ಯೋಗ ಮಾಡಲು ಯಾವ ಸಮಯ ಬೆಸ್ಟ್?
ಬೆಳಗ್ಗೆಯ ಸಮಯ ಸಾಕಾಗದು. ಅಂತಹವರು ಸಂಜೆ ಯೋಗ ಅಭ್ಯಾಸ ಮಾಡಬಹುದು.
Team Udayavani, Dec 3, 2020, 1:25 PM IST
ಬೆಳಗ್ಗೆದ್ದು ಕಚೇರಿಗೆ ಓಡುವ ಧಾವಂತ, ರಾತ್ರಿ ಬಂದು ಸುಸ್ತಾಗಿ ಮಲಗುವ ಆತುರ ಹೀಗಾಗಿ ವಾಕಿಂಗ್, ಜಾಗಿಂಗ್ ಗೆ ಸಮಯವಿಲ್ಲ. ಇರುವ ಸಮಯದಲ್ಲೇ ಹೊಂದಿಕೊಂಡು ಒಂದಷ್ಟು ಹೊತ್ತು ಯೋಗ ಮಾಡೋಣ ಎಂದು ಮನಸ್ಸು ನೂರು ಬಾರಿ ಹೇಳಿದ ಮೇಲೆ ಕಾರ್ಯಸಾಧನೆಗೆ ಇಳಿಯುತ್ತೇವೆ.
ಯೋಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಯಾವ ಸಮಯದಲ್ಲಿ ಮಾಡಿದರೆ ಉತ್ತಮ ಎಂಬ ಪ್ರಶ್ನೆ ಇದ್ದೇ ಇದೆ. ಬೆಳಗ್ಗೆ ಹಾಗೂ ಸಂಜೆ ಯೋಗ ಮಾಡುವುದರಿಂದ ಬೇರೆ-ಬೇರೆ ರೀತಿಯ ಅನುಕೂಲಗಳಿವೆ.
ಹೀಗಾಗಿ ಇದನ್ನು ತಿಳಿದು ನಮ್ಮ ಅನುಕೂಲಕ್ಕೆ ತಕ್ಕಂತೆ ಯೋಗ ಮಾಡಿದರೆ ಉತ್ತಮ. ಯೋಗ ಪರಿಣಿತರು ಸೂರ್ಯ ಉದಯಿಸುವ ಸಮಯದಲ್ಲಿ ಯೋಗ ಮಾಡಿದರೆ ಒಳ್ಳೆಯದು ಎನ್ನುತ್ತಾರೆ. ಆದರೆ ಬೆಳಗಿನ ಶಿಫ್ಟ್ ಕೆಲಸಕ್ಕೆ ಹೋಗುವವರೆಗೆ, ಬೆಳಗ್ಗೆ ಗಂಡ- ಮಕ್ಕಳನ್ನು ಆಸ್- ಶಾಲೆಗೆ ಕಳುಹಿಸುವ ಗೃಹಿಣಿಯರಿಗೆ ಬೆಳಗ್ಗೆಯ ಸಮಯ ಸಾಕಾಗದು. ಅಂತಹವರು ಸಂಜೆ ಯೋಗ ಅಭ್ಯಾಸ ಮಾಡಬಹುದು. ಇನ್ನು ಬೆಳಗ್ಗೆ ಸಮಯವಿದ್ದರೆ ಸಮಸ್ಯೆ ಇಲ್ಲ.
ಬೆಳಗ್ಗಿನ ಯೋಗದ ಪ್ರಯೋಜನಗಳು
*ಬೆಳಗ್ಗೆದ್ದು ಯೋಗ ಮಾಡುವುದರಿಂದ ಶರೀರಕ್ಕೆ ಉಲ್ಲಾಸ ದೊರೆಯುವುದು, ಯಾವುದೇ ದೈಹಿಕ, ಮಾನಸಿಕ ನೋವಿದ್ದರೆ ದೂರವಾಗುವುದು. ಕಚೇರಿ, ಮನೆ ಕೆಲಸದಲ್ಲಿ ದಿನಪೂರ್ತಿ ಲವಲವಿಕೆಯಿಂದ ಇರಬಹುದು.
*ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ ನಿಮ್ಮ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಬೆಳಗ್ಗೆದ್ದು ಯೋಗ ಮಾಡುವುದು ಸಹಕಾರಿ.
*ಬೆಳಗ್ಗೆ ಯೋಗ ಮಾಡುವುದರಿಂದ ಪಾಸಿಟಿವ್ ಎನರ್ಜಿ ದೊರೆಯುವುದು, ಆದ್ದರಿಂದ ಖುಷಿ ಖುಷಿಯಾಗಿ ದಿನವನ್ನು ಕಳೆಯಲು ಸಾಧ್ಯವಿದೆ.
ಸಂಜೆ ಯೋಗದ ಅನುಕೂಲಗಳು
*ಆಫೀಸ್, ಮನೆ ಕೆಲಸ ಅಂತ ಯಾವುದೇ ಒತ್ತಡವಿಲ್ಲದೆ ಆರಾಮದಾಯಕವಾಗಿ ಯೋಗ ಮಾಡಬಹುದು.
*ಬೆಳಗ್ಗೆಯಿಂದ ಸಂಜೆ ವರೆಗೆ ಕೆಲಸ ಮಾಡಿ ಬಂದ ಸುಸ್ತು ಯೋಗ ಅಭ್ಯಾಸ ಮಾಡುವುದರಿಂದ ಮಾಯವಾಗುವುದು.
*ದಿನಪೂರ್ತಿ ತಿಂದಿದ್ದು ಸಂಜೆ ಯೋಗ ಮಾಡುವುದರಿಂದ ಅರಗಿಸಿಕೊಳ್ಳಬಹುದು.
*ಸಂಜೆ ಯೋಗ ಮಾಡುವುದರಿಂದ ಮಾನಸಿಕ ಒತ್ತಡಗಳು ದೂರವಾಗುವುದು, ಜತೆಗೆ ರಾತ್ರಿ ನಿದ್ದೆಯೂ ಚೆನ್ನಾಗಿ ಬರುವಂತೆ ಮಾಡುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.