UV Fusion: ನಮ್ಮಲ್ಲಿಯೂ ಕೊರತೆಗಳಿವೆ
Team Udayavani, Jan 12, 2025, 4:45 PM IST
ಇಂದೀಗ ನಮ್ಮ ಬಳಿ ಎಲ್ಲವು ಇದೆ. ಐಷಾರಾಮಿ ಮನೆ, ನೆಚ್ಚಿನ ಕಾರು, ಬಯಸಿದ ಉದ್ಯೋಗ, ಅಗತ್ಯಕ್ಕೊಂದಿಷ್ಟು ಹಣವೆಂಬ ಕಾಗದ ಎಲ್ಲವು ನಮ್ಮ ಅಂಗೈಯಲ್ಲೇ ಇದೆ. ಇಷ್ಟೆಲ್ಲ ಇದ್ದರೂ ಆಧುನಿಕರಲ್ಲಿ ಏನೋ ಕೊರತೆಗಳಿವೆ ಅದೆಂದರೆ, ನಮ್ಮ ಬಳಿ ನಮ್ಮ ಆತ್ಮೀಯರಿಗೊಂದು ನಲ್ಮೆಯ ನಗುವಿಲ್ಲ. ನಮ್ಮದೇ ಮಕ್ಕಳ ಪುಟಾಣಿ ತಲೆಯಲ್ಲಿ ಮೂಡುವ ರೋಚಕ ಪ್ರಶ್ನೆಗಳನ್ನು ಕೇಳುವ ವ್ಯವಧಾನವಿಲ್ಲ. ನಮ್ಮ ನೆರೆಮನೆಯವರಿಗೊಂದು ಸ್ನೇಹಮಯ ನಗು ಬೀರುವ ಬಾಂಧವ್ಯದ ಸೆಲೆ ಇಲ್ಲ. ಮುಂಜಾನೆ ನಮ್ಮ ಮನೆಯ ಹೂ ಕುಂಡದಲ್ಲಿ ಅರಳಿದ ಪುಟ್ಟ ಹೂವನ್ನು ಗಮನಿಸುವ ಗುಣಗಳು ಇಲ್ಲ. ಒಟ್ಟಾರೆ ನಂಬಿಕೆ, ವಿಶ್ವಾಸ, ಸ್ನೇಹ, ಪ್ರೀತಿ, ಕರುಣೆ ಎಂಬ ಮೌಲ್ಯಗಳು ನಮ್ಮ ಬದುಕಲ್ಲಿ ಪ್ರಾಮುಖ್ಯತೆ ಪಡೆಯುತ್ತಿಲ್ಲ.
ಸಮಯದೊಂದಿಗೆ ಸ್ಫರ್ಧೆಗಿಳಿದು ಒಂದೇ ಸಮನೆ ಓಟಕ್ಕಿಳಿದ ಕುದುರೆಯಂತೆ ಯಶಸ್ಸು, ಹಣವೆಂಬ ಭ್ರಮೆ ಹೊತ್ತು ಓಡುತ್ತಿದೆ ಆಧುನಿಕ ಮನಸ್ಸುಗಳು. ನಮಗಿಂದು ನಮ್ಮವರೊಂದಿಗೆ ಒಂದಿಷ್ಟು ಆತ್ಮೀಯ ಮಾತುಗಳನ್ನಾಡಲು ಸಾಧ್ಯವಾಗುತ್ತಿಲ್ಲ. ನೆಮ್ಮದಿಯ ನಿದಿರೆ ಕಣ್¡ ರೆಪ್ಪೆಗಳ ಬಳಿ ಸುಳಿಯುವುದು ಇಲ್ಲ. ಉತ್ತಮ ಕೊಠಡಿಯ ಹವಾನಿಯಂತ್ರಿತ ಉಪಕರಣಗಳಿದ್ದರು ಪರಿಶುದ್ಧ ಗಾಳಿ ಸಿಗುತ್ತಿಲ್ಲ. ಹಸಿವೆಂಬ ಉದರಕ್ಕೆ ಒಂದು ಬಾರಿಯು ವಿಷರಹಿತ ಆಹಾರ ಸೇರುತ್ತಿಲ್ಲ.
ಪ್ಯೂರಿ ಪೈಯರ್, ಫಿಲ್ಟರ್‌ನಂತಹ ಶೋಧಿತ ಯಂತ್ರಗಳಿದ್ದರು ಶುದ್ಧ ನೀರು ನಮ್ಮ ದೇಹದೊಳಗೆ ಇಳಿಯುತ್ತಿಲ್ಲ. ಹೃದಯವನ್ನು ಹಗುರಾಗಿಸುವ ಹಸುರಿನಲ್ಲಿ ನಡೆದಾಡಲು ಒಂದಿಷ್ಟು ಸಮಯವೂ ಇಲ್ಲ. ನಾವು ನಮ್ಮೊಂದಿಗೆ ಮಾತಿಗಿಳಿಯಲು ಒಂದಿಷ್ಟು ಸಮಯ, ನಮ್ಮದೇ ಹವ್ಯಾಸಗಳಿಗಾಗಿ ಕೊಂಚ ಬಿಡುವು ಯಾವುದು ನಮ್ಮ ಬಳಿ ಇಲ್ಲ. ಹಣದ ಹಂಗಿಲ್ಲದ ಸಾಕಷ್ಟು ವಿಚಾರಗಳಿಗೆ ಪ್ರಾಮುಖ್ಯತೆಯೇ ಇಲ್ಲ. ಎಲ್ಲವನ್ನು ಬೆಲೆ ಕಟ್ಟಿ ವ್ಯವಹಾರದ ದೃಷ್ಟಿಯಿಂದ ನೋಡುವ ಬುದ್ಧಿಜೀವಿ ಮನುಜರು.
ಬೆಲೆಕಟ್ಟಲಾಗದ ಈ ಅಮೂಲ್ಯ ವಿಷಯಗಳನ್ನು ಗಮನಿಸುತ್ತಲ್ಲೇ ಇಲ್ಲ. ಹೇಗಿದ್ದೀರಿ? ಎಂದಾಗ ತೊಂದರೆಯಿಲ್ಲ ಆರಾಮು ಎನ್ನುವ ನಮ್ಮದೇ ಅತ್ಮೀಯರ ಕಣ್ಣಿನ ನೋವನ್ನು ಅರಿಯುವ ಸೂಕ್ಷ್ಮತೆಯು ಇಲ್ಲ. ಎಲ್ಲ ಇದ್ದರೂ ಇಂದು ಏನೋ ಇಲ್ಲ. ಒಂದೊಮ್ಮೆ ಗಮನಿಸಿ ನಿಮ್ಮ ಬಳಿ ಈ ಕೊರತೆಗಳಿವೆಯೇ?
-ಪ್ರತೀಕ್ಷಾ ಶಿರ್ಲಾಲು
ಮಂಗಳೂರು ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು
Breast Cancer: ಸ್ತನಗಳ ಕ್ಯಾನ್ಸರ್ ನಿಗಾ ಇರಿಸಬೇಕಾದ ಆರಂಭಿಕ ಲಕ್ಷಣಗಳು
Osteoarthritis, Knee Osteoarthritis: ಮೂಳೆ ಸವೆತ ಹಾಗೂ ಮಂಡಿ ಸವೆತ
Liver Cancer: ಯಕೃತ್ ಕ್ಯಾನ್ಸರ್‌ನೊಂದಿಗೆ ಬದುಕಲು ಕಾರ್ಯತಂತ್ರಗಳು
HMPV: ಹ್ಯೂಮನ್ ಮೆಟಾನ್ಯುಮೊ ವೈರಸ್ (ಎಚ್‌ಎಂಪಿವಿ); ಹೊಸ ಆತಂಕವೇನೂ ಅಲ್ಲ
MUST WATCH
ಹೊಸ ಸೇರ್ಪಡೆ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.