ವ್ಯಾನ ಮುದ್ರೆಯಿಂದ ತಲೆನೋವು ನಿವಾರಣೆ
ಅಗ್ನಿತತ್ತ್ವದಿಂದಾಗಿ ಜೀರ್ಣಶಕ್ತಿ ಹೆಚ್ಚಾಗಿ ಅಜೀರ್ಣದಿಂದ ಉಂಟಾಗುವ ತಲೆನೋವು ನಿವಾರಣೆಯಾಗುತ್ತದೆ
Team Udayavani, Nov 9, 2020, 11:13 AM IST
ತಲೆನೋವಾದಾಗ ಶಕ್ತಿಯೇ ಕುಂದಿದಂತಾಗಿ ಇತರ ಕೆಲಸಗಳನ್ನು ಮಾಡಲು ವಿಫಲರಾಗುತ್ತೇವೆ. ತಲೆನೋವು ಕಣ್ಣುಗಳು, ಕುತ್ತಿಗೆ, ಭುಜ, ಬೆನ್ನಿನ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಇದಕ್ಕೆ ಮನೆಯಲ್ಲಿಯೇ ಯೋಗಮುದ್ರೆಯ ಸರಳ ಅಭ್ಯಾಸದಿಂದ ಪರಿಹಾರ ಕಂಡುಕೊಳ್ಳಬಹುದು.
ವ್ಯಾನ ಮುದ್ರೆ
ವ್ಯಾನ ಮುದ್ರೆಯಿಂದ ಚಿಂತೆ, ನಿದ್ರಾಹೀನತೆ, ತಲೆಭಾರ, ಇತ್ಯಾದಿಗಳ ನಿಯಂತ್ರಣ ಮಾಡಬಹುದು. ಈ ಮುದ್ರೆಯಲ್ಲಿ ವಾಯು ಮತ್ತು ಆಕಾಶ ತಣ್ತೀಗಳು ಅಗ್ನಿ ತತ್ತÌದೊಂದಿಗೆ ಜತೆಯಾಗಿ ಮನಸ್ಸು ಸ್ತಿಮಿತಕ್ಕೆ ಬರುತ್ತದೆ. ವಾಯುನಾಳಗಳ ಕಾರ್ಯ ಬಲಗೊಳ್ಳುತ್ತದೆ. ಶಿರಸ್ಸಿನಲ್ಲಿ ಉಂಟಾಗುವ ಜಡತ್ವ ನಿವಾರಣೆಯಾಗುತ್ತದೆ.
ಬಿಸಿಲಿನಲ್ಲಿ ಇದ್ದು ಬಂದಾಗ ಕೆಲವೊಮ್ಮೆ ಉಂಟಾಗುವ ತಲೆನೋವಿನ ನಿಯಂತ್ರಣಕ್ಕೆ ಈ ಧ್ಯಾನ ಮುದ್ರೆ ಸಹಕಾರಿ. ಸೂರ್ಯ ಮುದ್ರೆಯಲ್ಲಿ ಪೃಥ್ವಿ ತತ್ತವು ಕಡಿಮೆಯಾಗಿ ಅಗ್ನಿತತ್ತ್ವವು ಹೆಚ್ಚುತ್ತದೆ. ಅರ್ಥಾತ್ ಶರೀರದ ಶಾಖ ಹೆಚ್ಚುತ್ತದೆ. ಅಗ್ನಿತತ್ತ್ವದಿಂದಾಗಿ ಜೀರ್ಣಶಕ್ತಿ ಹೆಚ್ಚಾಗಿ ಅಜೀರ್ಣದಿಂದ ಉಂಟಾಗುವ ತಲೆನೋವು ನಿವಾರಣೆಯಾಗುತ್ತದೆ.
ಅಭ್ಯಾಸ ಕ್ರಮ
ತೋರು ಬೆರಳು ಮತ್ತು ಮಧ್ಯ ಬೆರಳುಗಳ ಅಗ್ರ ಭಾಗವನ್ನು ಹೆಬ್ಬೆರಳಿನ ತುದಿಗೆ ತಾಗಿಸಿ, ಉಂಗುರ ಬೆರಳನ್ನು ಹೆಬ್ಬೆರಳಿನ ಬುಡದಲ್ಲಿ ಮೃದುವಾಗಿ ಒತ್ತಿ ಹಿಡಿಯಿರಿ. ಕಿರುಬೆರಳು ನೇರವಾಗಿರಲಿ. ದಿನಕ್ಕೆ ಮೂರು ಬಾರಿ ಸುಮಾರು ಆರು ನಿಮಿಷಗಳ ಕಾಲ ಅಭ್ಯಾಸ ಮಾಡಿ.
ಉಪಯೋಗ
ಮೈಗ್ರೇನ್ ತಲೆನೋವು, ಸೈನಸ್ ಇತ್ಯಾದಿ ಶ್ವಾಸಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬಹಳ ಬೇಗ ನಿಯಂತ್ರಣಕ್ಕೆ ಬರುತ್ತವೆ. ಕಫ, ಶೀತದಿಂದ ಉಂಟಾಗುವ ತಲೆನೋವಿಗೂ ಸಹಕಾರಿ. ಇದರೊಂದಿಗೆ ಒಳ್ಳೆಯ ಆಹಾರ ಸೇವನೆ ಮಾಡಿ, ಜೀವನದಲ್ಲಿ ಪ್ರೀತಿ, ತಾಳ್ಮೆ, ಕ್ಷಮೆ ಕರ್ತವ್ಯಪರತೆ ಇರಲಿ. ನಿತ್ಯ ಪ್ರಾಣಾಯಾಮ ಮಾಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.