ಯೋಗಾಭ್ಯಾಸದ ವೇಳೆ; ನೀರು ಸೇವನೆ ಬೇಡ!
ಯೋಗ ಮಾಡುವ ಅರ್ಧ ಗಂಟೆ ಮುಂಚೆ ಸ್ವಲ್ಪ ನೀರು ಕುಡಿಯಿರಿ
Team Udayavani, Nov 30, 2020, 12:15 PM IST
ಯೋಗ ಮಾಡುವಾಗ ಕೆಲವೊಂದು ನಿಯಮಗಳಿವೆ, ಅದರಲ್ಲೊಂದು ಯೋಗ ಅಭ್ಯಾಸದ ನಡುವೆ ನೀರು ಕುಡಿಯಬಾರದೆನ್ನುವುದು. ಇಲ್ಲಿ ಯೋಗಾಸನ ಮಾಡುವಾಗ ಏಕೆ ನೀರು ಕುಡಿಯಬಾರದೆಂಬುವುದನ್ನು ವಿವರಿಸಲಾಗಿದೆ.
*ಹೌದು ಯೋಗ ಮಾಡುವಾಗ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಯೋಗ ಅಭ್ಯಾಸ ಮಾಡುವಾಗ ಮಧ್ಯದಲ್ಲಿ ನೀರು ಕುಡಿಯಬಾರದು. ತುಂಬಾ
ದಾಹವಾದರೆ ಒಂದು ಗುಟುಕು ಕುಡಿಯಬಹುದು, ಆದರೆ ನೀರು ಕುಡಿಯದಿದ್ದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
*ಯೋಗ ಎನ್ನುವುದು ದೇಹ ಹಾಗೂ ಮನಸ್ಸನ್ನು ಒಂದಾಗಿಸುವ ಒಂದು ಕಲೆ. ಯೋಗ ಮಾಡುವಾಗ ಮನಸ್ಸಿನ ಮೇಲಿನ ನಿಯಂತ್ರಣ ತುಂಬಾ ಮುಖ್ಯ. ನೀರು
ಕುಡಿಯಲು ಎದ್ದಾಗ ಮನಸ್ಸು ಬೇರೆ ಕಡೆ ವಾಲುತ್ತದೆ.
*ಯೋಗ ಅಭ್ಯಾಸ ಮಾಡುವಾಗ ತುಂಬಾ ನೀರು ಕುಡಿದರೆ ನೈಸರ್ಗಿಕ ಕರೆಗೆ ಎದ್ದು ಹೋಗಬೇಕು. ನೈಸರ್ಗಿಕ ಕರೆ ತಡೆಗಟ್ಟಿ ಯೋಗಾಸನಗಳನ್ನು ಮಾಡಬಾರದು.
*ಕೆಲವೊಂದು ಯೋಗ ಮಾಡಿದಾಗ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಆಗ ನೀರು ಕುಡಿದರೆ ದೇಹದ ಉಷ್ಣತೆ ಬೇಗನೆ ಕಡಿಮೆಯಾಗುವುದು ಅಲ್ಲದೆ ಶೀತ
ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಯೋಗ ಮಾಡುವಾಗ ನೀರು ಕುಡಿಯಬಾರದು ಎನ್ನುತ್ತಾರೆ ಪ್ರಸಿದ್ಧ ಯೋಗಿ ಸದ್ಗುರು.
*ಹೊಟ್ಟೆಯಲ್ಲಿ ಅಧಿಕ ನೀರಿದ್ದರೆ ಆಸನಗಳನ್ನು ಮಾಡಲು ಕಷ್ಟವಾಗಬಹುದು.
*ಯೋಗ ಮಾಡುವ ಅರ್ಧ ಗಂಟೆ ಮುಂಚೆ ಸ್ವಲ್ಪ ನೀರು ಕುಡಿಯಿರಿ. ಯೋಗ ಮುಗಿಸಿದ ತಕ್ಷಣ ನೀರು ಕುಡಿಯಬಾರದು.
*ಒಂದು ಅರ್ಧ ತಾಸು ಬಿಟ್ಟು ನೀರು ಕುಡಿದರೆ ಒಳ್ಳೆಯದು. ಇನ್ನು ಯೋಗ ಮಾಡುವ ಮುಂಚೆ ಒಂದೆರಡು ಡ್ರೈ ಫ್ರೂಟ್ಸ್ ತಿಂದರೆ ಶಕ್ತಿ ದೊರೆಯುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.