ಬ್ರೆಡ್ ಪಕೋಡಾ
Team Udayavani, Aug 8, 2017, 5:23 AM IST
ಬೇಕಾಗುವ ಸಾಮಗ್ರಿಗಳು:
ಬ್ರೆಡ್ ತುಂಡುಗಳು-2 ಕಪ್, ಕಡಲೆ ಹಿಟ್ಟು-1 ಕಪ್, ಅಕ್ಕಿ ಹಿಟ್ಟು-1/2 ಕಪ್, ಅಚ್ಚ ಖಾರದ ಪುಡಿ-2 ಚಮಚ, ಗರಂ ಮಸಾಲೆ-3 ಚಮಚ, ಅರಶಿನ-1/2 ಚಮಚ, ತೆಂಗಿನಕಾಯಿ ತುರಿ-1/2 ಕಪ್, ಕತ್ತರಿಸಿದ ಕರಿಬೇವಿನ ಎಲೆಗಳು-3 ಚಮಚ, ಉಪ್ಪು-ರುಚಿಗೆ ತಕ್ಕಷ್ಟು,
ಎಣ್ಣೆ-ಕರಿಯಲು
ಮಾಡುವ ವಿಧಾನ:
ಕಡಲೆ ಹಿಟ್ಟು, ಅಕ್ಕಿ ಹಿಟ್ಟುಗಳನ್ನು ಒಂದು ಚಮಚ ಬಿಸಿ ಎಣ್ಣೆ ಸೇರಿಸಿ ಕಲಕಿಡಿ. ತೆಂಗಿನಕಾಯಿ ತುರಿ, ಕರಿಬೇವಿನ ಎಲೆಗಳು, ಅರಶಿನ, ಅಚ್ಚ ಖಾರದ ಪುಡಿ, ಉಪ್ಪು, ಗರಂ ಮಸಾಲೆಗಳನ್ನು ಸೇರಿಸಿ ತರಿತರಿಯಾಗಿ ಅರೆದು, ಬ್ರೆಡ್ ತುಂಡುಗಳೊಂದಿಗೆ ಬೆರೆಸಿ. ಕಡಲೆ ಹಿಟ್ಟಿನ ಹಾಗೂ ಬ್ರೆಡ್ ಮಿಶ್ರಣಗಳನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ವಡೆಯ ಹದಕ್ಕೆ ಕಲಸಿಡಿ. ಮಿಶ್ರಣದಿಂದ ನಿಂಬೆಯ
ಗಾತ್ರದ ಹಿಟ್ಟು ತೆಗೆದುಕೊಂಡು ವಡೆಯಾಕಾರದಲ್ಲಿ ತಟ್ಟಿ, ಕಾಯಿಸಿದ ಎಣ್ಣೆಯಲ್ಲಿ ಕರಿದರೆ, ಸ್ವಾದಿಷ್ಟವಾದ ಬ್ರೆಡ್ ಪಕೋಡಾ ಸವಿಯಲು ಸಿದ್ಧ. ಇದನ್ನು ಪುದಿನಾ ಚಟ್ನಿಯೊಂದಿಗೆ ತಿನ್ನಲು ಬಲು ರುಚಿ.
ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.