪೆಟ್ಟಾದಾಗ ಹಾಗೂ ವಂಶ ಪಾರಂಪರ್ಯ ವಾಗಿಯೂ ಬರುವುದು.
ಶುದ್ಧ ರಕ್ತವು artery ಮೂಲಕ ಹೃದಯ ದಿಂದ ದೇಹದ ಇತರ ಭಾಗಕ್ಕೆ ಆಮ್ಲಜನಕ ಹಾಗೂ ಜೀವ ಸತ್ವವನ್ನು ದೇಹದ ಅಂಗಾಂಗ ಹಾಗೂ ಜೀವಕೋಶ ಗಳಿಗೆ ತಲುಪಿಸಿ ಅಲ್ಲಿರುವ ಕಲ್ಮಶ ಹಾಗೂ ಕಾರ್ಬನ್ ಡೈಆಕ್ಸೈಡ್ ನ್ನು ವೇಯ್ನ್ ನ ಮೂಲಕ ಹೃದಯಕ್ಕೆ ವಾಪಾಸು ತೆಗದುಕೊಂಡು ಹೋಗಿ ಪುನಃ ಶುದ್ಧಿ ಗೊಂಡು artery ಮೂಲಕ ಪುನಃ ಅಂಗಾಂಗ ಕ್ಕೆ ತಲಪುತ್ತದೆ. ಈ ಕಾರ್ಯ ವು ನಮ್ಮ ಹೃದಯವು ಎಷ್ಟು ಭಾರಿ ಬಡಿದುಕೊಳ್ಳುತ್ತದೋ ಅಷ್ಟು ಬಾರಿ ಈ ಕಾರ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ.
arteryಯಿಂದ ರಕ್ತವು ಸರಾಗವಾಗಿ ಕೆಳಗೆ ಹರಿದು ಬರುವುದು. ಆದರೆ ಅಶುದ್ಧ ರಕ್ತವು ಕಾಲಿನಿಂದ ವೇಯ್ನ್ ನ ಮೂಲಕ ಹೃದಯಕ್ಕೆ ವಾಪಸ್ಸು ಹೋಗಲು ಗುರುತ್ವಾಕರ್ಶಣ ಬಲದಿಂದಾಗಿ ಕಷ್ಟಕರ. ಅದಕ್ಕಾಗಿ ಕಾಲಿನಿಂದ ತೊಡೆ ಸಂದಿನ ವರೆಗೆ ಅಲ್ಲಲ್ಲಿ ಕವಾಟ ದ ರಚನೆ ಇದ್ದು ಇದು ರಕ್ತವು ರಕ್ತನಾಳದಿಂದ ವಾಪಸ್ಸು ಹರಿಯದಂತೆ ತಡೆದು ಸಂಪೂರ್ಣ ರಕ್ತ ವು ಹೃದಯಕ್ಕೆ ವಾಪಸ್ಸು ಹರಿಯಲು ಸಹಾಯ ಮಾಡುವುದು. ಈ ಕವಾಟದ ಅಸಮರ್ಪಕ ಕಾರ್ಯ ವೈಖರಿಯಿಂದಲೇ ವೆರಿಕೋಸ್ ವೇಯ್ನ್ ಪ್ರಾರಂಭ ವಾಗುವುದು ಹಾಗೂ ಇತರ ಖಾಯಿಲೆಯ ಉಪದ್ರವ ವಾಗಿಯೂ ಉಂಟಾಗುತ್ತದೆ.
ಇದರಲ್ಲಿ ಎರಡು ವಿಧಗಳಿವೆ.
Spider vein ಹಾಗೂ varicose vein.*
ವೆರಿಕೋಸ್ ವೇಯ್ನ್ ನ ಲಕ್ಷಣ ಗಳು
ಪ್ರಾರಂಭದಲ್ಲಿ ಕಾಲಿನಲ್ಲಿ ಸೆಳೆತ, ಮೀನಖಂಡದಲ್ಲಿ ಬಿಗಿತ, ಕಾಲು ಭಾರವಾದಂತೆ ಭಾಸವಾಗುವುದು, ಕಾಲಿನಲ್ಲಿ ಊತ ಬರುವುದು, ಕಾಲಿನಲ್ಲಿ ಚರ್ಮ ಕಪ್ಪಾಗುವುದು, ತುರಿಕೆ, ಕಜ್ಜಿ, ರಕ್ತನಾಳ ಉಬ್ಬುವುದು, ಕೊನೆಯಲ್ಲಿ ಗುಣವಾಗದ ಗಾಯವಾಗುವುದು ಹಾಗೂ ಅಸಾಧ್ಯ ನೋವು ಹಾಗೂ ಉರಿಯಿಂದ ಬಳಲುತ್ತಾರೆ.
ವೆರಿಕೋಸ್ ವೇಯ್ನ್ chronic venous insuffency ಒಂದು ಲಕ್ಷಣ ಸಹ ಆಗಿದೆ. ಅಂದರೆ ಕಾಲಿನಿಂದ ರಕ್ತವು ಹೃದಯಕ್ಕೆ ಸರಿಯಾಗಿ ವಾಪಸ್ಸು ಹೋಗಲು ಕಷ್ಟ ಸಾಧ್ಯದ ಪರಿಸ್ಥಿತಿ.
ವೆರಿಕೋಸ್ ವೇಯ್ನ್ ನ ಹಂತಗಳು
1.ಸ್ಪೈಡರ್ ವೇಯ್ನ್
2.ವೆರಿಕೋಸ್ ವೇಯ್ನ್
3.ಕಾಲು ದಪ್ಪ ವಾಗುವಿಕೆ.. sweling
4.ಕಾಲಿನ ಚರ್ಮ ಕಪ್ಪಾಗುವುದು…lipodermatosclerosis
5.ಗಾಯವಾಗುವಿಕೆ.. venous ulcer..open wound..
ವೆರಿಕೋಸ್ ವೇಯ್ನ್ ಇಷ್ಟು ದೊಡ್ಡ ಖಾಯಿಲೆಯಾಗಿದ್ದರು ಇದಕ್ಕೆ ಸಾಕಷ್ಟು ಔಷಧಿಗಳು ಲಭ್ಯವಿಲ್ಲ ಹಾಗೂ ಆಪರೇಷನ್ ಸಹ ಇದಕ್ಕೆ ಸಂಪೂರ್ಣ ಪರಿಹಾರವಲ್ಲ. ಪ್ರಾರಂಭದ ಹಂತದಲ್ಲಿ ಉದಾಸೀನ ಮಾಡಿ ಹಾಗೂ ಗಂಭೀರ ಹಂತದಲ್ಲಿ ಸರಿಯಾದ ಔಷಧಿ ಹಾಗೂ ಮಾರ್ಗದರ್ಶನ ಸಿಗದೇ ನೋವನ್ನು ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಡಾ. ಎಂ. ವಿ. ಉರಾಳ್.
DR URALS VARICOSE AYURVEDA CURE ಸಂಸ್ಥೆಯಿಂದ ವೆರಿಕೋಸ್ ವೇಯ್ನ್ ಅನ್ನು ಸಾಧ್ಯವಾದಷ್ಟು ಆಪರೇಷನ್ ಇಲ್ಲದೇ ಗುಣಪಡಿಸುವ ನಿಟ್ಟಿನಲ್ಲಿ ಅಮೃತ ವೆರಿಕೋಸ್ ಸಿರಪ್ ಹಾಗೂ ಅಮೃತ ವೆರಿಕೋಸ್ ಆಯಿಲ್ ನ್ನು ಕ್ಲಿನಿಕಲ್ ಟ್ರೈಲ್ ನಡೆಸಿ ಆವಿಸ್ಕರಿಸಿದ್ದಾರೆ.
ಕಳೆದ ಮೂರು ವರ್ಷ ಗಳಿಂದ ರೋಟರಿ ಕ್ಲಬ್ , ಲಯನ್ಸ್ ಕ್ಲಬ್ ಹಾಗೂ ಇತರ ಸಂಘ ಸಂಸ್ಥೆ ಗಳ ಸಹಯೋಗದಲ್ಲಿ ಸಾಕಷ್ಟು ವೈದ್ಯಕೀಯ ಶಿಬಿರಗಳನ್ನು ನಡೆಸಿ ವೆರಿಕೋಸ್ ರೋಗದ ಬಗ್ಗೆ ಸಾಕಷ್ಟು ಜನಜಾಗ್ರತಿ ಯನ್ನು ಸಂಸ್ಥೆ ಮೂಲಕ ಮೂಡಿಸಲಾಗುತ್ತಿದೆ. ವೈದ್ಯಕೀಯ ಲೋಕಕ್ಕೆ ಕಷ್ಟ ಕರವಾದ lipodermatosclerosis… chronic venous ulcer.pressure wound, non healing ulcer, skin enduration, skin pigmentation ನ ಮೇಲೆ ಆಯುರ್ವೇದ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ಡಾ.ಉರಾಳ.
ವೆರಿಕೋಸ್ ವೇಯ್ನ್ chronic venous insufficiency ಒಂದು ಲಕ್ಷಣವಾಗಿದೆ. chronic venous insufficiencyಗೆ ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದ್ದು ರೋಗಕ್ಕೆ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಆದರೆ ಇದೀಗ ಆಯುರ್ವೇದದಲ್ಲಿ ಚಿಕಿತ್ಸೆ ಲಭ್ಯ ಎನ್ನುತ್ತಾರೆ ಡಾ.ಉರಾಳ.
ಡಾ.ಉರಾಳ, ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಆಸ್ಪತ್ರೆ
ಶೃಂಗೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.