ಝೈಡಸ್ ಲಸಿಕೆ: ದರ ಇಳಿಕೆ ಬಗ್ಗೆ ಚರ್ಚೆ
ಲಸಿಕೆಯ ಬೆಲೆ, ಡೋಸೇಜ್‌ಗಳ ಇಳಿಕೆಗೆ ಕೇಂದ್ರ ಸರ್ಕಾರ ಇಂಗಿತ
Team Udayavani, Oct 4, 2021, 5:55 AM IST
ನವದೆಹಲಿ: ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ದೇಶ ಸನ್ನದ್ಧವಾಗುತ್ತಿರುವ ಹೊತ್ತಿನಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ಸಿಗುವ ಬಗ್ಗೆ ವ್ಯಾಪಕ ಚರ್ಚೆಗಳು ಆರಂಭವಾಗಿವೆ.
ಇದರ ನಡುವೆಯೇ, ಕೇಂದ್ರ ಸರ್ಕಾರದ ಮುಂದೆ ತನ್ನ ಲಸಿಕೆಯ ಪ್ರಸ್ತಾವನೆ ಮಂಡಿಸಿರುವ ಝೈಡಸ್ ಕ್ಯಾಡಿಲಾ ಕಂಪನಿ, 12 ವರ್ಷ ಮೇಲ್ಪಟ್ಟವರಿಗೆ ಮೂರು ಡೋಸ್‌ಗಳಲ್ಲಿ ನೀಡುವಂಥ, “ಸೂಜಿಯಿಲ್ಲದ ಜೆಟ್ ಇಂಜೆಕ್ಟರ್ ಮಾದರಿ’ಯ “ಝೈಕೋವ್-ಡಿ’ ಲಸಿಕೆಯ ಸಾರ್ವಜನಿಕ ಬಳಕೆಗೆ ಅನುಮತಿ ನೀಡುವಂತೆ ಕೋರಿದೆ. ಅಲ್ಲದೆ, ತನ್ನ ಪ್ರತಿಯೊಂದು ಡೋಸ್‌ನ ಲಸಿಕೆಯ ಬೆಲೆಯನ್ನು 1,900 ರೂ.ಗಳಿಗೆ ನಿಗದಿಪಡಿಸಿರುವುದಾಗಿ ಪ್ರಸ್ತಾವನೆಯಲ್ಲಿ ಹೇಳಿದೆ.
ಆದರೆ, ಕೇಂದ್ರ ಸರ್ಕಾರ, ಈ ಪ್ರಸ್ತಾವನೆಯನ್ನು ಒಪ್ಪಿಲ್ಲ. ಲಸಿಕೆಯ ಬೆಲೆಯನ್ನು ಹಾಗೂ ಡೋಸ್‌ಗಳ ಸಂಖ್ಯೆಯನ್ನು ಇಳಿಸುವಂತೆ ಕಂಪನಿಯ ಪ್ರತಿನಿಧಿಗಳಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಮುಂಬೈನ ಖ್ಯಾತ ದೇಗುಲವಾದ ಮುಂಬಾ ದೇವಸ್ಥಾನ ಅ. 7ರಿಂದ ಸಾರ್ವಜನಿಕರಿಗಾಗಿ ತೆರೆಯಲಿದ್ದು, ಎರಡೂ ಡೋಸ್ ಲಸಿಕೆ ಪಡೆದಿರುವ ಭಕ್ತಾದಿಗಳಿಗೆ ಮಾತ್ರ ಪ್ರವೇಶ ಕಲ್ಪಿಸುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ:ಯುಎಇಗಿಂತ ಮುನ್ನ ಭಾರತದಲ್ಲಿ ಹೈಪರ್‌ಲೂಪ್? ಸುಲ್ತಾನ್ ಅಹ್ಮದ್ ಸುಳಿವು
ಕೇಸು ವಾಪಸ್:
ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯ ಅನ್ವಯ ಉತ್ತರ ಪ್ರದೇಶದಲ್ಲಿ ದಾಖಲಾಗಿದ್ದ ಎಲ್ಲ ಕೇಸುಗಳನ್ನೂ ಕೈಬಿಡು ವಂತೆ ಸಿಎಂ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ರಾಜ್ಯದಲ್ಲಿ ಇದುವರೆಗೆ 100.91 ದಶಲಕ್ಷ ಡೋಸ್ ಲಸಿಕೆ ಹಾಕಲಾಗಿದೆ. 31 ಜಿಲ್ಲೆಗಳಲ್ಲಿ ಸಕ್ರಿಯ ಕೇಸುಗಳು ಇಲ್ಲವೆಂದು ಸಿಎಂ ಯೋಗಿ ಹರ್ಷವ್ಯಕ್ತಪಡಿಸಿದ್ದಾರೆ.
ಭಾರತವು ಜಗತ್ತಿನ ಫಾರ್ಮಸಿ
ಭಾರತವು ವಿಶ್ವದ ಔಷಧಾಲಯವಾಗುತ್ತಿದೆ. ಇದು 75 ವರ್ಷದ ಇತಿಹಾಸದಲ್ಲಿ ಅತಿದೊಡ್ಡ ಸಾಧನೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ( ಡಬ್ಲ್ಯೂಎಚ್‌ಒ) ಪ್ರಧಾನ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ. ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಭಾಗವಹಿಸಿದ ಅವರು, ದೇಶವು ಪೋಲಿಯೋ ನಿರ್ಮೂಲನೆಯಿಂದ ಹಿಡಿದು, ಲಸಿಕೆಯಿಂದ ಗುಣಪಡಿಸಬಲ್ಲ ಹಲವು ಕಾಯಿಲೆಗಳನ್ನು ನಿಯಂತ್ರಿಸಿದೆ. ತಾಯಿ ಮತ್ತು ಮಕ್ಕಳ ಸಾವಿನ ಸಂಖ್ಯೆಯಲ್ಲೂ ಭಾರೀ ಇಳಿಕೆಯಾಗಿದೆ ಎಂದಿದ್ದಾರೆ. ಹಾಗೆಯೇ ಕೊರೊನಾ ಸಮಯದಲ್ಲಿ ಭಾರತ ಸೇರಿ ವಿಶ್ವಾದ್ಯಂತ ಮೂಲಭೂತ ವೈದ್ಯಕೀಯ ಸೇವೆಗ ಸಾಕಷ್ಟು ತೊಂದರೆಯುಂಟಾಗಿತ್ತು. ಹೀಗಾಗಿ ದೇಶದಲ್ಲಿ ಕ್ಷಯರೋಗ, ಸಾಂಕ್ರಾಮಿಕವಲ್ಲದ ರೋಗಗಳ ಕಡೆ ಹೆಚ್ಚಿನ ವೈದ್ಯಕೀಯ ಗಮನ ಹರಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ನಾವು ಇದರತ್ತ ಹೆಚ್ಚಿನ ಗಮನ ನೀಡಬೇಕಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Washington: ಅಮೆರಿಕದ ಭರವಸೆಯಬೆಳಕು ಜೀವಂತವಿರಲಿದೆ: ಕಮಲಾ ಭಾವುಕ ಭಾಷಣ
MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್?
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.