ಸುದ್ದಿ ಕೋಶ: ರೈಲ್ವೇಗೆ ಕಳ್ಳರ ತಲೆನೋವು!
Team Udayavani, May 25, 2018, 6:00 AM IST
2017-18ರ ಅವಧಿಯಲ್ಲಿ ದೇಶಾ ದ್ಯಂತ ನಾನಾ ರೈಲುಗಳು, ನಿಲ್ದಾಣಗಳಿಂದ ಪ್ರಯಾಣಿಕರಿಂದಲೇ ಕಳ್ಳತನವಾಗಿದ್ದ ರೈಲ್ವೇ ಇಲಾಖೆಗೆ ಸಂಬಂಧ ಪಟ್ಟ ಸಾಮಗ್ರಿಗಳಲ್ಲಿ ಬಹುತೇಕ ವಸ್ತುಗಳನ್ನು ಮರುವಶಪಡಿಸಿಕೊಳ್ಳುವಲ್ಲಿ ರೈಲ್ವೆ ಇಲಾಖೆ ಸಫಲವಾಗಿದೆ. ರೈಲ್ವೇ ಸುರಕ್ಷಾ ಪಡೆ (ಆರ್‌ಪಿಎಫ್) ವಶಪಡಿಸಿಕೊಂಡ ಈ ಸಾಮಗ್ರಿಗಳ ಒಟ್ಟು ಮೌಲ್ಯ 2.97 ಕೋಟಿ ರೂ. ಇಂಥ ಕಳ್ಳತನದ ಪ್ರಕರಣಗಳು ರೈಲ್ವೆ ಇಲಾ ಖೆಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಇಲಾಖೆ ಆತಂಕ
1 ಲಕ್ಷ ಕಿ.ಮೀ. ವರೆಗಿನ ರೈಲು ಮಾರ್ಗಗಳಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿ ಡುವುದು ಅಸಾಧ್ಯ. ಕಳ್ಳತನ ಪ್ರಮಾಣ ಏರುತ್ತಿರುವುದು ಆತಂಕಕಾರಿ. ಎಂಜಿನಿಯರಿಂಗ್ ವಿಭಾಗದ ಪರಿಕರಗಳನ್ನೇ ಹೆಚ್ಚು ಕದಿಯುತ್ತಿರುವುದು ಅಪಘಾತಗಳಿಗೂ ಕಾರಣವಾಗಬಹುದು ಎಂಬ ಆತಂಕವನ್ನು ಹಿರಿಯ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ.
ಚೆಂಬಿನಿಂದ ತಾಂತ್ರಿಕ ಸಾಮಗ್ರಿವರೆಗೆ!
ಬೋಗಿಗಳ ಟಾಯ್ಲೆಟ್‌ಗಳಲ್ಲಿನ ಚೆಂಬು, ಬೆಡ್ ಶೀಟುಗಳನ್ನೂ ಬಿಡದೇ ಕದ್ದಿರುವ ಜನ, ಒಳಗಿರುವ ಸೀಲಿಂಗ್ ಫ್ಯಾನುಗಳು, ವಾಶ್‌ರೂಂಗಳಲ್ಲಿನ ಶವರ್‌ಗಳು, ಕಿಟಕಿಗಳಿಗೆ ಅಳವಡಿಸಲಾಗುವ ಕಬ್ಬಿಣದ ಗ್ರಿಲ್ ಜತೆಗೆ ರೈಲು ನಿಲ್ದಾಣಗಳಲ್ಲಿ ಇರಿಸಿರುವ ಕೆಲ ಎಂಜಿನಿಯರಿಂಗ್ ಪರಿಕರಗಳನ್ನೂ ಕದ್ದಿದ್ದಾರೆ.
ಯಾವ ವಿಭಾಗದಲ್ಲಿ ಏನೇನು ಕಳವು?
ಎಂಜಿನಿಯರಿಂಗ್: ರೈಲ್ವೆ ಟ್ರ್ಯಾಕ್ ಪರಿ ಕರ, ಫಿಶ್ ಪ್ಲೇಟ್‌ಗಳು
ಮೆಕ್ಯಾನಿಕಲ್: ವಾಷ್ ಬೇಸಿನ್, ಶವರ್, ಕನ್ನಡಿ, ನಲ್ಲಿಗಳು
ಸಿಗ್ನಲಿಂಗ್ ಮತ್ತು ಟೆಲಿಕಮ್ಯೂನಿಕೇಷನ್: ಓವರ್ ಹೆಡ್ ಕೇಬಲ್‌ಗಳು, ಸೋಲಾರ್ ಪ್ಲೇಟ್‌ಗಳು, ರಿಲೇ, ಟೆಲಿಫೋಗಳು
ವಿದ್ಯುತ್: ಬ್ಯಾಟರಿಗಳು, ಎಲೆಕ್ಟ್ರಿಕ್ ಕೋಚ್ ಫ್ಯಾನ್‌ಗಳು, ಸ್ವಿಚ್‌ಗಳು
74,456 ಆರ್‌ಪಿಎಫ್ಗೆ ಮಂಜೂರಾಗಿರುವ ಸಿಬಂದಿ
67,000 ಆರ್‌ಪಿಎಫ್ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬಂದಿ
ಯಾವ ವರ್ಷ,ಎಷ್ಟೆಷ್ಟು?
ವರ್ಷ ಪ್ರಕರಣ ಮೌಲ್ಯ
2016-17 5,219 1.58
2017-18 5,239 2.97
(ರೂ. ಕೋಟಿಗಳಲ್ಲಿ )
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Skit: ಹಿಂದೂ ಧರ್ಮದ ಅವಹೇಳನ-ಬಾಂಬೆ ಐಐಟಿ ವಿದ್ಯಾರ್ಥಿಗಳಿಗೆ 1.2 ಲಕ್ಷ ದಂಡ
Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!
Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?
3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!
ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?
MUST WATCH
ಹೊಸ ಸೇರ್ಪಡೆ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.