ಚಳಿಯ ಮಣಿಸಲು “ಚೂಡಾ’ ಮಣಿ!

Team Udayavani, Dec 20, 2017, 3:58 PM IST

20-29.jpg

ಚಳಿಗಾಲ ಬಂದಿದೆ. ಎಲ್ಲರಿಗೂ ಕುರು ಮುರು ತಿನ್ನುವ ಆಸೆ. ಈ ಸಮಯದಲ್ಲಿ ಬಾಯಿ ಚಪಲ ತಡೆ ಹಿಡಿಯುವುದು ಭಾರೀ ಕಷ್ಟ. ಹಾಗಂತ ಹೊರಗಡೆಯಿಂದ ತಂದು ತಿನ್ನೋಣವೆಂದರೆ, ಅಲ್ಲಿ ಯಾವ ಎಣ್ಣೆಯಿಂದ ಮಾಡಿರ್ತಾರೋ, ಅದನ್ನು ತಿಂದ ನಂತರ ಕೆಮ್ಮು ಶುರುವಾದ್ರೆ, ಆರೋಗ್ಯ ಹಾಳಾದರೆ ಎಂಬ ಆತಂಕ. ಜೊತೆಗೆ ಹೋಟೆಲಿನಲ್ಲಿ, ಅಂಗಡಿಯಲ್ಲಿ ಎಲ್ಲದಕ್ಕೂ ದುಬಾರಿ ಬೆಲೆ. ಹಾಗಾಗಿ ಮನೆಯಲ್ಲೇ, ಅದೂ ಕಡಿಮೆ ಸಮಯದಲ್ಲಿ ಚೂಡಾ ಮಾಡೋದು ಹೇಗೆ ಅಂತ ಇಲ್ಲಿ ವಿವರವಿದೆ ನೋಡಿ. 

1. ಕಾರ್ನ್ ಫ್ಲೇಕ್ಸ್‌ ಚೂಡಾ
ಬೇಕಾಗುವ ಸಾಮಗ್ರಿ:
ಜೋಳದ ಅವಲಕ್ಕಿ- 100 ಗ್ರಾಂ, ಕಡಲೆ ಬೀಜ- 100 ಗ್ರಾಂ, ಅಚ್ಚ ಖಾರದ ಪುಡಿ- 1/2 ಚಮಚ, ಜೀರಿಗೆ ಪುಡಿ-1/2 ಚಮಚ, ಧನಿಯ ಪುಡಿ- 1/2 ಚಮಚ, ಅರಿಶಿನ 1/2 ಚಮಚ, ಸಿಟ್ರಿಕ್‌ ಆ್ಯಸಿಡ್‌ ಒಂದು ಚಿಟಿಕೆ, ಸಕ್ಕರೆ ಹಾಗೂ ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ  ಹಾಕಿ ನಿಧಾನವಾಗಿ ಜೋಳದ ಅವಲಕ್ಕಿ ಕರಿಯಿರಿ. ಅದನ್ನು ತಣ್ಣಗಾಗಲು ಬಿಡಿ. ನಂತರ ಕಡಲೆ ಬೀಜ ಕರಿಯಿರಿ. ಎಣ್ಣೆಯಿಂದ ತೆಗೆದು ಅವಲಕ್ಕಿ ಜೊತೆ ಸೇರಿಸಿ. ಅಚ್ಚ ಖಾರದ ಪುಡಿ, ಅರಿಶಿನ, ಜೀರಿಗೆ ಪುಡಿ, ಧನಿಯ ಪುಡಿ, ಉಪ್ಪು-ಸಕ್ಕರೆ ಸೇರಿಸಿ ಮಿಶ್ರಣ ಮಾಡಿ. ಕಡೆಗೆ ಸಿಟ್ರಿಕ್‌ ಆ್ಯಸಿಡ್‌ ಹಾಕಿರಿ. ಗಾಳಿಯಾಡದಂತೆ ಗಾಜಿನ ಭರಣಿಯಲ್ಲಿ ಅಥವಾ ಡಬ್ಬಿಯಲ್ಲಿ ಮುಚ್ಚಿಡಿ. 

2. ಬೂಂದಿ ಚೂಡಾ
ಬೇಕಾಗುವ ಸಾಮಗ್ರಿ:
ಬೂಂದಿ 1/4 ಕೆಜಿ, ಕಡಲೆ ಬೀಜ 100 ಗ್ರಾಂ, ಅಚ್ಚ ಖಾರದ ಪುಡಿ 1/2 ಚಮಚ, ಎಣ್ಣೆ 2 ಚಮಚ, ಕರಿಬೇವು 4-5 ಎಸಳು, ಸಕ್ಕರೆ ಹಾಗೂ ಉಪ್ಪು.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಕರಿಬೇವು ಕಡಲೆ ಬೀಜವನ್ನು ಸ್ವಲ್ಪ ಹೊತ್ತು ಕರಿಯಿರಿ. ಅಚ್ಚಖಾರದ ಪುಡಿ, ಅರಿಶಿನ, ಸಕ್ಕರೆ ಹಾಗೂ ಉಪ್ಪು ಹಾಕಿ ಚೆನ್ನಾಗಿ ಕಲಸಿರಿ. ನಂತರ ಬೂಂದಿ ಸೇರಿಸಿ. ಗಾಳಿಯಾಡದಂತೆ ಡಬ್ಬದಲ್ಲಿ ಹಾಕಿ ಮುಚ್ಚಿಟ್ಟರೆ, ಹದಿನೈದು ದಿನಗಳವರೆಗೆ ಗರಿಗರಿಯಾಗಿಯೇ ಇರುತ್ತದೆ.

3. ಚುರುಮುರಿ ಚೂಡಾ
ಬೇಕಾಗುವ ಸಾಮಗ್ರಿ:
ಚುರುಮುರಿ 200ಗ್ರಾಂ, ಸೇವ್‌ಪುರಿ 100ಗ್ರಾಂ, ಕಡಲೆ ಬೀಜ 100 ಗ್ರಾಂ, ಹಸಿ ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಅರಿಶಿನ 1/4 ಚಮಚ, ಜೀರಿಗೆ ಹಾಗೂ ಧನಿಯ 1/4 ಚಮಚ, ಸಕ್ಕರೆ ಹಾಗೂ ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಹಸಿ ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಹಾಗೂ ಕಡಲೆ ಬೀಜ ಹಾಕಿ ಸ್ವಲ್ಪ ಹುರಿಯಿರಿ. ನಂತರ ಅರಿಶಿನ, ಸಕ್ಕರೆ ಹಾಗೂ ಉಪ್ಪು ಸೇರಿಸಿ. ಅದಕ್ಕೆ ಚುರುಮುರಿ ಹಾಗೂ ಸೇವ್‌ ಬೆರೆಸಿ ಕಡೆಗೆ, ಧನಿಯ, ಜೀರಿಗೆ ಪುಡಿ ಹಾಕಿ ಕಲಸಿ. ಗಾಳಿಯಾಡದಂತೆ ಡಬ್ಬಿಯಲ್ಲಿ ಹಾಕಿಡಿ.

4. ಆಲೂಗಡ್ಡೆ ಚೂಡಾ
ಬೇಕಾಗುವ ಸಾಮಗ್ರಿ: 1/4 ಕೆಜಿ ಆಲೂಗೆಡ್ಡೆಯನ್ನು ಸಣ್ಣದಾಗಿ ಹೆಚ್ಚಿ ಎಣ್ಣೆಯಲ್ಲಿ ಕರಿದಿಡಿ. ಗೋಡಂಬಿ 100 ಗ್ರಾಂ, ದ್ರಾಕ್ಷಿ 50 ಗ್ರಾಂ, ಗಸಗಸೆ 2 ಚಮಚ, ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ 2-3,  ಕರಿಬೇವು, ಕಾಳು ಮೆಣಸಿನಪುಡಿ 1ಚಮಚ, ತುಪ್ಪ 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಬಾಣಲೆಯಲ್ಲಿ ತುಪ್ಪ ಹಾಕಿ ಕರಿಬೇವು ಹಾಗೂ ಹಸಿಮೆಣಸಿನಕಾಯಿ ಒಗ್ಗರಣೆ ಹಾಕಿ. ನಂತರ ಗೋಡಂಬಿ ಕರಿಯಿರಿ. ಉಪ್ಪು, ಸಕ್ಕರೆ ಹಾಕಿದ ನಂತರ ಆಲೂಗೆಡ್ಡೆ ಹಾಕಿ ಕಾಳು ಮೆಣಸಿನ ಪುಡಿ, ಗಸಗಸೆ ಸೇರಿಸಿ. ಈಗ ಬಿಸಿಬಿಸಿ ಚೂಡಾ ತಿನ್ನಲು ರೆಡಿ. 

ಹೀರಾ ಆರ್‌. 

ಟಾಪ್ ನ್ಯೂಸ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.