ಕಗ್ಗತ್ತಲ ಕೂಪದೊಳಗಿನ ಯಶಸ್ವಿ ಕಾರ್ಯಾಚರಣೆ
Team Udayavani, Jul 9, 2018, 11:43 AM IST
ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಕಳೆದ 15 ದಿನ ಗಳಿಂದ ಸಿಲುಕಿಕೊಂಡಿದ್ದ ಮಕ್ಕಳ ಪೈಕಿ 6 ಮಂದಿ ಕೊನೆಗೂ ಹೊರಬಂದಿದ್ದಾರೆ. ಇದಕ್ಕೆ ಸೀಲ್ ಪಡೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಒಳಗಿರುವ ಎಲ್ಲರನ್ನೂ ಜೀವಂತ ವಾಗಿ ಹೊರತರಲು ಸೀಲ್ ತಂಡ ನಡೆಸಿದ ಕಾರ್ಯಾಚರಣೆಯ ಚಿತ್ರಸಹಿತ ವಿವರ ಇಲ್ಲಿದೆ.
ಬಾಲಕರು ಇಲ್ಲಿದ್ದರು
ಗುಹೆಯೊಳಗಿನ ನೀರನ್ನು ದಾಟಿ ಬರಲು ಮೊದ ಲು, ಸೀಲ್ ಪಡೆಯು ಬಾಲಕರಿಗೆ ಸ್ಕೂಬಾ ಡೈವಿಂಗ್ ಕಲಿಸಿತು. ಸರಿಯಾದ ಆಹಾರವಿಲ್ಲದೇ ಮಕ್ಕಳು ನಿಶ್ಶಕ್ತರಾಗಿರುವ ಸಾಧ್ಯತೆಯಿದ್ದ ಕಾರಣ, ಅವರಿಂದ ಡೈವ್ ಮಾಡಲು ಸಾಧ್ಯವೇ ಎಂದು ಇದಕ್ಕೂ ಮೊದಲೇ ವೈದ್ಯರು ಪರಿಶೀಲಿಸಿದ್ದರು.
ಪಟ್ಟುಬಿಡದ ಡೈವರ್‌ಗಳು
ಗುಹೆಯ ಹೊರಗಿರುವ ಮತ್ತು ಒಳಗಿರುವ ಡೈವರ್‌ಗಳು ತಮ್ಮ ಪ್ರಾಣವನ್ನೇ ಪಣಕ್ಕೊಡ್ಡಿ ಬಾಲಕರ ರಕ್ಷಣೆ ಕಾರ್ಯ ಕೈಗೊಂಡಿದ್ದರು. ಸಿಲುಕಿಕೊಂಡ ತಂಡಕ್ಕೆ ಆಹಾರ, ಆಮ್ಲಜನಕ ಒದಗಿಸಲು ಅವರು ಅತ್ಯಂತ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಿದ್ದಾರೆ.
ಚೇಂಬರ್ ಸ್ಥಿತಿಗತಿ
ಇಲ್ಲಿ ಹೆಚ್ಚುವರಿ ಮಳೆ ಬಿದ್ದರೆ ಇಡೀ ಪ್ರದೇಶ ಸಂಪೂರ್ಣ ಮುಳುಗಡೆ ಆಗುವ ಭೀತಿಯಿತ್ತು.
ಪರಿಸ್ಥಿತಿ
ಸಿಲುಕಿಕೊಂಡ ಸಮಯದಲ್ಲಿ ಬಾಲಕರು ಫುಟ್ಬಾಲ್ ಕಿಟ್ ಧರಿಸಿದ್ದರು. ಆದರೆ, ಗುಹೆಯೊಳಗಿನ ತಾಪಮಾನ -20 ಡಿ.ಸೆ. ಇರುವ ಕಾರಣ, ಮಕ್ಕಳು ಬೆಚ್ಚಗಿರಲಿ ಎಂಬ ಕಾರಣಕ್ಕೆ ಫಾಯಿಲ್ ಹೊದಿಕೆಗಳನ್ನು ನೀಡಲಾಗಿತ್ತು.
ಅಪಾಯಕಾರಿ ಘಟ್ಟ
ಈ ಪ್ರದೇಶವು ಅತ್ಯಂತ ಸವಾಲಿನದ್ದು ಹಾಗೂ ಅಪಾಯಕಾರಿಯಾದದ್ದು. ಸುರಂಗದ ಈ ಭಾಗದಲ್ಲಿ ಅತ್ಯಂತ ಕಿರಿದಾದ ಮೇಲ್ಮುಖ ತಿರುವು ಇದ್ದು, ಅದು ಹತ್ತಿದ ಕೂಡಲೇ ಇಳಿಜಾರು ಸಿಗುತ್ತದೆ. ಈಜಿಕೊಂಡು ಬಂದ ಬಾಲಕರು ಸಂಪೂರ್ಣ ಕತ್ತಲಿನಲ್ಲಿ ಈ ಕಲ್ಲು ಬಂಡೆಯನ್ನು ಏರಿ, ಮತ್ತೆ ಕೆಳಗಿರುವ ನೀರಿಗೆ ಧುಮುಕಿ ಬಂದಿದ್ದಾರೆ.
ಇಲ್ಲಿಂದ ಹೊರ ಬಂದರು
ಅನಂತರ ಒಂದೂವರೆ ಮೈಲುಗಳ ಈಜುವಿಕೆ ಬಳಿಕ, ಬಾಲಕರು ಗುಹೆಯ ಬಾಯಿಯ ಬಳಿಯಿರುವ ಸಪ್ಲೆ„ ಬೇಸ್‌ಗೆ ತಲುಪಿದರು. ಇಲ್ಲಿ ವೈದ್ಯರ ತಂಡ ಅವರ ಆರೋಗ್ಯ ಪರಿಶೀಲನೆ ನಡೆಸಿತು. ಅವರು ಹೊರಬರುವ ವೇಳೆ ಬೆಳಕು ಹರಿದಿದ್ದರೆ (ಹಗಲು ಆಗಿದ್ದರೆ), ಅವರಿಗೆ ಮಾಸ್ಕ್ ಹಾಗೂ ಸನ್‌ಗಾÉಸ್‌ಗಳ ಅಗತ್ಯವಿರುತ್ತದೆ. ಇಷ್ಟು ದಿನ ಕತ್ತಲಲ್ಲೇ ಕಾಲ ಕಳೆದಿರುವ ಕಾರಣ ಒಮ್ಮಿಂದೊಮ್ಮೆಲೇ ಬೆಳಕು ನೋಡಲು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಅವರ ಕಣ್ಣುಗಳ ರಕ್ಷಣೆಗೆ ಇದನ್ನು ನೀಡಲಾಗುತ್ತದೆ.
ಗುಹೆ ಹೇಗಿದೆ?
ಗುಹೆಯ ಒಳಭಾಗದಲ್ಲಿ 3.2 ಕಿ.ಮೀ. ದೂರದಲ್ಲಿ ಈ ತಂಡ ಸಿಲುಕಿಕೊಂಡಿತ್ತು. ಈ ಪ್ರದೇಶವು ಡೋಯಿನಾಂಗ್ ನಾನ್ ಪರ್ವತದ ಕೆಳಭಾಗದಲ್ಲಿ 9.5 ಕಿ.ಮೀ. ದೂರದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Skit: ಹಿಂದೂ ಧರ್ಮದ ಅವಹೇಳನ-ಬಾಂಬೆ ಐಐಟಿ ವಿದ್ಯಾರ್ಥಿಗಳಿಗೆ 1.2 ಲಕ್ಷ ದಂಡ
Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!
Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?
3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!
ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.