ಸುದ್ದಿ ಕೋಶ: ತಾಜ್ ರಕ್ಷಣೆಗೆ ಸೋಲಾರ್ ಕಾರು
Team Udayavani, Jun 9, 2018, 6:00 AM IST
ವಾಯುಮಾಲಿನ್ಯದಿಂದಾಗಿ ವಿಶ್ವವಿಖ್ಯಾತ ಪ್ರೇಮಸೌಧ ತಾಜ್‌ಮಹಲ್ ಕಂದು ಬಣ್ಣಕ್ಕೆ ತಿರುಗುತ್ತಿರುವ ಕಳವಳ ಮಾಹಿತಿ ಹೊರಬಿದ್ದ ಬೆನ್ನಲ್ಲೇ, ಆಗ್ರಾದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಾಜ್ ಸುತ್ತಮುತ್ತ ಓಡಾಡಲು ಸೋಲಾರ್ ಕಾರೊಂದನ್ನು ಸಿದ್ಧಪಡಿಸಿದ್ದಾರೆ. ಈ ಮೂಲಕ ಇಂಗಾಲದಿಂದ ತಾಜ್‌ನ ಸೌಂದರ್ಯವನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಏನಿದು ಸೌರ ಕಾರು? ಏನಿದರ ವಿಶೇಷ?
ಅನುಕೂಲತೆ?
ಸೌರ ಕಾರುಗಳ ಬಳಕೆಯಿಂದ ವಾಯುಮಾಲಿನ್ಯ ಗಣನೀಯ ವಾಗಿ ನಿಯಂತ್ರಿಸಲು ಸಾಧ್ಯ
ಬ್ಯಾಟರಿ ಅಳವಡಿಸಿರುವುದರಿಂದ ರಾತ್ರಿಯ ವೇಳೆಯೂ ಬಳಕೆ
ಪೆಟ್ರೋಲ್, ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಇದರ ನಿರ್ವಹಣೆ ವೆಚ್ಚವೂ ಕಡಿಮೆ
ಇಂಧನಕ್ಕೆ ಪ್ರತಿ ದಿನ ವೆಚ್ಚ ಮಾಡಬೇಕಾಗಿಲ್ಲ
ಈ ಕಾರು ತಯಾರಿಕೆಗೆ ಅಗತ್ಯ ಪರಿಕರಗಳೂ ಸುಲಭವಾಗಿ ಲಭ್ಯ
ಮೊದಲೇನಲ್ಲ
ಅಷ್ಟಕ್ಕೂ ಸೋಲಾರ್ ಕಾರನ್ನು ಅಭಿವೃದ್ಧಿ ಪಡಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆ ವಿದೇಶದಲ್ಲಿ ಇಬ್ಬರು ಕುಳಿತು ಕೊಳ್ಳಬಹುದಾದ ಕಾರನ್ನು ಅಭಿವೃದ್ಧಿಪಡಿಸಲಾಗಿತ್ತು. ಆಗ್ರಾದ ವಿದ್ಯಾರ್ಥಿಗಳು 4 ಮಂದಿ ಕುಳಿತುಕೊಳ್ಳಬಹು ದಾದ ಕಾರನ್ನು ಸಿದ್ಧಪಡಿಸಿ ದ್ದಾರೆ.
ಕಾರಿನ ಹೆಸರು: ನೆಕ್ಸ್‌ಜೆನ್
50,000 ರೂ.ಸೌರಶಕ್ತಿಚಾಲಿತ ಕಾರಿನ ಬೆಲೆ
04 ಕಾರಿನಲ್ಲಿರುವ ಆಸನಗಳು
30 ಕಿ.ಮೀ ಗಂಟೆಗೆ ಗರಿಷ್ಠ ವೇಗ
ಅಭಿವೃದ್ಧಿಪಡಿಸಿದ್ದು: ಏಸ್(ಎಸಿಇ) ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ವಿದ್ಯಾರ್ಥಿಗಳು ಗುಜಿರಿ ಹಾಗೂ ಪುನರ್ಬಳಕೆಯ ವಸ್ತುಗಳಿಂದ ಈ ಕಾರನ್ನು ಸಿದ್ಧಪಡಿಸಿದ್ದಾರೆ.
ಪರೀಕ್ಷಾರ್ಥವಾಗಿ ಈ ಕಾರನ್ನು ಮೊದಲು ಗ್ರಾಮೀಣ ಪ್ರದೇಶದಲ್ಲಿ ಬಳಕೆ ಮಾಡಲಾಗಿದೆ. ತಾಜ್ ಸುತ್ತಮುತ್ತ ಪ್ರವಾಸಿಗರ ಓಡಾಟಕ್ಕೆ ಅನುಕೂಲವಾಗಲಿದೆ. ವಾಯು ಮಾಲಿನ್ಯ ನಿಯಂತ್ರಣವೂ ಸಾಧ್ಯ.
ಸಂಜಯ್ ಗರ್ಗ್, ಕಾಲೇಜಿನ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Skit: ಹಿಂದೂ ಧರ್ಮದ ಅವಹೇಳನ-ಬಾಂಬೆ ಐಐಟಿ ವಿದ್ಯಾರ್ಥಿಗಳಿಗೆ 1.2 ಲಕ್ಷ ದಂಡ
Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!
Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?
3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!
ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?
MUST WATCH
ಹೊಸ ಸೇರ್ಪಡೆ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.