ಬಾಯಿಯ ಆರೋಗ್ಯ ಕಾಪಾಡುವ ತೆಂಗಿನ ಎಣ್ಣೆ
ಬಾಯಿಯ ಹಲವಾರು ವಿಧದ ಬ್ಯಾಕ್ಟೀ ರಿಯಾಗಳನ್ನು ತೊಡೆದುಹಾಕುತ್ತದೆ.
Team Udayavani, Aug 24, 2021, 10:45 AM IST
ಹೊಟ್ಟೆಯ ಆರೋಗ್ಯದೊಂದಿಗೆ ಸಂಪೂರ್ಣ ದೇಹದ ಪೋಷಣೆಯಲ್ಲಿ ಬಾಯಿಯ ಪಾತ್ರ ಬಹಳ ಮಹತ್ವದ್ದು. ಪುರಾತನ ಆಯುರ್ವೇದ ಪದ್ಧತಿಯಲ್ಲಿ ತೆಂಗಿನ ಎಣ್ಣೆಯಿಂದ ಬಾಯಿ ಮುಕ್ಕಳಿಸುವುದು ಸಾಕಷ್ಟು ಪರಿಣಾಮಕಾರಿಯಾಗಿದೆ. ಇದು ಬಾಯಿಯ ಆರೋಗ್ಯ ಕಾಪಾಡುವುದರ ಜತೆಗೆ ಹೊಟ್ಟೆಯ ಆರೋಗ್ಯವನ್ನೂ ಸಂರಕ್ಷಿಸುತ್ತದೆ. ಜೀರ್ಣಕ್ರಿಯೆಯಲ್ಲಿರುವ ತೊಂದರೆಯ್ನು ನಿವಾರಿಸುತ್ತದೆ.
ತೆಂಗಿನ ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ ಕೆಟ್ಟ ಉಸಿರಾಟಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿಗಳನ್ನು ತೊಡೆದುಹಾಕಲು ಸಹಾಯ ಮಾಡುವುದು. ಹಲ್ಲಿನ ಸಮಸ್ಯೆಯ ಜತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತೆಂಗಿನ ಎಣ್ಣೆ ಬಳಸಿ ಬಾಯಿಯನ್ನು ಸ್ವಚ್ಛ ಮಾಡುವುದರಿಂದ ಇದು ವಸಡಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಲ್ಲುಗಳನ್ನು ಬಿಳುಪಾಗಿಸುತ್ತದೆ. ಜೀರ್ಣಕ್ರಿಯೆಯ ಮೊದಲ ಹೆಜ್ಜೆ ಬಾಯಿಯಿಂದ ಪ್ರಾರಂಭವಾಗುತ್ತದೆ.
ಆಹಾರ ಬಾಯಿಯನ್ನು ತಲುಪಿದಾಗ ಆಹಾರದಲ್ಲಿರುವ ಎಲ್ಲ ಪೋಷಕಾಂಶಗಳನ್ನು ಪತ್ತೆ ಹಚ್ಚಿ ಜೀರ್ಣಾಂಗ ವ್ಯವಸ್ಥೆಗೆ ಸಂಕೇತಗಳನ್ನು ನೀಡುತ್ತದೆ. ಬಾಯಿಯ ಆರೋಗ್ಯ ಉತ್ತಮವಾಗಿಲ್ಲದಿದ್ದರೆ ಮೆದಳು, ಹೊಟ್ಟೆಗೆ ಈ ಸೂಚನೆ ಸರಿಯಾಗಿ ಕಳುಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಆಹಾರ ಹೊಟ್ಟೆಯನ್ನು ತಲುಪಿದಾಗ ಅದರ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಲಭ್ಯವಾಗುವುದಿಲ್ಲ.
ತೆಂಗಿನ ಎಣ್ಣೆಯೇ ಏಕೆ?
ಎಣ್ಣೆಯಲ್ಲಿ ಹಲವಾರು ಇದ್ದರೂ ಬಾಯಿ ಮುಕ್ಕಳಿಸಲು ತೆಂಗಿನ ಎಣ್ಣೆಯನ್ನೇ ಏಕೆ ಬಳಸಬೇಕು ಎಂಬ ಪ್ರಶ್ನೆ ಏಳುವುದು ಸಹಜ. ಇತರ ಎಣ್ಣೆಗಳಿಗೆ ಹೋಲಿಸಿದರೆ ತೆಂಗಿನಕಾಯಿ ಹೆಚ್ಚು ಪರಿಣಾಮಕಾರಿ ಗುಣವನ್ನು ಹೊಂದಿದೆ. ಇದು ಉರಿಯೂತ ನಿವಾರಣೆ, ಬ್ಯಾಕ್ಟೀರಿಯ ವಿರೋಧಿ ಮತ್ತು ಆಂಟಿಮೈಕ್ರೊಬಿಯಲ್ ಗುಣ ಗಳನ್ನು ಹೊಂದಿದ್ದು, ಖಾದ್ಯಗಳಲ್ಲಿ ಬಳಸಲು ಸುರಕ್ಷಿತವಾಗಿರುವುದರಿಂದ ಬಾಯಿಯ ಹಲವಾರು ವಿಧದ ಬ್ಯಾಕ್ಟೀ ರಿಯಾಗಳನ್ನು ತೊಡೆದುಹಾಕುತ್ತದೆ.
ಬಳಸುವ ವಿಧಾನ
ಮೊದಲಿಗೆ ಒಂದು ಚಮಚ ಎಣ್ಣೆಯನ್ನು ಬಾಯಿಗೆ ಹಾಕಿ ಕನಿಷ್ಠ 1 ನಿಮಿಷ ಬಾಯಿಯಲ್ಲಿ ಹೊರಳಾಡಿಸಿ.
ಅನಂತರ ಅದನ್ನು ಹೊರಕ್ಕೆ ಉಗುಳಿ.
ಆರಂಭದಲ್ಲಿ 1 ನಿಮಿಷ ಮಾಡಿ ಬಳಿಕ ಅದನ್ನು 2- 3 ನಿಮಿಷಗಳವರೆಗೆ ವಿಸ್ತರಿಸಬಹುದು.
ತೆಂಗಿನ ಎಣ್ಣೆಯನ್ನು ನುಂಗದಿರಲು ಪ್ರಯತ್ನಿಸಿ.
ಬೆಳಗ್ಗೆ ಖಾಲಿ ಹೊಟ್ಟೆಗೆ ಇದನ್ನು ಮಾಡುವುದು ಸೂಕ್ತ.
ಇರಲಿ ಎಚ್ಚರಿಕೆ
ಮಾರುಕಟ್ಟೆಯಲ್ಲಿ ತೆಂಗಿನ ಎಣ್ಣೆ ಖರೀದಿ ವೇಳೆ ಹೆಚ್ಚು ಜಾಗರೂಕತೆ ವಹಿಸಬೇಕು. ಸಾವಯವ, ಸಂಸ್ಕರಿಸದ ತೆಂಗಿನ ಎಣ್ಣೆಯನ್ನೇ ಬಳಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.