ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವ ಯೋಗಾಸನ
ಶೀತಲಿ ಪ್ರಾಣಾಯಾಮವು ದೇಹವನ್ನು ತಂಪಾಗಿರಿಸುತ್ತದೆ.
Team Udayavani, Mar 15, 2021, 1:32 PM IST
ಹವಾಮಾನದಲ್ಲಿ ಕೊಂಚ ಏರುಪೇರಾದರೂ ಸಾಕು ಆರಂಭದಲ್ಲಿ ಕಾಣಿಸಿಕೊಳ್ಳುವುದು ಶೀತ, ಜ್ವರ. ದೇಹಕ್ಕೆ ಯಾವುದೇ ರೀತಿಯ ಸೋಂಕು ಉಂಟಾದಾಗ ಅದರ ವಿರುದ್ಧ ಪ್ರತಿರೋಧಕ ಶಕ್ತಿಯು ಹೋರಾಡುತ್ತದೆ. ಇದನ್ನೇ ಜ್ವರ ಎನ್ನಲಾಗುವುದು.
ಸಾಮಾನ್ಯವಾಗಿ ಬ್ಯಾಕ್ಟೀರಿಯಾ, ವೈರಸ್ ಸೋಂಕು ಇದಕ್ಕೆ ಕಾರಣವಾಗಿರುತ್ತದೆ. ಜ್ವರದಲ್ಲಿ ದೇಹದ ತಾಪ ಹೆಚ್ಚಾಗುವುದಲ್ಲದೆ ಗಂಟಲು ನೋವು, ಸೆಳೆತ, ತಲೆನೋವು, ಮೂಗು ಸೋರುವಿಕೆಯೂ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಗಟ್ಟಲು ನಿಯಮಿತವಾಗಿ ಯೋಗ ಮಾಡಬೇಕು.
ಇದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಯಾಗಿ ಸೋಂಕಿನ ವಿರುದ್ಧ ಹೋರಾಡಬಹುದು. ಜ್ವರವನ್ನು ನಿಯಂತ್ರಣದಲ್ಲಿರಿಸಲು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವ ಯೋಗಾಸನ ಯೋಗಾಸನ ತಲೆ ಕೆಳಗಾಗಿ ಮಾಡುವಂಥ ಸರ್ವಾಂಗಾಸನವು ವಾಯುನಾಳವನ್ನು ಶುದ್ಧೀಕರಿಸಿ, ಉಸಿರಾಟ ಸಮಸ್ಯೆಯನ್ನು ನಿವಾರಿಸುತ್ತದೆ.
ರಕ್ತ ಸಂಚಾರವನ್ನು ಉತ್ತಮಗೊಳಿಸಿ ದೇಹದಲ್ಲಿ ಚೈತನ್ಯ ತುಂಬುವುದು. ಎದೆ ಮತ್ತು ಶ್ವಾಸಕೋಶವನ್ನು ಉಬ್ಬಿಸಿ ಉಸಿರಾಟದ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ಸ್ಯಾಸನವು ದೇಹದ ನೋವು, ಬಳಲಿಕೆಯನ್ನು ನಿವಾರಿಸುತ್ತದೆ. ಇದರಿಂದ ಜ್ವರದ ರೋಗ ಲಕ್ಷಣಗಳು ಕಡಿಮೆಯಾಗಿ ದೇಹದಲ್ಲಿ ಶಕ್ತಿ ವೃದ್ಧಿಯಾಗುವುದು. ವೃದ್ಧಿ ಸಲು ಸಹಾಯ ಮಾಡುವ ಕೆಲವೊಂದು ಯೋಗ ಭಂಗಿಗಳು ಇಲ್ಲಿವೆ.
ಪ್ರಾಣಾಯಾಮ
ಪ್ರಾಣಾಯಾಮದ ಪ್ರತಿಯೊಂದು ಭಂಗಿಯೂ ದೇಹಕ್ಕೆ ಚೈತನ್ಯ ತುಂಬುತ್ತದೆ. ಅದರಲ್ಲಿ ನಾಡಿ ಶೋಧನ ಪ್ರಾಣಾಯಾಮವು ನರ ವ್ಯವಸ್ಥೆಗೆ ಆರಾಮ ಒದಗಿಸುವುದು ಮಾತ್ರವಲ್ಲದೆ ದೇಹದ ತಾಪಮಾನ ಇಳಿಸಲು ನೆರವಾಗುತ್ತದೆ.
ಇದರಿಂದ ಸರಳವಾದ ಉಸಿರಾಟ ಸಾಧ್ಯವಾಗುವುದಲ್ಲದೆ ಉಸಿರಾಟದ ವ್ಯವಸ್ಥೆ, ಶ್ವಾಸಕೋಶವನ್ನು ಶುದ್ಧೀಕರಿಸಬ ಹುದು. ತಲೆನೋವು ನಿವಾರಿಸಲು ಇದು ಅತ್ಯುತ್ತಮ. ಜ್ವರವಿದ್ದಾಗ ಒಂದು ಬಾರಿಗೆ 9ರಂತೆ ದಿನದಲ್ಲಿ ಮೂರು ಬಾರಿ ಈ ಪ್ರಾಣಾಯಾಮ ಮಾಡಬಹುದು.
ಶೀತಲಿ ಪ್ರಾಣಾಯಾಮವು ದೇಹವನ್ನು ತಂಪಾಗಿರಿಸುತ್ತದೆ. ಈ ಭಂಗಿಯಲ್ಲಿ ಉಸಿರಾಟದಿಂದ ಬಾಯಿಯ ಮೂಲಕ ಗಾಳಿಯನ್ನು ತೆಗೆದುಕೊಂಡು ಮೂಗಿನಲ್ಲಿ ಹೊರಬಿಡಲಾಗುತ್ತದೆ. ಇದರಿಂದ ದೇಹ ಸಂಪೂರ್ಣ ತಂಪಾಗುವುದಲ್ಲದೆ ನರ ವ್ಯವಸ್ಥೆಗೂ ಚೈತನ್ಯ ದೊರೆಯುವುದು.
ಅನುಲೋಮಾ ವಿಲೋಮಾ ಪ್ರಾಣಾಯಾಮವು ದೇಹವನ್ನು ಸಂಪೂರ್ಣ ಶುದ್ಧೀಕರಿಸುತ್ತದೆ. ಇದು ಶೀತ, ಜ್ವರದ ಲಕ್ಷಣಗಳನ್ನು ಶೀಘ್ರದಲ್ಲಿ ಕಡಿಮೆ ಮಾಡುತ್ತದೆ. ಉಸಿರನ್ನು ಎಳೆದು ಒತ್ತಡ ಪೂರ್ವಕವಾಗಿ ಹೊರಬಿಡುವ ಕಪಾಲಭಾತಿ ಪ್ರಾಣಾಯಾಮದಿಂದ ಮೂಗಿನ ಹೊಳ್ಳೆಗಳು ಶುದ್ಧವಾಗುವುದು. ಇದು ದೇಹದಲ್ಲಿರುವ ಶೇ. 80ರಷ್ಟು ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.