ಡೇಟಿಂಗ್ ಪ್ರಿಯರಿಗೆ ಬಂದಿದೆ ಫೇಸ್ಬುಕ್ಕಿನ ಹೊಸ ಆಪ್ಷನ್!
Team Udayavani, Sep 6, 2019, 9:00 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸ್ಯಾನ್‌ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್ಬುಕ್ ಜಗತ್ತಿನಾದ್ಯಂತ ಸಾವಿರಾರು ಕೋಟಿ ಬಳಕೆದಾರರನ್ನು ಹೊಂದಿದೆ. ಇದೀಗ ಬದಲಾಗುತ್ತಿರುವ ಜೀವನಶೈಲಿಗೆ ಹಾಗೂ ಯುವಜನತೆಯ ಮನೋಕಾಮನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಈ ಸಂಸ್ಥೆ ಪೇಸ್ಬುಕ್ ಡೇಟಿಂಗ್ ತಾಣವನ್ನು ಆರಂಭಿಸಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಸಂಗಾತಿಯ ಹುಡುಕಾಟದಲ್ಲಿರುವವರಿಗೆ ಈ ತಾಣ ನೆರವಾಗಬಹುದು ಎಂಬುದು ಇದರ ಹಿಂದಿರುವ ಯೋಚನೆಯಾಗಿದೆ. ಪ್ರಸ್ತುತ ಅಮೆರಿಕ ಸೇರಿದಂತೆ ಇತರ 19 ದೇಶಗಳಲ್ಲಿ ಈ ಡೇಟಿಂಗ್ ತಾಣವನ್ನು ಆರಂಭಿಸಿದ್ದು ಮುಂಬರುವ ದಿನಗಳಲ್ಲಿ ಜಗತ್ತಿನಾದ್ಯಂತ ಲಭ್ಯವಾಗಲಿದೆ.
18 ವರ್ಷಕ್ಕಿಂತ ಮೇಲ್ಪಟ್ಟ ಪೇಸ್ಬುಕ್ ಬಳಕೆದಾರರು ಡೇಟಿಂಗ್ ಮಾಡಲು ಇಚ್ಚಿಸಿದರೆ ಇಲ್ಲಿ ಪ್ರತ್ಯೇಕವಾದ ಡೇಟಿಂಗ್ ಪ್ರೊಫೈಲ್ ಅನ್ನು ರಚಿಸಬೇಕಾಗುತ್ತದೆ. ಇದು ಫೇಸ್ಬುಕ್ಕಿನದ್ದೇ ಖ್ಯಾತ ಫೋಟೋ ಶೇರಿಂಗ್ ತಾಣವಾದ ಇನ್ ಸ್ಟಾಗ್ರಾಂ ಗೆ ಲಿಂಕ್ ಹೊಂದಿರಲಿದೆ.
ಇನ್ ಸ್ಟಾಗ್ರಾಂನಲ್ಲಿ ನಾವು ಹಂಚಿಕೊಂಡಿರುವ ಚಿತ್ರಗಳನ್ನು ಈ ಡೇಟಿಂಗ್ ತಾಣದಲ್ಲಿ ನಾವು ನೋಡಬಹುದಾಗಿದೆ. ಈ ಡೇಟಿಂಗ್ ಗೆ ತಮ್ಮ ಫೇಸ್ಬುಕ್ ಖಾತೆಯ ಸ್ನೇಹಿತರು ಮಾತ್ರವಲ್ಲದೇ ನಮ್ಮ ಇನ್ ಸ್ಟಾಗ್ರಾಂ ಖಾತೆಯ ಬೆಂಬಲಿಗರನ್ನು ಸೇರಿಸಿಕೊಳ್ಳಬಹುದಾಗಿದೆ.
ಈಗಾಗಲೇ ನೂರಾರು ಡೇಟಿಂಗ್ ಆ್ಯಪ್ ಗಳು ಇದ್ದು, ಅವುಗಳು ಜಾಹೀರಾತುಗಳತ್ತ ಮಾತ್ರ ಗಮನಹರಿಸುತ್ತಿದ್ದು ಜನ ಸಂಪರ್ಕ ಸಾಧಿಸಲು ನೆರವಾಗುತ್ತಿಲ್ಲ ಎಂಬ ಆರೋಪ ಇದೆ. ಈ ನಿಟ್ಟಿನಲ್ಲಿ ಫೇಸ್ಬುಕ್ ತಮ್ಮದೇ ಆದ ಡೇಟಿಂಗ್ ತಾಣವನ್ನು ಹೊಂದಲು ತೀರ್ಮಾನಿಸಿದೆ.
ನಿಮಗೆ ಯಾರ ಮೆಲಾದರೂ ಕ್ರಶ್ ಆಗಿದ್ದರೆ ಅಥವಾ ನೀವು ಯಾರನ್ನಾದರೂ ಇಷ್ಟ ಪಡುತ್ತಿದ್ದರೆ ಅಂತಹವರ ಪ್ರೊಫೈಲ್‌ಗೆ ಹೋಗಿ ಅಲ್ಲಿ ಕಮೆಂಟ್ ಮತ್ತು ಲೈಕ್ ಮಾಡಬೇಕು. ಈ ಮೂಲಕ ಪರಿಚಯವಾದ ಅಥವ ಲಭ್ಯವಾದ ಸಂಬಂಧಗಳ ಸಂಪರ್ಕಗಳು ಇದೇ ತಾಣದ ಮುಖಾಂತರ ನಡೆಯುತ್ತದೆ. ಆದರೆ ಇದು ನಿಮ್ಮ ಅಧಿಕೃತ ಫೇಸ್ಬುಕ್ ಪುಟದಲ್ಲಿ ಕಾಣಿಸುವುದಿಲ್ಲ. ಹಾಗಾಗಿ ನಿಮ್ಮ ಸಂಬಂಧಗಳ ಗುಟ್ಟು ಹೊರ ಜಗತ್ತಿಗೆ ತಿಳಿಯುವುದಕ್ಕೆ ಸಾಧ್ಯವೇ ಇಲ್ಲ.
ಈಗಾಗಲೇ ಜಗತ್ತಿನಾದ್ಯಂತ ಪ್ರೈವಸಿ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಅದಕ್ಕೂ ಈ ಹೊಸ ತಾಣದಲ್ಲಿ ಮಹತ್ವವನ್ನು ನೀಡಲಾಗಿದೆ. ಬಳಕೆದಾರರ ಸುರಕ್ಷೆ ಮುಖ್ಯ ಎಂದು ಸಂಸ್ಥೆ ಹೇಳಿದೆ.
ಸಾಂಪ್ರದಾಯಿಕ ಮನಸ್ಥಿತಿಯ ಜನರಿರುವ ಭಾರತದಂತಹ ದೇಶಗಳಲ್ಲಿ ಈ ಹೊಸ ಆ್ಯಪ್ ಗೆ ಯಾವ ರೀತಿಯ ಸ್ವಾಗತ ಸಿಗುತ್ತದೆ ಎಂಬುದನ್ನು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಅಲ್ಲಿನ ಸಂಸ್ಕೃತಿಗೆ ಇದು ಸರಿಯಾಗಿ ಕಂಡರೂ ಭಾರತದಂತಹ ಸಂಸ್ಕೃತಿಗೆ ಮೌಲ್ಯ ನೀಡುವ ದೇಶಗಳಲ್ಲಿ ಈ ಪ್ರಯೋಗ ಹೇಗೆ ಸ್ವೀಕರಿಸಲ್ಪಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Skit: ಹಿಂದೂ ಧರ್ಮದ ಅವಹೇಳನ-ಬಾಂಬೆ ಐಐಟಿ ವಿದ್ಯಾರ್ಥಿಗಳಿಗೆ 1.2 ಲಕ್ಷ ದಂಡ
Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!
Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?
3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!
ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?
MUST WATCH
ಹೊಸ ಸೇರ್ಪಡೆ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.