ಖಾದ್ಯ ವೈವಿಧ್ಯ
Team Udayavani, Mar 23, 2019, 7:58 AM IST
ಬೇಸಗೆಯಲ್ಲಿ ಊಟ ಸೇರದಿರುವುದಕ್ಕಾಗಿ ಹೆಚ್ಚಾಗಿ ಸಲಾಡ್‌ಗೆ ಒತ್ತು ನೀಡುತ್ತೇವೆ. ಅದರಲ್ಲೂ ಸಿಹಿ, ಖಾರ ಮಿಶ್ರಿತವಾದ ಸಲಾಡ್‌ಗಳು ಬೇಸಗೆಯಲ್ಲಿ ಆರೋಗ್ಯ, ಡಯಾಟ್ ಬಗ್ಗೆ ಯೋಚಿಸುವವರಿಗೆ ಸೂಕ್ತ ಆಹಾರ.
ಪಾಸ್ತಾ ಸಲಾಡ್
ಬೇಕಾಗುವ ಸಾಮಗ್ರಿಗಳು
· ಪಾಸ್ತಾ- 1 ಕಪ್,
· ಕ್ಯಾರೆಟ್‌ತುರಿ- ಅರ್ಧಕಪ್,
· ಈರುಳ್ಳಿ- 1,
· ಕ್ಯಾಪ್ಸಿಕಮ್ – ಅರ್ಧ,
· ಟೊಮೇಟೊ- 1,
· ಈರುಳ್ಳಿ, ಮಯೊನೈಸ್-5 ಚಮಚ,
· ಸಬ್ಬಸಿಗೆ ಸೊಪ್ಪು – 1ಕಪ್,
· ರುಚಿಗೆ ಉಪ್ಪು, ಎಣ್ಣೆ- 2 ಚಮಚ,
· ಕಾಳುಮೆಣಸಿನ ಪುಡಿ- ಅರ್ಧ ಚಮಚ,
· ಲಿಂಬೆ ಹೋಳು -1.
ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ 5 ಲೋಟ ನೀರು, 2 ಚಮಚ ಎಣ್ಣೆ, ಸ್ವಲ್ಪ ಉಪ್ಪು ಹಾಕಿ ಕುದಿಯಲು ಇಡಿ. ಒಂದು ಕುದಿ ಬಂದ ನಂತರ ಪಾಸ್ತಾ ಹಾಕಿ, ಅದು ಮೃದುವಾಗುವವರೆಗೂ ಬೇಯಿಸಿ. ಬೆಂದ ಪಾಸ್ತಾವನ್ನು ನೀರು ಬಸಿ ಯಿರಿ. ಒಂದು ಬೌಲ್‌ನಲ್ಲಿ ಮಯೊನೈಸ್, ಕಾಳುಮೆಣಸಿನ ಪುಡಿ, ಲಿಂಬೆ ರಸ, ಉಪ್ಪು ಬೆರೆಸಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್ ತುರಿ ಹಾಕಿ, ಬೆಂದ ಪಾಸ್ತಾವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊತ್ತಂಬರಿ ಅಥವಾ ಸಬ್ಬಸಿಗೆ ಸೊಪ್ಪಿನಿಂದ ಅಲಂಕರಿಸಿ. ಈ ಸಲಾಡ್ ಅನ್ನು ಬೆಳಗಿನ ಉಪಾಹಾರವಾಗಿಯೂ ಸೇವಿಸಬಹುದು.
ಫ್ರೂಟ್ಸ್ ಸಲಾಡ್
ಬೇಕಾಗುವ ಸಾಮಗ್ರಿಗಳು
· ಬಾಳೆಹಣ್ಣು -2,
· ಸಪೋಟ -2,
· ಪಪ್ಪಾಯ -1,
· ಸೇಬು -2,
· ಒಣದ್ರಾಕ್ಷಿ, ಗೋಡಂಬಿ,
ಬಾದಾಮಿ, ಪಿಸ್ತಾ
ಚೂರುಗಳು – 1 ಕಪ್,
· ಪುದೀನಾ ಸೊಪ್ಪು, ಚಾಟ್
· ಮಸಾಲ – 2 ಚಮಚ.
ಮಾಡುವ ವಿಧಾನ: ಎಲ್ಲ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿ ಒಂದು ಬೌಲ್‌ನಲ್ಲಿ ಹಾಕಿ. ಸಲಾಡ್‌ನಲ್ಲಿ ರುಚಿ ಹೆಚ್ಚಲು ಡ್ರೈ ಫೂ›ಟ್ಸ್‌ಗಳನ್ನು ಸೇರಿಸಿ, ಚಾಟ್ ಮಸಾಲ ಪುಡಿ ಹಾಗೂ ಉಪ್ಪು ಹಾಕಿ, ಪುದೀನಾ ಸೊಪ್ಪಿನಿಂದ ಅಲಂಕರಿಸಿ. ಬಿಸಿಲಿನ ಧಗೆಯಲ್ಲಿ ಮಧ್ಯಾಹ್ನ ಊಟ ಸೇರದಿದ್ದಾಗ, ಸಂಜೆ ಸ್ನ್ಯಾಕ್ಸ್ ಬದಲು ಈ ಸಲಾಡ್ ಸೇವಿಸಬಹುದು. ಈ ಸೀಸನ್ನಲ್ಲಿ ಸಿಗುವ ನಿಮ್ಮಿಷ್ಟದ ಹಣ್ಣುಗಳನ್ನು ಬೆರೆಸಿ, ರುಚಿಯಾದ ಸಲಾಡ್ ತಯಾರಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.