ನಾವು ಮುಖ ಕವಚವನ್ನು ಏಕೆ ಧರಿಸಬೇಕು?
Team Udayavani, May 25, 2021, 2:48 PM IST
1 ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೆ ಕೋವಿಡ್ ಬಂದಿದೆ, ಯಾರಿಗೆ ಕೋವಿಡ್ ಬಂದಿಲ್ಲ ಮತ್ತು ಯಾರಿಗೆ ಕೋವಿಡ್ ಲಸಿಕೆಯಾಗಿದೆ, ಆಗಿಲ್ಲ ಎಂದು ಎಲ್ಲರಿಗೂ ಗೊತ್ತಾಗುವುದಿಲ್ಲ. ಆದ್ದರಿಂದ ಸಾರ್ವತ್ರಿಕ ಮಾಸ್ಕ್ ಧಾರಣೆ ಕೊರೋನಾ ರೋಗದ ಸೋಂಕನ್ನು ತಡೆಯಲು ಸಹಾಯಮಾಡುತ್ತದೆ ಎಂದು ಪರಿಣಿತರು ಸಲಹೆ ಮಾಡಿದ್ದಾರೆ.
2 ಒಬ್ಬ ವ್ಯಕ್ತಿ ನನಗೆ ಕೋವಿಡ್ ಬಂದು ಹೋಗಿಯಾಗಿದೆ, ನಾನು ಮಾಸ್ಕ್ ಧರಿಸುವುದಿಲ್ಲ ಹೇಳಿದಲ್ಲಿ ಆತ/ಆಕೆಗೆ ನಾವು ಪರವಾಗಿಲ್ಲ, ಮಾಸ್ಕ್ ಧರಿಸುವುದು ಬೇಡ ಎಂದು ಹೇಳಿ ಸಹಕರಿಸಿದಲ್ಲಿ ಅದೇ ರೀತಿ ಇನ್ನೂ ಹತ್ತೋ ನೂರೋ ಜನರು ನಮಗೂ ಕೋವಿಡ್ ಬಂದಾಗಿದೆ- ನಾವೂ ಮಾಸ್ಕ್ ಧರಿಸುವುದಿಲ್ಲ ಎಂದು ಹೇಳಿದಲ್ಲಿ, ಎಲ್ಲರಿಗೂ ಕೋವಿಡ್ ಬಂದು ಹೋಗಿದೆ ಎಂದು ಪರಿಶೀಲಿಸುವುದಾದರೂ ಹೇಗೆ?
3 ಒಮ್ಮೆ ಕೋವಿಡ್ ಬಂದವರಿಗೆ ಮತ್ತೂಮ್ಮೆ ಬರುವುದಿಲ್ಲ ಎನ್ನುವುದು ನೂರಕ್ಕೆ ನೂರು ನಿಜವಲ್ಲ. ಇದರ ಸಂಭವನೀಯತೆ ಕಮ್ಮಿ ಇದ್ದರೂ ಯಾರಿಗೆ ಮತ್ತೆ ಬರಬಹುದು,ಯಾರಿಗೆಬರಲಾರದುಎಂದುಹೇಳಲಿಕ್ಕೆ, ಊಹಿಸಲಿಕ್ಕೆ ನಮ್ಮಲ್ಲಿ ಪರಿಕರವಿಲ್ಲ.
4 ಕೋವಿಡ್ ಲಸಿಕೆ ತೀವ್ರತರವಾದ ಕೋವಿಡ್ ಬರುವುದನ್ನು ಮಾತ್ರ ತಡೆಗಟ್ಟುತ್ತದೆ. ಎಲ್ಲಪ್ರಮುಖ ಆರೋಗ್ಯ ಸಂಸ್ಥೆಗಳ ಮಾರ್ಗಸೂಚಿಗಳ ಪ್ರಕಾರ, ಕೋವಿಡ್ ಲಸಿಕೆಯ ನಂತರ ಸಾರ್ವತ್ರಿಕ ಸುರಕ್ಷಾ ಕ್ರಮಗಳನ್ನು ಬಳಸುವುದು ಒಳ್ಳೆಯದು. ಮಾಸ್ಕ್ ಈ ಬಗೆಯ ಸುರಕ್ಷಾ ಕ್ರಮ.
5 ನಮಗೆ ಕೋವಿಡ್ ಬಂದಿರಲಿ ಅಥವಾ ನಾವು ಕೋವಿಡ್ ಲಸಿಕೆ ತೆಗೆದುಕೊಂಡಿರಲಿ, ನಾವು ಸೋಂಕನ್ನು ಇನ್ನೊಬ್ಬರಿಗೆ ಹರಡುತ್ತೀವೋ ಇಲ್ಲವೋ ಅನ್ನುವುದು ಇನ್ನೂ ವಿವಾದಾಸ್ಪದ ವಿಷಯ. ಈ ಸೋಂಕನ್ನು ಇನ್ನೊಬ್ಬರಿಗೆ ಹರಡುವ ಪ್ರಮಾಣ ಕಮ್ಮಿಯಿರಬಹುದು. ಆದರೆ, ಯಾರಿಂದ ಯಾರಿಗೆ ಸೋಂಕು ಹರಡುತ್ತದೆ ಎಂದು ಹೇಳಲಾಗುವುದಿಲ್ಲ.
6 ಮಾಸ್ಕ್ ಧರಿಸಬೇಕೇ ಬೇಡವೇ ಅನ್ನುವುದು ಈ ಪ್ಯಾಂಡೆಮಿಕ್ ಶುರುವಾದಾಗಿನಿಂದ ಬಹುಚರ್ಚೆಗೆ ಒಳಗಾದ ವಿಷಯ. ನಮಗೆ ಬೇಕಾದ ಹೈಪಾಥಿಸಿಸ್‌ಗೆ ತಕ್ಕಹಾಗೆ ವೈದ್ಯಕೀಯ ಜರ್ನಲ್ ಗಳು ಪೂರಕವಾದ ಸಾಕ್ಷಿಯನ್ನು ಒದಗಿಸಬಹುದು. ಇಂಥ ಸಮಯದಲ್ಲಿ ನಮಗಿರುವ ಆಧಾರ ಪರಿಣಿತ ಸಮಿತಿಗಳು ಆಗಾಗ್ಗೆ ಒದಗಿಸುವ ಮಾರ್ಗಸೂಚಿಗಳು. ಈ ಎಲ್ಲ ಮಾರ್ಗಸೂಚಿಗಳನ್ನು ನಾವು ಆದಷ್ಟೂ ಅನುಸರಿಸಲು ಪ್ರಯತ್ನ ಪಡಬೇಕು ಎಂದು ನಮ್ಮ ಅನಿಸಿಕೆ.
7 ಅಮೆರಿಕಾದಲ್ಲಿ ಮಾಸ್ಕ್ ಕಡ್ಡಾಯವನ್ನು ಸಡಿಲಗೊಳಿಸಿರುವುದು ಬಹಳಷ್ಟು ಜನಕ್ಕೆಕೋವಿಡ್ ಸೋಂಕು ತಗುಲಿದೆ, ಹಾಗಾಗಿ ಅವರು ಸುರಕ್ಷಿತರು ಎಂಬ ಆಧಾರದ ಮೇಲೆ ಅಲ್ಲ. ಸಾಕಷ್ಟು ಜನ ಲಸಿಕೆ ತೆಗೆದುಕೊಂಡಿದ್ದಾರೆ ಎಂಬ ಅಂಶದಿಂದ.
8 ಅಮೇರಿಕಾದಲ್ಲಿ ಮಾಸ್ಕ್ ಕಡ್ಡಾಯ ಸಡಿಲ ಗೊಂಡಿದ್ದರೂ ವೈದ್ಯಕೀಯ ಸಿಬ್ಬಂದಿ, ವಿಮಾನ ನಿಲ್ದಾಣ ಮತ್ತು ವಿಮಾನಗಳು, ಶಾಲೆಗಳು, ಜೈಲು, ನಿರಾಶ್ರೀತರ ತಾಣಗಳು ಇತರೇ ಜಾಗದಲ್ಲಿಇನ್ನೂಮಾಸ್ಕ್ ಹಾಕಬೇಕೆಂಬ ನಿಯಮವಿದೆ.
9 ಈ ಮಾಸ್ಕ್ ಕಡ್ಡಾಯ ಸಡಿಲಗೊಂಡದ್ದು ಅಮೆರಿಕಾದಲ್ಲಿ ನಡೆದ ಸಂಶೋಧನೆಗಳಿಂದ. ಅಂದರೆ ಫೈಜರ್ ಮತ್ತು ಮಡರ್ನಾ ಲಸಿಕೆ ತೆಗೆದುಕೊಂಡವರ ಮೇಲೆ ನಡೆದ ಸಂಶೋಧನೆಗಳಿಂದ. ಭಾರತದ ಲಸಿಕೆಗಳಾದ ಕೋವಿಶೀಲ್ಡ… ಮತ್ತು ಕೋವ್ಯಾಕ್ಸಿನ್ ತೆಗೆದುಕೊಂಡವರಿಗೆ ಈ ನಿಯಮ ಅನ್ವಯವಾಗುವುದಿಲ್ಲ. 10ಆದ್ದರಿಂದ ಎಲ್ಲ ವೈಜ್ಞಾನಿಕ ವರದಿಗಳೂ, ನಿಮಗೆ ಕೋವಿಡ್ ಬಂದು ಗುಣವಾಗಿದ್ದರೂ, ಕೋವಿಡ್ ಲಸಿಕೆ ತೆಗೆದುಕೊಂಡಿದ್ದರೂ ನೀವು ಸಾರ್ವತ್ರಿಕ ಸುರಕ್ಷಾ ಕ್ರಮಗಳನ್ನು ಪಾಲಿಸಿ ಎಂದೇ ಹೇಳುತ್ತವೆ.
ಡಾಕ್ಟ್ರ ಸಲಹೆ : ಡಾ. ಗುರುಪ್ರಸಾದ ಕಾಗಿನೆಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.