ಅಧಿಕ ರಕ್ತದೊತ್ತಡ
Team Udayavani, Jun 11, 2017, 3:29 PM IST
ವಿಶ್ವ ಅಧಿಕ ರಕ್ತದೊತ್ತಡ ದಿನ
ಪ್ರತೀ ವರ್ಷ ಮೇ 17ನ್ನು ವಿಶ್ವ ಅಧಿಕ ರಕ್ತದೊತ್ತಡ ದಿನ ಎಂಬುದಾಗಿ ಆಚರಿಸಲಾಗುತ್ತದೆ. ಇಂಟರ್ ನ್ಯಾಶನಲ್ ಸೊಸೈಟಿ ಆಫ್ ಹೈಪರ್‌ಟೆನ್ಶನ್ (ಐಎಸ್‌ಎಚ್)ನ ಸಹಸಂಸ್ಥೆ ಯಾಗಿರುವ ವರ್ಲ್ಡ್ ಹೈಪರ್‌ಟೆನ್ಶನ್ ಲೀಗ್ (ಡಬ್ಲ್ಯುಎಚ್‌ಎಲ್) ಈ ಆಚರಣೆಯನ್ನು ಆರಂಭಿಸಿದೆ. ಜಾಗತಿಕವಾಗಿ ಎಲ್ಲ ಜನಸಮುದಾಯಗಳಲ್ಲಿ ಅಧಿಕ ರಕ್ತದೊತ್ತಡದ ಬಗ್ಗೆ ಅರಿವನ್ನು ವಿಸ್ತರಿಸುವ ಉದ್ದೇಶದಿಂದ “ನಿಮ್ಮ ಸಂಖ್ಯೆಯನ್ನು ತಿಳಿದುಕೊಳ್ಳಿ
(ನೋ ಯುವರ್ ನಂಬರ್)’ ಎಂಬುದು ವಿಶ್ವ ಅಧಿಕ ರಕ್ತದೊತ್ತಡ ದಿನದ ಘೋಷವಾಕ್ಯವಾಗಿದೆ.
ಇದೇಕೆ ಅಗತ್ಯ?
1. ಸಮಾಜದಲ್ಲಿ ಅಧಿಕ ರಕ್ತದೊತ್ತಡದ ಉಪಸ್ಥಿತಿ ಹೆಚ್ಚುತ್ತಿದೆ.
2. ಬಹುತೇಕ ರೋಗಿಗಳಲ್ಲಿ ಇದರ ಲಕ್ಷಣಗಳು ಇರುವುದಿಲ್ಲ.
3. ಜನರು ವಯೋವೃದ್ಧರಾಗುತ್ತಿರುವುದು ಮತ್ತು ಅಧಿಕ ತೂಕ/ ಬೊಜ್ಜು ಒಂದು ಸಾಂಕ್ರಾಮಿಕದಂತೆ ವ್ಯಾಪಿಸುತ್ತಿರುವುದರಿಂದ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುವುದು ಕೂಡ ವೃದ್ಧಿಸುತ್ತಿದೆ.
4. ಬಿಪಿ ನಿಯಂತ್ರಣದಿಂದ ಈ ಕೆಳಗಿನವುಗಳ ಸಂಭಾವ್ಯತೆ ಕಡಿಮೆಯಾಗುತ್ತದೆ – ಹೃದಯಾಘಾತ ಸಾಧ್ಯತೆ ಸುಮಾರು ಶೇ.50ರಷ್ಟು ಇಳಿಕೆ ಲಕ್ವಾ ಸಾಧ್ಯತೆ ಸುಮಾರು ಶೇ.40ರಷ್ಟು ಇಳಿಕೆ ಹೃದಯಸ್ತಂಭನ ಸಾಧ್ಯತೆ ಸುಮಾರು ಶೇ.20-25ರಷ್ಟು ಇಳಿಕೆ
ಯಾವಾಗ ರೋಗಿಗೆ ಅಧಿಕ
ರಕ್ತದೊತ್ತಡ ಇದೆ ಎನ್ನಬಹುದು?
ಜೆಎನ್‌ಸಿ ಪ್ರಕಾರ 18ಕ್ಕಿಂತ ಮೇಲ್ವಯಸ್ಸಿನ ವಯಸ್ಕರಲ್ಲಿ ಅಧಿಕ ರಕ್ತದೊತ್ತಡದ ವರ್ಗೀಕರಣ
ವಿಭಾಗ ಸಿಸ್ಟಾಲಿಕ್ (ಎಂಎಂಎಚ್‌ಜಿ) ಡಯಾಸ್ಟಾಲಿಕ್ (ಎಂಎಂಎಚ್‌ಜಿ)
ಸಹಜ 10-119 60-79
ಅಧಿಕ ರಕ್ತದೊತ್ತಡಪೂರ್ವ 120-139 80-89
ಹಂತ 1 ಅಧಿಕ ರಕ್ತದೊತ್ತಡ 140-159 90-99
ಹಂತ 2 ಅಧಿಕ ರಕ್ತದೊತ್ತಡ |160 |100
ಐಸೊಲೇಟೆಡ್ ಸಿಸ್ಟಾಲಿಕ್ ಅಧಿಕ ರಕ್ತದೊತ್ತಡ |/=140<90
ವೈಟ್ ಕೋಟ್ ಹೈಪರ್‌ಟೆನ್ಶನ್?
ಆಸ್ಪತ್ರೆಯಲ್ಲಿ ದಾಖಲಾಗಿರುವಾಗ ಮಾತ್ರ ನಿಮಗೆ ಅಧಿಕ ರಕ್ತದೊತ್ತಡ ಇದ್ದರೆ (ಅಂದರೆ, ರಕ್ತದೊತ್ತಡ ಸೂಚಿಯು ಸತತವಾಗಿ 140/90 ಎಂಎಂಎಚ್‌ಜಿ ಅಥವಾ ಅದಕ್ಕಿಂತ ಹೆಚ್ಚು ದಾಖಲಾದರೆ) ವೈಟ್ ಕೋಟ್ ಹೈಪರ್‌ಟೆನ್ಶನ್ ಎಂಬ ಪದವನ್ನು ಉಪಯೋಗಿಸಬಹುದು. ನೀವು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಹೋದ ಬಳಿಕ ನಿಮ್ಮ ರಕ್ತದೊತ್ತಡ ಸಹಜ ಸ್ಥಿತಿಗೆ ಬರಬಹುದು. ಕೆಲವೊಮ್ಮೆ ನಿಮಗೆ ನಿಜವಾಗಿ ಅಧಿಕ ರಕ್ತದೊತ್ತಡ ಇದೆಯೇ ಅಥವಾ ಕೇವಲ ವೈಟ್ ಕೋಟ್ ಹೈಪರ್‌ಟೆನ್ಶನ್ ಹೊಂದಿರುವಿರೇ ಎಂದು ನಿರ್ಣಯಿಸುವುದು ಕಷ್ಟವಾಗಬಹುದು.
ಅಧಿಕ ರಕ್ತದೊತ್ತಡದಿಂದ ಸಂಭಾವ್ಯ ಅಂಗಹಾನಿಗಳು ಯಾವುವು?
ಮಿದುಳು: ಲಕ್ವಾ, ಟ್ರಾನ್ಸಿಯೆಂಟ್ ಇಶೆಮಿಕ್ ಆಘಾತ, ಡಿಮೆನ್ಶಿಯಾ, ಮಿದುಳಿನಲ್ಲಿ ಆಂತರಿಕ ರಕ್ತಸ್ರಾವ
ಕಣ್ಣುಗಳು: ರೆಟಿನೋಪತಿ
ಹೃದಯ: ಲೆಫ್ಟ್ ವೆಂಟ್ರಿಕ್ಯುಲಾರ್ ಹೈಪರ್‌ಟ್ರೊಫಿ, ಆ್ಯಂಜಿನಾ
ಮೂತ್ರಪಿಂಡಗಳು: ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆಗಳು
ಪೆರಿಫರಲ್ ವಾಸ್ಕಾಲೇಚರ್: ಪೆರಿಫರಲ್ ಆರ್ಟೀರಿಯಲ್ ಕಾಯಿಲೆ
ಅಧಿಕ ರಕ್ತದೊತ್ತಡದ ರೋಗಶಾಸ್ತ್ರ
ಆವಶ್ಯಕ ಅಧಿಕ ರಕ್ತದೊತ್ತಡ: ಪ್ರಕರಣಗಳ 90% ಭಾಗ – ಆನುವಂಶಿಕ ಭಾಗ ದ್ವಿತೀಯಕ ಅಧಿಕ ರಕ್ತದೊತ್ತಡ: ಪ್ರಕರಣಗಳ <10% ಭಾಗ 20 ಅಧಿಕ ರಕ್ತದೊತ್ತಡದ ಕಾರಣಗಳು ಕಾಯಿಲೆಗಳು ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆಗಳು ಕುಶಿಂಗ್ಸ್ ಸಿಂಡ್ರೋಮ್ ಮಹಾಪಧಮನಿ ಕಿರಿದಾಗುವಿಕೆ (ಕೊಆರ್ಕ್ ಟೇಶನ್ ಆಫ್ ಅಯೋರ್ಟಾ)
ಅಬ್‌ಸ್ಟ್ರಕ್ಟಿವ್ ಸ್ಲಿàಪ್ ಅಪ್ನೇ ಪ್ಯಾರಾಥೈರಾಯ್ಡ ಡಿಸೀಸ್ ಪಿಯೊಕ್ರೊಮೊಸೈಟೊಮಾ ಪ್ರೈಮರಿ ಅಲ್ಡೊಸ್ಟಿರೊನಿಸ್¾
ರೀನೊವಾಸ್ಕಾಲಾರ್ ಕಾಯಿಲೆಗಳು ಥೈರಾಯ್ಡ ಕಾಯಿಲೆಗಳು
ಔಷಧಗಳು: – ಎನ್‌ಎಸ್‌ಎಐಡಿಗಳು, ಕಾಕ್ಸ್-2 ಇನ್‌ಹಿಬಿಟರ್‌ಗಳು – ವೆನಾಫಕ್ಸೆ„ನ್ – ಬುಪ್ರೊಪಿಯನ್ – ಬೊಮೊಕ್ರಿಪ್ಟೆ„ನ್-ಬುಸ್ಪಿರಾನ್ – ಕಾರ್ಬಾಮಝೆಪೈನ್ – ಕ್ಲೊಝಾಪೈನ್ – ಕೆಟಾಮೈನ್ – ಮೆಟೊಕ್ಲೊಪ್ರಮೈಡ್ 18
ಇತರ ದ್ವಿತೀಯಕ ಅಧಿಕ ರಕ್ತದೊತ್ತಡದ ಕಾರಣಗಳು * ಸನ್ನಿವೇಶಗಳು: – ಆ ಬ್ಲಾಕರ್ ಅಥವಾ ಕೇಂದ್ರೀಯವಾಗಿ ಕಾರ್ಯಾಚರಿಸುವ – ಅಗನಿಸ್ r ಗಳು * ಫಿಕ್ರೊಮೊಸೈಟೊಮಾಕ್ಕೆ ಚಿಕಿತ್ಸೆ ನೀಡುತ್ತಿರುವಾಗ ಆಬ್ಲಾಕರ್‌ನ್ನು ನಿಲ್ಲಿಸದೆ-ಬ್ಲಾಕರ್‌ನ್ನು ಹಠಾತ್ತಾಗಿ ನಿಲ್ಲಿಸಿದಾಗ * ಆಹಾರ ಅಂಶಗಳು: * ಸೋಡಿಯಂ – ಎಥೆನಾಲ್ – ಲಿಕೊರೈಸ್ – ಶಕ್ತಿ ಪಾನೀಯಗಳು – ಕೊಕೇನ್ – ಕೊಕೇನ್ ವಿತ್‌ಡ್ರಾವಲ್ – ಎಫಿಡ್ರಾ ಅಲ್ಕಲಾಯ್ಡಗಳು (ಉದಾಹರಣೆಗೆ, ಮಾ-ಹುವಾಂಗ್) – “ಹರ್ಬಲ್ ಎಕ್‌ಸ್ಟಸಿ’- ಫಿನೈಲ್‌ಪ್ರೊಪನೊಲಮೈನ್ ಅನಲಾಗ್ಸ್ – ನಿಕೊಟಿನ್ ವಿತ್‌ಡ್ರಾವಲ್ – ಅನಬಾಲಿಕ್ ಸ್ಟಿರಾಯ್ಡಗಳು – ನಾರ್ಕೊಟಿಕ್ ವಿತ್‌ಡ್ರಾವಲ್ – ಮಿಥೈಲ್‌ಫಿನೈಡೇಟ್ – ಫಿನ್ಸಿಕ್ಲೈಡೈನ್ – ಕೆಟಾಮೈನ್ – ಎರ್ಗಾಟ್‌ಯುಕ್ತ ಮೂಲಿಕೆ ಉತ್ಪನ್ನಗಳು – ಸೈಂಟ್ ಜಾನ್ಸ್ ವಾರ್ಟ್
ಅಧಿಕ ರಕ್ತದೊತ್ತಡದ ಲಕ್ಷಣಗಳೇನು?
ಆರಂಭಿಕವಾಗಿ ಬಹುತೇಕ ರೋಗಿಗಳು ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ. ಕೆಲವು ರೋಗಿಗಳಿಗೆ ಸಾಮಾನ್ಯ ದಣಿವಿನ ಅನುಭವ ಆಗಬಹುದು. ಬಹುತೇಕ ಪ್ರಕರಣಗಳಲ್ಲಿ, ಅಧಿಕ ರಕ್ತದೊತ್ತಡವು ತಲೆನೋವು ಅಥವಾ ಮೂಗಿನಿಂದ ರಕ್ತಸ್ರಾವಕ್ಕೆ ಕಾರಣವಾಗುವುದಿಲ್ಲ.
ರಕ್ತದೊತ್ತಡವು 180/110 ಎಂಎಂ ಎಚ್‌ಜಿ ಅಥವಾ ಅದಕ್ಕಿಂತಲೂ ಅಧಿಕವಾಗುವ ವೈದ್ಯಕೀಯ ತುರ್ತುಪರಿಸ್ಥಿತಿ ಪ್ರಕರಣದ ಹೊರತಾಗಿ ಅಧಿಕ ರಕ್ತದೊತ್ತಡವು ತಲೆನೋವು ಅಥವಾ ಮೂಗಿನಿಂದ ರಕ್ತಸ್ರಾವವನ್ನು ಉಂಟು ಮಾಡುವುದಿಲ್ಲ ಎಂಬುದನ್ನು ಅತ್ಯುತ್ತಮ ನಿದರ್ಶನಗಳು ಹೇಳುತ್ತವೆ. ಇತರ, ಖಚಿತವಾಗಿ ಹೇಳಲಾಗದ, ಆದರೆ ಸಂಬಂಧಿಸಿದ ಲಕ್ಷಣಗಳು ಅಧಿಕ ರಕ್ತದೊತ್ತಡದ ಜತೆಗೆ ಸಂಬಂಧ ಹೊಂದಿರುವ ಆದರೆ, ಸದಾ ಅದರಿಂದಲೇ ಉಂಟಾಗಿದೆ ಎಂದು ಹೇಳಲಾಗದ ಅನೇಕ ಲಕ್ಷಣಗಳಿವೆ- ಅವುಗಳೆಂದರೆ:
– ಕಣ್ಣಿನಲ್ಲಿ ರಕ್ತದ ಗುರುತುಗಳು
ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವವರಲ್ಲಿ ಕಣ್ಣಿನಲ್ಲಿ ರಕ್ತದ ಗುರುತುಗಳು (ಸಬ್‌ಕಂಜಕ್ಟಿವಲ್ ಹೆಮೊರೇಜ್) ಉಂಟಾಗುವುದು ಬಹು ಸಾಮಾನ್ಯ, ಆದರೆ ಈ ಎರಡೂ ಸಮಸ್ಯೆಗಳು ರಕ್ತದ ಗುರುತುಗಳನ್ನು ಉಂಟು ಮಾಡುವುದಿಲ್ಲ. ಕಣ್ಣುಗಳಲ್ಲಿ ಉಂಟಾಗುವ ದೃಷ್ಟಿಬಿಂದುಗಳು (ಫ್ಲೊಯೆಟರ್) ಕೂಡ ಅಧಿಕ ರಕ್ತದೊತ್ತಡದ ಜತೆಗೆ ಸಂಬಂಧ ಹೊಂದಿಲ್ಲ. ಆದರೆ ಚಿಕಿತ್ಸೆ ಪಡೆಯದ ಅಧಿಕ ರಕ್ತದೊತ್ತಡದಿಂದ ದೃಷ್ಟಿನರಕ್ಕೆ ಉಂಟಾಗಿರುವ ಹಾನಿಯನ್ನು ನೇತ್ರವೈದ್ಯರು ಪತ್ತೆ ಮಾಡಬಲ್ಲರು.
– ಮುಖ ಕೆಂಪಾಗುವುದು
ಮುಖದಲ್ಲಿರುವ ರಕ್ತನಾಳಗಳು ತೆಳುವಾದಾಗ ಮುಖ ಬಿಳುಚಿಕೊಳ್ಳುವುದು ಉಂಟಾಗುತ್ತದೆ. ಸೂರ್ಯನಿಗೆ ಒಡ್ಡಿಕೊಳ್ಳುವುದು, ಶೈತ್ಯ ಹವಾಮಾನ, ಮಸಾಲೆಯುಕ್ತ ಆಹಾರಗಳು, ಗಾಳಿ, ಬಿಸಿ ಪಾನೀಯಗಳು ಮತ್ತು ತ್ವಚೆ ಆರೈಕೆಯ ಉತ್ಪನ್ನಗಳಂತಹ ಕೆಲವು ಪ್ರಚೋದಕಗಳಿಗೆ ಪ್ರತಿಕ್ರಿಯೆಯಾಗಿ ಅಥವಾ ಅನಿರೀಕ್ಷಿತವಾಗಿ ಇದು ತಲೆದೋರಬಹುದು. ರಕ್ತದೊತ್ತಡವನ್ನು ತಾತ್ಕಾಲಿಕವಾಗಿ ಹೆಚ್ಚಿಸುವ ಭಾವನಾತ್ಮಕ ಒತ್ತಡ, ಬಿಸಿ ಅಥವಾ ತಂಪು ಹವಾಮಾನಕ್ಕೆ ಒಡ್ಡಿಕೊಂಡದ್ದು, ಮದ್ಯಪಾನ ಮತ್ತು ವ್ಯಾಯಾಮದಂತಹ ಕಾರಣಗಳಿಂದಲೂ ಮುಖ ಬಿಳುಚಿಕೊಳ್ಳಬಹುದು. ನಿಮ್ಮ ರಕ್ತದೊತ್ತಡವು ಸಹಜವಾದುದಕ್ಕಿಂತ ಹೆಚ್ಚಾದುದರಿಂದ ಮುಖ ಕೆಂಪಾಗಬಹುದಾದರೂ ಅಧಿಕ ರಕ್ತದೊತ್ತಡವೇ ಮುಖ ಕೆಂಪಾಗುವುದಕ್ಕೆ ಕಾರಣವಲ್ಲ.
– ತಲೆ ಸುತ್ತುವಿಕೆ
ಅಧಿಕ ರಕ್ತದೊತ್ತಡಕ್ಕೆ ಸೇವಿಸುವ ಕೆಲವು ಔಷಧಿಗಳ ಅಡ್ಡ ಪರಿಣಾಮವಾಗಿ ತಲೆ ತಿರುಗುವಿಕೆ ಕಾಣಿಸಿಕೊಳ್ಳಬಹುದಾದರೂ ಅದು ಅಧಿಕ ರಕ್ತದೊತ್ತಡದಿಂದಾಗಿ ಉಂಟಾಗುವುದಿಲ್ಲ. ಆದರೆ ತಲೆತಿರುಗುವಿಕೆಯನ್ನು ನಿರ್ಲಕ್ಷಿಸಬಾರದು, ಅದರಲ್ಲೂ ಅದು ಹಠಾತ್ತನೆ ಕಾಣಿಸಿಕೊಂಡಿದ್ದರೆ ನಿರ್ಲಕ್ಷಿಸಲೇ ಬಾರದು. ಹಠಾತ್ ತಲೆತಿರುಗುವಿಕೆ, ಸಮತೋಲನ ಅಥವಾ ಸಮಸ್ಥಾನೀಯತೆಯನ್ನು ಕಳೆದುಕೊಳ್ಳುವುದು ಮತ್ತು ನಡೆಯಲು ಕಷ್ಟವಾಗುವುದು ಲಕ್ವಾದ ಅಪಾಯ ಲಕ್ಷಣಗಳು. ಅಧಿಕ ರಕ್ತದೊತ್ತಡವು ಲಕ್ವಾ ಆಘಾತಕ್ಕೆ ಕಾರಣವಾಗುವ ಒಂದು ಅಪಾಯಾಂಶ.
ಡ್ಯಾಶ್ ಡಯಟ್
ಅಧಿಕ ರಕ್ತದೊತ್ತಡ ಇರುವುದು ಪತ್ತೆಯಾದ ಬಳಿಕ ನಿಮ್ಮ ವೈದ್ಯರು ನಿಮಗೆ ಡ್ಯಾಶ್ ಆಹಾರ ಯೋಜನೆ (ಡಯಟರಿ ಅಪ್ರೋಚಸ್ ಟು ಸ್ಟಾಪ್ ಹೈಪರ್‌ಟೆನ್ಶನ್ – ಡ್ಯಾಶ್ – ಅಧಿಕ ರಕ್ತದೊತ್ತಡ ತಡೆಯಲು ಆಹಾರ ವಿಧಾನಗಳು) ಯನ್ನು ಶಿಫಾರಸು ಮಾಡಬಹುದಾಗಿದೆ. ಇದು ಹೃದಯಸ್ನೇಹಿಯಾದ ಆಹಾರ ಯೋಜನೆಯಾಗಿದ್ದು ಇದರಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಕಡಿಮೆ ಪ್ರಮಾಣದಲ್ಲಿದ್ದರೆ ಪೌಷ್ಟಿಕಾಂಶಗಳು, ಪ್ರೊಟೀನ್ ಮತ್ತು ನಾರಿನಂಶ ಅಧಿಕ ಪ್ರಮಾಣದಲ್ಲಿರುತ್ತವೆ.
ಈ ಕೆಳಗಿನವು ಅದರಲ್ಲಿ ಸೇರಬಹುದು:
– ಹಣ್ಣುಗಳು
– ತರಕಾರಿಗಳು
– ಇಡೀ ಧಾನ್ಯಗಳು
– ಕಡಿಮೆ ಕೊಬ್ಬಿರುವ ಹೈನು ಉತ್ಪನ್ನಗಳು
– ಮೀನು
– ಕೋಳಿ ಮಾಂಸ ಮತ್ತು ಮೊಟ್ಟೆ
– ಬೀಜಗಳು
ಡ್ಯಾಶ್‌ನಲ್ಲಿ ಇವು
ಮಿತ ಪ್ರಮಾಣದಲ್ಲಿರುತ್ತವೆ:
– ಕೆಂಪು ಮಾಂಸ
– ಸಿಹಿತಿನಿಸುಗಳು
– ಪೂರಕ ಸಿಹಿಗಳು
– ಸಕ್ಕರೆ ಬೆರೆತ ಪಾನೀಯಗಳು
ನಿಮ್ಮ ಅಗತ್ಯಕ್ಕನುಗುಣವಾಗಿ ಡ್ಯಾಶ್ ಆಹಾರವನ್ನು ರೂಪಿಸಲು ನಿಮ್ಮ ವೈದ್ಯರು ಸಹಾಯ ಮಾಡುತ್ತಾರೆ. ಈ ಆಹಾರ ಯೋಜನೆ ಯನ್ನು ಅನುಸರಿಸುತ್ತಿದ್ದು, ದಿನಕ್ಕೆ 2,000 ಕ್ಯಾಲೊರಿ ಸೇವಿಸುವ ವ್ಯಕ್ತಿಯೊಬ್ಬರಿಗೆ ಪ್ರತೀ ಆಹಾರ ಗುಂಪಿನಿಂದ ಶಿಫಾರಸು ಮಾಡ ಬಹುದಾದ ಆಹಾರ ವಸ್ತುಗಳು ಉದಾಹರಣೆಯೊಂದು ಹೀಗಿದೆ:
– ದಿನಕ್ಕೆ 6ರಿಂದ 8 ಪ್ರಮಾಣ ಧಾನ್ಯಗಳು
– ದಿನಕ್ಕೆ 4ರಿಂದ 5 ಪ್ರಮಾಣ ತರಕಾರಿಗಳು
– ದಿನಕ್ಕೆ 4ರಿಂದ 5 ಪ್ರಮಾಣ ಹಣ್ಣುಗಳು
– ದಿನಕ್ಕೆ 2ರಿಂದ 3 ಪ್ರಮಾಣ ಹೈನು ಉತ್ಪನ್ನಗಳು
– ದಿನಕ್ಕೆ 6 ಅಥವಾ ಅದಕ್ಕಿಂತ ಕಡಿಮೆ ಪ್ರಮಾಣ ಕೊಬ್ಬಿಲ್ಲದ ಮಾಂಸ, ಕೋಳಿ ಮತ್ತು ಮೀನು
– ವಾರಕ್ಕೆ 4ರಿಂದ 5 ಪ್ರಮಾಣ ಬೀಜಗಳು, ಕಾಳುಗಳು
– ದಿನಕ್ಕೆ 2ರಿಂದ 3 ಪ್ರಮಾಣ ಕೊಬ್ಬು ಮತ್ತು ಎಣ್ಣೆಗಳು
– ವಾರಕ್ಕೆ 5 ಅಥವಾ ಅದಕ್ಕಿಂತ ಕಡಿಮೆ ಪ್ರಮಾಣ ಸಿಹಿಗಳು
ಅಧಿಕ ರಕ್ತದೊತ್ತಡದ ಒಂಬತ್ತು ಚಿಹ್ನೆಗಳು ಮತ್ತು ಲಕ್ಷಣಗಳು
1. ಉಸಿರುಗಟ್ಟುವಿಕೆ
2. ತಲೆನೋವು
3. ಮೂಗಿನಿಂದ ರಕ್ತಸ್ರಾವ
4. ದಣಿವು ಮತ್ತು ನಿದ್ದೆತೂಗುವಿಕೆ
5. ಗೊಂದಲ
6. ಕಿವಿಯಲ್ಲಿ ಗುಂಯ್‌ಗಾಡುವಿಕೆ
7. ವಾಂತಿ
8. ತುಂಬಾ ಬೆವರುವುದು
9. ದೃಷ್ಟಿ ಮಂಜಾಗುವುದು
ರಕ್ತದೊತ್ತಡದ ಮೇಲೆ ಆಹಾರಾಭ್ಯಾಸದ ಪರಿಣಾಮವೇನು?
1. ಉಪ್ಪು ಮತ್ತು ಅಧಿಕ ರಕ್ತದೊತ್ತಡ
ಅತಿಯಾದ ಉಪ್ಪು ಅಥವಾ ಸೋಡಿಯಂ ನಿಮ್ಮ ದೇಹದಲ್ಲಿ ದ್ರವಾಂಶ ಶೇಖರಣೆಗೆ ಕಾರಣವಾಗುತ್ತದೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
2. ಸಾಕಷ್ಟು ಪೊಟ್ಯಾಸಿಯಂ ಇರಲಿ: ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
3. ಮದ್ಯಪಾನವನ್ನು ನಿಯಂತ್ರಿಸಿ
ಪೂರಕ ಆಹಾರಗಳು ಮತ್ತು ಅಧಿಕ ರಕ್ತದೊತ್ತಡ
ಯಾವುದೇ ಪೂರಕ ಆಹಾರವು ನಿಮ್ಮ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಸಹಕರಿಸುತ್ತದೆ ಎಂಬುದಕ್ಕೆ ಖಚಿತ ಆಧಾರಗಳಿಲ್ಲ. ಆದರೆ ಪೂರಕ ಆಹಾರಗಳು ಸ್ವಲ್ಪ ಮಟ್ಟಿಗೆ ಉಪಯೋಗಕಾರಿಯಾಗಬಹುದು ಎಂದು ಕೆಲವು ಆರೋಗ್ಯ ಸೇವಾ ಪೂರೈಕೆದಾರರು ಅಭಿಪ್ರಾಯ ಪಡುತ್ತಾರೆ.
ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಪೂರಕ ಆಹಾರಗಳ ಪಾತ್ರವೇನಾದರೂ ಇದೆಯೇ, ಇದ್ದರೆ ಎಷ್ಟರಮಟ್ಟಿಗೆ ಎಂಬುದನ್ನು ನಿರ್ಧರಿಸಲು ಇನ್ನಷ್ಟು ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದೆ.
ಕೆಳಕಂಡವುಗಳಲ್ಲಿ ಯಾವುದನ್ನೇ ಆದರೂ ಸೇವಿಸಲಾರಂಭಿಸುವ ಮುನ್ನ ನಿಮ್ಮ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ; ಯಾಕೆಂದರೆ ಕೆಲವು ಪೂರಕ ಆಹಾರಗಳು ಔಷಧಿಗಳ ಜತೆಗೆ ಪ್ರತಿವರ್ತಿಸಿ ಮರಣಾಂತಿಕ ಅಡ್ಡ ಪರಿಣಾಮಗಳಿಗೆ ಕಾರಣವಾಗಬಲ್ಲವು.
– ಇಸಬ್‌ಗೂàಲ್ ಅಥವಾ ಗೋಧಿ ತೌಡಿನಂತಹ ನಾರಿನಂಶ
– ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂನಂತಹ ಖನಿಜಗಳು
– ನೈಟ್ರಿಕ್ ಆಕ್ಸೆ„ಡ್ ಹೆಚ್ಚಿಸುವ ಅಥವಾ ರಕ್ತನಾಳಗಳನ್ನು ಅಗಲಗೊಳಿಸುವ ಕೊಕೊ, ಕೊಎಂಝೈಮ್ ಕ್ಯು10ನಂತಹ ಪೂರಕ ಆಹಾರಗಳು ಅಥವಾ ಬೆಳ್ಳುಳ್ಳಿ
– ಪ್ರೊಬಯಾಟಿಕ್‌ಗಳು (ರಕ್ತದೊತ್ತಡದ ಮೇಲೆ ಅವುಗಳ ಸಂಭಾವ್ಯ ಪರಿಣಾಮದ ಬಗ್ಗೆ ಖಚಿತವಾಗಿ ತಿಳಿದಿಲ್ಲವಾದರೂ)
ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ
ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆಯಾಗಿ ಜೀವನವಿಧಾನ ಬದಲಾವಣೆ ಅಧಿಕ ರಕ್ತದೊತ್ತಡವನ್ನು ತಡೆಯುವ ಮತ್ತು ಅದಕ್ಕೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆರೋಗ್ಯಕರ ಜೀವನವಿಧಾನವನ್ನು ಅಳವಡಿಸಿಕೊಳ್ಳುವುದು ನಿರ್ಣಾಯಕ ಹೆಜ್ಜೆ. ಕೆಳಕಂಡ ಜೀವನವಿಧಾನ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು:
1. ಅಧಿಕ ದೇಹತೂಕ ಅಥವಾ ಬೊಜ್ಜು ಹೊಂದಿದ್ದರೆ ತೂಕ ಕಡಿಮೆ ಮಾಡಿಕೊಳ್ಳುವುದು
2. ಧೂಮಪಾನ ತ್ಯಜಿಸುವುದು
3. ಡ್ಯಾಶ್ ಆಹಾರಾಭ್ಯಾಸ (ಹೆಚ್ಚು ತರಕಾರಿ, ಹಣ್ಣುಗಳು ಮತ್ತು ಕಡಿಮೆ ಕೊಬ್ಬಿರುವ ಹೈನು ಉತ್ಪನ್ನಗಳು, ಕಡಿಮೆ ಸ್ಯಾಚುರೇಟೆಡ್ ಮತ್ತು ಸಂಪೂರ್ಣ ಕೊಬ್ಬು ಇರುವ ಆಹಾರ ಸೇವನೆ)
4. ನಿಮಗೆ ಅಧಿಕ ರಕ್ತದೊತ್ತಡ ಇದ್ದರೆ ನಿಮ್ಮ ಆಹಾರದಲ್ಲಿ ಸೋಡಿಯಂ ಅಂಶವನ್ನು ದಿನಕ್ಕೆ 1,500 ಮಿ. ಗ್ರಾಂಗಿಂತ ಕಡಿಮೆಗೊಳಿಸುವುದು; ಆರೋಗ್ಯವಂತ ವಯಸ್ಕರು ತಮ್ಮ ದೈನಿಕ ಸೋಡಿಯಂ ಸೇವನೆಯು 2,300 ಮಿ. ಗ್ರಾಂ (ಸುಮಾರು 1 ಚಹಾಚಮಚ ಉಪ್ಪು) ಗಿಂತ ಹೆಚ್ಚಾಗಿರದಂತೆ ನೋಡಿಕೊಳ್ಳಬೇಕು.
5. ನಿಯಮಿತವಾಗಿ ಏರೋಬಿಕ್ ವ್ಯಾಯಾಮ ಮಾಡುವುದು (ದಿನಕ್ಕೆ 30 ನಿಮಿಷಗಳಂತೆ ವಾರದ ಹಲವು ದಿನ ಬಿರುಸಾದ ನಡಿಗೆಯಂತಹ ವ್ಯಾಯಾಮ).
ರಕ್ತದೊತ್ತಡವನ್ನು ಕಡಿಮೆ ಮಾಡುವುದರ ಜತೆಗೆ ಈ ಕ್ರಮಗಳು ಅಧಿಕ ರಕ್ತದೊತ್ತಡ ಔಷಧಿಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತವೆ.
– ಮುಂದಿನ ವಾರಕ್ಕೆ
– ಡಾ| ಆದರ್ಶ್ ಎಂ.ಡಿ.,
ಅಸಿಸೆrಂಟ್ ಪ್ರೊಫೆಸರ್
ಡಿಪಾರ್ಟ್‌ಮೆಂಟ್ ಆಫ್ ಮೆಡಿಸಿನ್,
ಕೆಎಂಸಿ ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.